ಕರುನಾಡ ವಾಣಿ
ಇದು ನಿಮ್ಮ ಧ್ವನಿ

ರಾಜಮೌಳಿರವರನ್ನು ನೋಡಿ ಕಲಿತುಕೊಳ್ಳಿ ಎಂದು ಪ್ರಶಾಂತ್ ನೀಲ್ ರವರಿಗೆ ಬುದ್ದಿವಾದ ಹೇಳಿದ ನೆಟ್ಟಿಗರು !

ರಾಜಮೌಳಿರವರನ್ನು ನೋಡಿ ಕಲಿತುಕೊಳ್ಳಿ ಎಂದು ಪ್ರಶಾಂತ್ ನೀಲ್ ರವರಿಗೆ ಬುದ್ದಿವಾದ ಹೇಳಿದ ನೆಟ್ಟಿಗರು !

19

ನಮಸ್ಕಾರ ಸ್ನೇಹಿತರೇ ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಸ್ಯಾಂಡಲ್ವುಡ್ ನಲ್ಲಿ ಪ್ರಸಿದ್ಧ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿ ಕೆಲವೇ ಕೆಲವು ದಿನಗಳಲ್ಲಿ ಬೆಳೆದಿರುವ ಹೊಂಬಾಳೆ ಫಿಲಂಸ್ ಮುಂದಿನ ಸಿನಿಮಾ ಕುರಿತು ಘೋಷಣೆ ಮಾಡಿದೆ. ಹೊಸ ಸಿನಿಮಾ ಘೋಷಣೆ ಎಂದ ತಕ್ಷಣ ಅಭಿಮಾನಿಗಳು ತುದಿಗಾಲಲ್ಲಿ ಕಾದುನಿಂತಿದ್ದರು. ಎಲ್ಲವೂ ಅಂದುಕೊಂಡಂತೆ ಚೆನ್ನಾಗಿದೆ ಎಂದುಕೊಂಡಿದ್ದ ಪ್ರಶಾಂತ್ ನೀಲ್ ರವರು ಹೊಸ ಸಿನಿಮಾ ಕುರಿತು ಘೋಷಣೆ ಮಾಡಿದ ಕೆಲವೇ ಕೆಲವು ಕ್ಷಣಗಳಲ್ಲಿ ಹಲವಾರು ವಿವಾದಗಳನ್ನು ಸೃಷ್ಟಿಸಿದೆ.

ಹೌದು ಸ್ನೇಹಿತರೇ ನಿಮಗೆಲ್ಲರಿಗು ಬಹುಶಹ ಈಗಾಗಲೇ ತಿಳಿದಿರಬಹುದು ಮುಂದಿನ ಸಿನಿಮಾ ಕುರಿತು ಪ್ರಶಾಂತ್ ನೀಲ್ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದು ಮುಂದಿನ ಸಿನಿಮಾವನ್ನು ಪ್ರಭಾಸ್ ಅವರ ಜೊತೆ ಸಲಾರ್ ಎಂಬ ಹೆಸರಿನ ಅಡಿಯಲ್ಲಿ ನಿರ್ಮಾಣ ಮಾಡಲು ನಿರ್ಧಾರ ಮಾಡಿದ್ದಾರೆ. ಈ ಘೋಷಣೆ ಆದ ಕೆಲವೇ ಕ್ಷಣವೂ ಕ್ಷಣಗಳಲ್ಲಿ ಹಲವಾರು ವಿ’ವಾ’ದಗಳು ಚಿತ್ರ ಸುತ್ತಿಕೊಂಡಿದ್ದು ಮೊದಲನೆಯದಾಗಿ ಚಿತ್ರದ ಟೈಟಲ್ ಗೆ ಪ್ರಶಾಂತ್ ಸಂಬರಗಿ ರವರು ಪ್ರತಿಕ್ರಿಯೆ ನೀಡಿದ್ದು ಇಂಡಿಯಾ ಸಿನಿಮಾ ಎಂದ ಮೇಲೆ ಇದಕ್ಕೆ ಯಾಕೆ ಅರೇಬಿಯನ್ ಹೆಸರು ಇಟ್ಟಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.

ಇದಾದ ಕೆಲವೇ ಕೆಲವು ಕ್ಷಣಗಳಲ್ಲಿ ಕನ್ನಡಿಗರು ಕೂಡ ಈ ಚಿತ್ರದ ವಿರುದ್ಧ ತಿ’ರುಗಿಬಿ’ದ್ದಿದ್ದು,ನೀವು ಹೆಸರು ಗಳಿಸಲು ಕನ್ನಡದ ನಟನನ್ನು ಬಳಸಿಕೊಂಡಿದ್ದೀರಿ. ತದನಂತರ ಇದೀಗ ಹೆಸರುಗಳಿಸಿದ ತಕ್ಷಣ ಕನ್ನಡದಲ್ಲಿ ಯಾರು ನಟರು ನಿಮಗೆ ಸಿಗಲಿಲ್ಲವೇ, ರಾಜಮೌಳಿ ರವರನ್ನು ನೋಡಿ ಕಲಿತುಕೊಳ್ಳಿ ರಾಜಮೌಳಿ ಅವರಿಗೆ ಹಿಂದಿ ಚಿತ್ರರಂಗದಿಂದ ಎಷ್ಟು ಆಫರ್ಗಳು ಬಂದರೂ ಕೂಡ ಅವರು ಪ್ಯಾನ್ ಇಂಡಿಯಾ ಸಿನಿಮಾ ಮಾಡಿದರೇ ಅದು ಮೂಲತಹ ತೆಲುಗು ಚಿತ್ರರಂಗದಿಂದ ಬಂದಿರುತ್ತದೆ ಹಾಗೂ ತೆಲುಗು ಚಿತ್ರರಂಗದ ನಟರನ್ನು ಹಾಕಿಕೊಂಡು ಮಾತ್ರ ಸಿನಿಮಾ ತೆಗೆಯುತ್ತಾರೆ. ಆದರೆ ನೀವು ಹೆಸರುಗಳಿಸಿದ ತಕ್ಷಣ ಕನ್ನಡದ ನಟನನ್ನು ಮರೆತು ತೆಲುಗು ನಟನ ಜೊತೆ ಹೋಗಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ ಎಂದಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಜನರು ಕೆಲವೇ ಕೆಲವು ದಿನಗಳ ಹಿಂದೆ ಇಂಡಿಯಾ ಸಿನಿಮಾದ ಕುರಿತು ಮಾತನಾಡಿ ಪ್ಯಾನ್ ಇಂಡಿಯಾ ಸಿನಿಮಾ ಮಾಡಬಾರದು ಎಂದು ಜಗ್ಗೇಶ್ ಅವರು ಹೇಳಿದ್ದ ಹೇಳಿಕೆಯನ್ನು ಉದಾಹರಣೆಯನ್ನಾಗಿ ನೀಡಿ ಎಂದು ಜಗ್ಗೇಶ್ ಅವರು ಹೇಳಿದ್ದು ಸರಿಯಾಗಿದೆ, ಇಲ್ಲಿ ಕೇವಲ ಬೆಳೆಯುವ ವರೆಗೂ ಮಾತ್ರ ಕನ್ನಡಿಗರನ್ನು ನಂಬಲಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.