ಹಿಮ್ಮಡಿ ಎಷ್ಟೇ ಒಡೆದು ಚೂರಗಿದ್ದರೂ ಒಂದೇ ದಿನದಲ್ಲಿ ವಾಸಿಯಾಗುತ್ತೆ, ಹೀಗೆ ಮಾಡಿ ನೋಡಿ.

ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ಎಲ್ಲರಿಗೂ ಚಳಿಗಾಲದಲ್ಲಿ ಹಿಮ್ಮಡಿ ಒಡೆಯುತ್ತದೆ. ಕೆಲವರು ಹಿಮ್ಮಡಿ ಒಡೆದ ತಕ್ಷಣ ಅದಕ್ಕೆ ಬೇಕಾಗುವ ಕ್ರೀಮ್ ಗಳನ್ನು ಹಚ್ಚಿ ಸರಿಪಡಿಸಿಕೊಳ್ಳುತ್ತಾರೆ. ಇನ್ನು ಕೆಲವರು ಅದನ್ನು ನಿರ್ಲಕ್ಷಿಸುತ್ತಾರೆ. ಇದರಿಂದ ಹಿಮ್ಮಡಿ ಹೆಚ್ಚು ಒಡೆದು ರಕ್ತ ಸೋರುವುದು, ಪಾದ ನೋವು ಬರುವುದು ಪ್ರಾರಂಭವಾಗುತ್ತದೆ ಮತ್ತು ಇನ್ನೂ ಕೆಲವರಿಗೆ ಒಡೆದಿರುವ ಜಾಗದಲ್ಲಿ ಧೂಳು ಸೇರಿಕೊಂಡು ಇನ್ಫೆಕ್ಷನ್ ಆಗುತ್ತದೆ. ಇಂದು ನಾವು ಈ ಲೇಖನದಲ್ಲಿ ಒಡೆದ ಹಿಮ್ಮಡಿಯನ್ನು ಕೆಲವೇ ದಿನಗಳಲ್ಲಿ ಹೇಗೆ ಸರಿಪಡಿಸಬಹುದು ಎಂಬ ಮನೆಮದ್ದನ್ನು ತಿಳಿಸಲಾಗಿದೆ.

ಮೊದಲಿಗೆ ಒಂದು ಆಲೂಗೆಡ್ಡೆಯನ್ನು ತೆಗೆದುಕೊಂಡು ಮಣ್ಣಿಲ್ಲದೆ ರೀತಿಯಲ್ಲಿ ತೊಳೆದುಕೊಳ್ಳಿ. ನಂತರ ಆಲೂಗಡ್ಡೆಯನ್ನು ಸಿಪ್ಪೆ ತೆಗೆಯದ ಹಾಗೆ ತುರಿದುಕೊಳ್ಳಿ. ನಂತರ ತುರಿದ ಆಲೂಗಡ್ಡೆಯಿಂದ ರಸವನ್ನು ಹಿಂಡಿ ಒಂದು ಬಟ್ಟಲಿಗೆ ಹಾಕಿಕೊಳ್ಳಿ. ನಂತರ ಇದಕ್ಕೆ ನೀವು ಪ್ರತಿದಿನ ಉಪಯೋಗಿಸುವ ಸ್ವಲ್ಪ ಪೇಸ್ಟನ್ನು ಹಾಕಿಕೊಂಡು, ಪೇಸ್ಟ್ ಕರಗುವವರೆಗೂ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಅರ್ಧ ನಿಂಬೆಹಣ್ಣಿನ ರಸವನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಕಾಲು ಚಮಚದಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ಕೊನೆಯದಾಗಿ ಈ ಮಿಶ್ರಣವನ್ನು ನಿಂಬೆಹಣ್ಣಿನ ಸಿಪ್ಪೆಯಿಂದ ತೆಗೆದುಕೊಂಡು ಒಡೆದಿರುವ ಜಾಗಕ್ಕೆ 2 – 3 ನಿಮಿಷಗಳ ಕಾಲ ಹಚ್ಚಿ ಮಸಾಜ್ ಮಾಡಿಕೊಳ್ಳಿ. ನಂತರ ಉಗುರು ಬೆಚ್ಚಗಿನ ನೀರು ಅಥವಾ ತಣ್ಣಗಿರುವ ನೀರಿನಿಂದ ಕಾಲನ್ನು ತೊಳೆದುಕೊಳ್ಳಿ. ನಂತರ ಒಣ ಬಟ್ಟೆಯಿಂದ ಕಾಲನ್ನು ಒರೆಸಿಕೊಳ್ಳಿ. ಕೊನೆಯದಾಗಿ ಯಾವುದಾದರು ಮಾಯಿಶ್ಚರೈಸರ್ ಕ್ರೀಮ್ ಅನ್ನು ಹಚ್ಚಿಕೊಳ್ಳಿ. ಈ ಪ್ಯಾಕನ್ನು ಪ್ರತಿದಿನವೂ ಸಹ ಅಪ್ಲೈ ಮಾಡಬಹುದು. ಇದನ್ನು ಮಲಗುವ ಅರ್ಧ ಗಂಟೆ ಮೊದಲು ಹಚ್ಚಿದರೆ ಉತ್ತಮ.

Post Author: Ravi Yadav