ಚೀನಾಗೆ ಮತ್ತೊಂದು ಶಾಕ್ ನೀಡುವ ಮೂಲಕ ಅಮೇರಿಕಾ ಹಾಗೂ ಚೀನಾಗೆ ಸ್ಪಷ್ಟ ಸಂದೇಶ ರವಾನೆ ಮಾಡಿದ ಮೋದಿ !

ಚೀನಾಗೆ ಮತ್ತೊಂದು ಶಾಕ್ ನೀಡುವ ಮೂಲಕ ಅಮೇರಿಕಾ ಹಾಗೂ ಚೀನಾಗೆ ಸ್ಪಷ್ಟ ಸಂದೇಶ ರವಾನೆ ಮಾಡಿದ ಮೋದಿ !

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಅಮೇರಿಕಾ ದೇಶದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಿಡೆನ್ ರವರ ರಾಜಕೀಯ ತತ್ವಗಳ ಆಧಾರದ ಮೇರೆಗೆ ಮೊದಲಿನಿಂದಲೂ ಮಿಶ್ರ ಪ್ರತಿಕ್ರಿಯೆಯ ಮಾತು ಕೇಳಿ ಬರುತ್ತವೆ. ಕೆಲವೊಂದು ನಿರ್ಧಾರಗಳ ಮೂಲಕ ಬಿಡೆನ್ ರವರು ಚೀನಾ ದೇಶದ ಪರವಾಗಿ ಇದ್ದಾರೆ ಎಂಬತೆ ಕೇಳಿ ಬಂದರೂ ಕೂಡ ಕೆಲವು ನಿರ್ಧಾರಗಳು ಮೂಲಕ ಭಾರತದ ಪರವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಎತ್ತಬಹುದು ಎಂಬ ಅಭಿಪ್ರಾಯಗಳು ಕೇಳಿ ಬಂದಿದ್ದವು. ಆದರೆ ಬಿಡೆನ್ ರವರು ಯಾವ ರೀತಿಯ ಹೆಜ್ಜೆಗಳನ್ನು ನೀಡಲಿದ್ದಾರೆ ಎಂಬುದು ಮಾತ್ರ ಖಚಿತವಾಗಿರಲಿಲ್ಲ.

ಇನ್ನು ಭಾರತದ ವಿಷಯಕ್ಕೆ ಬಂದರೇ ಒಂದು ಕಡೆ ಭಾರತ ದೇಶವು ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ದೇಶಗಳ ಸಮಸ್ಯೆಗಳ ಕುರಿತು ಚರ್ಚೆ ಮಾಡಿ ಪಾಕಿಸ್ತಾನ ಹಾಗೂ ಚೀನಾ ದೇಶಗಳಿಂದ ತೊಂ’ದರೆ ಅನುಭವಿಸುತ್ತಿರುವ ರಾಷ್ಟ್ರಗಳ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡುತ್ತಿದೆ. ಅದರಲ್ಲಿಯೂ ಆಫ್ಘಾನಿಸ್ತಾನ, ಬಲೂಚಿಸ್ತಾನ ದೇಶಗಳ ಪರವಾಗಿ ಭಾರತ ದೇಶದ ಬೆಂಬಲಕ್ಕೆ ನಿಂತು ಅ’ಭ’ಯ ನೀಡುತ್ತಿದೆ. ಡೊನಾಲ್ಡ್ ಟ್ರಂಪ್ ರವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಭಾರತದ ಎಲ್ಲಾ ನಡೆಗಳಿಗೆ ಬೆಂಬಲ ದೊರೆಯುತ್ತಿತ್ತು. ಆದರೆ ಬಿಡೆನ್ ರವರು ಭಾರತದ ಈ ನಡೆಗಳಿಗೆ ಬೆಂಬಲ ನೀಡುತ್ತಾರೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು.

ಅಷ್ಟೇ ಅಲ್ಲದೆ ಚೀನಾ ದೇಶಕ್ಕೆ ಗಡಿಯಲ್ಲಾಗಲಿ ಅಥವಾ ಅಂತರರಾಷ್ಟ್ರೀಯ ಮಟ್ಟದ ಸಭೆಗಳಲ್ಲಾಗಲಿ ಭಾರತ ದೇಶ ಕಿಂಚಿತ್ತು ಹಿಂದೆ ತಿರುಗಿ ನೋಡುವ ಕೆಲಸ ಮಾಡಲಿಲ್ಲ. ಹೀಗಿರುವಾಗ ವಿಶ್ವದ ಹಲವಾರು ರಾಷ್ಟ್ರಗಳು ಚೀನಾ ದೇಶಕ್ಕೆ ಉತ್ತರ ಕೊಡುವಲ್ಲಿ ಭಾರತ ಸಮರ್ಥವಾಗಿದೆ ಎಂದು ಭಾರತ ದೇಶದ ಪರ ಧ್ವನಿಯೆತ್ತಿದ್ದವು. ಈ ನಡೆಗಳು ಕೂಡ ಅಮೆರಿಕ ದೇಶದಿಂದ ಸಂಪೂರ್ಣ ಬೆಂಬಲ ದೊರಕಿತ್ತು, ಇದನ್ನು ಕಂಡ ಚೀನಾ ದೇಶದ ಪರ ಮಿತ್ರ ರಾಷ್ಟ್ರಗಳು ಹಾಗೂ ಭಾರತ ದೇಶದಲ್ಲಿನ ವಿಪಕ್ಷಗಳು ಮೋದಿರವರು ಡೊನಾಲ್ಡ್ ಟ್ರಂಪ್ ರವರ ಬೆಂಬಲ ಇದೆ ಎಂದುಕೊಂಡು ಈ ರೀತಿಯ ಕೆಲಸಗಳನ್ನು ಮಾಡುತ್ತಿದ್ದಾರೆ. ಒಂದು ವೇಳೆ ಟ್ರಂಪ್ ಸೋತರೆ ಏನು ಮಾಡುತ್ತಾರೆ ಎಂದು ಪ್ರಶ್ನೆ ಮಾಡಿದರು. ಸ್ವತಹ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಬಲಗೈ ಬಂಟ ಸಂಜಯ್ ರಾವತ್ ರವರು ಕೂಡ ಈ ಪ್ರಶ್ನೆ ಕೇಳಿದ್ದರು.

ಇದನ್ನು ಕಂಡ ಜನ ಭಾರತ ದೇಶ ಅಮೇರಿಕಾ ದೇಶದ ಬೆಂಬಲವಿದೆ ಎಂದು ಚೀನಾ ದೇಶದ ದಿ’ಟ್ಟವಾಗಿ ನಿಂತಿದೆ ಹಾಗೂ ಅಂತರಾಷ್ಟ್ರೀಯ ಸಭೆಗಳಲ್ಲಿ ಚೀನಾ ದೇಶದ ವಿರುದ್ಧ ಧ್ವನಿ ಎತ್ತಿದೆ ಎಂಬ ಮಾತುಗಳನ್ನು ಆಡಿದ್ದರು. ಇದನ್ನೇ ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಬಿಡೆನ್ ಭಾರತ ಹಾಗೂ ಚೀನಾ ದೇಶಗಳ ನಡುವೆ ನಡೆಯುತ್ತಿರುವ ವಿದ್ಯಮಾನಗಳನ್ನು ಶಾಂತಿ ಒಪ್ಪಂದದ ಮೂಲಕ ಅಂತ್ಯಗೊಳಿಸಿದಲ್ಲಿ ಬಿಡೆನ್ ರವರಿಗೆ ರಾಜಕೀಯದಲ್ಲಿ ಅತಿ ದೊಡ್ಡ ಗೆಲುವು ಎಂದೇ ಹೇಳಲಾಗುತ್ತಿತ್ತು, ವಿಶ್ವದಲ್ಲಿ ಶಾಂತಿ ಸ್ಥಾಪಿಸಲು ತಾನು ಸಿದ್ಧ ಎಂಬಂತೆ ಬಿಂಬಿಸಿ ಕೊಳ್ಳಲು ಬಿಡೆನ್ ರವರು ಸಂಪೂರ್ಣ ತಯಾರಿ ನಡೆಸಿದ್ದರು. ಈ ರೀತಿ ಶಾಂತಿ ಒಪ್ಪಂದ ಒಳ್ಳೆಯದಾದರೂ ಕೂಡ ಚೀನಾ ದೇಶವನ್ನು ಯಾವುದೇ ಶಾಂತಿ ಒಪ್ಪಂದದಲ್ಲಿ ನಂಬಲು ಭಾರತ ತಯಾರಿಲ್ಲ, ಅಷ್ಟೇ ಅಲ್ಲದೆ ಒಂದು ವೇಳೆ ಎರಡು ದೇಶಗಳ ಶಾಂತಿ ಮಾತುಕತೆಗೆ ಮತ್ತೊಂದು ದೇಶ ಮಧ್ಯಪ್ರವೇಶ ಮಾಡಿದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತಿರುವ ವರ್ಚಸ್ಸಿಗೆ ಬೀಳಬಹುದಾದ ಸಾಧ್ಯತೆ ಹೆಚ್ಚಾಗಿತ್ತು.

ಈ ಎಲ್ಲ ಲೆಕ್ಕಾಚಾರಗಳ ನಡುವೆ ಭಾರತ ದೇಶ ಚೀನಾ ದೇಶಕ್ಕೆ ಅಮೆರಿಕ ದೇಶದ ಬೆಂಬಲವಿದೆ ಎಂದುಕೊಂಡು ಉತ್ತರ ನೀಡುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿರುವ ಸಂದರ್ಭದಲ್ಲಿ ನರೇಂದ್ರ ಮೋದಿರವರು ಚೀನಾ ದೇಶಕ್ಕೆ ಡಿಜಿಟಲ್ ಸ್ಟ್ರೈಕ್ ಮೂಲಕ ಉತ್ತರ ನೀಡಿದ್ದಾರೆ, ಭಾರತ ತೆಗೆದುಕೊಳ್ಳುತ್ತಿರುವ ಈ ಕ್ರಮಗಳು ವಿಶ್ವ ವ್ಯಾಪಾರ ಒಪ್ಪಂದಗಳನ್ನು ಅನು ಸರಿಸುತ್ತಿಲ್ಲ ಎಂದು ಚೀನಾ ಬಾಯಿ ಬ’ಡಿ’ದುಕೊಳ್ಳುತ್ತಿದ್ದರೂ ಕೂಡ ಭಾರತ ದೇಶ ಕ್ಯಾರೆ ಎನ್ನುತ್ತಿಲ್ಲ, ತನ್ನ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರೆಸಿದೆ. ಇನ್ನು ಈ ಸಮಯದಲ್ಲಿ ಜೀವನ ಬಿಡೆನ್ ಯಾರ ಪರ ನಿಲ್ಲುತ್ತಾರೆ ಎಂಬ ಊಹೆ ಕೂಡ ಯಾರಿಗೂ ಇಲ್ಲವಾದ ಕಾರಣ, ಭಾರತ ದೇಶ ಅಮೇರಿಕಾ ದೇಶದ ಬೆಂಬಲ ಇಲ್ಲದಿದ್ದರೂ ಕೂಡ ಚೀನಾ ದೇಶಕ್ಕೆ ತಕ್ಕ ಉತ್ತರ ನೀಡಲು ಬದ್ಧವಾಗಿದೆ ಎಂಬುದನ್ನು ಮೋದಿ ಸಾರಿ ಹೇಳಿದ್ದಾರೆ.

ಬಿಡೆನ್ರವರು ಭಾರತ ಹಾಗೂ ಚೀನಾ ದೇಶಗಳ ನಡುವೆ ಶಾಂತಿ ಒಪ್ಪಂದ ಮಾಡುವ ಮೂಲಕ ಹೀರೋ ಆಗಬೇಕು ಎಂದು ಆಲೋಚನೆ ನಡೆಸುತ್ತಿರುವ ಸಂದರ್ಭದಲ್ಲಿ ಬಿಡೆನ್ ಅವರಿಗೂ ಕೂಡ ಭಾರತ ತನ್ನನ್ನು ಅನುಸರಿಸದೆ ಚೀನಾಗೆ ಉತ್ತರ ನೀಡಲು ಸ’ಶ’ಕ್ತವಾಗಿದೆ ಎಂಬ ಸಂದೇಶ ಸಾರಿದಂತಾಗಿದೆ. ಈ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ನಂಬಿಕೊಂಡು ಚೀನಾ ದೇಶದ ವಿ’ರುದ್ಧ ಗುಂಪು ಕಟ್ಟಿಕೊಂಡಿರುವ ಜಪಾನ್ ಹಾಗೂ ಆಸ್ಟ್ರೇಲಿಯಾ ದೇಶಗಳು ನಿಜಕ್ಕೂ ಸಂತಸ ವ್ಯಕ್ತಪಡಿಸಿದ್ದು, ಅಮೇರಿಕಾ ದೇಶ ರಾಜಕೀಯ ಬದಲಾವಣೆಯಾದರೂ ಕೂಡ ಭಾರತ ದೇಶ ತನ್ನ ನಿಲುವಿಗೆ ಬದ್ಧವಾಗಿದೆ ಎಂಬ ಸಂದೇಶಯಾಗಿದೆ ಎಂದಿದ್ದಾರೆ. ಈ ಮೂಲಕ ಚೀನಾ ದೇಶ ಊಹೆಯು ಮಾಡದಂತೆ ನಿರ್ಧಾರ ತೆಗೆದುಕೊಂಡಿರುವ ಪ್ರಧಾನಿ ಮೋದಿ ರವರ ಕಾರ್ಯಕ್ಕೆ ಎಲ್ಲೆಡೆ ಸಾಕಷ್ಟು ಶ್ಲಾಘನೆಗಳು ವ್ಯಕ್ತವಾಗಿವೆ.