ಅಡುಗೆ ಮಾಡೋಕೆ ಟೈಮ್ ಇಲ್ವಾ.? ಇಲ್ಲಿದೆ ನೋಡಿ ದಿಢೀರ್ ಮಜ್ಜಿಗೆ ಸಾರು ಮಾಡುವ ವಿಧಾನ..!

ಅಡುಗೆ ಮಾಡೋಕೆ ಟೈಮ್ ಇಲ್ವಾ.? ಇಲ್ಲಿದೆ ನೋಡಿ ದಿಢೀರ್ ಮಜ್ಜಿಗೆ ಸಾರು ಮಾಡುವ ವಿಧಾನ..!

ನಮಸ್ಕಾರ ಸ್ನೇಹಿತರೇ , ನಾವಿಂದು ತುಂಬಾ ಸಿಂಪಲ್ ಹಾಗೂ ಕಡಿಮೆ ಸಮಯದಲ್ಲಿ ಮಾಡಬಹುದಾದಂತಹ ಒಂದು ಅಡುಗೆಯನ್ನು ತಿಳಿಸಿ ಕೊಡಲಿದ್ದೇವೆ, ಸಾಮಾನ್ಯವಾಗಿ ಪ್ರತಿನಿತ್ಯ ಮಾಡುವ ಸಾಂಬಾರುಗಳು ಸ್ವತಹ ನಮಗೆ ಬೋರಾಗುತ್ತವೆ ಅಲ್ಲವೇ. ಅಂತಹ ಸಮಯದಲ್ಲಿ ನೀವಿದನ್ನು ಖಂಡಿತ ಟ್ರೈ ಮಾಡಬಹುದು, ಇದು ಮಜ್ಜಿಗೆ ಸಾರು, ಕೇವಲ ಕೆಲವೇ ನಿಮಿಷಗಳಲ್ಲಿ ತಯಾರಾಗುತ್ತದೆ. ಅಷ್ಟೇ ಅಲ್ಲದೆ ಬ್ಯಾಚುಲರ್ಸ್ ಗಳು ಸಹ ಇದನ್ನು ಈಸಿಯಾಗಿ ಮಾಡಿಕೊಳ್ಳಬಹುದು ಬನ್ನಿ ಇದರ ರೆಸಿಪಿ ತಿಳಿಯೋಣ.

ಈ ಮಜ್ಜಿಗೆ ಸಾರಿಗೆ ಬೇಕಾಗಿರುವ ಪದಾರ್ಥಗಳು:- ಒಂದು ಈರುಳ್ಳಿ ಮತ್ತು ಸ್ವಲ್ಪ ಶುಂಠಿ, ಕೊತ್ತಂಬರಿ ಮತ್ತು ಕರಿಬೇವು, ಖಾರಕ್ಕೆ ಒಂದೆರಡು ಹಸಿಮೆಣಸಿನಕಾಯಿ, ಮತ್ತು ಐದಾರು ಬೆಳ್ಳುಳ್ಳಿ. ನಾವು ಇದನ್ನ ನಾಲ್ಕು ಜನರಿಗೆ ಆಗುವ ಸಾರಿನ ಪದಾರ್ಥವನ್ನು ಹೇಳುತ್ತಿದ್ದೇವೆ. ಅಳತೆಗೆ ತಕ್ಕಂತೆ ನೀವಿದನ್ನು ಹೆಚ್ಚಿಸಿಕೊಳ್ಳಬಹುದು. ಇನ್ನೂ ಒಂದು ಕಪ್ ಮೊಸರನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚದಷ್ಟು ಉಪ್ಪು ಮತ್ತು ಅರ್ಧ ಕಪ್ ನೀರನ್ನು ಮಿಕ್ಸ್ ಮಾಡಿ. ನಂತರ ಇದನ್ನು ಮಜ್ಜಿಗೆ ರೀತಿ ಮಾಡಿಕೊಳ್ಳಿ, ಸ್ವಲ್ಪ ಉಳಿದರೂ ಸಹ ನಡೆಯುತ್ತದೆ..

ಮತ್ತೊಂದು ಕಡೆ ಒಂದು ಪಾತ್ರೆಯನ್ನು ತೆಗೆದುಕೊಂಡು, ಸ್ಟವ್ ಮೇಲೆ ಇಡೀ, ಅದಕ್ಕೆ ಎರಡು ಚಮಚದಷ್ಟು ಎಣ್ಣೆ, ಅರ್ಧ ಚಮಚದಷ್ಟು ಸಾಸಿವೆ, ಮತ್ತು ಉದ್ದಿನಬೇಳೆಯನ್ನು ಹಾಕಿಕೊಳ್ಳಬೇಕು, ಹಾಗೆ ಒಂದು ಚಮಚದಷ್ಟು ಜೀರಿಗೆ ಮತ್ತು ಕಡಲೆಬೇಳೆಯನ್ನು ಸಹ ಹಾಕಿ ಚೆನ್ನಾಗಿ ಒಗ್ಗರಣೆ ಮಾಡಿಕೊಳ್ಳಿ. ಅದಕ್ಕೆ ಒಂದೆರಡು ಒಣಮೆಣಸಿನಕಾಯಿ ಮತ್ತು ತೆಗೆದಿಟ್ಟ ಬೆಳ್ಳುಳ್ಳಿಯನ್ನು ಹಾಕಿಕೊಳ್ಳಿ.

ನಂತರ ಅರ್ಧ ಚಿಟಿಕೆಯಷ್ಟು ಇಂಗು ಮತ್ತು ತೆಗೆದಿಟ್ಟ ಕರಿಬೇವು, ಹಸಿಮೆಣಸಿನಕಾಯನ್ನು ಒಗ್ಗರಣೆಗೆ ಸೇರಿಸಿ, ಸ್ವಲ್ಪ ಖಾರ ಜಾಸ್ತಿ ಬೇಕು ಅನ್ನುವುದಾದರೇ ನೀವು ಮತ್ತಷ್ಟು ಹಸಿಮೆಣಸಿಕಾಯನ್ನು ಹಾಕಬಹುದು, ನಂತರ ಕ’ಟ್ ಮಾಡಿ ಇಟ್ಟಿದ್ದ ಈರುಳ್ಳಿಯನ್ನು ಅದಕ್ಕೆ ಸೇರಿಸಿ. ಈರುಳ್ಳಿ ಎಣ್ಣೆಯಲ್ಲಿ ಚೆನ್ನಾಗಿ ಬೆಂದ ನಂತರ ಅದಕ್ಕೆ ಒಂದು ಚಿಟಿಕೆಯಷ್ಟು ಅರಿಶಿನವನ್ನು ಹಾಕಿ, ಹಾಗೆ ಇದಕ್ಕೆ ಸ್ವಲ್ಪ ಶುಂಠಿ ಪೇಸ್ಟ್ ಸೇರಿಸಿ ಹಾಗೂ ಒಳ್ಳೆ ವಾಸನೆ ಬರಲು ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಕೂಡ ಸೇರಿಸಿ,, ಚೆನ್ನಾಗಿ ಬೆಂದ ನಂತರ ಅದು ತಣ್ಣಗಾಗಲು ಬಿಡಬೇಕು.

ಇದು ಪೂರ್ತಿಯಾಗಿ ತಣ್ಣಗಾದ ಬಳಿಕ, ಮಜ್ಜಿಗೆಯನ್ನು ಸೇರಿಸಿಕೊಳ್ಳಿ ನಿಮಗೆ ಉಳಿ ಹೆಚ್ಚಾಯಿತು ಅನಿಸಿದರೇ ಸ್ವಲ್ಪ ನೀರನ್ನು ಸೇರಿಸಿಕೊಳ್ಳಿ, ಇದಾದ ನಂತರ ರುಚಿ ರುಚಿಯಾದ ಮಜ್ಜಿಗೆ ಸಾರು ಸಿದ್ದವಾಗುತ್ತದೆ. ಬಿಸಿ ಬಿಸಿ ಅನ್ನದ ಜೊತೆ ಹಾಗೂ ರಾಗಿಮುದ್ದೆ ಜೊತೆ ತಿನ್ನಲು ತುಂಬಾ ಚೆನ್ನಾಗಿರುತ್ತದೆ. ಸುಲಭವಾಗಿರುವ ಅಡುಗೆ ಹಾಗೂ ಆರೋಗ್ಯಕ್ಕೂ ಸಹ ಹಿತವಾಗಿರುವಂತಹ ಅಡುಗೆ ಇದು. ಬಾಯಿರುಚಿಯ ಹಾ’ಳಾದಾಗ ಸಹ ನೀವು ಇದನ್ನು ಟ್ರೈ ಮಾಡಿ ನೋಡಬಹುದು. ಹೆಚ್ಚಿನ ಮಾಹಿತಿಗಾಗಿ ಮೇಲೆ ಲಗತ್ತಿಸಲಾಗಿರುವ ವಿ’ಡಿಯೋ ನೋಡಿ.