ಮಮತಾಗೆ ಬಿಗ್ ಶಾಕ್ ನೀಡಿದ ಓವೈಸಿ ! ಬಿಜೆಪಿಯಂತೂ ಫುಲ್ ಖುಷ್ ! ಫಿಕ್ಸ್ ಆಯ್ತಾ ಕೇಸರಿ ಬಂಗಾಳ??

ಮಮತಾಗೆ ಬಿಗ್ ಶಾಕ್ ನೀಡಿದ ಓವೈಸಿ ! ಬಿಜೆಪಿಯಂತೂ ಫುಲ್ ಖುಷ್ ! ಫಿಕ್ಸ್ ಆಯ್ತಾ ಕೇಸರಿ ಬಂಗಾಳ??

ನಮಸ್ಕಾರ ಸ್ನೇಹಿತರೇ, ದೇಶವೇ ಕಳೆದ ಕೆಲವು ದಿನಗಳ ಹಿಂದೆ ಬಿಹಾರ ಚುನಾವಣೆಯತ್ತ ತನ್ನ ಚಿತ್ತವನ್ನು ನೆಟ್ಟಿತ್ತು. ಲೋಕಸಭಾ ಚುನಾವಣೆಯಲ್ಲಿ ಅದ್ಭುತ ಗೆಲುವು ದಾಖಲಿಸಿದ ಬಳಿಕ ದೇಶದಲ್ಲಿ ಕೋರೋನ ವಿಚಾರದಲ್ಲಿ ನರೇಂದ್ರ ಮೋದಿರವರು ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ವಿಪಕ್ಷಗಳು ಟೀಕೆಗಳ ಬಾಣಗಳನ್ನು ಸುರಿಸಿ ಎಂಬ ಸಂದೇಶವನ್ನು ಇಡೀ ದೇಶದ ಎಲ್ಲೆಡೆ ಸಾರಿದ್ದರು. ಇದನ್ನು ಕಂಡ ದೇಶದ ಹಲವಾರು ವಿಪಕ್ಷಗಳ ನಾಯಕರು ಕೂಡ ನರೇಂದ್ರ ಮೋದಿ ರವರ ಸರ್ಕಾರದ ಪ’ತನ ಆರಂಭವಾಗಿದೆ ಎಂದು ಅಂದುಕೊಂಡಿದ್ದರು.

ಆದರೆ ಬಿಹಾರದ ಜನತೆ ಬಿಜೆಪಿ ಪಕ್ಷದತ್ತ ಒಲವು ತೋರಿರುವ ಕಾರಣ ನರೇಂದ್ರ ಮೋದಿ ಅವರ ವರ್ಚಸ್ಸು ಕೋರೋನ ವಿಚಾರದಲ್ಲಿಯೂ ಕೂಡ ಮತ್ತಷ್ಟು ಹೆಚ್ಚಾಗಿದೆ ಎಂಬ ಸ್ಪಷ್ಟ ಸಂದೇಶ ಸಿಕ್ಕಂತಾಗಿದೆ. ಇದರ ನಡುವೆ ಇದೀಗ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಲು ಪ್ರಯತ್ನ ಪಡುತ್ತಿದ್ದ ಪಶ್ಚಿಮ ಬಂಗಾಳದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಅಧಿಕಾರದಲ್ಲಿದ್ದ ಮಮತಾ ಬ್ಯಾನರ್ಜಿ ರವರಿಗೆ ಶಾಕ್ ನೀಡಿರುವ ಬಿಜೆಪಿ ಪಕ್ಷವು ಪಕ್ಷಿಮ ಬಂಗಾಳದಲ್ಲೂ ಕೇಸರಿ ಬಾವುಟವನ್ನು ಹರಿಸಲು ಸಕಲ ಸಿದ್ಧತೆ ನಡೆಸಿದೆ.

ಒಂದೆಡೆ ಬಲವಾದ ಪ್ರಾದೇಶಿಕ ಪಕ್ಷ ಮತ್ತೊಂದೆಡೆ ಇಡೀ ದೇಶದಲ್ಲಿ ದಿನೇ ದಿನೇ ತನ್ನ ಪ್ರಭಾವವನ್ನು ಹೆಚ್ಚಿಸುತ್ತಿರುವ ರಾಷ್ಟ್ರೀಯ ಪಕ್ಷದ ನಡುವೆ ಮುಂದಿನ ಚುನಾವಣೆ ಭಾರೀ ಕುತೂಹಲ ಮೂಡಿಸಿದೆ. ಲೋಕಸಭಾ ಚುನಾವಣೆಯ ಫಲಿತಾಂಶವನ್ನು ನೋಡಿದರೇ ಖಂಡಿತಾ ಬಿಜೆಪಿ ಪಕ್ಷ ಮಮತಾ ಬ್ಯಾನರ್ಜಿ ರವರಿಗೆ ಎಲ್ಲಾ ರೀತಿಯ ಸವಾಲುಗಳನ್ನು ನೀಡುವುದು ಖಚಿತ ಎಂಬಂತೆ ಕಾಣುತ್ತಿದೆ. ಈ ಎಲ್ಲ ರಾಜಕೀಯ ಲೆಕ್ಕಾಚಾರಗಳ ನಡುವೆ ಮಮತಾ ಬ್ಯಾನರ್ಜಿ ರವರಿಗೆ ದಿನಕ್ಕೊಂದು ಶಾಕ್ ಗಳು ಎದುರಾಗುತ್ತಿವೆ. ಟಿಎಂಸಿ ಪಕ್ಷವನ್ನು ಗೆಲ್ಲಿಸುವಂತೆ ಈಗಾಗಲೇ ಪ್ರಶಾಂತ್ ಕಿಶೋರ್ ಅವರ ಕಧ ತ’ಟ್ಟಿರುವ ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದಲ್ಲಿ ಇಲ್ಲಿಯವರೆಗೂ ಮಾಡಿರುವ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ.

ಜನರ ಬಳಿಗೆ ಪ್ರಶಾಂತ್ ಕಿಶೋರ್ ತನ್ನದೇ ಆದ ರಾಜಕೀಯ ತಂತ್ರಗಳ ಮೂಲಕ ತಲುಪಲು ಪ್ರಯತ್ನ ಪಡುತ್ತಿದ್ದರೇ ಜನರು ಮಾತ್ರ ಬಹಳ ಕಡಿಮೆ ಸಂಖ್ಯೆಯಲ್ಲಿ ಪ್ರತಿಕ್ರಿಯೆ ವ್ಯಕ್ತ ಪಡಿಸುತ್ತಿದ್ದಾರೆ ಎಂಬ ಮಾಹಿತಿ ಮಮತಾ ಬ್ಯಾನರ್ಜಿ ರವರಿಗೆ ನಿಜಕ್ಕೂ ಶಾಕ್ ನೀಡಿರುವುದು ಸುಳ್ಳಲ್ಲ. ಆದರೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸುವುದು ಕೂಡ ಸುಲಭವಿಲ್ಲ. ಯಾಕೆಂದರೆ ರೋಹಿಂಗ್ಯ ಮತ್ತು ಮುಸ್ಲಿಮರ ಪ್ರಮುಖ ಮತ ಬ್ಯಾಂಕ್ ಹೊಂದಿರುವ ಮಮತಾ ಬ್ಯಾನರ್ಜಿ ಅವರು ಇದರ ಜೊತೆ ತಮ್ಮದೇ ಆದ ಭದ್ರಕೋಟೆ ಗಳನ್ನು ಹೊಂದಿದ್ದಾರೆ. ಅಲ್ಲಿ ಜನರು ಯಾವುದೇ ರಾಜಕೀಯ, ಜಾತಿ, ಧರ್ಮ ಗಳ ಲೆಕ್ಕಾಚಾರ ಗಳಿಲ್ಲದೆ ಮಮತಾ ಬ್ಯಾನರ್ಜಿ ರವರಿಗೆ ಹಲವಾರು ವರ್ಷಗಳಿಂದ ಮತ ನೀಡುತ್ತಿದ್ದಾರೆ.

ಇಷ್ಟೆಲ್ಲಾ ಲೆಕ್ಕಾಚಾರಗಳು ನಡೆಯುತ್ತಿರುವ ಸಂದರ್ಭದಲ್ಲಿ ಇನ್ನೇನು ಕೆಲವೇ ಕೆಲವು ತಿಂಗಳುಗಳು ಇರುವಾಗ ಮುಸ್ಲಿಂ ಮತ ಬ್ಯಾಂಕುಗಳನ್ನು ತನ್ನತ್ತ ಸೆಳೆಯಬಲ್ಲ ನಾಯಕ ಓವೈಸಿ ರವರು ಮಮತಾ ಬ್ಯಾನರ್ಜಿ ರವರಿಗೆ ಶಾಕ್ ನೀಡಿದ್ದಾರೆ. ಹೌದು ಸ್ನೇಹಿತರೇ ಪಶ್ಚಿಮ ಬಂಗಾಳ ಓವೈಸಿ ರವರು ಹೆಚ್ಚಾಗಿ ತ’ಲೆಕೆ’ಡಿ’ಸಿಕೊಂಡಿರಲಿಲ್ಲ, ಅಷ್ಟೇ ಅಲ್ಲದೇ ಮಮತಾ ರವರು ಓವೈಸಿ ರವರ ಬೆಂಬಲವನ್ನು ಬಹಳ ಸುಲಭವಾಗಿ ಪಡೆದುಕೊಳ್ಳಬಹುದಾಗಿತ್ತು.

ಆದರೆ ಮಮತಾ ಬ್ಯಾನರ್ಜಿ ರವರು ಎಐಐಎಂ ಪಕ್ಷದ ಬೆಂಬಲ ಪಡೆದುಕೊಳ್ಳುವ ಬದಲು
ಎಐಮ್ಐಎಂ ಪಕ್ಷದ ನೆರಳನ್ನು ಪಕ್ಷಿಮ ಬಂಗಾಳದಲ್ಲಿ ಕಾಣದಂತೆ ಮಾಡಲು ತಯಾರಿ ನಡೆಸಿ ಪಕ್ಷದ ಹಲವಾರು ನಾಯಕರನ್ನು ಕರೆ ತರುವ ಯೋಜನೆ ರೂಪಿಸಿ ಕಳೆದು ಕೆಲವು ದಿನಗಳಿಂದ ಈಗಾಗಲೇ ಹಲವಾರು ಮುಖಂಡರನ್ನು ಮಮತಾ ಬ್ಯಾನರ್ಜಿಯವರು ಟಿಎಂಸಿ ಪಕ್ಷಕ್ಕೆ ಕರೆದುಕೊಂಡು ಹೋಗಿದ್ದಾರೆ. ಮಮತಾ ಬ್ಯಾನರ್ಜಿ ಅವರ ನಡೆಗಳನ್ನು ಕಂಡ ಅಸ್ಸಾವುದ್ದಿನ್ ಓವೈಸಿ ರವರು ಪಶ್ಚಿಮ ಬಂಗಾಳದಲ್ಲಿ ಎಐಮ್ಐಎಂ ಪಕ್ಷ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದೆ ಎಂದು ಘೋಷಣೆ ಮಾಡಿದ್ದಾರೆ.

ಟಿಎಂಸಿ ಪಕ್ಷವು ನಮ್ಮ ಪಕ್ಷದ ಪ್ರಮುಖ ಮುಖಂಡರನ್ನು ತನ್ನತ್ತ ಸೆಳೆಯುವ ಮೂಲಕ ಪಕ್ಷಾಂತರ ರಾಜಕಾರಣ ಮಾಡಲು ಪ್ರಯತ್ನ ಮಾಡುತ್ತಿದೆ ಇದಕ್ಕೆ ಮುಸ್ಲಿಂ ಸಮುದಾಯ ಉತ್ತರ ನೀಡಲೇಬೇಕು ಎಂದು ಹೇಳಿ ಇದೀಗ ವಿಧಾನಸಭಾ ಚುನಾವಣೆಯ ಸ್ಪರ್ಧೆಯನ್ನು ಖಚಿತಪಡಿಸಿದ್ದಾರೆ. ಓವೈಸಿ ರವರು ಈ ಆದೇಶ ಹೊರಡಿಸಿದ ಕೂಡಲೇ ಬಿಜೆಪಿ ಪಕ್ಷದ ಹಲವಾರು ಪ್ರಮುಖ ನಾಯಕರು ಸಂತಸ ಗೊಂಡಿರುವುದು ಸುಳ್ಳಲ್ಲ. ಯಾಕೆಂದರೆ ಇಷ್ಟು ದಿವಸ ಮಮತಾ ಬ್ಯಾನರ್ಜಿ ರವರ ಪ್ರಮುಖ ಮತ ಬ್ಯಾಂಕುಗಳಲ್ಲಿ ಮುಸ್ಲಿಂ ಸಮುದಾಯ ಹಾಗೂ ರೋಹಿಂಗ್ಯ ಸಮುದಾಯ ಒಂದಾಗಿತ್ತು. ಇದೀಗ ಎಐಮ್ಐಎಂ ಪಕ್ಷ ಸ್ವತಂತ್ರವಾಗಿ ಸ್ಪರ್ಧೆ ಮಾಡುವುದನ್ನು ಓವೈಸಿ ಖಚಿತಪಡಿಸಿದ ನಂತರ ಮುಸ್ಲಿಂ ಸಮುದಾಯದ ಮತಗಳು ಟಿಎಂಸಿ ಹಾಗೂ ಎಐಮ್ಐಎಂ ಪಕ್ಷದ ನಡುವೆ ಗಣನೀಯ ಪ್ರಮಾಣದಲ್ಲಿ ವಿಭಜನೆಯಾಗುತ್ತದೆ.

ಇದರಿಂದ ಬಿಜೆಪಿ ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಲಾಭವಾಗುತ್ತದೆ. ಕಡಿಮೆ ಮತಗಳನ್ನು ಪಡೆದುಕೊಂಡರೂ ಕೂಡ ಮತ ವಿಭಜನೆ ಯಾಗಿರುವ ಕಾರಣ ಗೆಲುವು ಕಾಣುವುದು ಸಂಪೂರ್ಣ ಸುಲಭವಲ್ಲವಾಗಿದ್ದರೂ ಕೊಂಚ ಸುಲಭವಾಗುವುದು ಸುಳ್ಳಲ್ಲ. ಓವೈಸಿ ರವರ ಈ ನಿರ್ಧಾರ ಬಿಜೆಪಿ ಪಕ್ಷಕ್ಕೆ ಮೇಲುಗೈ ತರುವ ಎಲ್ಲಾ ಸೂಚನೆ ತೋರಿಸಿದೆ. ಒಂದು ವೇಳೆ ಅದೇ ನಡೆದಲ್ಲಿ ಪಕ್ಷಿಮ ಬಂಗಾಳವು ಕೂಡ ಕೇಸರಿಮಯ ವಾದರೂ ಅಚ್ಚರಿಪಡಬೇಕಾಗಿಲ್ಲ. ಆದರೆ ಬಹಳ ಜಿ’ದ್ದಾಜಿ’ದ್ದಿನಿಂದ ಕೂಡಿರುವ ಪಶ್ಚಿಮ ಬಂಗಾಳದಲ್ಲಿ ಯಾರ ಬಾವುಟ ಹಾರಾಡಲಿದೆ ಎಂಬುದು ಮಾತ್ರ ಮಾಡುವುದು ಊಹೆಮಾಡುವುದು ನಿಜಕ್ಕೂ ಸುಲಭದ ಕೆಲಸವಲ್ಲ. ಸದ್ಯಕ್ಕಂತೂ ಬಿಜೆಪಿ ಪಕ್ಷದ ಕೈ ಮೇಲ್ ಇದ್ದಂತೆ ಕಾಣುತ್ತಿದೆಯಾದರೂ ಮುಂದೇನಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ