ಬಿಗ್ ನ್ಯೂಸ್: ಕೊನೆಗೂ ಮಂಡಿಯೂರಿದ ಸೈಫ್ ! ಎಚ್ಚೆತ್ತುಕೊಂಡ ಆದಿಪುರುಷ ಚಿತ್ರತಂಡ !

ಬಿಗ್ ನ್ಯೂಸ್: ಕೊನೆಗೂ ಮಂಡಿಯೂರಿದ ಸೈಫ್ ! ಎಚ್ಚೆತ್ತುಕೊಂಡ ಆದಿಪುರುಷ ಚಿತ್ರತಂಡ !

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಆದಿಪುರುಷ್ ಚಿತ್ರ ಪ್ರಕಟಣೆಗೊಂಡಾಗ ಹೆಚ್ಚು ಜನರು ಚಿತ್ರ ನೋಡಲು ಕಾಯುತ್ತಿದ್ದೇವೆ ಎಂದಿದ್ದರು, ಆದರೆ ಒಂದಲ್ಲ ಒಂದು ವಿವಾದಗಳನ್ನು ಸೃಷ್ಟಿ ಮಾಡಿ ಕೊಂಡು ಸೈಫ್ ಆಲಿಖಾನ್ ರವರನ್ನು ರಾವಣನಾಗಿ ಆಯ್ಕೆ ಮಾಡಿ ವಿವಾದ ಸೃಷ್ಟಿ ಮಾಡಿದ ಬಳಿಕ ಜನರು ಚಿತ್ರ ನೋಡಲು ಕಾಯುತ್ತಿದ್ದೇವೆ ಎಂದು ಹೇಳುವ ಬದಲು ಚಿತ್ರ ಬಿಡುಗಡೆಯಾಗಲಿ, ನಾವು ಚಿತ್ರಕ್ಕೆ ಬುದ್ಧಿ ಕಲಿಸಲು ಕಾಯುತ್ತಿದ್ದೇವೆ ಎಂದು ಹೇಳುವ ಮಟ್ಟಕ್ಕೆ ಬಂದು ನಿಂತಿತ್ತು.

ಇಷ್ಟು ಸಾಲದು ಎಂಬಂತೆ ಇತ್ತೀಚೆಗೆ ಎರಡು ದಿನಗಳ ಹಿಂದೆ ಸೈಫ್ ಆಲಿ ಖಾನ್ ರವರು ಸಂದರ್ಶನದಲ್ಲಿ ರಾವಣನ ಕುರಿತು ಮಾತನಾಡಿ ಚಿತ್ರದಲ್ಲಿ ರಾವಣನನ್ನು ಖಳನಾಯಕನಾಗಿ ತೋರಿಸುವ ಬದಲು ಧರ್ಮ ಪುರುಷನಾಗಿ ತೋರಿಸಲಾಗುತ್ತದೆ, ಆತ ಕಾರಣವಿಲ್ಲದೆ ಯಾವುದೇ ಕೆಲಸವನ್ನು ಮಾಡಿಲ್ಲ ಸೀತೆಯನ್ನು ಹೊತ್ತುಕೊಂಡು ಹೋಗಲು ಕೂಡ ಒಂದು ಕಾರಣವಿತ್ತು ಎಂದು ಸೀತೆಯ ಹೊತ್ತೊಯ್ದ ಪ್ರಸಂಗವನ್ನು ಸಮರ್ಥಿಸುವ ಕೆಲಸ ಮಾಡಲಾಗುತ್ತದೆ ಎಂಬಂತೆ ಮಾತನಾಡಿದರು. ಈ ಸಂದರ್ಶನ ಮುಗಿದ ಬಳಿಕವಂತೂ ಆದಿಪುರುಷ ಚಿತ್ರವನ್ನು ಸೋಲಿಸಿಯೇ ಸಿದ್ಧ ಎಂಬ ಮಾತುಗಳು ಕೇಳಿಬಂದಿದ್ದವು.

ಸ್ವತಹ ಪ್ರಭಾಸ್ ಅಭಿಮಾನಿಗಳು ಕೂಡ ಚಿತ್ರದ ವಿರುದ್ಧ ಟೀಕೆಗಳ ಬಾಣಗಳನ್ನು ಸುರಿಸಿದ್ದರು, ಹಿಂ’ದೂ ಕಾರ್ಯಕರ್ತರು ಹಾಗೂ ಸುಶಾಂತ ಸಿಂಗ್ ಅಭಿಮಾನಿಗಳು, ಕಂಗನಾ ರಾವತ್ ಅಭಿಮಾನಿಗಳು ಸೇರಿದಂತೆ ಹಲವಾರು ನೆಟ್ಟಿಗರು ಚಿತ್ರತಂಡಕ್ಕೆ ಬುದ್ದಿಕಲಿಸಿ ತೀರುತ್ತೇವೆ ಎಂದಿದ್ದರು. ಈ ಎಲ್ಲಾ ಚರ್ಚೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಆದಿಪುರುಷ್ ಚಿತ್ರತಂಡ ಕೊನೆಗೂ ಸೈಫಾಲಿಖನ್ ರವರಿಗೆ ಸ್ಪಷ್ಟ ಸಂದೇಶ ರವಾನೆ ಮಾಡಿದೆ.

ಈ ಸಂದೇಶ ರವಾನೆಯಾದ ಕೆಲವೇ ಕೆಲವು ಕ್ಷಣಗಳಲ್ಲಿ ಸೈಫ್ ಆಲಿ ಖಾನ್ ರವರು ಮಾತನಾಡಿ, ನಾನು ಮಾತನಾಡಿದ ಕೆಲವೊಂದು ಮಾತುಗಳು ಜನರ ಭಾವನೆಗೆ ಧ’ಕ್ಕೆ ಉಂಟು ಮಾಡಿವೆ ಎಂಬುದು ನನ್ನ ಅರಿವಿಗೆ ಬಂದಿದೆ, ಆದರೆ ಅದು ನನ್ನ ಉದ್ದೇಶವಾಗಿರಲಿಲ್ಲ ನಾನು ಪ್ರತಿಯೊಬ್ಬರಲ್ಲೂ ಕ್ಷಮೆ ಕೇಳುತ್ತಿದ್ದೇನೆ, ನನ್ನ ಹೇಳಿಕೆಯನ್ನು ವಾಪಸ್ ಪಡೆಯುತ್ತಿದ್ದೇನೆ, ಶ್ರೀರಾಮನು ಸತ್ಯ ಹಾಗೂ ನಾಯಕತ್ವಕ್ಕೆ ಒಂದು ಉದಾಹರಣೆಯಾಗಿದ್ದಾರೆ. ಖಂಡಿತ ಆದಿಪುರುಷ್ ಚಿತ್ರತಂಡ ಕೂಡ ಒಳ್ಳೆಯದಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ, ರಾಮಾಯಣದಲ್ಲಿ ಹೇಗೆ ಇದೆಯೋ ಅದೇರೀತಿ ನಾವು ತೆರೆಮೇಲೆ ತರಲು ಪ್ರಯತ್ನ ಮಾಡುತ್ತೇವೆ ಎಂದು ಕ್ಷಮೆ ಕೇಳಿದ್ದಾರೆ.