ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಬಿಗ್ ನ್ಯೂಸ್: ಆದಿಪುರುಷ ಚಿತ್ರಕ್ಕೆ ಶಾಕ್ ನೀಡಲು ಮುಂದಾದ ಪ್ರಭಾಸ್ ಫ್ಯಾನ್ಸ್ ! ಕೈಜೋಡಿಸಿದ ಸುಶಾಂತ್, ಕಂಗನಾ ಫ್ಯಾನ್ಸ್

3

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳ ಮೂಲಕ ಏನನ್ನಾದರೂ ಸಾಧನೆ ಮಾಡಬಹುದು ಎಂಬುದು ಇದೀಗ ಹಿಂದೆ ಹಲವಾರು ಬಾರಿ ಸಾಬೀತಾಗಿದೆ. ಅದರಲ್ಲಿಯೂ ಸುಶಾಂತ್ ಸಿಂಗ್ ಅಭಿಮಾನಿಗಳಂತೂ ಈಗಾಗಲೇ 2-3 ಚಿತ್ರಕ್ಕೆ ಹಾಗೂ ಹಲವಾರು ದಿಗ್ಗಜ ನಟರಿಗೂ ತಮ್ಮದೇ ಆದ ರೀತಿಯಲ್ಲಿ ಕೇವಲ ಅಭಿಯಾನಗಳ ಮೂಲಕ ಶಾಕ್ ನೀಡಿ ಸಾಮಾಜಿಕ ಜಾಲತಾಣಗಳ ಪವರ್ ಏನು ಎಂಬುದನ್ನು ತೋರಿಸಿದ್ದಾರೆ. ಕೇವಲ ಸಿನಿಮಾರಂಗದಲ್ಲಿ ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳ ಮೂಲಕ ಅರಿವು ಮೂಡಿಸಿ ಚೀನಾ ದೇಶದ ಹಲವಾರು ವಸ್ತುಗಳು ಭಾರತದಲ್ಲಿ ಮಾರಾಟವಾಗದೆ ನೆಲಕಚ್ಚಿವೆ.

ಹೀಗಿರುವಾಗ ಇದೇ ರೀತಿಯ ಮತ್ತೊಂದು ಅಭಿಯಾನ ಆರಂಭವಾಗಿದ್ದು ಖುದ್ದು ಪ್ರಭಾಸ್ ಅಭಿಮಾನಿಗಳೇ ಪ್ರಭಾಸ್ ರವರ ಬಹುನಿರೀಕ್ಷಿತ ಆದಿಪುರುಷ್ ಚಿತ್ರಕ್ಕೆ ಶಾಕ್ ನೀಡಲು ಹೊರಟಿದ್ದಾರೆ. ಇವರ ಜೊತೆಗೆ ಸುಶಾಂತ್ ಸಿಂಗ್ ಫ್ಯಾನ್ಸ್, ಕಂಗನಾ ರಾವತ್ ಅಭಿಮಾನಿಗಳು ಕೂಡ ಕೈಜೋಡಿಸಿದ್ದು ನಿಜಕ್ಕೂ ದೇಶದಲ್ಲಿಯೇ ಅತಿ ದೊಡ್ಡ ಅಭಿಯಾನ ವಾಗುವ ಸಾಧ್ಯತೆ ಇದೆ. ಅಷ್ಟಕ್ಕೂ ನಡೆಯುತ್ತಿರುವುದಾದರೂ ಏನು ಗೊತ್ತಾ? ಬನ್ನಿ ಈ ಕುರಿತು ನಿಮಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ.

ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಆದಿಪುರುಷ್ ಚಿತ್ರದ ಮೇಲೆ ಹಲವಾರು ಭರವಸೆಗಳು ಇದ್ದವು, ಜನರು ಆದಿಪುರುಷ್ ಚಿತ್ರ ಘೋಷಣೆಯಾದ ದಿನವೇ ನಾವು ನೋಡಲು ತುದಿಗಾಲಲ್ಲಿ ಕಾದು ನಿಂತಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು. ಆದರೆ ಸ್ವಜನಪಕ್ಷಪಾತದಲ್ಲಿ ಹೆಸರು ಕೇಳಿ ಬಂದ ಕಾರಣ ಸೈಫ್ ಆಲಿಖಾನ್ ರವರನ್ನು ಯಾವುದೇ ಕಾರಣಕ್ಕೂ ರಾವಣನ ಪಾತ್ರಕ್ಕೆ ಆಯ್ಕೆ ಮಾಡಬಾರದು ಎಂಬ ಒತ್ತಾಯ ಕೇಳಿ ಬಂದಿತ್ತು. ಆದರೆ ಚಿತ್ರತಂಡ ಅಷ್ಟಾಗಿ ತ’ಲೆಕೆ’ಡಿಸಿಕೊಂಡಿರಲಿಲ್ಲ. ಇಷ್ಟಾದರೂ ಕೂಡ ಚಿತ್ರ ಯಶಸ್ಸು ಗಳಿಸಬಹುದು ಎಂಬ ಲೆಕ್ಕಾಚಾರಗಳು ಕೇಳಿಬರುತ್ತಿದ್ದವು.

ಆದರೆ ಸೈಫ್ ಆಲಿ ಖಾನ್ ರವರು ನೀಡಿದ ಒಂದು ಸಂದರ್ಶನ ಇದೀಗ ದೇಶದ ಎಲ್ಲೆಡೆ ತಲ್ಲಣವನ್ನು ಸೃಷ್ಟಿಸಿದೆ, ಹೌದು ಸ್ನೇಹಿತರೇ ಇದೀಗ ಸಂದರ್ಶನದಲ್ಲಿ ಮಾತನಾಡಿರುವ ಸೈಫ್ ಆಲಿ ಖಾನ್ ರವರು ರಾವಣನನ್ನು ಹಾಡಿ ಹೊಗಳಿ ರಾವಣನ ಗುಣಧರ್ಮವನ್ನು ನಾವು ಸಿನಿಮಾದಲ್ಲಿ ತೋರಿಸುತ್ತೇವೆ, ಆತನನ್ನು ಖಳನಾಯಕನಾಗಿ ತೋರಿಸುವುದಿಲ್ಲ, ರಾವಣ ಸೀತೆಯನ್ನು ಹೊತ್ತೊಯ್ದರೂ ಕೂಡ ಒಂದು ಕಾರಣವಿತ್ತು. ಅದಕ್ಕೆಲ್ಲ ಕಾರಣ ಲಕ್ಷ್ಮಣ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಈ ಒಂದು ಸಂದರ್ಶನದಿಂದ ಒಂದು ಕಡೆ ಕಂಗನಾ ರಾವತ್ ಅಭಿಮಾನಿಗಳು ಹಾಗೂ ಸುಶಾಂತ್ ಸಿಂಗ್ ಅಭಿಮಾನಿಗಳು ಸೀತೆಯ ಅ’ಪಹರಣವನ್ನು ಸಮರ್ಥಿಸಿಕೊಳ್ಳುವ ಚಿತ್ರ ನಮಗೆ ಬೇಡ ಎಂದು ಹೇಳುತ್ತಿರುವಾಗ ಮತ್ತೊಂದೆಡೆ ಇದರ ಜೊತೆಗೆ ಪ್ರಭಾಸ್ ಅಭಿಮಾನಿಗಳು ಕೂಡ ಕೈಜೋಡಿಸಿದ್ದು ನಾವು ಕೂಡ ಪ್ರಭಾಸ್ ಅಭಿಮಾನಿಗಳು, ನಾವು ಕೂಡ ಚಿತ್ರವನ್ನು ನೋಡಲು ಕಾಯುತ್ತಿದ್ದೆವು, ಆದರೆ ಸೀತೆಯ ಅ’ಪಹರಣವನ್ನು ಸಮರ್ಥಿಸುವಂತಹ ಚಿತ್ರ ನಮಗೆ ಅಗತ್ಯವಿಲ್ಲ, ನಾವು ಕೂಡ ಈ ಸಿನಿಮಾವನ್ನು ನೋಡುವುದಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.