ಸೈಫ್ ಬದಲು ರಾವಣನಾಗಿ ಇವರಿಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಎಂದ ನೆಟ್ಟಿಗರು ! ಕನ್ನಡದ ನಟನು ಕೂಡ ಲಿಸ್ಟ್ ನಲ್ಲಿ ! ಯಾರು ಗೊತ್ತಾ??

ಸೈಫ್ ಬದಲು ರಾವಣನಾಗಿ ಇವರಿಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಎಂದ ನೆಟ್ಟಿಗರು ! ಕನ್ನಡದ ನಟನು ಕೂಡ ಲಿಸ್ಟ್ ನಲ್ಲಿ ! ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಾಲಿವುಡ್ ಚಿತ್ರರಂಗವನ್ನು ಸ್ವಜನಪಕ್ಷಪಾತ ಎಂಬ ಕೂಗು ಅಕ್ಷರಸಹ ನ’ಡುಗಿಸಿ ಬಿಟ್ಟಿದೆ. ಹಲವಾರು ತಿಂಗಳುಗಳಿಂದ ಅದರಲ್ಲಿಯೂ ಸುಶಾಂತ್ ಸಿಂಗ್ ರಜಪೂತ್ ರವರ ಕಹಿ ಘಟನೆಯ ಬಳಿಕ ಬಾಲಿವುಡ್ನಲ್ಲಿ ಸ್ವಜನಪಕ್ಷಪಾತ ಎಂಬುದು ಬಹಳ ಜೋರಾಗಿ ಕೇಳಿ ಬರುತ್ತಿದೆ. ಒಂದೆಡೆ ಅಭಿಮಾನಿಗಳು ಮತ್ತೊಂದೆಡೆ ಬಾಲಿವುಡ್ ಚಿತ್ರರಂಗವನ್ನು ಅಕ್ಷರಸಹ ನ’ಡುಗಿಸುತ್ತಿರುವ ಕಂಗನಾ ರಾವತ್ ಅಭಿಮಾನಿಗಳು, ಸುಶಾಂತ್ ಸಿಂಗ್ ರಜಪೂತ್ ರವರ ಘಟನೆಗೆ ಸ್ವಜನಪಕ್ಷಪಾತ ಕಾರಣ ಎಂದು ಹೇಳಿ, ವಾದವನ್ನು ಮಂಡಿಸಿ, ಬಾಲಿವುಡ್ ಚಿತ್ರರಂಗದಿಂದ ನಾವು ಸ್ವಜನಪಕ್ಷಪಾತ ವನ್ನೂ ಹೊರಹಾಕುವ ಸಮಯದವರೆಗೂ ನಾವು ಯಾವುದೇ ಕಾರಣಕ್ಕೂ ಸುಮ್ಮನೆ ಇರುವುದಿಲ್ಲ ಎಂದು ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಅಭಿಯಾನಗಳನ್ನು ನಡೆಸಿದ್ದಾರೆ.

ಈ ಅಭಿಯಾನಗಳು ಇಲ್ಲಿಯವರೆಗೂ ಕರಣ್ ಜೋಹರ್ ಅವರು ತಮ್ಮ ನಿರ್ದೇಶಕ ಮಂಡಳಿಯ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿದಷ್ಟೇ ಅಲ್ಲದೆ ಕರಣ್ ಜೋಹರ್ ಅವರ ಪ್ರಸಿದ್ಧ ಕಾಫಿ ವಿತ್ ಕರಣ್ ಎಂಬ ಶೋ ಕೂಡ ನಿಂತು ಹೋಗಲು ಕಾರಣವಾಗಿದೆ. ಇಷ್ಟೇ ಅಲ್ಲದೆ ಸಂಜಯ್ ದತ್, ಆಲಿಯಾ ಭಟ್ ಹಾಗೂ ಪೂಜಾ ಭಟ್ ನಟಿಸಿ ಬರೋಬ್ಬರಿ ಎರಡು ದಶಕಗಳ ನಂತರ ನಿರ್ದೇಶನಕ್ಕೆ ಮರಳಿದ್ದ ಮಹೇಶ್ ಭಟ್ ನಿರ್ದೇಶನ ಮಾಡಿದ್ದ ಚಿತ್ರವನ್ನು ಕೂಡ ಅಭಿಯಾನಗಳ ಮೂಲಕ ಸೋಲಿಸಿ ವಿಶ್ವದಲ್ಲಿಯೇ ಅತಿ ಕಡಿಮೆ ರೇಟಿನ ಪಡೆದುಕೊಂಡ ಚಿತ್ರ ಎಂಬ ಹೆಸರು ಬರುವಂತೆ ರೇಟಿಂಗ್ ನೀಡಿ ಅಭಿಯಾನಗಳಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಇಷ್ಟಕ್ಕೆ ಸುಮ್ಮನಾಗದ ಕಂಗನಾ ರಾವತ್ ಹಾಗೂ ಸುಶಾಂತ್ ಸಿಂಗ್ ಅಭಿಮಾನಿಗಳು ಈ ರೀತಿಯ ಹಲವಾರು ಅಭಿಯಾನಗಳನ್ನು ನಡೆಸುತ್ತೇವೆ ಯಾವುದೇ ಕಾರಣಕ್ಕೂ ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದರು. ಈ ಎರಡು ಖ್ಯಾತ ನಟ, ನಟಿಯರ ಅಭಿಮಾನಿಗಳ ಜೊತೆ ಬಾಹುಬಲಿ ಚಿತ್ರದ ಮೂಲಕ ಇಡೀ ದೇಶದಲ್ಲಿ ಮನೆಮಾತಾಗಿರುವ ಪ್ರಭಾಸ್ ರವರ ಅಭಿಮಾನಿಗಳು ಕೂಡ ಇತ್ತೀಚೆಗೆ ಸೇರಿಕೊಂಡಿದ್ದಾರೆ. ಪ್ರಭಾಸ್ ರವರು ನಟನೆ ಮಾಡುತ್ತಿರುವ ಚಿತ್ರ ಆದಿಪುರುಷ್ ಚಿತ್ರದ ವಿರುದ್ಧ ಟೀಕೆಗಳ ಬಾಣಗಳನ್ನು ಸುರಿಸುವ ಮೂಲಕ ಪ್ರಭಾಸ್ ಅಭಿಮಾನಿಗಳು ಕೈಜೋಡಿಸಿ ಪ್ರಭಾಸ್ ನಟನೆ ಮಾಡಿದ್ದರೂ ಕೂಡ ರಾವಣನ ಪಾತ್ರಕ್ಕೆ ಸೈಫಾಲಿಖನ್ ರವರನ್ನು ಆಯ್ಕೆ ಮಾಡಿದ ಕಾರಣಕ್ಕಾಗಿ ನಾವು ಈ ಚಿತ್ರವನ್ನು ಸೋಲಿಸಿಯೇ ತೀರುತ್ತೇವೆ ಎಂದು ಅಭಿಯಾನ ನಡೆಸುತ್ತಿದ್ದಾರೆ.

ಇಷ್ಟು ಸಾಲದು ಎಂಬಂತೆ ಇತ್ತೀಚೆಗಷ್ಟೇ ರಾವಣ ಪಾತ್ರದ ವಿರುದ್ಧ ಮಾತನಾಡಿದ ಸೈಫ್ ಆಲಿ ಖಾನ್ ರವರು ಹೊಸದೊಂದು ವಿವಾದವನ್ನು ಸೃಷ್ಟಿಸಿದ್ದರು, ಈ ಮಾತುಗಳು ಕೇಳಿ ಬಂದ ಕೂಡಲೇ ಪ್ರಭಾಸ್ ಅಭಿಮಾನಿಗಳು ಸೇರಿದಂತೆ ನೆಟ್ಟಿಗರು ಗರಂ ಆದ ಕಾರಣ ಸೈಫ್ ಆಲಿ ಖಾನ್ ರವರು ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ, ಕ್ಷಮೆ ಕೇಳಿದರೂ ಕೂಡ ನೀವು ಸ್ವಜನಪಕ್ಷಪಾತದ ಮುಖ ಎಂದು ನಮಗೆ ತಿಳಿದಿದೆ ಅಷ್ಟು ಸಾಲದು ಎಂಬಂತೆ ಇದೀಗ ಈ ರೀತಿ ಮಾತನಾಡುತ್ತಿರುವುದು ಸರಿಯಲ್ಲ ನಿಮಗೆ ಬುದ್ಧಿ ಕಲಿಸಲೇ ಬಿಡುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ರಾವಣ ಪಾತ್ರದಿಂದ ಸೈಫ್ ಆಲಿಖಾನ್ ರವರನ್ನು ಕೈಬಿಡಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.

ಈ ರೀತಿಯ ಮಾತುಗಳು ಕೇಳಿ ಬರುತ್ತಿರುವ ಸಂದರ್ಭದಲ್ಲಿ, ಆದಿಪುರುಷ್ ಚಿತ್ರದಲ್ಲಿ ರಾವಣನ ಪಾತ್ರಧಾರಿಯಾಗಲೂ ಯಾವ ನಟ ಸೂಕ್ತ ಎಂಬ ಚರ್ಚೆ ಕೂಡ ನಡೆಯುತ್ತಿದೆ. ಈ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಅಭಿಯಾನದ ಜೊತೆ ಕ್ರಮೇಣ ಎಲ್ಲ ನೆಟ್ಟಿಗರು ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ವಿವಿಧ ರಾಜ್ಯದ ಅಭಿಮಾನಿಗಳು ವಿವಿಧ ನಟರನ್ನು ಆಯ್ಕೆ ಮಾಡುವ ಮೂಲಕ ರಾವಣ ಪಾತ್ರವನ್ನು ನಿರ್ವಹಿಸಲು ಯಾರು ಸೂಕ್ತ ಎಂದು ತಿಳಿಸುತ್ತಿದ್ದಾರೆ. ಈ ರೀತಿಯ ಚರ್ಚೆಯಲ್ಲಿ ಹಲವಾರು ನಟರ ಹೆಸರು ಕೇಳಿ ಬಂದರೂ ಕೂಡ ಇಬ್ಬರು ನಟರ ಹೆಸರು ಮಾತ್ರ ಅತಿಹೆಚ್ಚಿನ ಸಂಖ್ಯೆಯಲ್ಲಿ ಕೇಳಿಬಂದಿದೆ. ಒಂದು ವೇಳೆ ಈ ಇಬ್ಬರು ನಟರಲ್ಲಿ ಒಬ್ಬ ನಟ ರಾವಣನ ಪಾತ್ರಕ್ಕೆ ಆಯ್ಕೆಯಾದರೇ ಕಂಡಿತ ಚಿತ್ರತಂಡ ಇಡೀ ವಿಶ್ವದಲ್ಲಿ ಅತಿ ಯಶಸ್ಸು ಕಂಡ ಚಿತ್ರ ಎಂಬ ಖ್ಯಾತಿ ಪಡೆದುಕೊಳ್ಳಲಿದೆ ಎಂಬ ಮಾತುಗಳು ಕೇಳಿಬಂದಿವೆ. ವಿಶೇಷವೇನೆಂದರೆ ಹೀಗೆ ಆಯ್ಕೆಯಾದ ಇಬ್ಬರು ನಟರಲ್ಲಿ, ಒಬ್ಬ ಕನ್ನಡದ ನಟನೆ ಕೂಡ ಸ್ಥಾನ ಪಡೆದುಕೊಂಡಿದ್ದಾರೆ.

ಹೌದು ಸ್ನೇಹಿತರೇ ನೆಟ್ಟಿಗರು ರಾವಣನ ಪಾತ್ರಕ್ಕೆ ಆಯ್ಕೆ ಮಾಡಿರುವ ಇಬ್ಬರು ನಟರಲ್ಲಿ ಮೊದಲೆನೆಯದಾಗಿ ರಾವಣನ ಪಾತ್ರಕ್ಕೆ ಇವರು ಬಹಳ ಸೂಕ್ತ ಎಂದು ಹೇಳಿ ಕೆಜಿಎಫ್ ಚಿತ್ರದಲ್ಲಿ ಹೀರೋ ಪಾತ್ರದಲ್ಲಿ ವಿಲನ್ ರೀತಿ ನಟನೆ ಮಾಡಿರುವ ಯಶ್ ಅವರನ್ನು ಆಯ್ಕೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮತ್ತೊಬ್ಬ ನಟನಾಗಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ವಿಲನ್ ಪಾತ್ರಗಳನ್ನು ನಿರ್ವಹಿಸಿ, ಅಸಲಿ ಜೀವನದಲ್ಲಿ ಹೀರೋ ಆಗಿ ಮಿಂಚುತ್ತಿರುವ ಸೋನು ಸೂದ್ ರವರನ್ನು ನೆಟ್ಟಿಗರು ಆಯ್ಕೆ ಮಾಡಿದ್ದಾರೆ. ಇಬ್ಬರಲ್ಲಿ ಯಾರಾದರು ಒಬ್ಬರು ನಟರನ್ನು ಆಯ್ಕೆ ಮಾಡಿ, ಹೀಗೆ ಮಾಡಿದಲ್ಲಿ ಖಂಡಿತ ವಿಶ್ವದಲ್ಲಿಯೇ ಅತಿಹೆಚ್ಚು ಯಶಸ್ಸು ಚಿತ್ರವಾಗಲಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.