1 ಸ್ಪೂನ್ ಇದನ್ನು ಸೇವಿಸಿದರೆ ಗ್ಯಾಸ್ಟ್ರಿಕ್ ಸಮಸ್ಯೆ ನಿಮ್ಮ ಹತ್ತಿರ ಕೂಡ ಸುಳಿಯುವುದಿಲ್ಲ. ಹೇಗೆ ಮಾಡುವುದು ಗೊತ್ತೇ??

1 ಸ್ಪೂನ್ ಇದನ್ನು ಸೇವಿಸಿದರೆ ಗ್ಯಾಸ್ಟ್ರಿಕ್ ಸಮಸ್ಯೆ ನಿಮ್ಮ ಹತ್ತಿರ ಕೂಡ ಸುಳಿಯುವುದಿಲ್ಲ. ಹೇಗೆ ಮಾಡುವುದು ಗೊತ್ತೇ??

ನಮಸ್ಕಾರ ಸ್ನೇಹಿತರೆ, ಇವತ್ತಿನ ದಿನಗಳಲ್ಲಿ ಅಸಿಡಿಟಿ ಸಮಸ್ಯೆಯಿಂದ ಪ್ರತಿಯೊಬ್ಬರು ಕೂಡ ಸಾಮಾನ್ಯವಾಗಿ ಬಳಲುತ್ತಿರುತ್ತಾರೆ. ಈ ಸಮಸ್ಯೆಯು ಇನ್ನಿತರ ಸಮಸ್ಯೆಗಳನ್ನು ಸಹ ಉಂಟುಮಾಡುತ್ತದೆ. ಅಂದರೆ ಎದೆಉರಿ, ತಲೆನೋವು, ಉಸಿರಿನ ಧುರ್ಗಂದ ಇತ್ಯಾದಿ ಹಲವಾರು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಈ ಅಸಿಡಿಟಿ ಬರುವುದಕ್ಕೆ ಹಲವಾರು ಕಾರಣಗಳಿವೆ. ಸಾಮಾನ್ಯವಾಗಿ ಮಸಾಲೆ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದು, ಸಮಯಕ್ಕೆ ಸರಿಯಾಗಿ ಊಟ ಮಾಡದೆ ಇರುವುದು, ವ್ಯಾಯಾಮದ ಕೊರತೆ ಮುಂತಾದವುಗಳು.

ಅಸಿಡಿಟಿ ಸಮಸ್ಯೆಗೆ ಮಾರುಕಟ್ಟೆಯಲ್ಲಿ ಹಲವಾರು ಔಷಧಗಳು ದೊರೆಯುತ್ತವೆ. ಆದರೆ ಅದರ ಅವಲಂಬನೆಯಾಗುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಆಸಿಡಿಟಿ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ಮನೆಯಲ್ಲಿಯೇ ಹಲವಾರು ಪದಾರ್ಥಗಳಿವೆ. ಇದನ್ನು ಉಪಯೋಗಿಸುವ ಮೂಲಕ ಅಸಿಡಿಟಿ ಸಮಸ್ಯೆಯನ್ನು ಶೀಘ್ರವಾಗಿ ಕಡಿಮೆ ಮಾಡಿಕೊಳ್ಳಬಹುದು ಮತ್ತು ಯಾವುದೇ ರೀತಿಯ ಅಡ್ಡ ಪರಿಣಾಮಗಳು ಸಹ ಉಂಟಾಗುವುದಿಲ್ಲ.ಇಂದು ಈ ಲೇಖನದಲ್ಲಿ ನಾವು ಸಿಂಪಲ್ ಮನೆಮದ್ದನ್ನು ನಿಮಗೆ ತಿಳಿಸುತ್ತೇವೆ. ಈ ಮನೆಮದ್ದನ್ನು ಉಪಯೋಗಿಸುವ ಮೂಲಕ ಅಸಿಡಿಟಿ ಸಮಸ್ಯೆಯನ್ನು ಶೀಘ್ರವಾಗಿ ಕಡಿಮೆ ಮಾಡಿಕೊಳ್ಳಬಹುದು.

ಮೊದಲಿಗೆ 2 ಚಮಚ ಜೀರಿಗೆಯನ್ನು ತೆಗೆದುಕೊಳ್ಳಿ. ಜೀರಿಗೆ ಗ್ಯಾಸ್ ಮತ್ತು ಅಸಿಡಿಟಿ ಕಡಿಮೆ ಮಾಡುವುದಕ್ಕೆ ತುಂಬಾನೇ ಸಹಾಯಮಾಡುತ್ತದೆ. ಇದು ನಮ್ಮ ಜೀರ್ಣಕ್ರಿಯೆಗೆ ಅಗತ್ಯವಾದ ಲಾಲಾರಸ ವನ್ನು ಹೆಚ್ಚು ಉತ್ಪತ್ತಿಯಾಗುವ ಹಾಗೆ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ನಂತರ 2 ಚಮಚ ಓಂ ಕಾಳನ್ನು ತೆಗೆದುಕೊಳ್ಳಿ. ಓಂ ಕಾಳು ಹೊಟ್ಟೆಗೆ ಸಂಬಂಧಿಸಿದ ಅಸಿಡಿಟಿ, ಹೊಟ್ಟೆ ನೋವು, ಅಜೀರ್ಣ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಕೊನೆಯದಾಗಿ 7 – 8 ಲವಂಗ. ನಮ್ಮ ಜಠರದಲ್ಲಿ ಕಂಡುಬರುವಂತಹ ಅಧಿಕ ಹೈಡ್ರೋಕ್ಲೋರಿಕ್ ಆಮ್ಲದಿಂದಾಗಿ ಅಸಿಡಿಟಿ ಉಂಟಾಗುತ್ತದೆ. ಹಾಗೆ ಜಠರದಲ್ಲಿ ಜೀರ್ಣಕ್ರಿಯೆಗೆ ಸಹಾಯ ಮಾಡುವಂತಹ ಆಸಿಡ್ ಗಳು ಕಡಿಮೆ ಆದರೂ ಕೂಡ ಅಸಿಡಿಟಿ ಉಂಟಾಗುತ್ತದೆ. ಈ ಆಸಿಡ್ ಗಳ ಸಮತೋಲನವನ್ನು ಕಾಪಾಡುವುದಕ್ಕೆ ಈ ಲವಂಗಗಳು ತುಂಬಾನೇ ಸಹಕಾರಿಯಾಗಿದೆ.

ಈ ಮೂರು ಪದಾರ್ಥಗಳನ್ನು ತಿಳಿದುಕೊಂಡು ಒಂದು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ಎರಡು ರೀತಿಯಲ್ಲಿ ಸೇವಿಸಬಹುದು. ಮೊದಲನೆಯದು ಬೆಳಗ್ಗೆ 1 ಚಮಚ ಪುಡಿಯನ್ನು ಸೇವಿಸುವುದು. ಎರಡನೆಯದು ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಪುಡಿಯನ್ನು ಮಿಕ್ಸ್ ಮಾಡಿ ಸೇವಿಸುವುದು. ಇದನ್ನು ಸೇವಿಸಿದ ಅರ್ಧ ಗಂಟೆಗಳವರೆಗೂ ಬೇರೆ ಏನನ್ನು ಸೇವಿಸಬಾರದು.