ಈ 3 ಧಾನ್ಯಗಳನ್ನು ಸೇವಿಸಿದರೆ ಕ್ಯಾಲ್ಶಿಯಂ ಕೊರತೆ, ಕೈಕಾಲು ನೋವು, ಸೊಂಟ ನೋವು, ರಕ್ತಹೀನತೆ, ನಿಶಕ್ತಿ ಬರೋದೇ ಇಲ್ಲ‌‌..!

ಈ 3 ಧಾನ್ಯಗಳನ್ನು ಸೇವಿಸಿದರೆ ಕ್ಯಾಲ್ಶಿಯಂ ಕೊರತೆ, ಕೈಕಾಲು ನೋವು, ಸೊಂಟ ನೋವು, ರಕ್ತಹೀನತೆ, ನಿಶಕ್ತಿ ಬರೋದೇ ಇಲ್ಲ‌‌..!

ನಮಸ್ಕಾರ ಸ್ನೇಹಿತರೇ ನಮ್ಮ ಹೊಟ್ಟೆ ಹಸಿವನ್ನು ನೀಗಿಸಲು ನಾವುಗಳು ಚಪಾತಿ ಬಿಟ್ಟರೆ ಅನ್ನವನ್ನು ಸೇವಿಸುತ್ತೇವೆ. ಸಾಮಾನ್ಯವಾಗಿ ಈ ಆಹಾರಗಳನ್ನೇ ಎಲ್ಲರೂ ಬಯಸುತ್ತಾರೆ‌. ಆದರೆ ನಿಮಗೆ ಯಾವಾಗಲೂ ಸುಸ್ತು ಆಗುತ್ತಾ, ಕೂದಲು ಉದುರುವ ಸಮಸ್ಯೆ ಕಾಡುತ್ತಿದೆಯ, ರ’ಕ್ತಹೀ’ನತೆ, ಸೊಂಟ ನೋವು, ಕೈಕಾಲು ನೋವು, ನಿಮ್ಮನ್ನು ಕಾಡುತ್ತಿದೆಯಾ. ಜ್ಞಾಪಕ ಶಕ್ತಿ ಮತ್ತು ಮೆಮೊರಿ ಲಾಸ್ ಆಗ್ತಾಯಿದೆ ಅಂತ ನಿಮಗೆ ಅನಿಸುತ್ತಿದೆಯೇ. ಅದೇ ರೀತಿ ಮಲಬದ್ಧತೆ ಉಂಟಾಗುತ್ತಿದೆಯ. ಈ ಮೂರು ಧಾನ್ಯಗಳನ್ನು ನಿಮ್ಮ ಆಹಾರಕ್ರಮದಲ್ಲಿ ಬಳಸುತ್ತ ಬಂದರೆ, ಈ ಎಲ್ಲ ಸಮಸ್ಯೆಗಳಿಂದ ನೀವು ಪಾರಾಗಬಹುದು.

ಹಾಗಿದ್ರೆ ಆ ಧಾನ್ಯಗಳು ಯಾವುವು ಅಂತ ನೋಡೋಣ ಬನ್ನಿ. ಎಲ್ಲ ಧಾನ್ಯಗಳಿಗೆ ಇಂತಹ ಶಕ್ತಿಶಾಲಿಯಾದ ಧಾನ್ಯ ಅಂದರೆ ಅದು ಸಜ್ಜೆ. ಈ ಸಜ್ಜೆಯಲ್ಲಿ ಕ್ಯಾಲ್ಸಿಯಂ, ಮ್ಯಾಗ್ನಿಷಿಯಂ ತುಂಬಾನೇ ಇದೆ. ಸಜ್ಜೆಯಿಂದ ಮಾಡಿದ ಪದಾರ್ಥವನ್ನು ಉಪಯೋಗಿಸುವುದರಿಂದ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಬರುವುದಿಲ್ಲ, ಮತ್ತು ಹಾರ್ಟ್ ಅಟ್ಯಾಕ್ ಆಗುವಂತಹ ಚಾನ್ಸಸ್ ತುಂಬಾನೇ ಕಡಿಮೆ ಇರುತ್ತದೆ. ಹಾಗೆ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಇದನ್ನು ನೀವು ಪ್ರತಿದಿನ ಬಳಸುತ್ತ ಬಂದರೆ ಬಿಪಿ, ಶುಗರ್ ಇಂಥ ಸಮಸ್ಯೆಯಿಂದ ಸುಲಭವಾಗಿ ಮುಕ್ತಿ ಹೊಂದಬಹುದು.

ಇನ್ನು ಸಜ್ಜೆಯನ್ನು ಹೆಚ್ಚು-ಹೆಚ್ಚು ಉಪಯೋಗಿಸುತ್ತಾ ಬಂದರೆ ನಿಮ್ಮ ಜೀರ್ಣಕ್ರಿಯೆ ಅಭಿವೃದ್ಧಿಗೊಂಡು ಜೀರ್ಣಾಂಗ ವ್ಯವಸ್ಥೆ ಸರಾಗವಾಗಿ ಆಗುತ್ತದೆ ಮತ್ತು ಗ್ಯಾಸ್ ಸಮಸ್ಯೆ ಕೂಡ ಬರೋದಿಲ್ಲ. ಹಾಗೆ ಯಾರು ಖಿನ್ನತೆಗೆ ಒಳಗಾಗುತ್ತಾರೆ ಅಂಥವರು ಇದನ್ನು ತಿನ್ನೋದ್ರಿಂದ ಸಮಸ್ಯೆಗಳು ಕಡಿಮೆಯಾಗುತ್ತೆ ಜೊತೆಗೆ ಕೂದಲು ಉದುರುವಿಕೆ, ಪಿಂಪಲ್ ಇತರ ಸಮಸ್ಯೆಗಳಿಗೆ ಪರಿಹಾರ. ಹಾಗೆ ಯಾರಿಗೆ ನಿದ್ರಾಹೀನತೆಗೆ ಇರುತ್ತದೆ ಅವರು ಸಜ್ಜಿಗೆ ತಿನ್ನೋದ್ರಿಂದ ಆರಾಮಾಗಿ ನಿದ್ದೆ ಮಾಡಬಹುದು.

ಎರಡನೆಯದಾಗಿ ರಾಗಿ. ರಾಗಿಯಲ್ಲಿ ಕ್ಯಾಲ್ಶಿಯಂ ಐರನ್, ಮ್ಯಾಗ್ನಿಷಿಯಂ ಇತರೆ ಅಂಶಗಳು ಇರುತ್ತದೆ. ರಾಗಿಯಿಂದ ರಾಗಿ ರೊಟ್ಟಿ, ರಾಗಿ ಗಂಜಿ ಈ ರೀತಿ ಹಲವಾರು ಪದಾರ್ಥಗಳನ್ನು ಮಾಡಿ ಸೇವಿಸಬಹುದು. ಅದರಲ್ಲೂ ರಾಗಿ ಮಕ್ಕಳಿಗೆ ತುಂಬಾನೆ ಒಳ್ಳೆಯದು. ಮಕ್ಕಳಿಗೆ ರಾಗಿ ಬಿಸ್ಕೆಟ್ ಮಾಡಿಕೊಟ್ಟರೆ ತಿನ್ನುತ್ತಾರೆ. ಇದನ್ನು ಮಕ್ಕಳು ಸೇವಿಸುದರಿಂದ ಅವರ ಬುದ್ಧಿಶಕ್ತಿ ಹೆಚ್ಚುತ್ತದೆ ಮತ್ತು ದೈ’ಹಿಕವಾಗಿ ಬೆಳೆಯುತ್ತಾರೆ. ನಮ್ಮಲ್ಲಿ ಒಂದು ಗಾದೆ ಮಾತಿದೆ ಹಿಟ್ಟಂ ತಿಂದಂ ಬೆಟ್ಟಂ ಕಿತ್ತಮ್ಂ. ಈ ರೀತಿ ರಾಗಿ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ.

ಇನ್ನು ಕೊನೆಯದಾಗಿ ಜೋಳ. ಗೋಧಿ ಬದಲು ಜೋಳ ಉಪಯೋಗಿಸುವುದು ತುಂಬಾನೆ ಒಳ್ಳೆಯದು. ಜೋಳದಲ್ಲಿ ಮಿನರಲ್, ಫೈಬರ್, ಐರನ್ ಮತ್ತು ವಿಟಮಿನ್ ಬಿ 6 ಇರುತ್ತದೆ. ಇನ್ನು ಜೋಳ ಡಯಾಬಿಟಿಕ್ ಪೇಷಂಟ್ ಗಳಿಗೆ ಮತ್ತು ಹಾರ್ಟ್ ಪೇಷಂಟ್ ಗಳಿಗೆ ಔಷಧಿ ರೀತಿ ವರ್ಕ್ ಆಗುತ್ತೆ. ಇದು ವಾತ, ಪಿತ್ತ, ಕಫವನ್ನು ನಿಯಂತ್ರಣ ಮಾಡುತ್ತದೆ. ಮುಖ್ಯವಾಗಿ ಯಾರು ತೂ’ಕ ಕಡಿಮೆ ಮಾಡಬೇಕು ಅಂದುಕೊಂಡಿರುತ್ತೀರೋ ಅವರು ಜೋಳವನ್ನು ತಿನ್ನುವುದರಿಂದ ಅವರು ಬೇಗನೆ ಸಣ್ಣಗಾಗಬಹುದಾ.