ಕರುಂ ಕರುಂ ಎಂದು ಶಬ್ದ ಬರುವ ಹಾಗೆ 100% ಮಾರ್ಕೆಟ್ ಶೈಲಿ ಶೇಂಗಾ ಚಿಕ್ಕಿ ಮಾಡುವ ವಿಧಾನ.! ಟ್ರೈ ಮಾಡಿ ತುಂಬಾನೇ ಟೇಸ್ಟ್ ಇರುತ್ತೆ !!

ಕರುಂ ಕರುಂ ಎಂದು ಶಬ್ದ ಬರುವ ಹಾಗೆ 100% ಮಾರ್ಕೆಟ್ ಶೈಲಿ ಶೇಂಗಾ ಚಿಕ್ಕಿ ಮಾಡುವ ವಿಧಾನ.! ಟ್ರೈ ಮಾಡಿ ತುಂಬಾನೇ ಟೇಸ್ಟ್ ಇರುತ್ತೆ !!

ನಮಸ್ಕಾರ ಸ್ನೇಹಿತರೇ, ನಾವಿಂದು ಮಾರ್ಕೆಟ್ ನಲ್ಲಿ ಸಿಗುವಂತಹ ಶೇಂಗಾ ಚಿಕ್ಕಿಯನ್ನು ಹೇಗೆ ಮಾಡೋದು ಅಂತ ತಿಳಿಯೋಣ, ನಾವು ಇಲ್ಲಿ ಹೇಳುವಂತಹ ಎಲ್ಲಾ ಟಿಪ್ಸ್ ಗಳನ್ನು ನೀವು ಫಾಲೋ ಮಾಡಿದರೆ, ಕರುಂ ಕರುಂ ಚಿಕ್ಕಿಯನ್ನು ಸುಲಭವಾಗಿ ಮನೆಯಲ್ಲೇ ಮಾಡಿಕೊಳ್ಳಬಹುದು. ಮೊದಲನೇದಾಗಿ ಒಂದು ಕಪ್ ನಷ್ಟು ಶೇಂಗಾ ಬೀಜವನ್ನು ತೆಗೆದುಕೊಳ್ಳಿ ಅದನ್ನು ಒಂದು ಕಡಾಯಿಗೆ ಹಾಕೊಂಡು ಹದವಾಗಿ ಚೆನ್ನಾಗಿ ಉ’ರಿದುಕೊಳ್ಳಬೇಕು, ಅದರ ಹಸಿ ವಾಸನೆ ಹೋಗುವವರೆಗೆ ಹದವಾಗಿ ಅದನ್ನು ಉ’ರಿಯಬೇಕು, ಹೀಗೆ ಮಾಡಿಟ್ಟ ಶೇಂಗಾ ತಣ್ಣಗಾದ ಬಳಿಕ ಅದರ ಸಿಪ್ಪೆಯನ್ನು ಕೈಯ ಮೂಲಕ ತೆಗೆಯಬೇಕು.

ನಂತರ ಒಂದು ಕಪ್ ಶೇಂಗಾ ಬೀಜವನ್ನು ತಗೊಂಡರೆ ಮುಕ್ಕಾಲು ಕಪ್ ನಷ್ಟು ಬೆಲ್ಲವನ್ನು ತೆಗೆದುಕೊಳ್ಳಬೇಕು, ತೆಗೆದಿಟ್ಟ ಬೆಲ್ಲವನ್ನು ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ನೀರನ್ನು ಸೇರಿಸಿ ಪೂರ್ತಿಯಾಗಿ ಪಾಕದ ರೀತಿ ಮಾಡಿಕೊಳ್ಳಬೇಕು. ಬೆಲ್ಲ ಚೆನ್ನಾಗಿ ಕರಗಿದ ನಂತರ ಯಾವ ಪಾತ್ರೆಯಲ್ಲಿ ನೀವು ಚಿಕ್ಕಿಯನ್ನು ಮಾಡಬೇಕು ಅಂದುಕೊಂಡಿದ್ದೀರಾ ಅದಕ್ಕೆ ಬೆಲ್ಲದ ಪಾಕವನ್ನು ಹಾಕಿ, ನಂತರ ಚೆನ್ನಾಗಿ ಗಟ್ಟಿಯಾಗುವವರೆಗೂ ಅದನ್ನು ಕುದಿಸಿಕೊಳ್ಳಿ. ಪಾಕ ಸ್ವಲ್ಪ ಗಟ್ಟಿಯಾದ ಬಳಿಕ ಒಂದು ಟೀ ಸ್ಪೂನ್ ನಷ್ಟು ತುಪ್ಪವನ್ನು ಹಾಕಿಕೊಳ್ಳಿ.

ಪಾಕವನ್ನು ಮಧ್ಯೆಮಧ್ಯೆ ಚೆಕ್ ಮಾಡುತ್ತಿರಬೇಕು ತೀರಾ ಗಟ್ಟಿಯಾಗಿರಬಾರದು, ಪಾಕ ಅಂದುಕೊಂಡಂತೆ ಗಟ್ಟಿಯಾದ ಬಳಿಕ ಒಂದು ನಿಮಿಷವೂ ವೇಸ್ಟ್ ಮಾಡದೆ, ಅದಕ್ಕೆ ಶೇಂಗಾ ಬೀಜವನ್ನು ಸೇರಿಸಿಕೊಳ್ಳಬೇಕು, ನಂತರ ಚೆನ್ನಾಗಿ ಮಿಕ್ಸ್ ಮಾಡಬೇಕು ಪಾಕ ಶೇಂಗಾ ಬೀಜದ ಜೊತೆ ಚೆನ್ನಾಗಿ ಹೊಂದಿಕೊಳ್ಳುವರೆಗೂ ಮಿಕ್ಸ್ ಮಾಡಿ. ಪಾಕ ಮತ್ತು ಶೇಂಗಾ ಬೀಜ ಅಚ್ಚುಕಟ್ಟಾಗಿ ಹೊಂದಿಕೊಳ್ಳುವರೆಗೂ ಸ್ಟೋವ್ ಆಫ್ ಮಾಡಬೇಡಿ. ನಂತರ ತುಪ್ಪ ಹಚ್ಚಿಟ್ಟ ಅಲುಮಿನಿಯಂ ಪ್ಲೇಟ್ ಗೆ ಹಾಕಿಕೊಳ್ಳಬೇಕು.

ನಂತರ ಲಟ್ಟಣಿಗೆಯ ಸಹಾಯದಿಂದ ಮಿತವಾಗಿ ಅದನ್ನು ಸ್ವಲ್ಪ ತೆಳುವಾಗಿ ಲಟ್ಟಿಸಿಕೊಳ್ಳಿ, ಹಾಗೆ ಸ್ವಲ್ಪ ಅದು ಬಿಸಿಯಾಗಿರುವಾಗಲೆ ಅದನ್ನು ಕಟ್ ಮಾಡಿದರೆ ನಂತರ ಸೇವಿಸುವುದಕ್ಕೆ ತುಂಬಾನೇ ಸುಲಭವಾಗಿರುತ್ತದೆ. ನಂತರ ಅದು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ಈ ರೀತಿ ಮಾಡಿದರೆ ನೀವು ಹೊರಗಡೆ ತಂದು ತಿನ್ನುವುದಕ್ಕಿಂತ ರುಚಿಯಾಗಿರುವ ಶೇಂಗಾ ಚಿಕ್ಕಿ ರೆಡಿಯಾಗುತ್ತದೆ. ಮನೆಯಲ್ಲಿ ನೀವು ಮಾಡುವುದರಿಂದ ಮಕ್ಕಳಿಗೂ ಸಹ ತುಂಬಾನೆ ಒಳ್ಳೆಯದು. ರೆಸಿಪಿಯನ್ನು ಖಂಡಿತ ಒಮ್ಮೆ ಮನೆಯಲ್ಲಿ ಟ್ರೈ ಮಾಡಿ ನೋಡಿ.