ಆದಿಪುರುಷ್ ರಾವಣ ಹೇಗಿರಲಿದ್ದಾನೆ ಎಂದು ಸೈಫ್ ಹೇಳಿದ ತಕ್ಷಣ ರೊಚ್ಚಿಗೆದ್ದ ನೆಟ್ಟಿಗರು ! ಯಾಕೆ ಗೊತ್ತಾ??

ಆದಿಪುರುಷ್ ರಾವಣ ಹೇಗಿರಲಿದ್ದಾನೆ ಎಂದು ಸೈಫ್ ಹೇಳಿದ ತಕ್ಷಣ ರೊಚ್ಚಿಗೆದ್ದ ನೆಟ್ಟಿಗರು ! ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಆದಿಪುರುಷ್ ಸಿನಿಮಾ ಘೋಷಣೆಯಾದ ಕ್ಷಣದಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸಿನಿಮಾ ಭಾರೀ ಸದ್ದು ಮಾಡುತ್ತಿದೆ. ಒಂದೆಡೆ ಆದಿಪುರುಷ್ ಚಿತ್ರ ರಾಮಾಯಣ ಆಧಾರಿತ ಚಿತ್ರ ಎಂದು ಸದ್ದು ಮಾಡಿತು, ಅಷ್ಟೇ ಅಲ್ಲದೇ ಇದು ಭಾರಿ ಬಜೆಟ್ ಸಿನಿಮಾ ಎಂಬ ಕಾರಣಕ್ಕೆ ಮತ್ತು ಪ್ರಭಾಸ್ ರವರು ಶ್ರೀ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಘೋಷಣೆಯಾದ ಕಾರಣ ಇಡೀ ದೇಶದ ಎಲ್ಲೆಡೆ ಬಾಹುಬಲಿ ಸಿನಿಮಾ ನೋಡಿ ಪ್ರಭಾಸ್ ಅಭಿಮಾನಿಗಳಾದ ಎಲ್ಲರೂ ಸಂಭ್ರಮಿಸಿದ್ದು ಸುಳ್ಳಲ್ಲ. ಅಷ್ಟೇ ಅಲ್ಲದೆ ಆದಿಪುರುಷ್ ಚಿತ್ರದಲ್ಲಿ ಸೀತೆ ಯಾರಾಗಲಿದ್ದಾರೆ ಎಂದು ಇನ್ನು ಘೋಷಣೆಯಾಗದ ಕಾರಣ ಹಲವಾರು ನಟಿಯರ ಹೆಸರು ದಿನಕ್ಕೊಂದು ಕೇಳಿಬರುತ್ತಿದ್ದು ಪ್ರತಿದಿನವೂ ಒಂದಲ್ಲ ಒಂದು ಚರ್ಚೆಗಳಿಗೆ ಗ್ರಾಸವಾಗಿದೆ.

ಇನ್ನು ಈ ಸಿನಿಮಾದಲ್ಲಿ ರಾವಣನ ಪಾತ್ರಕ್ಕೆ ಸೈಫ್ ಆಲಿ ಖಾನ್ ರವರು ಆಯ್ಕೆಯಾಗಿದ್ದಾರೆ ಎಂದು ಘೋಷಣೆಯಾದ ಬಳಿಕ ನೆಟ್ಟಿಗರು ಅದರಲ್ಲಿಯೂ ಸುಶಾಂತ್ ಸಿಂಗ್ ಅಭಿಮಾನಿಗಳು ಹಾಗೂ ಹಲವಾರು ಹಿಂದೂ ಪರ ಕಾರ್ಯಕರ್ತರು ಸೈಫ್ ಆಲಿ ಖಾನ್ ರವರು ಒಂದು ವೇಳೆ ರಾವಣನ ಪಾತ್ರ ನಿರ್ವಹಣೆ ಮಾಡಿದರೇ ಖಂಡಿತ ಚಿತ್ರಕ್ಕೆ ಬುದ್ದಿಕಲಿಸಿಯೇ ತೀರುತ್ತೇವೆ ಎಂದು ಹೇಳಿದರು. ಇದಾದ ಬಳಿಕ ಹಲವಾರು ದಿನಗಳ ಕಾಲ ಆದಿ ಪುರುಷ ಚಿತ್ರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಅಭಿಯಾನಗಳು ನಡೆದವು, ಆದರೆ ಚಿತ್ರತಂಡ ರಾವಣನ ಪಾತ್ರದ ನಟನೆಯ ಕುರಿತು ಯಾವುದೇ ನಿರ್ಧಾರ ಬದಲಿಸಲಿಲ್ಲ. ಇಷ್ಟೆಲ್ಲಾ ಆದ ಬಳಿಕ ಇದೀಗ ರಾವಣನ ಪಾತ್ರದ ಇದೇ ಮೊದಲ ಬಾರಿಗೆ ಸೈಫ್ ಆಲಿಖಾನ್ ಮಾತನಾಡಿದ್ದು, ಇವರು ಹೇಳಿದ ಮಾತುಗಳನ್ನು ಕೇಳಿದ ನೆಟ್ಟಿಗರು ಅಕ್ಷರಸಹ ರೊಚ್ಚಿಗೆದ್ದಿದ್ದಾರೆ. ಹೌದು, ಅಷ್ಟಕ್ಕೂ ಸೈಫ್ ಆಲಿ ಖಾನ್ ರವರು ಮಾತನಾಡಿದ್ದಾದರೂ ಏನು?? ಹಾಗೂ ನೆಟ್ಟಿಗರು ಯಾಕೆ ಆದಿಪುರುಷ ಚಿತ್ರದ ವಿರುದ್ಧ ಟೀಕೆಗಳ ಬಾಣಗಳನ್ನು ಸುರಿಸುತ್ತಿದ್ದಾರೆ ಎಂಬ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ನೀಡುತ್ತೇವೆ ಹೇಳಿ.

ಇದೀಗ ಟಿವಿ ಸಂದರ್ಶನದಲ್ಲಿ ಮಾತನಾಡಿರುವ ಸೈಫ್ ಅಲಿ ಖಾನ್ ರವರು ಆದಿಪುರುಷ ಚಿತ್ರದಲ್ಲಿ ರಾವಣ ಪಾತ್ರದ ಕುರಿತು ಮಾತನಾಡಿ ಎಂದಾಗ ನಾನು ರಾವಣನ ಪಾತ್ರ ನಿರ್ವಹಣೆ ಮಾಡಲು ಬಹಳ ಉತ್ಸುಕ ಆಗಿದ್ದೇನೆ, ರಾವಣ ಒಬ್ಬ ವಿಲನ್ ಎಂದು ಹೇಳುವ ಬದಲು ರಾವಣ ತಾನು ನಂಬಿದ ಜೀವನದ ಹಾದಿಗಾಗಿ ಹೋ’ರಾಟ ಮಾಡಿದ ವ್ಯಕ್ತಿ. ನಮ್ಮ ಸಿನಿಮಾದಲ್ಲಿ ರಾವಣನನ್ನು ಒಬ್ಬ ಖಳನಾಯಕನಾಗಿ ತೋರಿಸುವ ಬದಲಿಗೆ ರಾವಣನ ಗುಣಧರ್ಮವನ್ನು ಸಂಪೂರ್ಣವಾಗಿ ವಿಶ್ಲೇಷಣೆ ಮಾಡಲಾಗುತ್ತದೆ, ರಾವಣ ಮಾಡಿದ ಪ್ರತಿಯೊಂದು ಕಾರ್ಯಗಳಿಗೂ ನಿರ್ದಿಷ್ಟ ಕಾರಣ ಇತ್ತು. ರಾವಣ ಸೀತೆಯನ್ನು ಹೊತ್ತೊಯ್ದ ನಿರ್ಧಾರಕ್ಕೂ ಕೂಡ ಒಂದು ಕಾರಣವಿತ್ತು, ಅಸಲಿಗೆ ರಾವಣ ಹೀಗೆ ಮಾಡಲು ಲಕ್ಷ್ಮಣ ರಾವಣನ ತಂಗಿಗೆ ಮಾಡಿದ ಅ’ವಮಾನವೇ ಕಾರಣ, ಅದೇ ಕಾರಣಕ್ಕಾಗಿ ನಾವು ಸಿನಿಮಾದಲ್ಲಿ ರಾವಣನ ಎರಡು ಮುಖವನ್ನು ತೋರಿಸುತ್ತೇವೆ ಎಂದು ಹೇಳಿದ್ದಾರೆ.

ಈ ಮಾತುಗಳು ಬಹಿರಂಗ ಕಂಡ ಕೆಲವೇ ಕೆಲವು ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತಲ್ಲಣವನ್ನು ಸೃಷ್ಟಿಸಿದ್ದು, ಆದಿಪುರುಷ್ ಚಿತ್ರದ ಸ್ಪಷ್ಟ ಚಿತ್ರಣವನ್ನು ಸೈಫ್ ಆಲಿ ಖಾನ್ ರವರು ತೆಗೆದಿಟ್ಟಿದ್ದಾರೆ. ಖಂಡಿತ ಈ ಚಿತ್ರದಲ್ಲಿ ರಾವಣನ ವ್ಯಕ್ತಿತ್ವವನ್ನು ಇತ್ತೀಚಿನ ಕೆಲವು ಪೌರಾಣಿಕ ಧಾರವಾಹಿಗಳಲ್ಲಿ ವಿಲನ್ ಗಳನ್ನು ಹೀರೋಗಳಂತೆ ತೋರಿಸಿದ ಕಾರ್ಯ ನಡೆಯಲಿದೆ ಎಂಬುದು ನಮಗೆ ಅರ್ಥವಾಗುತ್ತದೆ ಎಂದು ನೆಟ್ಟಿಗರು ಗರಂ ಆಗಿ ಸೈಫ್ ಆಲಿಖಾನ್ ಅವರ ಪಾತ್ರದ ಕುರಿತು ಧ್ವನಿಯೆತ್ತಿದ್ದಾರೆ. ಇದರಿಂದ ಆದಿಪುರುಷ್ ಚಿತ್ರ ಮತ್ತೊಂದು ವಿ’ವಾದವನ್ನು ಮೈ’ಮೇಲೆ ಎ’ಳೆದು ಕೊಂಡಿದ್ದು, ಮೊದಲಿಗೆ ಸುಶಾಂತ್ ಸಿಂಗ್ ಅಭಿಮಾನಿಗಳು, ಇದೀಗ ಹಿಂದೂ ಪರ ಕಾರ್ಯಕರ್ತರು ಸೇರಿದಂತೆ ಇನ್ನೂ ಹಲವಾರು ನೆಟ್ಟಿಗರು ಗರಂ ಆಗಿರುವ ಕಾರಣ ಅಸಲಿಗೆ ಈ ಚಿತ್ರ ಬಾಕ್ಸಾಫೀಸ್ ನಲ್ಲಿ ಸದ್ದು ಮಾಡಲಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ