ತನ್ನ ಮೂಲ ನಾಡಿಗೆ ತೆರಳಿ ವಿಶೇಷ ಉಡುಗೊರೆ ಮೂಲಕ ಜಮ್ಮು-ಕಾಶ್ಮೀರದ ಜನರಿಗೆ ನೆರವಾಗಲು ಮುಂದಾದ ರೈನಾ?? ಮಾಡಿದ್ದೇನು ಗೊತ್ತಾ?

ತನ್ನ ಮೂಲ ನಾಡಿಗೆ ತೆರಳಿ ವಿಶೇಷ ಉಡುಗೊರೆ ಮೂಲಕ ಜಮ್ಮು-ಕಾಶ್ಮೀರದ ಜನರಿಗೆ ನೆರವಾಗಲು ಮುಂದಾದ ರೈನಾ?? ಮಾಡಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಜಮ್ಮು ಹಾಗೂ ಕಾಶ್ಮೀರ ದಲ್ಲಿ ವಿಶೇಷ ಸ್ಥಾನಮಾನ ರದ್ದತಿ ಆದಮೇಲೆ ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ರವರು ಸಂತಸ ವ್ಯಕ್ತಪಡಿಸಿ ನಾನು ಒಬ್ಬ ಕಾಶ್ಮೀರಿ ಪಂಡಿತ ಕುಟುಂಬಕ್ಕೆ ಸೇರಿದವನು. ಆದರೆ ನನ್ನ ಮೂಲ ನಾಡಿಗೆ ತೆರಳಿ ಭಾರತದ ಇತರ ಭಾಗಗಳಂತೆ ಬದುಕಲು ಸಾಧ್ಯವಾಗುತ್ತಿರಲಿಲ್ಲ. ಆದರೆ ವಿಶೇಷ ಸ್ಥಾನಮಾನ ರದ್ದತಿಯಿಂದ ಜಮ್ಮು ಹಾಗೂ ಕಾಶ್ಮೀರ ದಲ್ಲಿ ಶಾಂತಿ ಸ್ಥಾಪನೆಯಾಗಿ ಕಾಶ್ಮೀರಿ ಪಂಡಿತರ ಎಲ್ಲರೂ ವಾಪಸು ಬಂದರೇ ಅಷ್ಟೇ ಸಾಕು ಎಂದು ಸಂತಸ ವ್ಯಕ್ತಪಡಿಸಿದ್ದರು.

ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆಯಾದ ಬಳಿಕ ತಮ್ಮ ಎರಡನೇ ಇನಿಂಗ್ಸ್ ಆರಂಭಿಸಿರುವ ಸುರೇಶ್ ರೈನಾ ರವರು ಜಮ್ಮು ಹಾಗೂ ಕಾಶ್ಮೀರ ಜನತೆಗೆ ಮತ್ತೊಂದು ಉಡುಗೊರೆ ನೀಡುತ್ತಿದ್ದಾರೆ. ಹೌದು ಸ್ನೇಹಿತರೇ ಬಹುಶಹ ಈಗಾಗಲೇ ನಿಮಗೆಲ್ಲರಿಗೂ ಮೊದಲನೆಯ ಉಡುಗೊರೆ ತಿಳಿದಿರಬಹುದು, ಅದು ಏನೆಂದರೇ ಕಳೆದ ಕೆಲವು ದಿನಗಳ ಹಿಂದೆ ಜಮ್ಮು ಹಾಗೂ ಕಾಶ್ಮೀರ ದ ಯುವ ಜನರಿಗೆ ಸಹಾಯ ಮಾಡಿ ಕ್ರಿಕೆಟ್ ವೇದಿಕೆ ಒದಗಿಸಲು ಮತ್ತು ಇತರ ಕ್ರೀಡೆಗಳನ್ನು ಕೂಡ ಉತ್ತೇಜಿಸಲು ಕೇಂದ್ರ ಪ್ರದೇಶದ ಕ್ರೀಡಾ ಮಂಡಳಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು.

ಆದರೆ ಇದು ಕೇವಲ ಕ್ರೀಡೆಗೆ ಮಾತ್ರ ನಿಂತಿಲ್ಲ, ಹೌದು ಇದೀಗ ಜಮ್ಮು ಹಾಗೂ ಕಾಶ್ಮೀರಕ್ಕೆ ತರಬೇತಿ ಶಿಬಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಕ್ಕಳಿಗೆ ಸಲಹೆಗಳನ್ನು ನೀಡಿ ತದನಂತರ ಮಾತನಾಡಿದ ಸುರೇಶ್ ರೈನಾರವರು ಇದು ನನ್ನ ಮೂಲ ನಾಡು ಇಲ್ಲಿರುವ ಜನರಿಗೆ ಸಹಾಯವಾಗಲಿ ಎಂದು ನಾನು ನನ್ನ ಕೈಲಾದಷ್ಟು ಮಟ್ಟದಲ್ಲಿ 10 ಶಾಲೆಗಳನ್ನು ಸ್ಥಾಪಿಸಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಘೋಷಣೆ ಮಾಡಿದ್ದಾರೆ. ಈ ಮೂಲಕ ತಮ್ಮ ಮೂಲ ನಾಡಿಗೆ ಏನನ್ನಾದರೂ ವಾಪಸ್ಸು ನೀಡಬೇಕು ಎಂಬ ಮನಸ್ಸು ಸುರೇಶ್ ರೈನಾ ರವರದ್ದು ಆಗಿರುವ ಕಾರಣ ಈ ಘೋಷಣೆ ಮಾಡಿದ ಕೆಲವೇ ಕೆಲವು ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗಳ ಸುರಿಮಳೆಯೇ ಸುರಿದಿದೆ.