ಟೊಮೊಟೊ ಬಾತ್ ಬಿಡಿ, ಒಮ್ಮೆ ಟೊಮೊಟೊ ರೈಸ್ ಟ್ರೈ ಮಾಡಿ ! ಸಿಂಪಲ್ ಆದ್ರೆ ಟೇಸ್ಟ್ ಮಾತ್ರ ಸೂಪರ್ !

ಟೊಮೊಟೊ ಬಾತ್ ಬಿಡಿ, ಒಮ್ಮೆ ಟೊಮೊಟೊ ರೈಸ್ ಟ್ರೈ ಮಾಡಿ ! ಸಿಂಪಲ್ ಆದ್ರೆ ಟೇಸ್ಟ್ ಮಾತ್ರ ಸೂಪರ್ !

ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ಎಲ್ಲ ಮಹಿಳೆಯರು ಬೆಳಿಗ್ಗೆಯಾದರೆ ಟಿಫನ್ ಏನು ಮಾಡುವುದು ಎಂದು ಯೋಚಿಸುತ್ತಿರುತ್ತಾರೆ. ಅಂತವರಿಗಾಗಿ ಇಲ್ಲಿದೆ ನೋಡಿ ಸುಲಭ ಮತ್ತು ಸಿಂಪಲ್ ರೆಸಿಪಿ. ಈ ರೆಸಿಪಿ ತುಂಬಾ ಸುಲಭವಾಗಿದ್ದು ತಿನ್ನಲು ರುಚಿಯಾಗಿರುತ್ತದೆ. ಈಗ ನಾವು ಟೊಮೆಟೊ ರೈಸ್ ಮಾಡುವುದು ಹೇಗೆ ಎಂದು ನೋಡೋಣ.

ಒಂದು ಬಾಂಡಲಿ ಗೆ 3 ಟೇಬಲ್ ಸ್ಪೂನ್ ನಷ್ಟು ಎಣ್ಣೆ, ಅರ್ಧ ಟೀ ಸ್ಪೂನ್ ನಷ್ಟು ಸೊಂಪಿನ ಕಾಳು, ಇನ್ನು ಅರ್ಧ ಟೀ ಸ್ಪೂನ್ ಕಡಲೆಬೇಳೆ, 1 ಟೀ ಸ್ಪೂನ್ ನಷ್ಟು ಉದ್ದಿನಬೇಳೆ ಹಾಕಿ ಕೆಂಪಗೆ ಫ್ರೈ ಮಾಡಿ. ನಂತರ ಕರಿಬೇವು ಮತ್ತು ಎರಡು ಮೆಣಸಿನಕಾಯಿಯನ್ನು ಕಟ್ ಮಾಡಿ ಹಾಕಿ, ಒಂದು ದೊಡ್ಡ ಕಟ್ ಮಾಡಿರುವ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಕೆಂಪಗಾಗುವವರೆಗೂ ಹುರಿಯಬೇಕು. ನಂತರ ಒಂದು ಟೀ ಸ್ಪೂನ್ ನಷ್ಟು ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರ್ಧ ಟೀ ಸ್ಪೂನ್ ನಷ್ಟು ಅರಿಶಿಣ ಪುಡಿ ಮತ್ತು ಮೆಣಸಿನಕಾಯಿ ಪುಡಿ ಹಾಕಿ ಗ್ಯಾಸ್ ಅನ್ನು ಲೋ ಪ್ಲೇನ್ ನಲ್ಲಿ ಇಟ್ಟು ಮಿಕ್ಸ್ ಮಾಡಬೇಕು.

ಅದಕ್ಕೆ ಅರ್ಧ ಟೀ ಸ್ಪೂನ್ ನಷ್ಟು ಗರಂಮಸಾಲಾ ನಂತರ ನಾಲ್ಕು ಉಳಿ ಟೊಮೊಟೊವನ್ನು ಚಿಕ್ಕ ಚಿಕ್ಕದಾಗಿ ಕಟ್ ಮಾಡಿ ಹಾಕಿ. ಟೊಮೋಟೊ ಗಳೆಲ್ಲ ಬೆಂದು ಮೆತ್ತಗಾದ ನಂತರ ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಟೀ ಸ್ಪೂನ್ ನಷ್ಟು ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇಲ್ಲಿ ಉಳಿ ಟೊಮೆಟೊ ಹಾಕಿರುವುದರಿಂದ ಸಕ್ಕರೆ ಹಾಕಲಾಗಿದೆ, ನೀವು ಆಪಲ್ ಹಾಕಿದರೆ ಸಕ್ಕರೆ ಹಾಕುವ ಅವಶ್ಯಕತೆ ಇರುವುದಿಲ್ಲ.ಐದು ನಿಮಿಷ ಬೇಯಲು ಬಿಡಬೇಕು ನಂತರ 1 ಟೀ ಸ್ಪೂನ್ ನಷ್ಟು ತುಪ್ಪ.

ತುಪ್ಪ ಹಾಕುವುದರಿಂದ ಟೊಮೆಟೊ ರೈಸ್ ರುಚಿ ಹೆಚ್ಚುತ್ತದೆ. ಮುನ್ನೂರು ಗ್ರಾಂನಷ್ಟು ಬೇಯಿಸಿದ ಅನ್ನ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮತ್ತು ನಾಲ್ಕು ನಿಮಿಷ ಬೇಯಲು ಬಿಡಿ ಆಗ ಅನ್ನಕ್ಕೆ ಮಸಾಲೆ ಎಲ್ಲಾ ಚೆನ್ನಾಗಿ ಮಿಕ್ಸ್ ಆಗಿರುತ್ತದೆ. ಅದಕ್ಕೆ ಚಿಕ್ಕ ಚಿಕ್ಕದಾಗಿ ಕಟ್ ಮಾಡಿ ಕೊತ್ತಂಬರಿಯನ್ನು ಉದುರಿಸಿ ಕೊತ್ತಂಬರಿಯನ್ನು ಹಾಕುವುದರಿಂದ ಟೊಮೆಟೊ ರೈಸ್ ಪರಿಮಳ ಹೆಚ್ಚಾಗುತ್ತದೆ. ನೋಡಿದ್ರಲ್ಲ ಎಷ್ಟು ಸಿಂಪಲ್ ಅಂಡ್ ಈಜಿ ರೆಸಿಪಿ ಇದಾಗಿದೆ ಎಂದು. ಎಲ್ಲರೂ ಮನೆಯಲ್ಲಿ ಈ ರೆಸಿಪಿಯನ್ನು ಟ್ರೈ ಮಾಡಿ ಮತ್ತು ರುಚಿಕರವಾದ ಟೊಮೆಟೊ ರೈಸ್ ಸವಿಯಿರಿ.