ಈ ದಿಗ್ಗಜ ನಟರು ಬಿಗ್ ಬಾಸ್ ಗೆ ಹೋಗಿ ಈ ಫೇಮಸ್ ಡೈಲಾಗ್ ಹೇಳಿದ್ದರೇ ಎಷ್ಟು ಮಜಾ ಇರುತ್ತಿತ್ತು ಗೊತ್ತಾ?

ಈ ದಿಗ್ಗಜ ನಟರು ಬಿಗ್ ಬಾಸ್ ಗೆ ಹೋಗಿ ಈ ಫೇಮಸ್ ಡೈಲಾಗ್ ಹೇಳಿದ್ದರೇ ಎಷ್ಟು ಮಜಾ ಇರುತ್ತಿತ್ತು ಗೊತ್ತಾ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡದ ಜನಪ್ರಿಯ ಶೋಗಳಲ್ಲಿ ಒಂದಾಗಿರುವ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿನೀವು ಹಲವಾರು ಸ್ಪರ್ಧಿಗಳನ್ನು ನೋಡಿರುತ್ತೀರಿ. ವಿವಿಧ ಕ್ಷೇತ್ರಗಳಿಂದ ವಿವಿಧ ಜನರು ಸ್ಪರ್ಧೆಗೆ ಆಯ್ಕೆಯಾಗುತ್ತಾರೆ. ಆದರೆ ನಾವು ಒಂದಷ್ಟು ನಿಮಿಷಗಳ ಕಾಲ ಒಂದು ವೇಳೆ ನಮ್ಮನ್ನು ಸಿನಿಮಾರಂಗದಲ್ಲಿ ಮನರಂಜಿಸಿ ಇರುವ ಹಲವಾರು ದಿಗ್ಗಜ ನಟರು ಬಿಗ್ ಬಾಸ್ ಮನೆಗೆ ತೆರಳಿ, ಅಲ್ಲಿ ಬಿಗ್ ಬಾಸ್ ರೂಲ್ಸ್ ಗಳಿಗೆ, ಸುದೀಪ್ ರವರ ಪ್ರಶ್ನೆಗಳಿಗೆ ಅಥವಾ ಮನೆಯಲ್ಲಿ ಇರುವಂತಹ ಸ್ಪರ್ಧೆಗಳ ನಡುವೆ ಯಾವುದಾದರೂ ಒಂದು ಸಂದರ್ಭದಲ್ಲಿ ಕೆಲವೊಂದು ಡೈಲಾಗ್ ಗಳನ್ನು ಹೇಳಿದ್ದರೆ ಹೇಗಿರುತ್ತದೆ ಎಂಬ ಚಿಕ್ಕ ಮನರಂಜನೆಯ ವಿಷಯದ ಬಗ್ಗೆ ಚರ್ಚಿಸಲಿದ್ದೇವೆ. ಬನ್ನಿ ಯಾವ ನಟರು ಯಾವ ಡೈಲಾಗ್ ಹೊಡೆದರೆ ಹೇಗಿರುತ್ತದೆ ಎಂದು ನೋಡೋಣ.

ಮೊದಲನೆಯದಾಗಿ ನಾವು ನಮ್ಮ ನಿಮ್ಮೆಲ್ಲರ ನೆಚ್ಚಿನ ಅಂಬರೀಶ್ ಅಣ್ಣನವರನ್ನು ತೆಗೆದುಕೊಳ್ಳುವುದಾದರೆ ಸ್ನೇಹಿತರೆ ಅಂಬರೀಶ್ ಅಣ್ಣನವರು ಬಿಗ್ ಬಾಸ್ ಮನೆಗೆ ತೆರಳಿ ಒಂದು ವೇಳೆ ಬಿಗ್ ಬಾಸ್ ರವರು ಏನನ್ನಾದರೂ ಪ್ರಶ್ನೆ ಮಾಡಿದಾಗ ನಿನಗೆ ಯಾಕೆ ಅದು ತಿ* ಮುಚ್ಕೊಂಡು ಹೋಗಲೇ ಎಂದರೆ ಎಷ್ಟು ಮಜಾ ಇರುತ್ತಿತ್ತಲ್ಲವೇ?? ಅಷ್ಟೇ ಅಲ್ಲ ಒಂದು ವೇಳೆ ಯಾವುದಾದರೂ ಇತರ ಮಹಿಳಾ ಸ್ಪರ್ಧೆಗೆ ಏ ಬುಲ್ ಬುಲ್ ಮಾತಾಡಕ್ಕಿಲ್ವ ಎಂದಿದ್ದರೇ ಎಷ್ಟು ಚೆನ್ನಾಗಿರುತ್ತಿತ್ತು.

ಇನ್ನು ಎರಡನೆಯದಾಗಿ ಯಶ್ ರವರು ಒಂದು ವೇಳೆ ಬಿಗ್ ಬಾಸ್ ಶೋನಲ್ಲಿ ಭಾಗವಹಿಸಿ ಇತರ ಸ್ಪರ್ಧಿಗಳು ಪ್ರತಿಬಾರಿಯೂ ಅವರನ್ನು ನಾಮಿನೇಟ್ ಮಾಡಿದ್ದರೇ, ಇದರ ಕುರಿತು ಒಂದು ವೇಳೆ ಸುದೀಪ್ ರವರು ವಾರದ ಕೊನೆಯಲ್ಲಿ ಯಶ್ ನೀವು ಪ್ರತಿಬಾರಿಯೂ ನಾಮಿನೇಟ್ ಆಗುತ್ತಿದ್ದೀರಿ. ಇದಕ್ಕೆ ನಿಮ್ಮ ಉತ್ತರವೇನು ಎಂದು ಪ್ರಶ್ನೆ ಕೇಳಿದರೆ ಯಶ್ ರವರು ಏನು ನಮ್ಮನ್ನು ನೋಡಿ ಉರ್ಕೊಳ್ಳೋರು ಒಬ್ಬ್ರ ಇಬ್ಬ್ರ ದುಶ್ಮನ್ ಕಹಾ ಹೇ ಅಂದ್ರೆ ಬಿಗ್ ಬಾಸ್ ತುಂಬಾ ಹೇ ಎನ್ನಬಹುದಲ್ಲವೇ.

ಇನ್ನು ಒಂದುವೇಳೆ ರಾಜಕುಮಾರ್ ರವರು ಬಿಗ್ ಬಾಸ್ ಮನೆಗೆ ತೆರಳಿ ಸುದೀಪ್ ರವರ ಯಾವುದಾದರೂ ಒಂದು ಕೆಲಸದ ಬಗ್ಗೆ ಪ್ರಶ್ನೆ ಕೇಳಿದರೆ ಆ ಪ್ರಶ್ನೆ ಜನರ ಮುಂದೆ ಉತ್ತರ ನೀಡುವಂತದ್ದು ಅಲ್ಲ ಎನಿಸಿದರೇ ಡಾಕ್ಟರ್ ರಾಜಕುಮಾರ್ ರವರು ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲ ಎಂದರೆ ಹೇಗಿರುತ್ತಿತ್ತು ಅಲ್ಲವೇ?

ಇನ್ನೂ ಒಂದು ವೇಳೆ ಡಿ ಬಾಸ್ ಖ್ಯಾತಿಯ ದರ್ಶನ ರವರು ಬಿಗ್ ಬಾಸ್ ಮನೆಗೆ ತೆರಳಿದಾಗ, ಅಲ್ಲಿನ ಸ್ಪರ್ದಿಗಳು ಅವರನ್ನು ಪ್ರತಿ ಬಾರಿ ನಾಮಿನೇಟ್ ಮಾಡಿದಾಗ ಸುದೀಪ್ ರವರು, ವಾರದ ಕೊನೆಯಲ್ಲಿ ನೀವು ಪ್ರತಿ ಬಾರಿ ನಾಮಿನೇಟ್ ಆಗುತ್ತಿದೀರಿ, ನೀವು ಫೈನಲ್ ವರೆಗೂ ಹೋಗಲೂ ಸಾಧ್ಯವೇ ಎಂದು ಪ್ರಶ್ನೆ ಮಾಡಿದರೇ, ಪ್ರತಿ ಬಾರಿ ನಾಮಿನೇಟ್ ಮಾಡಿದರೂ ಫೈನಲ್ ಹೋಗಿ ಗೆಲ್ಲಲು ಧಮ್ ಬೇಕೋ ಲೇ ! ಎಂದರೇ ಪರ್ಫೆಕ್ಟ್ ಆನ್ಸರ್ ಅಲ್ಲವೇ.

ಇನ್ನು ಒಂದು ವೇಳೆ ನಮ್ಮ ನಿಮ್ಮೆಲ್ಲರ ನೆಚ್ಚಿನ ಶಂಕರನಾಗ್ ರವರು ಬಿಗ್ ಬಾಸ್ ತೆರಳಿದಾಗ ಅಲ್ಲಿ ಯಾರಾದರೂ ನೀವು ಯಾಕೆ ಈ ರೀತಿ ಮಾಡುತ್ತಿದ್ದೀರಾ ಎಂದು ಯಾವುದಾದರೂ ವಿಷಯದ ಕುರಿತು ಪ್ರಶ್ನೆ ಮಾಡಿದಾಗ, ನೋಡಿ ಸ್ವಾಮಿ ನಾವಿರೋದೇ ಹೀಗೆ ಹಿಂದು ಉತ್ತರ ಕೊಡಬಹುದಿತ್ತಲ್ಲವೆ.