ಚಿರತೆ ಪ್ರತಿದಿನ ಗೋವಿನ ಮಡಿಲಿನಲ್ಲಿ ಬಂದು ಮಲಗಿ ಮುಂಜಾನೆ ಕಾಡಿಗೆ ವಾಪಸ್ಸು ಹೋಗುತ್ತಿದ್ದದ್ದು ಯಾಕೆ ಗೊತ್ತಾ??

ಚಿರತೆ ಪ್ರತಿದಿನ ಗೋವಿನ ಮಡಿಲಿನಲ್ಲಿ ಬಂದು ಮಲಗಿ ಮುಂಜಾನೆ ಕಾಡಿಗೆ ವಾಪಸ್ಸು ಹೋಗುತ್ತಿದ್ದದ್ದು ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಹಿಂದೂ ಪುಣ್ಯ ಗ್ರಂಥಗಳಿಂದ ಹಿಡಿದು ಆಧುನಿಕ ಜೀವನದ ವರೆಗೂ ಗೋವುಗಳಿಗೆ ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ. ತಾಯಿಯ ಮತ್ತೊಂದು ಪ್ರತಿರೂಪ ಎಂದುಕೊಂಡು ಪ್ರತಿಯೊಬ್ಬರು ಗೋವುಗಳನ್ನು ಪೂಜಿಸುತ್ತಾ ತಮ್ಮ ಮನೆಯ ಸದಸ್ಯರಂತೆ ಪರಿಗಣಿಸಲಾಗುತ್ತದೆ. ಆದರೆ ಇತ್ತೀಚಿನ ಆಧುನಿಕ ಯುಗದಲ್ಲಿ ಗೋವುಗಳನ್ನು ಪೂಜೆ ಮಾಡುವುದು ಕೂಡ ಒಂದು ಅವೈಜ್ಞಾನಿಕ ಆಚರಣೆಯೆಂದು ನಂಬುವ ಚೆನ್ನಾಗಿದ್ದಾರೆ ಎಂಬುದೇ ವಿಪರ್ಯಾಸ.

ನೀವು ಒಂದು ವೇಳೆ ನಾಯಿಯನ್ನು ಪ್ರೀತಿಸಿ ಮನೆಯ ಸದಸ್ಯರಂತೆ ನೋಡಿಕೊಂಡರೆ ನಿಮ್ಮನ್ನು ಪ್ರಾಣಿಪ್ರಿಯ ಎನ್ನುತ್ತಾರೆ. ಅದೇ ಪ್ರೀತಿಯನ್ನು ನೀವು ಗೋವಿನ ಮೇಲೆ ತೋರಿಸಿದರೆ ಪೂರ್ವಜರ ಕ್ರಮಗಳನ್ನು ಅನುಸರಿಸುವ ಅವೈಜ್ಞಾನಿಕ ವ್ಯಕ್ತಿ ಎಂದು ಕರೆಯುತ್ತಾರೆ. ಆದರೆ ಸ್ನೇಹಿತರೇ ಗೋಮಾತೆಯ ಮಹತ್ವ ಹಾಗೂ ತಾಯಿತನ ಹೇಗಿರಲಿದೆ ಗೊತ್ತಾ?? ಬನ್ನಿ ಸ್ನೇಹಿತರೇ ಆಧುನಿಕ ಯುಗದಲ್ಲಿಯೂ ಕೂಡ ಹಿಂದೂ ಪುರಾಣಗಳಲ್ಲಿ ಗೋವುಗಳನ್ನು ಯಾಕೆ ಗೋಮಾತೆಯೆಂದು ಕರೆಯುತ್ತೇವೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಸಮೇತ ವಿವರಣೆ ನೀಡುತ್ತವೆ.

ಸ್ನೇಹಿತರೆ ಒಬ್ಬ ವ್ಯಕ್ತಿ ಇತ್ತೀಚಿಗೆ ಒಂದು ಹಸುವನ್ನು ತನ್ನದೇ ಆದ ಊರಿನ ವ್ಯಕ್ತಿಯ ಬಳಿ ಖರೀದಿ ಮಾಡುತ್ತಾನೆ, ಖರೀದಿ ಮಾಡಿದ ಹಸುವನ್ನು ತನ್ನ ಮನೆಯಿಂದ ಒಂದಷ್ಟು ದೂರದಲ್ಲಿ ಕಟ್ಟಿ ಹಾಕಿರುತ್ತಾನೆ, ಹಸು ರಾತ್ರಿಯ ವೇಳೆಯಲ್ಲಿ ಅಲ್ಲಿಯೇ ಇರುತಿತ್ತು, ಆದರೆ ಹಸು ಮನೆಗೆ ತಂದ ದಿನದಿಂದ ಮನೆಯ ಸುತ್ತ ರಾತ್ರಿಯ ಹೊತ್ತು ಬಹಳ ನಾಯಿಗಳು ಬೊಗಳುತ್ತಿದ್ದವು, ದಿನೇದಿನೇ ನಾಯಿಗಳ ಬೊಗಳುವಿಕೆ ಹೆಚ್ಚಾಯಿತು. ಯಾಕೆ ಎಂದು ಮನೆಯ ಮಾಲೀಕ ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ. ಆದಕಾರಣ ಕಳ್ಳ ಬರಬಹುದೇ ಎಂಬ ಅನುಮಾನದಿಂದ ಮನೆಯ ಹೊರಗಡೆ ಒಂದಷ್ಟು ದೂರದಲ್ಲಿ ಸಿಸಿಟಿವಿ ಕ್ಯಾಮೆರಾ ಫಿಕ್ ಮಾಡುತ್ತಾನೆ. ಎಂದಿನಂತೆ ನಾಯಿಗಳು ಮಧ್ಯರಾತ್ರಿಯಲ್ಲಿ ಬೊಗಳಲು ಆರಂಭಿಸುತ್ತವೆ.

ಮಾಲೀಕ ತಾನು ಸಿಸಿ ಕ್ಯಾಮೆರಾ ಹಾಕಿಸಿರುವ ಕಾರಣ ಮಾನಿಟರ್ ಪರದೆಯ ಮುಂದೆ ಕುಳಿತುಕೊಂಡು ಸಿಸಿಟಿವಿ ನೋಡಲು ಆರಂಭಿಸುತ್ತಾನೆ. ಆತನಿಗೆ ಒಂದು ಅಚ್ಚರಿ ಉಂಟಾಗುತ್ತದೆ, ಸಿಸಿ ಕ್ಯಾಮೆರಾದ ಬಳಿ ಕಟ್ಟಲಾಗಿರುವ ಗೋವಿನ ಬಳಿಗೆ ಒಂದು ಚಿರತೆ ಬಂದು ಗೋವಿನ ಮಡಿಲಿನಲ್ಲಿ ಮಲಗಿರುತ್ತದೆ. ಇದೇನಿದು ಗೋವಿನ ಬಳಿ ಚಿರತೆ ಇದೆ ಎಂದು ಬಹಳ ಆಶ್ಚರ್ಯಚಕಿತನಾಗುತ್ತಾನೆ, ಹೊರಗೆ ಹೋಗುವ ಧೈ’ರ್ಯ ಮಾಡುವುದಿಲ್ಲ.

ಮರುದಿನ ಮುಂಜಾನೆ ಸಿಸಿಟಿವಿ ಎಲ್ಲ ಚೆಕ್ ಮಾಡಿ ಚಿರತೆ ಇಲ್ಲ ಎಂಬುದನ್ನು ದೃಢಪಡಿಸಿಕೊಂಡು ಹೊಸ ಮಾಲೀಕ ಗೋವಿನ ಹಳೆಯ ಮಾಲೀಕನ ಬಳಿ ಹೋಗಿ ವಿಷಯವನ್ನು ಹೇಳುತ್ತಾನೆ. ಆಶ್ಚರ್ಯವೆಂದರೆ ಗೋವಿನ ಹಳೆಯ ಮಾಲೀಕನಿಗೂ ಕೂಡ ಈ ವಿಷಯ ತಿಳಿದಿರುತ್ತದೆ, ಹೊಸ ಮಾಲೀಕನ ಪ್ರಶ್ನೆಗೆ ಉತ್ತರಿಸಿದ ಹಳೆಯ ಗೋವಿನ ಮಾಲೀಕ ಆ ಚಿರತೆ ಮರಿ ಇಪ್ಪತ್ತು ದಿನ ವಿದ್ದಾಗ ತಾಯಿ ಚಿರತೆ ಇಹಲೋಕ ತ್ಯಜಿಸುತ್ತದೆ, ಆ ಸಂದರ್ಭದಲ್ಲಿ ಇದೇ ಹಸು ಚಿರತೆ ಮರಿಗೆ ಹಾಲು ನೀಡಲು ಆರಂಭಿಸುತ್ತದೆ. ಅಂದಿನಿಂದ ಇಲ್ಲಿಯವರೆಗೂ ಚಿರತೆ ಪ್ರತಿ ರಾತ್ರಿಯೂ ಬಂದು ಗೋವಿನ ಮಡಿಲಿನಲ್ಲಿ ತಾಯಿ ಎಂದುಕೊಂಡು ಮಲಗಿಕೊಂಡು ಬೆಳಗಿನ ಜಾವ ವಾಪಸ್ಸು ಕಾಡಿನ ದಾರಿ ಹಿಡಿಯುತ್ತದೆ ಎಂದು ಹಳೆಯ ಮಾಲಿಕ ಹೊಸ ಮಾಲೀಕನಿಗೆ ಉತ್ತರ ನೀಡುತ್ತಾನೆ. ಇಂತಹ ಕಾರಣಕ್ಕಾಗಿಯೇ ನಾವು ಗೋಮಾತೆಯನ್ನು ಪೂಜಿಸಿ ಮನೆಯ ಸದಸ್ಯರಂತೆ ಭಾವಿಸುತ್ತೇವೆ, ಯಾಕೆಂದರೆ ಯಾರನ್ನೇ ಆಗಲಿ ತನ್ನ ಮಗುವಿನಂತೆ ಸಾಕಿ ಸಲಹಿ ತಾಯಿಯ ಪ್ರೀತಿ ನೀಡುವುದು ಸಾಧ್ಯವಾಗುವುದು ಕೇವಲ ಗೋಮಾತೆಗೆ ಮಾತ್ರ.