ಸಲಾರ್ ಕಥೆ ಕುರಿತು ಮಾತು ಕೇಳಿ ಬರುತ್ತಿದ್ದಂತೆ ಶ್ರೀಮುರಳಿಗೆ ಕೈಕೊಟ್ಟ ಪ್ರಶಾಂತ್ ಎಂದು ರೊಚ್ಚಿಗೆದ್ದ ಕನ್ನಡಾಭಿಮಾನಿಗಳು ಯಾಕೆ ಗೊತ್ತಾ ??

ನಮಸ್ಕಾರ ಸ್ನೇಹಿತರೇ ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಪ್ರಶಾಂತ್ ನೀಲ್ ರವರು ತಮ್ಮ ಪ್ಯಾನ್ ಇಂಡಿಯಾ ಸಿನಿಮಾ ಘೋಷಣೆ ಮಾಡಿದ ಕ್ಷಣದಿಂದಲೂ ಪ್ರಶಾಂತ್ ನೀಲ್ ರವರ ನಿರ್ಧಾರದ ಕುರಿತು ಹಲವಾರು ಪರ ಹಾಗೂ ವಿರೋಧದ ಚರ್ಚೆಗಳು ನಡೆಯುತ್ತಿವೆ. ಕೆಲವರು ಪ್ರಶಾಂತ್ ನೀಲ್ ಕನ್ನಡ ಚಿತ್ರರಂಗದ ಹೆಮ್ಮೆಯನ್ನು ರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ, ಸಿನಿಮಾದಲ್ಲಿ ನಟನೆ ಮಾಡುತ್ತಿರುವುದು ತೆಲುಗು ನಟ ಆಗಿರಬಹುದು, ಆದರೆ ನಿರ್ದೇಶನ ಎಂಬುದು ಒಂದು ವೃತ್ತಿ, ಇದಕ್ಕೆ ಭಾಷೆ ಹಾಗೂ ರಾಜ್ಯಗಳ ಹೆಸರನ್ನು ಸೇರಿಸಿ ಚರ್ಚೆ ನಡೆಸುವುದು ಅನಗತ್ಯ ಎಂದು ಹೇಳುತ್ತಿದ್ದರೇ ಮತ್ತಷ್ಟು ಜನ,

ಪ್ರಶಾಂತ್ ನೀಲ್ ರವರು ಸಾಮಾನ್ಯ ನಿರ್ದೇಶಕನಾಗಿ ಪ್ರಭಾಸ್ ರವರ ಸಿನಿಮಾ ನಿರ್ದೇಶನ ಮಾಡುತ್ತೇನೆ ಎಂದಿದ್ದರೆ, ಪ್ರಭಾಸ್ ರವರು ಇವರ ಕಡೆ ತಿರುಗಿ ಕೂಡ ನೋಡುತ್ತಿರಲಿಲ್ಲ. ಆದರೆ ಕನ್ನಡ ಚಿತ್ರರಂಗದ ಮೂಲಕ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡು ಉತ್ತಮ ಚಿತ್ರ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ಪ್ರಶಾಂತ್ ನೀಲ್ ರವರು ಕನ್ನಡದ ನಟರಿಗೆ ಅವಕಾಶ ನೀಡಬೇಕಾಗಿತ್ತು, ಪ್ರತಿಯೊಬ್ಬರಿಗೂ ಕನ್ನಡ ಕೇವಲ ಗೆಲ್ಲುವವರೆಗೂ ಮಾತ್ರ ಅಗತ್ಯವಾಗಿರುತ್ತದೆ ಎಂದೆಲ್ಲ ಟೀಕೆಗಳ ಬಾಣಗಳನ್ನು ಸುರಿಸುತ್ತಿದ್ದಾರೆ.

ಈ ಎಲ್ಲಾ ಪರ ಹಾಗೂ ವಿರೋಧದ ಹೇಳಿಕೆಗಳ ನಡುವೆ ಗಾಂಧಿನಗರದಲ್ಲಿ ಪ್ರಭಾಸ್ ಸಿನಿಮಾ ಕುರಿತು ಮತ್ತೊಂದು ಸುದ್ದಿ ಹರಡಿದ್ದು, ಈ ಸುದ್ದಿ ಕೇಳಿದ ಬಳಿಕವಂತೂ ಪ್ರಶಾಂತ್ ನೀಲ್ ರವರ ವಿರುದ್ಧ ಮತ್ತಷ್ಟು ಟೀಕೆಗಳು ಹೆಚ್ಚಾಗಿವೆ. ಇದರಿಂದ ಇದೀಗ ಪ್ರಶಾಂತ್ ನೀಲ್ ರವರ ನಿರ್ಧಾರದ ಕುರಿತು ಮತ್ತಷ್ಟು ಚರ್ಚೆಗಳು ಎದುರಾಗುತ್ತಿದ್ದು ಶ್ರೀ ಮುರುಳಿ ಅಭಿಮಾನಿಗಳು ಕೂಡ ಶ್ರೀ ಮುರಳಿ ಯವರಿಗೆ ಪ್ರಶಾಂತ್ ನೀಲ್ ಕೈ ಕೊಟ್ಟಿದ್ದಾರೆ ಎಂಬ ಮಾತುಗಳನ್ನು ಆಡಿದ್ದಾರೆ. ಬನ್ನಿ ಅಷ್ಟಕ್ಕೂ ನಡೆಯುತ್ತಿರುವುದಾದರೂ ಏನು ಹಾಗೂ ಈ ವಾದ ಸೃಷ್ಟಿಯಾಗಲು ಕೇಳಿಬಂದ ಮಾಹಿತಿ ಆದರೂ ಏನು ಎಂಬುದನ್ನು ತಿಳಿದುಕೊಳ್ಳೋಣ.

ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಪ್ರಶಾಂತ್ ನೀಲ್ ರವರು ಕೆಜಿಎಫ್ 2 ಚಿತ್ರದಲ್ಲಿ ನಿರತವಾಗಿರುವಾಗ ಅದೇಗೆ ಪ್ರಭಾಸ್ ರವರ ಸಿನಿಮಾಗೆ ಕಥೆ ಬರೆದರೂ ಹಾಗೂ ಕಥೆ ವಿವರಿಸಿ ಪ್ರಭಾಸ್ ರವರನ್ನು ಹೇಗೆ ಒಪ್ಪಿಸಿದರು ಎಂಬುದರ ಕುರಿತು ಚರ್ಚೆ ಆರಂಭವಾದಾಗ ಪ್ರಭಾಸ್ ರವರು ಇದೀಗ ರಾಧೆ ಶ್ಯಾಮ ಚಿತ್ರದಲ್ಲಿ ನಟನೆ ಮಾಡುತ್ತಿದ್ದು ಇದರಲ್ಲಿ ಆಕ್ಷನ್ ಸೀನ್ ಗಳು ಇಲ್ಲದೇ ಇರುವ ಕಾರಣ ಪ್ರಭಾಸ್ ರವರು ತಮ್ಮ ಮಾಸ್ ಅಭಿಮಾನಿಗಳನ್ನು ಉಳಿಸಿಕೊಳ್ಳುವ ಕಾರಣಕ್ಕಾಗಿ ಮಾಸ್ ಚಿತ್ರದ ಮೊರೆಹೋಗುವ ನಿರ್ಧಾರಕ್ಕೆ ಬಂದಿದ್ದಾರೆ. ಅದೇ ಸಮಯದಲ್ಲಿ ಪ್ರಭಾಸ್ ರವರಿಗೆ ಪ್ರಶಾಂತ್ ನೀಲ್ ಅವರ ಜೊತೆ ಕೆಲಸ ಮಾಡುವ ಇಚ್ಛೆ ಉಂಟಾದಾಗ, ಸ್ವತಹ ಪ್ರಭಾಸ್ ರವರು ಪ್ರಶಾಂತ್ ನೀಲ್ ಅವರಿಗೆ ಸಿನಿಮಾ ಮಾಡಲು ಮನವಿ ಮಾಡಿದ್ದರಂತೆ. ಇದೇ ಸಂದರ್ಭದಲ್ಲಿ ಪ್ರಭಾಸ್ ಅವರ ಕೋರಿಕೆಯಂತೆ ಪ್ರಶಾಂತ್ ನೀಲ್ ರವರು ಒಪ್ಪಿಕೊಂಡಿದ್ದು,

ಈಗಾಗಲೆ ಕನ್ನಡದಲ್ಲಿ ಭರ್ಜರಿ ಹೆಸರು ಮಾಡಿರುವ ಉಗ್ರಂ ಸಿನಿಮಾವನ್ನು ಪ್ರಭಾಸ್ ರವರಿಗೆ ತಕ್ಕಂತೆ ಬದಲಾಯೀಸಿ, ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆ ಮಾಡಲು ಷರತ್ತು ವಿಧಿಸಿ ಪ್ರಶಾಂತ್ ನೀಲ್ ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಇದನ್ನು ಕೇಳಿದ ಹಲವಾರು ಜನರು ಪ್ರಶಾಂತ್ ನೀಲ್ ಅವರು ಮುಂದೆ ಉಗ್ರಂ 2 ಚಿತ್ರವನ್ನು ನಿರ್ದೇಶನ ಮಾಡುತ್ತಾರೆ ಎಂದು ತಿಳಿದಿತ್ತು, ಆದರೆ ಉಗ್ರಂ 2 ನಿರ್ದೇಶನ ಮಾಡದೇ ಅದೇ ಕಥೆಯನ್ನು ಪ್ರಭಾಸ್ ರವರಿಗೆ ನೀಡುವ ಮೂಲಕ ಶಾಂತ್ ನೀಲ್ ಮುರಳಿ ರವರಿಗೆ ಕೈ ಕೊಟ್ಟಿದ್ದಾರೆ.

ಯಾಕೆಂದರೆ ಒಂದು ವೇಳೆ ಇದೇ ಕಥೆಯುಳ್ಳ ಪ್ರಭಾಸ್ ರವರ ಸಿನಿಮಾ ಬಾಕ್ಸಾಫೀಸ್ ನಲ್ಲಿ ಸದ್ದು ಮಾಡಿದರೇ ಖಂಡಿತ ಪ್ರಶಾಂತ್ ನೀಲ್ ರವರು ಉಗ್ರಂ 2 ಸಿನಿಮಾವನ್ನು ಕೂಡ ಪ್ರಭಾಸ್ ರವರ ಜೊತೆಯೆ ನಿರ್ದೇಶನ ಮಾಡಿಯೇ ತೀರುತ್ತಾರೆ. ಯಾಕೆಂದರೆ ಪ್ರಭಾಸ್ ರವರು ಸದ್ಯದ ಮಟ್ಟಿಗೆ ಬಾಹುಬಲಿ ಚಿತ್ರದ ಮೂಲಕ ದೇಶದ ಮೂಲೆ ಮೂಲೆಗಳಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ, ಆದಕಾರಣ ಸಹಜವಾಗಿ ಪ್ರಶಾಂತ್ ನೀಲ್ ರವರು ಪ್ರಭಾಸ್ ರವರಿಗೆ ಮಣೆ ಹಾಕುತ್ತಾರೆ. ಇದು ನಿಜಕ್ಕೂ ಪ್ರಶಾಂತ್ ನೀಲ್ ರವರ ಕಡೆಯಿಂದ ನಾವು ಊಹೆ ಕೂಡ ಮಾಡಿರಲಿಲ್ಲ, ಅದೇಗೆ ಒಬ್ಬರ ಸಿನಿಮಾವನ್ನು ಮತ್ತೊಬ್ಬರಿಗೆ ನೀಡುತ್ತಾರೆ. ನಿಜಕ್ಕೂ ಇದು ಒಪ್ಪುವ ಸಂಗತಿಯಲ್ಲ ಎಂದು ಹಲವಾರು ಜನರು ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

Post Author: Ravi Yadav