ಖ್ಯಾತ ನಟ ಪ್ರಭಾಕರ್ ಅವರಿಗೆ ಟೈಗರ್ ಪ್ರಭಾಕರ್ ಎಂದು ಹೆಸರು ಬರಲು ಕಾರಣವಾದರೂ ಏನು ಗೊತ್ತಾ??

ಖ್ಯಾತ ನಟ ಪ್ರಭಾಕರ್ ಅವರಿಗೆ ಟೈಗರ್ ಪ್ರಭಾಕರ್ ಎಂದು ಹೆಸರು ಬರಲು ಕಾರಣವಾದರೂ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆದುಕೊಂಡಿದ್ದ ಪ್ರಭಾಕರ್ ಅವರು ನಟನಾಗಿ ಹಾಗೂ ಖಳನಟನಾಗಿ ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದಾರೆ. ಒಂದು ಕಾಲದ ಶ್ರೇಷ್ಠ ಖಳನಟನಾಗಿ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿರುವ ಪ್ರಭಾಕರ್ ಅವರು ಕೇವಲ ಕನ್ನಡ ಚಿತ್ರರಂಗದಲ್ಲಿ ಅಷ್ಟೇ ಅಲ್ಲದೆ ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಕೂಡ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆ ಗತ್ತು, ಡೈಲಾಗ್ ಮತ್ತು ಫೈಟಿಂಗ್ ಸೀನ್ ಗಳಲ್ಲಿ ಇವರು ನಟನೆ ಮಾಡುತ್ತಿದ್ದ ರೀತಿ ಅಂತೂ ಬಹಳ ಅದ್ಭುತವಾಗಿತ್ತು.

ಇಷ್ಟೆಲ್ಲಾ ಖ್ಯಾತಿ ಪಡೆದುಕೊಂಡಿದ್ದ ಪ್ರಭಾಕರ್ ರವರ ಕುಟುಂಬ ಮೂಲತಹ ಆಂಧ್ರಪ್ರದೇಶ ಆಗಿದ್ದರೂ ಕೂಡ ಬೆಂಗಳೂರಿನಲ್ಲಿ ಜನಿಸಿದ ಪ್ರಭಾಕರ್ ಅವರು ಅಪ್ಪಟ ಕನ್ನಡಿಗನಾಗಿ ಬೆಳೆದು ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿರುವುದು ಸುಳ್ಳಲ್ಲ. ಇವರ ಕೆಲವೊಂದು ಪಾತ್ರಗಳು ಇಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ಅಚ್ಚಳಿಯದೇ ಉಳಿದಿವೆ. 450 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಮಾಡಿರುವ ಪ್ರಭಾಕರ್ ರವರು, ವಿವಿಧ ಚಿತ್ರರಂಗಗಳಲ್ಲಿ ವಿವಿಧ ರೀತಿಯ ಪಾತ್ರಗಳಿಗೆ ಜೀವತುಂಬಿ ಪೋಷಕ ನಟನಾಗಿಯು ಕೂಡ ನಟಿಸಿದ್ದಾರೆ. ಇನ್ನು ಇವರನ್ನು ಎಲ್ಲರೂ ಕೇವಲ ಪ್ರಭಾಕರ್ ಎಂದು ಕರೆಯುತ್ತಿರಲಿಲ್ಲ ಬದಲಾಗಿ ಟೈಗರ್ ಪ್ರಭಾಕರ್ ಎಂಬ ಹೆಸರಿನ ಮೂಲಕ ಕರೆದು ಟೈಗರ್ ಎಂಬ ಬಿರುದನ್ನು ನೀಡಿದ್ದರು.

ಇದಕ್ಕೆ ಕಾರಣವಾದರೂ ಏನು ಎಂಬುವುದರ ಕುರಿತು ನಾವು ಗಮನಿಸುವುದಾದರೇ ಇವರು 1984 ರಲ್ಲಿ ವಿಘ್ನೇಶ್ವರನ ವಾಹನ ಎಂಬ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಂಡ ಬಳಿಕ ಅವರ ಅತ್ಯದ್ಭುತ ನಟನೆ ನೋಡಿದ ಮತ್ತೊಂದು ಚಿತ್ರತಂಡ ಇವರಿಗೆ ನಟನಾಗಿ ನಟಿಸಲು ಅವಕಾಶ ನೀಡುತ್ತದೆ. ಆ ಚಿತ್ರ ಮತ್ತ್ಯಾವುದೂ ಅಲ್ಲ ಅದುವೇ ಹುಲಿಯಾದ ಕಾಳ ಎಂಬ ಚಿತ್ರತಂಡ, ಈ ಚಿತ್ರದಲ್ಲಿಯೂ ಕೂಡ ಅದ್ಭುತ ನಟನೆ ಮಾಡಿ ಸೈ ಎನಿಸಿಕೊಂಡ ಪ್ರಭಾಕರ್ ಅವರಿಗೆ ಈ ಚಿತ್ರದ ಮುಖಾಂತರವೇ ಟೈಗರ್ ಎಂಬ ಬಿರುದು ಬಂದಿತ್ತು. ತದನಂತರ ಮುಂದಿನ ಹಲವಾರು ಚಿತ್ರಗಳಲ್ಲಿ ಇವರು ನಟನೆ ಮಾಡಿದರಾದರೂ, ಟೈಗರ್ ಎಂಬ ಹೆಸರು ಅಚ್ಚಳಿಯದೆ ಉಳಿಯಿತು. ಹುಲಿಯಾದ ಕಾಳ ಎಂಬ ಚಿತ್ರದಲ್ಲಿ ವ್ಯಾಗ್ರ ನಟನೆಯಿಂದ ಟೈಗರ್ ಎಂಬ ಬಿರುದನ್ನು ಪಡೆದುಕೊಂಡವರು. ಇಂದಿಗೂ ಕೂಡ ಪ್ರಭಾಕರ್ ಎಂದರೇ ಎಷ್ಟು ಜನಕ್ಕೆ ಒಂದು ಕ್ಷಣ ನೆನಪಾಗುವುದು ತೀರಾ ಕಡಿಮೆ, ಅದೇ ನೀವು ಟೈಗರ್ ಪ್ರಭಾಕರ್ ಎಂದರೇ ಮಾತ್ರ ಕೆಲವೊಂದು ಪಾತ್ರಗಳು ಕಣ್ಣುಮುಂದೆ ಅಂಗೇ ಪಾಸ್ ಆಗುತ್ತವೆ.