ವಿರಾಟ್, ಅನುಷ್ಕಾ ಮನೆಯಲ್ಲಿ ಮನೆ ಕೆಲಸದವರು ಇಲ್ಲವಂತೆ ! ಯಾಕೆ ಎಂದರೆ ನಿಜಕ್ಕೂ ಅಚ್ಚರಿಯಾಗುತ್ತದೆ

ನಮಸ್ಕಾರ ಸ್ನೇಹಿತರೇ ವಿರಾಟ್ ಕೊಹ್ಲಿ ರವರ ಜೀವನದ ಹಲವಾರು ವಿಚಾರಗಳು ಯಾವಾಗಲೂ ಸದ್ದು ಮಾಡುತ್ತಿರುತ್ತವೆ, ವಿರಾಟ್ ಕೊಹ್ಲಿ ರವರು ವಿವಿಧ ರೀತಿಯ ಕೆಲಸಗಳಿಗೆ ನೂರಾರು ಕೋಟಿ ಖರ್ಚು ಮಾಡುತ್ತಿರುವಾಗ ವಿರಾಟ್ ಕೊಹ್ಲಿ ಅವರು ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂಬ ಹಲವಾರು ಮಾತುಗಳು ಕೇಳಿ ಬರುತ್ತವೆ. ಇನ್ನು ವಿರಾಟ್ ಹಾಗೂ ಅನುಷ್ಕಾ ಶರ್ಮಾ ರವರು 34 ಕೋಟಿ ಬೆಲೆಬಾಳುವ ಮನೆಯೊಂದನ್ನು ಖರೀದಿ ಮಾಡಿ ಅದರಲ್ಲಿ ವಾಸವಾಗಿದ್ದಾರೆ ಎಂದ ತಕ್ಷಣ ಎಲ್ಲರೂ ಕೂಡ ಮನೆ ಕೆಲಸದವರು ಇಟ್ಟುಕೊಂಡು ಆರಾಮಾಗಿ ಇರುತ್ತಾರೆ ಎಂದುಕೊಳ್ಳುತ್ತಾರೆ

ಆದರೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ರವರು ನೂರಾರು ಕೋಟಿಯ ಒಡೆಯರಾಗಿದ್ದರೂ ಕೂಡ ಮನೆಯಲ್ಲಿ ಮನೆ ಕೆಲಸದವರು ಇಲ್ಲ ಎಂಬ ಸುದ್ದಿಯನ್ನು ಇದೀಗ ಭಾರತದ ಮಾಜಿ ಆಯ್ಕೆಗಾರ ಸರಂದೀಪ್ ಸಿಂಗ್ ರವರು ತಿಳಿಸಿದ್ದಾರೆ. ಸರಂದೀಪ್ ಸಿಂಗ್ ರವರು ಮನೆಗೆ ಹೋಗಿದ್ದಾಗ ಅನುಷ್ಕಾ ಹಾಗೂ ವಿರಾಟ್ ಕೊಹ್ಲಿ ದಂಪತಿಗಳು ಅವರನ್ನು ಅದ್ದೂರಿಯಾಗಿ ಸ್ವಾಗತ ಮಾಡಿದರು.

ತದ ನಂತರ ಮನೆಯ ಎಲ್ಲಾ ಕೆಲಸಗಳನ್ನು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ರವರು ಮಾಡುತ್ತಿದ್ದರು, ಕೊಹ್ಲಿ ಹಾಗೂ ಸರಂದೀಪ್ ಸಿಂಗ್ ರವರು ಊಟ ಮಾಡುವಾಗ ಸ್ವತಹ ಅನುಷ್ಕಾ ಶರ್ಮಾ ರವರೇ ಊಟ ಬಡಿಸಿದರು, ಹೀಗೆ ಮನೆ ಕೆಲಸದವರನ್ನು ಇಟ್ಟುಕೊಳ್ಳದೆ ತಮ್ಮ ಕೆಲಸವನ್ನು ತಾವೇ ಬಹಳ ಸರಳವಾಗಿ ಮಾಡಿಕೊಳ್ಳುತ್ತಾರೆ ಎಂದು ಸರಂದೀಪ್ ಸಿಂಗ್ ರವರು ಹೇಳಿಕೆ ನೀಡಿದ್ದಾರೆ, ಕೊಹ್ಲಿ ರವರು ಮೈದಾನದಲ್ಲಿ ಕಾಣಿಸುವಷ್ಟು ನಿಜ ಜೀವನದಲ್ಲಿ ಅಲ್ಲ ಅವರು ಬಹಳ ವಿನರ್ಮ ವ್ಯಕ್ತಿ ಹಾಗೂ ಅನುಷ್ಕಾ ರವರು ಕೂಡ ‌ಸಾಮಾನ್ಯರಂತೆ ಜೀವನ ನಡೆಸಲು ಇಷ್ಟಪಡುತ್ತಾರೆ ಎಂದು ಸರಂದೀಪ್ ಸಿಂಗ್ ರವರು ಹೇಳಿದ್ದಾರೆ.

Post Author: Ravi Yadav