25 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದ ಪೊಗರು ಆರು ದಿನಗಳಲ್ಲಿ ಕಲೆಕ್ಷನ್ ಮಾಡಿದ್ದು ಎಷ್ಟು ಕೋಟಿ ಗೊತ್ತಾ??

25 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದ ಪೊಗರು ಆರು ದಿನಗಳಲ್ಲಿ ಕಲೆಕ್ಷನ್ ಮಾಡಿದ್ದು ಎಷ್ಟು ಕೋಟಿ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡದ ಹೆಚ್ಚಿನ ಬಜೆಟ್ ಚಿತ್ರಗಳಲ್ಲಿ ಒಂದಾಗಿರುವ ಪೊಗರು ಚಿತ್ರ ಇದೀಗ ಕನ್ನಡ ತೆಲುಗು ತಮಿಳು ಚಿತ್ರರಂಗಗಳಲ್ಲಿ ಕೂಡ ತನ್ನದೇ ಆದ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದೆ. ವಿವಾದಗಳು ಸಿನಿಮಾದ ಸುತ್ತ ಸುತ್ತುತ್ತಿದ್ದರೂ ಕೂಡ ಚಿತ್ರ ಉತ್ತಮ ಗಳಿಕೆಯನ್ನು ಮಾಡುವುದರಲ್ಲಿ ಯಶಸ್ವಿಯಾಗಿದೆ, ಇದೀಗ ಬಿಡುಗಡೆಗೊಂಡು ಆರು ದಿನಗಳ ಕಲೆಕ್ಷನ್ ಬಹಿರಂಗಗೊಂಡಿದ್ದು 25 ಕೋಟಿ ಖರ್ಚು ಮಾಡಿ ನಿರ್ಮಾಣ ಮಾಡಲಾಗಿರುವ ಪೊಗರು ಚಿತ್ರ ಆರು ದಿನಗಳಲ್ಲಿ ಕಳಿಸಿದ್ದು ಎಷ್ಟು ಕೋಟಿ ಎಂಬುದನ್ನು ತಿಳಿಸುತ್ತೇವೆ ಕೇಳಿ

ಸ್ನೇಹಿತರೆ ಮೂಲತಹ ಕನ್ನಡ ಸಿನಿಮಾ ಆಗಿರುವ ಪೊಗರು ಚಿತ್ರ ಕೇವಲ ಕರ್ನಾಟಕದಲ್ಲಿ ಐದು ದಿನಗಳಲ್ಲಿ 22 ಕೋಟಿ ಕಲೆಕ್ಷನ್ ಮಾಡಿದ್ದು ಇನ್ನೂ 6 ನೇ ದಿನ 2 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಒಟ್ಟಾರೆಯಾಗಿ ಕೇವಲ ಕರ್ನಾಟಕದಲ್ಲಿ 24 ಕೋಟಿ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿದೆ, ಇನ್ನು ತೆಲುಗು ಚಿತ್ರರಂಗದಲ್ಲಿ 70 ಲಕ್ಷಕ್ಕೂ ಹೆಚ್ಚು ಕಲೆಕ್ಷನ್ ಮಾಡಿರುವ ಪೊಗರು ಚಿತ್ರ ಇತರ ಭಾಷೆಗಳನ್ನು ಕೂಡ ಮೋಡಿ ಮಾಡುತ್ತಿರುವುದಾಗಿ ತೋರಿಸಿದೆ.

ಇನ್ನುಳಿದಂತೆ ಇಡೀ ಭಾರತದಾದ್ಯಂತ ವಿವಿಧ ಚಿತ್ರಮಂದಿರಗಳಲ್ಲಿ ಬಿಡುಗಡೆ ಗೊಂಡಿರುವ ಪೊಗರು ಚಿತ್ರತಂಡ ಒಟ್ಟಾರೆಯಾಗಿ ಇಲ್ಲಿಯವರೆಗೂ 28.5 ಕೋಟಿ ಕಲೆಕ್ಷನ್ ಮಾಡುವುದರಲ್ಲಿ ಯಶಸ್ವಿಯಾಗಿದ್ದು ಬಿಡುಗಡೆಯಾದ 6 ನೇ ದಿನವೇ ಲಾಭದ ರುಚಿ ನೋಡುತ್ತಿದೆ, ಈ ಮೂಲಕ ಪೊಗರು ಚಿತ್ರ ಯಶಸ್ಸಿನ ಸಾಲಿಗೆ ಸೇರಿಕೊಂಡಿದ್ದು ಹಾಕಿದ ಬಂಡವಾಳಕ್ಕಿಂತ ಮೂರು ಕೋಟಿಗೂ ಹೆಚ್ಚು ಹಣವನ್ನು ಈಗಾಗಲೇ ಬಾಕ್ಸಾಫೀಸ್ ನಲ್ಲಿ ಗಳಿಸಿದೆ. ಇನ್ನು ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುತ್ತಿದ್ದು ಎಷ್ಟು ದಿನ ಯಶಸ್ವಿಯಾಗಿ ಚಿತ್ರಮಂದಿರಗಳಲ್ಲಿ ಚಿತ್ರ ಉಳಿಯಲಿದೆ ಹಾಗೂ ಕೊನೆಯದಾಗಿ ಎಷ್ಟು ಕೋಟಿಗೆ ತನ್ನ ಬಾಕ್ಸಾಫೀಸ್ ಕಲೆಕ್ಷನ್ ಅನ್ನು ಅಂತ್ಯಗೊಳಿಸಲು ಇದೆ ಎಂಬುದನ್ನು ಕಾದು ನೋಡಬೇಕಿದೆ.