ಒಂದು ಹುಡುಗಿಯ ಕಾರಣದಿಂದ 42 ವರ್ಷ, ರೈಲ್ವೆ ನಿಲ್ದಾಣವನ್ನು ಮುಚ್ಚಲಾಗಿತ್ತು, ಯಾಕೆ ಗೊತ್ತೇ?

ಒಂದು ಹುಡುಗಿಯ ಕಾರಣದಿಂದ 42 ವರ್ಷ, ರೈಲ್ವೆ ನಿಲ್ದಾಣವನ್ನು ಮುಚ್ಚಲಾಗಿತ್ತು, ಯಾಕೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ಭಾರತದಲ್ಲಿ ಅಷ್ಟೇ ಅಲ್ಲ ವಿಶ್ವದಲ್ಲಿ ಕೆಲವು ರೀತಿಯ ಘಟನೆಗಳು ನಡೆದಿವೆ, ಆ ರೀತಿಯ ಘಟನೆಗಳಿಗೆ ನಮಗೆ ನೇರವಾಗಿ ಉತ್ತರ ಸಿಗದೆ ಇದ್ದರೂ ಕೂಡ ವಿಚಿತ್ರ ಘಟನೆಗಳು ಎಂದು ನಾವು ಸುಮ್ಮನಾಗುತ್ತೇವೆ. ಭಾರತದಲ್ಲಿಯೂ ಕೂಡ ಇದೇ ರೀತಿಯ ಒಂದು ಘಟನೆ ನಡೆದಿದ್ದು ಒಂದು ಹುಡುಗಿಯ ಕಾರಣದಿಂದಾಗಿ 42 ವರ್ಷಗಳ ಕಾಲ ಒಂದು ರೈಲ್ವೆ ನಿಲ್ದಾಣವನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು. ಒಂದು ಹುಡುಗಿಯ ಕಾರಣಕ್ಕೆ 42 ವರ್ಷಗಳ ಕಾಲ ರೈಲ್ವೆ ನಿಲ್ದಾಣವನ್ನು ಮುಚ್ಚುವುದು ಸಾಧ್ಯವೇ ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿದರೇ ಇದು ಸತ್ಯ.

ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿರುವ ಬೆಗುಂಕೋಡೋರ್ ಎಂಬ ಊರಿನಲ್ಲಿ ಒಂದು ರೈಲ್ವೆ ನಿಲ್ದಾಣವಿದೆ. ಪಶ್ಚಿಮ ಬಂಗಾಳದ ರಾಣಿಯರಲ್ಲಿ ಒಬ್ಬರಾದ ಶ್ರೀಮತಿ ಲಚನಾ ಕುಮಾರಿ ರವರು ಸ’ರ್ಕಾರದ ಜೊತೆ ಹಲವಾರು ಸುತ್ತಿನ ಮಾತುಕತೆಗಳನ್ನು ನಡೆಸಿ ಇಲ್ಲಿರುವ ಸುತ್ತಮುತ್ತ ಜನರಿಗೆ ಸಹಾಯ ಆಗಬೇಕು ಎಂದು 1960ರಲ್ಲಿ ರೈಲ್ವೆ ನಿಲ್ದಾಣ ನಿರ್ಮಾಣ ಮಾಡುವಂತೆ ಮಾಡುತ್ತಾರೆ. ನಿಲ್ದಾಣ ಆರಂಭವಾದ ಬಳಿಕ ಸುತ್ತಮುತ್ತಲಿನ ಜನರಿಗೆ ಬಹಳ ಅನುಕೂಲವಾಗುತ್ತದೆ, ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎಂದುಕೊಳ್ಳುವಷ್ಟರಲ್ಲಿ ರೈಲ್ವೆ ನಿಲ್ದಾಣ ಮುಚ್ಚಬೇಕಾದ ಪರಿಸ್ಥಿತಿ ಎದುರಾಗುತ್ತದೆ.

ಹೌದು ಸ್ನೇಹಿತರೇ ರೈಲ್ವೆ ನಿಲ್ದಾಣದಲ್ಲಿ ಹಲವಾರು ವಿಚಿತ್ರ ಘಟನೆಗಳು ನಡೆಯಲು ಆರಂಭವಾಗುತ್ತವೆ. ಸಿಬ್ಬಂದಿಗಳು ಇಲ್ಲಿ ಇರಲು ಒಪ್ಪುವುದಿಲ್ಲ, ಈ ರೈಲ್ವೆ ನಿಲ್ದಾಣದಲ್ಲಿ ಕೆಲಸ ಸಿಕ್ಕಿದೆ ಎಂದ ಕೂಡಲೇ ನಾವು ಬಿಟ್ಟು ಹೋಗುತ್ತೇವೆ ಇಲ್ಲದಿದ್ದರೆ ನಮ್ಮನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತಿರುತ್ತಾರೆ. ಇದಕ್ಕೆಲ್ಲ ಕಾರಣ 1967 ರಲ್ಲಿ ಅದೇ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಉದ್ಯೋಗಿಯಾಗಿ ಕೆಲಸ ಮಾಡುತ್ತಿರುವ ಒಬ್ಬರು ಮಹಿಳೆ ನಾನು ಭೂತವನ್ನು ರೈಲ್ವೆ ನಿಲ್ದಾಣದಲ್ಲಿ ನೋಡಿದ್ದೇನೆ ಎಂದು ಹೇಳುತ್ತಾರೆ.

ಹೀಗೆ ಹೇಳಿದ ಕೆಲವೇ ಕೆಲವು ಗಂಟೆಗಳ ಬಳಿಕ ಅವರು ಅನುಮಾನಸ್ಪದವಾಗಿ ಇಹಲೋಕ ತ್ಯಜಿಸುತ್ತಾರೆ. ಮರುದಿನ ಎಂದಿನಂತೆ ರೈಲ್ವೆ ನಿಲ್ದಾಣಕ್ಕೆ ಜನರು ಬರಲಾರಂಭಿಸಿದಾಗ ರೈಲ್ವೆ ಸಹೋದ್ಯೋಗಿ ಮಹಿಳೆಯನ್ನು ಕಳೆದುಕೊಂಡ ವಿಚಾರವನ್ನು ಜನರಿಗೆ ಹೇಳಿ ದಯವಿಟ್ಟು ಎಲ್ಲರೂ ರೈಲ್ವೆ ನಿಲ್ದಾಣದಿಂದ ಹೊರಡಿ ಎಂದು ಮನವಿ ಮಾಡುತ್ತಿರುತ್ತಾರೆ. ಆದರೆ ಜನರು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಇದಾದ ಬಳಿಕ ಬೆರಳಣಿಕೆಯ ದಿನಗಳಲ್ಲಿ ರೈಲ್ವೆ ನಿಲ್ದಾಣದ ಮಾಸ್ಟರ್ ಮತ್ತು ಅವರ ಕುಟುಂಬ ಇಹಲೋಕ ತ್ಯಜಿಸುತ್ತಾರೆ.

ಸ್ಟೇಷನ್ ಮಾಸ್ಟರ್ ಹಾಗೂ ಅವರ ಕುಟುಂಬದ ಅಂತ್ಯದ ಹಿಂದೆ ಭೂತ ಇದೆ ಎಂದು ರೈಲ್ವೆ ಉದ್ಯೋಗಿಗಳು ಜನರ ಬಳಿ ಹೇಳುತ್ತಾರೆ. ಸೂರ್ಯ ಮುಳುಗಿದ ನಂತರ ಈ ನಿಲ್ದಾಣದ ಮೂಲಕ ರೈಲು ಹಾದು ಹೋಗುವ ಸಂದರ್ಭದಲ್ಲಿ ಮಹಿಳೆಯ ಭೂತ ರೈಲಿನೊಂದಿಗೆ ಓಡುತ್ತದೆ. ಕೆಲವೊಮ್ಮೆ ರೈಲಿನ ವೇಗಕ್ಕಿಂತ ಹೆಚ್ಚು ವೇಗವಾಗಿ ಓಡಿ ರೈಲನ್ನು ಹಿಂದಕ್ಕೆ ಹಾಕುತ್ತಾರೆ ಎಂದು ರೈಲ್ವೆ ಉದ್ಯೋಗಿಗಳು ಹೇಳುತ್ತಾರೆ. ಅಷ್ಟೇ ಅಲ್ಲದೆ ಹಲವಾರು ಬಾರಿ ರೈಲು ಬರುವಾಗ ರೈಲಿನ ಹಳಿಯ ಮೇಲೆ ನೃತ್ಯ ಮಾಡುವುದನ್ನು ನಾವು ನೋಡಿದ್ದೇವೆ ಎಂದು ಅಲ್ಲಿನ ಸಿಬ್ಬಂದಿಗಳು ಹೇಳುತ್ತಾರೆ.

ಈ ಎಲ್ಲ ಘಟನೆಗಳು ನಡೆದ ಬಳಿಕ ಈ ನಿಲ್ದಾಣವನ್ನು ಭೂತದ ನಿಲ್ದಾಣ ಎಂದು ಕರೆಯಲು ಆರಂಭಿಸುತ್ತಾರೆ, ಅಚ್ಚರಿಯೆಂದರೆ ರೈಲ್ವೆ ದಾಖಲೆಗಳಲ್ಲಿಯೂ ಕೂಡ ಭೂತದ ನಿಲ್ದಾಣ ಎಂದು ಕರೆಯಲಾಗುತ್ತದೆ. ಹೀಗೆಯೇ ದಿನೇದಿನೇ ಭೂತದ ಆತಂಕ ಹೆಚ್ಚಾದಾಗ ಜನರು ಕ್ರಮೇಣ ನಿಲ್ದಾಣಕ್ಕೆ ಬರುವುದಿಲ್ಲ, ಕೊನೆಗೆ ಒಂದು ದಿನ ಜನರು ಇಲ್ಲಿಗೆ ಬರುವುದನ್ನು ಸಂಪೂರ್ಣವಾಗಿ ನಿಲ್ಲಿಸಿ ಬಿಡುತ್ತಾರೆ. ಇನ್ನು ರೈಲ್ವೆ ನೌಕರರು ಕೂಡ ಇಲ್ಲಿಂದ ಓಡಿ ಹೋಗಿ ವರ್ಗಾವಣೆ ಮಾಡಿ ಇಲ್ಲವಾದಲ್ಲಿ ನಾವು ಕೆಲಸ ಬಿಡುತ್ತೇವೆ ಎಂದು ಅಧಿಕಾರಿಗಳಲ್ಲಿ ಮನವಿ ಮಾಡಲು ಆರಂಭಿಸುತ್ತಾರೆ.

ಅಲ್ಲಿರುವ ಉದ್ಯೋಗಿಗಳನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿ ಹೊಸ ಉದ್ಯೋಗಿಗಳನ್ನು ನೇಮಕ ಮಾಡಿದರು ಕೂಡ ಯಾರು ಇಲ್ಲಿಗೆ ಬರಲು ಒಪ್ಪುವುದಿಲ್ಲ. ಇದನ್ನು ಕಂಡ ರೈಲ್ವೆ ಇಲಾಖೆಯು ಸಂಪೂರ್ಣವಾಗಿ ರೈಲ್ವೆ ನಿಲ್ದಾಣವನ್ನು ಮುಚ್ಚಲು ನಿರ್ಧಾರ ಮಾಡುತ್ತದೆ. ಇದಾದ ಬಳಿಕ ರೈಲು ಹಳ್ಳಿಗಳಲ್ಲಿ ಹಾದು ಹೋದರೂ ಕೂಡ ಈ ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸುತ್ತಿರಲಿಲ್ಲ. ಇನ್ನೂ ಎಲ್ಲಾ ಚಾಲಕರಿಗೆ ಆದೇಶ ಹೊರಡಿಸಿ ಈ ನಿಲ್ದಾಣ ಬಂದ ತಕ್ಷಣ ರೈಲಿನ ವೇಗವನ್ನು ಹೆಚ್ಚಿಸುವಂತೆ ಆದೇಶ ಹೊರಡಿಸಲಾಗುತ್ತದೆ. ಈ ನಿಲ್ದಾಣ ಬಂದ ತಕ್ಷಣ ಜನರು ಬಾಗಿಲು ಕಿಟಕಿಗಳನ್ನು ಸಂಪೂರ್ಣವಾಗಿ ಮುಚ್ಚಲು ಆರಂಭ ಮಾಡುತ್ತಾರೆ.

ಇದಾದ ಬಳಿಕ 42 ವರ್ಷಗಳ ನಂತರ 2009ರಲ್ಲಿ ಮಮತಾ ರವರು ನಿಲ್ದಾಣವನ್ನು ಮತ್ತೆ ತೆರೆದು ಜನರಿಗೆ ಧೈರ್ಯ ತುಂಬಿ ಹೋಗುತ್ತಾರೆ. ಈಗಲೂ ಕೂಡ ಈ ರೈಲ್ವೆ ನಿಲ್ದಾಣದಲ್ಲಿ ಸೂರ್ಯ ಮುಳುಗಿದ ನಂತರ ಯಾವುದೇ ರೈಲು ಗಳು ನಿಲ್ಲುವುದಿಲ್ಲ, ಇಷ್ಟೆಲ್ಲಾ ಆಗುತ್ತಿದ್ದರೂ ಕೂಡ ಇದೊಂದು ವಿಶೇಷ ಪ್ರವಾಸಿಗರ ತಾಣವಾಗಿದ್ದು ಮುಂಜಾನೆಯಲ್ಲಿ ಭೂತದ ರೈಲ್ವೆ ನಿಲ್ದಾಣ ಎಂದು ಜನರು ಭೇಟಿ ನೀಡಿ ಫೋಟೋ ತೆಗೆದುಕೊಂಡು ಹೋಗುತ್ತಾರೆ.