ಕೃಷಿ ಕಾಯ್ದೆ ಕುರಿತು ಮಹತ್ವದ ಹೇಳಿಕೆ ನೀಡಿದ ನರೇಂದ್ರ ಮೋದಿ ! ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ 11 ದಿನಗಳಿಂದ ದೆಹಲಿಯ ಗಡಿಯಲ್ಲಿ ಕೃಷಿ ಕಾಯ್ದೆಯನ್ನು ವಿರೋಧ ಮಾಡುತ್ತಾ ಪಂಜಾಬ್ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಸಾವಿರಾರು ರೈತರು ಪಾಲ್ಗೊಂಡಿದ್ದು ಪ್ರತಿಭಟನೆಯನ್ನು ಮತ್ತಷ್ಟು ಹೆಚ್ಚು ಮಾಡಲು ಭಾರತ್ ಬಂದ್ ಕರೆ ನೀಡಲಾಗಿತ್ತು, ಆದರೆ ಬಹುತೇಕ ರಾಜ್ಯಗಳಲ್ಲಿ ಭಾರತ್ ಬಂದ್ ಕೇವಲ ಪ್ರತಿಭಟನೆಗಷ್ಟೇ ಸೀಮಿತವಾಗಿದೆ. ಕರ್ನಾಟಕ ರಾಜ್ಯದಲ್ಲಿಯೂ ಕೂಡ ಕೇವಲ ಪ್ರತಿಭಟನೆ ನಡೆಯುತ್ತಿದ್ದ ಸ್ಥಳಗಳಲ್ಲಿ ಬಿಟ್ಟರೆ ಉಳಿದ ಯಾವುದೇ ಸ್ಥಳಗಳಲ್ಲಿಯೂ ಭಾರತ್ ಬಂದ್ ಇರುವಂತೆ ಕಾಣಲಿಲ್ಲ. ರಾಜ್ಯದ ಎಲ್ಲೆಡೆ ಎಂದಿನಂತೆ ಬಸ್ ಹಾಟೋ ಹಾಗೂ ಕಾರುಗಳು ಓಡಾಟ ಮಾಡುತ್ತಿದ್ದವು.

ಇನ್ನು ಭಾರತ ಬಂದ್ ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಆಗ್ರ ಮೆಟ್ರೋ ರೈಲು ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ನರೇಂದ್ರ ಮೋದಿ ಅವರು ಮಹತ್ವದ ಮಾತುಗಳನ್ನು ಆಡಿದ್ದಾರೆ. ಹೌದು ಸ್ನೇಹಿತರೇ ಇದೀಗ ಕೃಷಿ ಕಾಯ್ದೆ ಕುರಿತು ಮಾತನಾಡಿರುವ ನರೇಂದ್ರ ಮೋದಿರವರು ಹೊಸ ಸೌಲಭ್ಯಗಳು ಮತ್ತು ಸೂಉಲಭ್ಯಗಳಿಗೆ ಸುಧಾರಣೆ ಎಂಬುದು ಮುಖ್ಯ, ಹಿಂದಿನ ಶತಮಾನದಲ್ಲಿ ಉಪಯುಕ್ತವಾಗಿದ್ದು ಕಾಯ್ದೆ ಮುಂದಿನ ಶತಮಾನದಲ್ಲಿ ಪ್ರಯೋಜನಕ್ಕೆ ಬರದೆ ಇರಬಹುದು.

ಆದ್ದರಿಂದ ಸದಾ ಯಾವುದೇ ಕಾರ್ಯದಲ್ಲಿ ಆದರೂ ಸುಧಾರಣೆಗಳ ಕಾರ್ಯಗಳು ಮುಂದುವರೆಯುತ್ತಲೇ ಇರಬೇಕು. ನಾವು ಸುಧಾರಣೆಗಳನ್ನು ತರುತ್ತಿದ್ದೇವೆ, ಈ ಮೊದಲು ಸುಧಾರಣೆ ಎಂಬುದು ಕೇವಲ ಕೆಲವು ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ನಾವು ಎಲ್ಲಾ ವಲಯಗಳು ಮತ್ತು ಇಲಾಖೆಗಳನ್ನು ಗಮನದಲ್ಲಿಟ್ಟುಕೊಂಡು ಸುಧಾರಣಾ ಪ್ರಕ್ರಿಯೆಗಳನ್ನು ಜಾರಿಗೊಳಿಸುತ್ತಿದ್ದೆವೆ. ಹಲವಾರು ವರ್ಷಗಳಿಂದ ನಮ್ಮ ಸರ್ಕಾರ ತೆಗೆದುಕೊಂಡಿರುವ ಎಲ್ಲಾ ಸುಧಾರಣಾ ಕಾರ್ಯಗಳು ದೇಶದಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿವೆ, ಖಂಡಿತ ಕೃಷಿ ಕಾಯ್ದೆಯು ಕೂಡ ಜನರಲ್ಲಿ ತೃಪ್ತಿಯನ್ನು ತರಿಸುತ್ತದೆ ಎಂದು ಕೃಷಿ ಕಾಯ್ದೆಯನ್ನು ಸಮರ್ಥನೆ ಮಾಡಿಕೊಂಡು ತಮ್ಮ ಮಾತುಗಳನ್ನು ಮುಗಿಸಿದ್ದಾರೆ.

Post Author: Ravi Yadav