ಸತ್ಯ ಟಿಆರ್ಪಿ ಲಿಸ್ಟಿನಲ್ಲಿ ಮೊದಲನೇ ಸ್ಥಾನ ಕಾಪಾಡಿಕೊಳ್ಳಲು ಅಸಲಿ ಕಾರಣವೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಿಡುಗಡೆಯಾದ ಮೊದಲನೇ ವಾರದಿಂದಲೂ ಸತ್ಯ ಧಾರವಾಹಿಗೆ ಟಿಆರ್ಪಿ ಲಿಸ್ಟಿನಲ್ಲಿ ಮೊದಲನೇ ಸ್ಥಾನ ಪಡೆದುಕೊಂಡಿದೆ. ಎಲ್ಲರೂ ಮೊದಲಿಗೆ ಹೊಸ ಧಾರವಾಹಿ ಆಗಿರುವ ಕಾರಣ ಸಾಮಾನ್ಯವಾಗಿ ಜನರು ನೋಡುತ್ತಾರೆ ಅದೇ ಕಾರಣಕ್ಕಾಗಿ ಟಿಆರ್ಪಿ ಲಿಸ್ಟಿನಲ್ಲಿ ಮೊದಲನೇ ಸ್ಥಾನದಲ್ಲಿದೆ, ಕೆಲವು ವಾರಗಳ ಬಳಿಕ ಟಿಆರ್ಪಿ ಲಿಸ್ಟಿನಲ್ಲಿ ಸತ್ಯ ಧಾರವಾಹಿ ಬದಲಾವಣೆ ಕಾಣುತ್ತದೆ ಎಂದು ಎಲ್ಲರೂ ನಂಬಿದ್ದರು. ಆದರೆ ಬಿಡುಗಡೆಯಾಗಿ ಹಲವಾರು ತಿಂಗಳುಗಳು ಕಳೆದರೂ ಕೂಡ ಸತ್ಯ ಧಾರಾವಾಹಿಯೂ ಟಿಆರ್ಪಿ ಲಿಸ್ಟಿನಲ್ಲಿ ಮೊದಲನೇ ಸ್ಥಾನವನ್ನು ಕಾಪಾಡಿಕೊಂಡಿದೆ

ಕೇವಲ ಮೊದಲನೇ ಸ್ಥಾನ ಪಡೆದುಕೊಳ್ಳುವುದು ಅಷ್ಟೇ ಅಲ್ಲ ಎರಡನೇ ಸ್ಥಾನದಲ್ಲಿರುವ ಧಾರವಾಹಿ ಗಿಂತ ಎರಡು ಅಥವಾ ಮೂರು ಸಾವಿರ ಟಿಆರ್ಪಿ ಪಾಯಿಂಟ್ ಗಳಿಂದ ಮುಂದೆ ಇರುವ ಕಾರಣ ಇತರ ಧಾರವಾಹಿಗಳು ಮೊದಲನೇ ಸ್ಥಾನಕ್ಕೆ ಏರಬೇಕು ಎಂದರೆ ಕಷ್ಟಸಾಧ್ಯದ ವಾತಾವರಣವನ್ನು ಸೃಷ್ಟಿಸಿದೆ. ಹೀಗಿರುವಾಗ ಯಾವ ಕಾರಣಕ್ಕಾಗಿ ಸತ್ಯ ಧಾರವಾಹಿ ಮೊದಲನೇ ಸ್ಥಾನದಲ್ಲಿ ಭದ್ರವಾಗಿ ನೆಲೆಯೂರುವಂತೆ ಮಾಡಿದೆ ಎಂಬುದಕ್ಕೆ ಕಾರಣವನ್ನು ನಾವು ತಿಳಿಸುತ್ತೇವೆ ಕೇಳಿ. ಈ ಕಾರಣಗಳನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಜನರ ಅಭಿಪ್ರಾಯದ ಮೇರೆಗೆ ತಯಾರಿಸಲಾಗಿದ್ದು, ನೀವು ಒಂದು ಕೂಡ ಸತ್ಯ ಧಾರವಾಹಿ ನೋಡಿ ನಿಮಗೆ ಇಷ್ಟ ಆಗಿದ್ದರೆ ಕಾರಣಗಳೇನು ಎಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಳಿಸುವುದನ್ನು ಮರೆಯಬೇಡಿ

ಸ್ನೇಹಿತರೇ ನಾವು ಸತ್ಯ ಧಾರವಾಹಿ ಪ್ಲಸ್ ಪಾಯಿಂಟ್ ಗಳ ಕುರಿತು ಮಾತನಾಡುವುದಾದರೆ ಮೊದಲಿಗೆ ಕಂಡು ಬರುವ ಅಂಶ ನಗು, ಅದರಲ್ಲಿಯೂ ಯಾವುದೇ ಡಬಲ್ ಮೀನಿಂಗ್ ಇಲ್ಲದೆ ಜನರನ್ನು ನಗಿಸುವ ಕೆಲಸವನ್ನು ಸತ್ಯ ಧಾರವಾಹಿ ಮಾಡುತ್ತಿದೆ. ಇನ್ನಿತರ ರಿಯಾಲಿಟಿ ಶೋಗಳಂತೆ ಕೇವಲ ಡಬಲ್ ಮೀನಿಂಗ್ ಡೈಲಾಗ್ ಗಳನ್ನು ನಗಿಸಲು ಬಳಸುತ್ತಿಲ್ಲ. ಇನ್ನು ಎರಡನೆಯದಾಗಿ ಕಲಾವಿದರ ನಟನೆ ಹಾಗೂ ಡೈಲಾಗ್ ಡೆಲವರಿ. ಹೌದು ಸ್ನೇಹಿತರೇ ಧಾರಾವಾಹಿಯಲ್ಲಿ ಪ್ರತಿಯೊಂದು ಪಾತ್ರಗಳಿಗೂ ಬಹಳ ಮಹತ್ವವನ್ನು ನೀಡಿದ್ದು, ಕಲಾವಿದ ನಟನೆಯೂ ಕೂಡ ಅದ್ಭುತವಾಗಿ ಮೂಡಿ ಬರುತ್ತಿದೆ.

ಇನ್ನು ಮೂರನೆಯದಾಗಿ ಒಂದು ಶ್ರೀಮಂತ ಕುಟುಂಬ ಬಡವರ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ನಾಯ ಕನಟನ ಕುಟುಂಬದವರು ತೋರಿಸುತ್ತಾರೆ, ಎಲ್ಲಿ ಸಾಮಾನ್ಯರಂತೆ ಇರಬೇಕು ಎಂಬುದು ಕೂಡ ತೋರಿಸಲಾಗಿದೆ. ಇನ್ನು ಕಾಲ ಕಾಲಕ್ಕೆ ತಕ್ಕಂತೆ ಅಪ್ಪ ಮಗಳ ಹಾಗೂ ಅಮ್ಮ ಮಗಳ ನಡುವಿನ ಭಾವನಾತ್ಮಕ ಕ್ಷಣಗಳು ಕೂಡ ಜನರ ಮನ ಗೆಲ್ಲುವುದರಲ್ಲಿ ಯಶಸ್ವಿಯಾಗಿದ್ದು ಒಟ್ಟಾರೆಯಾಗಿ ಸತ್ಯ ಧಾರವಾಹಿ ಜನರ ಫೇವರೆಟ್ ಧಾರಾವಾಹಿಗಳಲ್ಲಿ ಒಂದಾಗಿದೆ.

Post Author: Ravi Yadav