ಕರುನಾಡ ವಾಣಿ
ಇದು ನಿಮ್ಮ ಧ್ವನಿ

ವಿಷ್ಣುವರ್ಧನ್, ರಾಜಣ್ಣ ಸೇರಿದಂತೆ ದಿಗ್ಗಜರ ಜೊತೆ ನಟಿಸಿದ್ದ ಪದ್ಮಪ್ರಿಯ ರವರ ಕಥೆ ಕೇಳಿದರೆ ಕರುಳು ಚುರುಕ್ ಎನ್ನುತ್ತದೆ.

10

ನಮಸ್ಕಾರ ಸ್ನೇಹಿತರೇ, ದಕ್ಷಿಣ ಭಾರತದ ಹೇಮಾಮಾಲಿನಿ ಎಂದು ಖ್ಯಾತಿ ಪಡೆದುಕೊಂಡಿದ್ದ ನಟಿ ಪದ್ಮಪ್ರಿಯ ರವರ ಬಗ್ಗೆ ಬಹುಶಹ ನಿಮಗೆಲ್ಲರಿಗೂ ತಿಳಿದಿರಬಹುದು. ನೀವು 80ರ ದಶಕದಲ್ಲಿ ಮೂವಿಗಳನ್ನು ನೋಡಿದರೆ ಖಂಡಿತಾ ನಿಮಗೆ ತಿಳಿದೇ ಇರುತ್ತದೆ. ಅಂದು ಕರುನಾಡಿನಲ್ಲಿ ಜನಿಸಿದ ಪದ್ಮಪ್ರಿಯಾ ರವರು ದಕ್ಷಿಣ ಭಾರತದ ಎಲ್ಲಾ ಚಿತ್ರರಂಗದಲ್ಲಿಯೂ ನಟನೆ ಮಾಡಿ ಬಹು ಬೇಡಿಕೆಯ ನಟಿಯಾಗಿ ಕಾಣಿಸಿಕೊಂಡಿದ್ದರು. ನೋಡಲು ಸುರದ್ರೂಪಿ ನಟಿಯಾಗಿದ್ದ ಪದ್ಮಪ್ರಿಯಾರ ಕನ್ನಡ ತಮಿಳು ತೆಲುಗು ಮಲಯಾಳಂ ಚಿತ್ರರಂಗಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿ ದಕ್ಷಿಣ ಭಾರತದ ಹೇಮಾಮಾಲಿನಿ ಎಂಬ ಬಿರುದು ಪಡೆದುಕೊಂಡಿದ್ದರು.

ಬಾಲ್ಯದ ಹೆಸರು ಪದ್ಮಲೋಚನೆ ಆಗಿದ್ದರೂ ಕೂಡ 1975ರಲ್ಲಿ ಕರೂಟಿ ಕಣ್ಣಂಗೆ ಎಂಬ ತಮಿಳು ಚಿತ್ರದ ಮೂಲಕ ಸಿನಿಮಾ ಜಗತ್ತಿಗೆ ಪ್ರವೇಶಿಸಿದ ನಟಿ ಪದ್ಮಪ್ರಿಯಾ ರವರು ಅಲ್ಲಿಂದ ಹಿಂತಿರುಗಿ ನೋಡಲೇ ಇಲ್ಲ. ಸಾಲು ಸಾಲಾಗಿ ಯಶಸ್ಸಿನ ಚಿತ್ರಗಳಲ್ಲಿ ನಟನೆ ಮಾಡಿ ತಮ್ಮ ನಟನೆಯ ಮೂಲಕ ಸೈ ಎನಿಸಿಕೊಂಡಿದ್ದ ಪದ್ಮಪ್ರಿಯಾ ರವರು 1974 ರಿಂದ 1981 ರವರೆಗೆ ತಮಿಳು ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಮಿಂಚಿದ್ದಾರೆ. ಇನ್ನು ಕನ್ನಡದಲ್ಲಿ ವಿಷ್ಣುವರ್ಧನ್ ಅಂಬರೀಶ್ ಹಾಗೂ ಮಂಜುಳಾರವರು ನಟನೆ ಮಾಡಿರುವ ಬಂಗಾರದ ಗುಡಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟರು.

ತದನಂತರ ಶಂಕರ್ ಗುರು, ಆಪರೇಷನ್ ಡೈಮಂಡ್ ರಾಕೆಟ್, ನಾರದ ವಿಜಯ, ತಾಯಿಗೆ ತಕ್ಕ ಮಗ, ಪಟ್ಟಣಕ್ಕೆ ಬಂದ ಪತ್ನಿಯರು ಸಿನಿಮಾಗಳಲ್ಲಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟನೆ ಮಾಡಿ ಖ್ಯಾತಿ ಪಡೆದಿರುತ್ತಾರೆ. ಅಷ್ಟೇ ಅಲ್ಲಾ ಕನ್ನಡ ಚಿತ್ರರಂಗದಲ್ಲಿ ದಿಗ್ಗಜರಾಗಿರುವ ಡಾಕ್ಟರ್ ರಾಜಕುಮಾರ್, ಸಾಹಸಸಿಂಹ ವಿಷ್ಣುವರ್ಧನ್, ಅನಂತನಾಗ್, ಶ್ರೀನಾಥ್ ಸೇರಿದಂತೆ ಹಲವಾರು ನಟರ ಜೊತೆ ನಟಿಸಿ ಕನ್ನಡದಲ್ಲಿಯೂ ಕೂಡ ಸಾಕಷ್ಟು ಪ್ರಮಾಣದಲ್ಲಿ ಅಭಿಮಾನಿಗಳನ್ನು ಹೊಂದಿದ್ದರು.

ಹೀಗೆ ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ, ಚಿತ್ರರಂಗದಲ್ಲಿ ಬಹುತೇಕ ಎಲ್ಲಾ ದಿಗ್ಗಜರ ಜೊತೆ ನಟಿಸುತ್ತಿರುವ ಸಂದರ್ಭದಲ್ಲಿ ನಿರ್ಧಾರ ಮಾಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. 1983 ರಲ್ಲಿ ಶ್ರೀನಿವಾಸನ್ ಎಂಬುವವರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುವ ಪದ್ಮಪ್ರಿಯಾ ರವರು ವಸುಮತಿ ಎಂಬ ಮಗುವಿಗೆ ಜನ್ಮ ನೀಡುತ್ತಾರೆ. ಹೀಗೆ ಎಲ್ಲವೂ ಚೆನ್ನಾಗಿದೆ ಎಂದುಕೊಳ್ಳುವಷ್ಟರಲ್ಲಿ ಕೇವಲ ಮದುವೆಯಾಗಿ ಒಂದು ವರ್ಷ ವಾಗಿರುವ ಸಂದರ್ಭದಲ್ಲಿ ಪುಟ್ಟ ಮಗುವಿನ ಜೊತೆ ದಂಪತಿಗಳಿಬ್ಬರೂ ಜೀವನ ನಡೆಸುತ್ತಿರುವಾಗ ದಾಂಪತ್ಯದಲ್ಲಿ ಬಿರುಕು ಮೂಡುತ್ತದೆ.

ಕೆಲವೇ ದಿನಗಳ ಕಾಲ ಉಂಟಾದ ವೈಮನಸ್ಸು ಕೇವಲ ಕೆಲವೇ ಕೆಲವು ತಿಂಗಳುಗಳಲ್ಲಿ ವಿಚ್ಛೇದನ ಪಡೆದುಕೊಳ್ಳುವಂತೆ ಮಾಡುತ್ತದೆ. ಹೀಗೆ ಒಂದು ಕಡೆ ದಾಂಪತ್ಯ ಜೀವನವು ಅಂತ್ಯಗೊಂಡಿತು, ಹಾಗೆ ಸಿನಿಮಾ ಚಿತ್ರರಂಗದಿಂದ ಕೂಡ ದೂರ ಉಳಿದಿದ್ದಾಗ ತಮಿಳುನಾಡಿನಲ್ಲಿ ನೆಲೆಸಲು ನಿರ್ಧಾರ ಮಾಡುತ್ತಾರೆ, ತಮಿಳುನಾಡಿನಲ್ಲಿ ತನ್ನ ತಂದೆ ತಾಯಿಯ ಜೊತೆ ವಾಸವಾಗಿರುವ ಸಂದರ್ಭದಲ್ಲಿ ತಮ್ಮ ಜೀವನದಲ್ಲಿ ನಡೆದ ಕಹಿಘಟನೆ ಗಳನ್ನು ನೆನೆಸಿಕೊಂಡು ಕೊರಗುತ್ತ ತಮ್ಮ ಆರೋಗ್ಯವನ್ನು ಸಂಪೂರ್ಣವಾಗಿ ಹದಗೆಡಿಸಿ ಕೊಳ್ಳುತ್ತಾರೆ.

ಇದಾದ ಬಳಿಕ ಹಲವಾರು ವರ್ಷಗಳ ಅನಾರೋಗ್ಯದ ನಂತರ 1997ರ ನವಂಬರ್ ತಿಂಗಳಿನಲ್ಲಿ ಹೃದಯಾಘಾತ ಮತ್ತು ಮೂತ್ರಪಿಂಡ ವೈಫಲ್ಯದಿಂದ ನಟಿ ಪದ್ಮಪ್ರಿಯಾ ರವರು ಇಹಲೋಕ ತ್ಯಜಿಸಿದ್ದಾರೆ. ಇವರ ನಂತರ ಇವರ ಪುತ್ರಿ ವಸುಮತಿ ರವರು ಸಿನಿಮಾ ರಂಗಕ್ಕೆ ಕಾಲಿಟ್ಟು ನಟಿಯಾಗಿ ಒಂದು ಚಿತ್ರದಲ್ಲಿ ಅಭಿನಯಿಸುತ್ತಾರೆ, ಆದರೆ ಚಿತ್ರ ಯಶಸ್ವಿಯಾಗುವುದಿಲ್ಲ. ಇದರ ನಂತರ ವಸುಮತಿಯವರಿಗೆ ಯಾವುದೇ ಅವಕಾಶಗಳು ಸಿಗುವುದಿಲ್ಲ. ಇದನ್ನು ಅರಿತುಕೊಂಡ ವಸುಮತಿ ರವರು ಚಿತ್ರರಂಗದಿಂದ ದೂರ ಉಳಿದು ಮದುವೆಯಾಗಿ ಯುನೈಟೆಡ್ ಕಿಂಗ್ಡಮ್ ನಲ್ಲಿ ಇದೀಗ ವಾಸವಾಗಿದ್ದಾರೆ.