ಕನ್ನಡದ ಸಾರ್ವಕಾಲಿಕ ಶ್ರೇಷ್ಠ ಟಾಪ್ 10 ಖಳನಟರು ಯಾರ್ಯಾರು ಗೊತ್ತೇ??

ಕನ್ನಡದ ಸಾರ್ವಕಾಲಿಕ ಶ್ರೇಷ್ಠ ಟಾಪ್ 10 ಖಳನಟರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ, ನಟನೆಯ ಬೇರೆ ಪಾತ್ರಗಳಿಗೆ ಹೋಲಿಕೆ ಮಾಡಿದರೆ ವಿಲನ ಪಾತ್ರಗಳಲ್ಲಿ ನಟಿಸುವುದು ಸುಲಭದ ಕೆಲಸವಲ್ಲ, ನಟನಾಗಿ ನಟಿಸಬಹುದು ಅಥವಾ ಇನ್ಯಾವುದೇ ಪೋಷಕ ನಟನ ಪಾತ್ರದಲ್ಲಿ ಕೂಡ ಸುಲಭವಾಗಿ ನಡೆಸಬಹುದು, ಆದರೆ ವಿಲನ್ ಪಾತ್ರ ಮಾಡಬೇಕು ಎಂದರೆ ಖಂಡಿತ ಸಾಕಷ್ಟು ಶ್ರಮಪಟ್ಟು ಉದ್ಘಾಟನೆ ಮಾಡಬೇಕಾಗುತ್ತದೆ. ಈ ರೀತಿ ಹಲವಾರು ಸವಾಲುಗಳನ್ನು ಹೊಂದಿರುವ ವಿಲನ್ ಪಾತ್ರಗಳಲ್ಲಿ ನಟನೆ ಮಾಡಿಯೂ ಕೂಡ ನಮ್ಮ ಕನ್ನಡ ಚಿತ್ರೋದ್ಯಮದಲ್ಲಿ ಹಲವಾರು ಕಲಾವಿದರು ತಮ್ಮ ನಟನೆಯ ಮೂಲಕ ವಿಲನ್ ಪಾತ್ರಗಳಿಗೆ ಜೀವತುಂಬಿ ಸಾಕಷ್ಟು ಯಶಸ್ಸು ಗಳಿಸಿ ಅತ್ಯುತ್ತಮ ವಿಲನ್ ಗಳು ಎಂಬ ಹೆಸರು ಪಡೆದು ಕೊಂಡಿದ್ದಾರೆ. ಬನ್ನಿ ಇಂದು ನಾವು ಈ ರೀತಿ ಕನ್ನಡ ಚಿತ್ರರಂಗದಲ್ಲಿ ಅತ್ಯುತ್ತಮ ಖಳನಾಯಕನಾಗಿ ಪಾತ್ರವಹಿಸಿದ ಟಾಪ್ 10 ಕಲಾವಿದರ ಕುರಿತು ತಿಳಿದುಕೊಳ್ಳೋಣ.

ಟಾಪ್ 10- ಸುಂದರ್ ಕೃಷ್ಣ ಉರ್ಸ್: ಗಡಸು ಧ್ವನಿ ಮತ್ತು ವಿಭಿನ್ನ ನಟನೆಯಿಂದ ಹೆಸರುವಾಸಿಯಾದ ಸುಂದರ್ ಕೃಷ್ಣ ಉರ್ಸ್ ರವರು ಕನ್ನಡ ಚಿತ್ರರಂಗದ ಖಳನಾಯಕರಲ್ಲಿ ಒಬ್ಬರು. ಅವರು ಎಷ್ಟೋ ನಟರಿಗೆ ಧ್ವನಿ ನೀಡುವ ಡಬ್ಬಿಂಗ್ ಕಲಾವಿದರಾಗಿಯೂ ಸಹ ಕೆಲಸ ಮಾಡಿದ್ದಾರೆ. ಇವರು ಸಂಗ್ಯ ಬಾಲ್ಯ, ಹೃದಯ ಹಾಡಿತು, ಸಂಯುಕ್ತ, ನ್ಯಾ’ಯಾ ಎಲ್ಲಿದೆ , ಒಂದಾನೊಂದು ಕಾಲದಲ್ಲಿ, ಇನ್ನು ಹಲವಾರು ಚಿತ್ರಗಳಲ್ಲಿ ನಟಿಸುವ ಮೂಲಕ ಸೈ ಅನಿಸಿಕೊಂಡಿದ್ದಾರೆ.

ಟಾಪ್ 9- ದೇವರಾಜ್: ದೇವರಾಜ್ ರವರು ಸುಮಾರು 200 ರಕ್ಕೂ ಹೆಚ್ಚು ಸಿನಿಮಾಗಳಲ್ಲಿ ವಿಭಿನ್ನ ರೀತಿಯ ಪಾತ್ರಗಳಲ್ಲಿ ನಟಿಸಿದ್ದಾರೆ . ಇವರು ಖಳನಾಯಕ ಪಾತ್ರದೊಂದಿಗೆ ನಟನೆ ಪ್ರಾರಂಭಿಸಿದರು ಮತ್ತು ಕೆಲವು ಸಿನಿಮಾಗಳಲ್ಲಿ ಹೀರೋ ಆಗಿಯೂ ಸಹ ನಟಿಸಿದ್ದಾರೆ. 1991 ರಲ್ಲಿ ಬಿಡುಗಡೆಯಾದ ವೀರಪ್ಪನ್ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಕ್ಕಾಗಿ ಇವರಿಗೆ ಕರ್ನಾಟಕ ಚಲನಚಿತ್ರ ಪ್ರಶಸ್ತಿ ದೊರೆತಿದೆ.

ಟಾಪ್ 8- ಬಾಲಕೃಷ್ಣ: ಬಾಲಕೃಷ್ಣ ರವರು ಜನಪ್ರಿಯ ಖಳನಾಯಕ ಮತ್ತು ಹಾಸ್ಯನಟರಾಗಿದ್ದರು. ಅಂದಿನ ಕಾಲದ ಎಲ್ಲಾ ರೀತಿಯ ಜನರು ಇವರ ನಟನೆಯನ್ನು ಇಷ್ಟಪಡುತಿದ್ದರು. ಇವರು ಸುಮಾರು 560 ಹೆಚ್ಚು ಚಿತ್ರಗಳಲ್ಲಿ ನಾಯಕ, ಖಳನಾಯಕ, ಹಾಸ್ಯನಟ, ಪ್ರೀತಿಯ ತಂದೆಯಾಗಿ ನಟಿಸಿದ್ದಾರೆ. ಇವರು ಗಂಧದ ಗುಡಿ , ಬಂಗಾರದ ಮನುಷ್ಯ, ಬಂಗಾರದ ಪಂಜರ, ದಾರಿ ತಪ್ಪಿದ ಮಗ, ರಣಧೀರ, ಕಂಠೀರವ ಮತ್ತು ಇನ್ನೂ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ಟಾಪ್ 7- ಶಕ್ತಿ ಪ್ರಸಾದ್: ಶಕ್ತಿ ಪ್ರಸಾದ್ ರವರು ಕನ್ನಡ ಚಿತ್ರಗಳಲ್ಲಿ ಹೆಚ್ಚಾಗಿ ಖಳನಾಯಕ ಪಾತ್ರಗಳಲ್ಲಿ ಕಾಣಿಸಿಕೊಂಡವರು. ಇವರು 200+ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಭಕ್ತ ಸಿರಿಯಾಳ, ಚಕ್ರವ್ಯೂಹ,ಅಂತ, ಸಾಹಸ ಸಿಂಹ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಟಾಪ್ 6- ಟೈಗರ್ ಪ್ರಭಾಕರ್: ಖಳನಾಯಕನ ಪಾತ್ರಗಳಿಂದ ಹೆಚ್ಚು ಹೆಸರುವಾಸಿಯಾದ ನಟ ಅಂದರೆ ಅದು ಟೈಗರ್ ಪ್ರಭಾಕರ್.ಇವರು ಕನ್ನಡ ಚಿತ್ರರಂಗದ ಜನಪ್ರಿಯ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಇವರು 450+ ಚಲನಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಟೈಗರ್ ಪ್ರಭಾಕರ್ ರವರು ಗಂಧದ ಗುಡಿ, ಜಗ್ಗು, ರಾಜ ನನ್ನ ರಾಜ, ಗಿರಿ ಕನ್ಯೆ, ರ’ಕ್ತ ತಿಲಕ, ಶಂಕರ್ ಗುರು, ಮತ್ತು ಇತರ ಚಲನಚಿತ್ರಗಳಲ್ಲಿ ನಟಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ.

ಟಾಪ್ 5- ದಿನೇಶ್: ದಿನೇಶ್ ರವರನ್ನು ಕನ್ನಡ ಚಲನಚಿತ್ರೋದ್ಯಮದಲ್ಲಿ ಕು’ಖ್ಯಾತ ಖಳನಾಯಕ ಎಂಬ ಬಿರುದನ್ನು ಪಡೆದ್ದರು. ಇವರು ಹಾಸ್ಯ ಮತ್ತು ಸಾಮಾಜಿಕ ನಾಟಕಗಳಲ್ಲಿಯೂ ಸಹ ಪ್ರದರ್ಶನ ನೀಡಿದ್ದಾರೆ. ಇವರು 100+ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇದರಲ್ಲಿ ನಾಂದಿ, ಶ್ರೀ ಕೃಷ್ಣದೇವರಾಯ, ಸಿಬಿಐ ಶಂಕರ್, ಸ್ವಯಂವರ, ಕಿಲಾಡಿ ಜೋಡಿ ಸಿನಿಮಾಗಳಲ್ಲಿ ನಟಿಸಿ ಪ್ರಸಿದ್ದರಾದವರು.

ಟಾಪ್ 4- ಧೀರೇಂದ್ರ ಗೋಪಾಲ್: ಶಿವನೇ ಶಂಬುಲಿಂಗ ಎಂಬ ವಾಕ್ಯ ಹೇಳುವ ಮೂಲಕ ಪ್ರಸಿದ್ಧರಾದ ನಟರೆಂದರೆ ಧೀರೇಂದ್ರ ಗೋಪಾಲ್. ಇವರು ಜನಪ್ರಿಯ ನಟ ಮತ್ತು ರಂಗ ಕಲಾವಿದರಾಗಿದ್ದರು. ಇವರು ಹೆಚ್ಚಾಗಿ ಖಳನಾಯಕ ಮತ್ತು ಹಾಸ್ಯ ಪಾತ್ರಗಳಲ್ಲಿ ನಟಿಸಿ ಹೆಸರುವಾಸಿಯಾಗಿದ್ದಾರೆ. ಇವರು ಪಡುವಾರಳ್ಳಿ ಪಾಂಡವರು, ನಾನೊಬ್ಬ ಕಳ್ಳ, ಸಾಹಸ ಸಿಂಹ, ಗಜಪತಿ ಗರ್ವಭಂಗ,ಅಣ್ಣಯ್ಯ, ಗಡಿಬಿಡಿ ಗಂಡ ಮತ್ತು ಇತರ ಚಲನಚಿತ್ರಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

ಟಾಪ್ 3- ಸುಧೀರ್: 80 ರ ದಶಕದ ಕೊನೆಯಲ್ಲಿ ಮತ್ತು 90 ರ ದಶಕದ ಆರಂಭದಲ್ಲಿ ಬಂದ ಚಲನಚಿತ್ರಗಳಲ್ಲಿ ಸುಧೀರ್ ನ’ಕಾರಾತ್ಮಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವರು ತಮ್ಮದೇ ಆದ ಅಭಿವ್ಯಕ್ತಿ ಶೈಲಿಯನ್ನು ಹೊಂದಿದ್ದರು. ಇವರು 200 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಎಸ್ಪಿ ಸಾಂಗ್ಲಿಯಾನ, ಸೆಂಟ್ರಲ್ ರೌಡಿ, ಹಾವಿನ ಎಡೆ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಟಾಪ್ 2- ತೂಗುದೀಪ ಶ್ರೀನಿವಾಸ್: ಮೈಸೂರು ಶ್ರೀನಿವಾಸ್ ಅಥವಾ ತೂಗುದೀಪ ಶ್ರೀನಿವಾಸ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ ಪ್ರಖ್ಯಾತ ನಟರಿವರು. ಅವರು ದೊಡ್ಡ ಹೆಸರು ಮಾಡಿದ್ದು ಖಳನಾಯಕರಾಗಿ, ಇವರ ಆ ರಾ’ಕ್ಷಸ ರೀತಿಯ ಮೋಡಿಯಿಂದ ಬೆಳ್ಳಿ ಪರದೆಯಲ್ಲಿ ಮಿಂಚಿದವರು. ಇವರು ಮೇಯರ್ ಮುತ್ತಣ್ಣ, ಬಂಗಾರದ ಪಂಜರ , ಗಂಧದ ಗುಡಿ, ವಸಂತ ಲಕ್ಷ್ಮಿ, ಸಿಪಾಯಿ ರಾಮು, ಗಿರಿ ಕನ್ಯೆ ಮತ್ತು ಮುಂತಾದ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ಟಾಪ್ 1- ವಜ್ರಮುನಿ: ಡೈನಾಮಿಕ್ ವಜ್ರಮುನಿ ಕನ್ನಡ ಚಲನಚಿತ್ರೋದ್ಯಮದ ಪ್ರಸಿದ್ಧ ಖಳನಾಯಕರುಗಳಲ್ಲಿ ಒಬ್ಬರು. ಇವರ ಗುಡುಗು ಧ್ವನಿ ಮತ್ತು ವಿಭಿನ್ನ ರೀತಿಯ ನಟನೆಯಿಂದ ಹೆಸರುವಾಸಿಯಾದರು.ತನ್ನ ಸಂಭಾಷಣೆಗಳೊಂದಿಗೆ ಘರ್ಜಿಸುತ್ತಿದ್ದ ರೀತಿಯನ್ನು ನೋಡಿದ ಜನರು ನಟಭಯಂಕರ ಎಂದು ಕರೆಯುತ್ತಾರೆ. ಇವರು ಪುಟ್ಟಣ್ಣ ಕಂಗಲ್ ಅವರ ಮಲ್ಲಮ್ಮನ ಪವಾಡ ಸಿನಿಮಾದಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ಮತ್ತು ಮಯೂರ, ಬಬ್ರುವಾಹನ, ಸಂಪತ್ತಿಗೆ ಸವಾಲ್, ಸಾಂಗ್ಲಿಯಾನ , ಸಾಹಸ ಸಿಂಹ, ಶಂಕರ್ ಗುರು, ಪ್ರೇಮದ ಕಾಣಿಕೆ ಮುಂತಾದ ಕೆಲವು ಕನ್ನಡ ಕ್ಲಾಸಿಕ್ ಸಿನಿಮಾ‌ಗಳಲ್ಲಿ ನಟಿಸಿದ್ದಾರೆ.