ಒಳ್ಳೆಯವರು ಕಷ್ಟದಲ್ಲಿದ್ದಾಗ ದೇವರು ಯಾಕೆ ಸಹಾಯ ಮಾಡುವುದಿಲ್ಲ ಎಂದು ನಿಮಗೆ ಅನಿಸಿದ್ದರೇ ಇಲ್ಲಿದೆ ಉತ್ತರ

ಒಳ್ಳೆಯವರು ಕಷ್ಟದಲ್ಲಿದ್ದಾಗ ದೇವರು ಯಾಕೆ ಸಹಾಯ ಮಾಡುವುದಿಲ್ಲ ಎಂದು ನಿಮಗೆ ಅನಿಸಿದ್ದರೇ ಇಲ್ಲಿದೆ ಉತ್ತರ

ನಮಸ್ಕಾರ ಸ್ನೇಹಿತರೇ, ಕಲಿಯುಗದಲ್ಲಿ ಒಳ್ಳೆಯವರಿಗೆ ಕಾಲವಲ್ಲ, ನಾವು ಮಾತ್ರ ಪಾಪ-ಪುಣ್ಯದ ಲೆಕ್ಕಚಾರ ಹಾಕುತ್ತೇವೆ ಆದರೆ ಕೆಲವು ಜನರು ಪಾಪಗಳನ್ನು ಮಾಡುತ್ತ ಶ್ರೀಮಂತಿಕೆಯ ಕೋಟೆಯನ್ನು ಕಟ್ಟಿಕೊಂಡಿದ್ದಾರೆ. ನಾವು ಎಷ್ಟು ಒಳ್ಳೆಯವರು ಆದರೇನು ನಮ್ಮ ಸಹಾಯಕ ಯಾರು ಬರುವುದಿಲ್ಲ, ನಾವು ಪಾಪ-ಪುಣ್ಯದ ಲೆಕ್ಕಾಚಾರ ಹಾಕಿಕೊಂಡು ಹೀಗೆ ಜೀವನ ಮಾಡುತ್ತಿದ್ದೇವೆ. ಆದರೆ ಪಾಪ ಹಾಗೂ ಪುಣ್ಯವನ್ನು ಮರೆತಿರುವ ಜನರು ನಮಗಿಂತ ನೂರುಪಟ್ಟು ಮುಂದೆ ಹೋಗಿದ್ದಾರೆ ಎಂಬ ಮಾತುಗಳು ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿವೆ. ಬಹುತೇಕ ಮಧ್ಯಮ ವರ್ಗದ ಜನರು ಈ ಮಾತನ್ನು ತಮಗೆ ಕಷ್ಟ ಬಂದಾಗಲೆಲ್ಲ ಈ ಮಾತುಗಳನ್ನು ನೆನಪಿಸಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ನಾನು ಯಾರಿಗೂ ಕೇ’ಡು ಬಯಸಿಲ್ಲ ಎಲ್ಲಾ ಒಳ್ಳೆಯದನ್ನೇ ಮಾಡಿದ್ದೇನೆ. ಆದರೂ ಕೂಡ ನಾನು ಕಷ್ಟದಲ್ಲಿ ಇರುವಾಗ ನನ್ನ ಸಹಾಯಕ್ಕೆ ದೇವರು ಬಂದಿಲ್ಲ ಎಂಬ ಪ್ರಶ್ನೆ ಮೂಡಿದ್ದರೇ ಬನ್ನಿ ಒಂದು ಸನ್ನಿವೇಶದ ಮೂಲಕ ನಿಮಗೆ ಉತ್ತರ ನೀಡುತ್ತೇವೆ.

ಸ್ನೇಹಿತರೇ ಈ ಮೇಲಿನ ಪ್ರಶ್ನೆಗೆ ಬೆಸೆದುಕೊಂಡಿರುವ ಒಂದು ಕಥೆಯ ಬಗ್ಗೆ ಹೇಳುವುದಾದರೇ, ಒಂದು ಊರಿನಲ್ಲಿ ಒಬ್ಬ ಆಗರ್ಭ ಶ್ರೀಮಂತನಿದ್ದ. ಆತನ ಬಳಿ ಸಾಕಷ್ಟು ಹಣವಿತ್ತು. ಉತ್ತಮ ಕುಟುಂಬ ಅವನದಾಗಿತ್ತು, ಆ ಶ್ರೀಮಂತನಿಗೆ ಒಂದು ಗಂಡು ಮಗು ಜನಿಸುತ್ತದೆ. ಆದರೆ ವಿಧಿಯಾಟ ಮಗು ಜನಿಸಿದ ಕೆಲವೇ ಕೆಲವು ನಿಮಿಷಗಳಲ್ಲಿ ತಾಯಿ ಇಹಲೋಕ ತ್ಯಜಿಸುತ್ತಾರೆ. ತಾಯಿಯಿಲ್ಲದ ಮಗು ಎಂದು ಆ ಶ್ರೀಮಂತ, ಮಗುವನ್ನು ಬಹಳ ಪ್ರೀತಿ ಹಾಗೂ ಕಾಳಜಿಯಿಂದ ಬೆಳೆಸಿ ದೊಡ್ಡವರನ್ನಾಗಿ ಮಾಡುತ್ತಾನೆ. ಆತನು ತನ್ನಲ್ಲಿ ಸಾಕಷ್ಟು ಹಣವಿದೆ ಎಂದು ಯಾವುದೇ ಕೆಲಸವನ್ನಾಗಲಿ ಮಾಡುತ್ತಿರಲಿಲ್ಲ, ತಂದೆ ದುಡಿದು ಇಟ್ಟಿದ್ದ ಹಣದಿಂದ ಐಷಾರಾಮಿ ಜೀವನ ನಡೆಸುತ್ತಿದ್ದನು. ಆದರೆ ಮತ್ತೊಮ್ಮೆ ವಿಧಿ ಅವನ ಜೀವನದಲ್ಲಿ ಆಟವಾಡಿತು, ಇನ್ನೇನು ಮಗು ಬೆಳೆದು ದೊಡ್ಡವನಾದ ಎನ್ನುವಷ್ಟರಲ್ಲಿ ತಂದೆ ಕೂಡ ಇಹಲೋಕ ತ್ಯಜಿಸುತ್ತಾರೆ.

ಬೆಳೆಯುತ್ತಿರುವ ಹುಡುಗ ಮನೆಯಲ್ಲಿ ಒಬ್ಬನೇ ಇದ್ದಾನೆ ಎಂದು ಆತನ ಸಂಬಂಧಿಕರು ಆತನ ಮನೆಯಲ್ಲಿಯೇ ಇದ್ದು ಈತನಿಗೆ ಸಾಂತ್ವನ ಹೇಳುವ ಕೆಲಸ ಮಾಡುತ್ತಾರೆ. ಆದರೆ ಕೆಲವೇ ಕೆಲವು ದಿನಗಳಲ್ಲಿ ಸಾಂತ್ವನ ಹೇಳುವ ಸಂದರ್ಭದಲ್ಲಿ ಆತನನ್ನು ಮರಳು ಮಾಡಿ ತಂದೆಯ ಸಂಪೂರ್ಣ ಆಸ್ತಿಯನ್ನು ತಮ್ಮ ಹೆಸರುಗಳಿಗೆ ಬರೆಸಿ ಕೊಳ್ಳುತ್ತಾರೆ. ಇಷ್ಟಕ್ಕೆ ಸುಮ್ಮನಾಗದ ಸಂಬಂಧಿಕರು ಈತನನ್ನು ಮನೆಯಿಂದ ಹೊರ ಹಾಕುತ್ತಾರೆ. ಏನು ಮಾಡಬೇಕು ಎಂಬುದನ್ನು ತಿಳಿಯದೆ ಕೈಯಲ್ಲಿ ದುಡ್ಡು ಇಲ್ಲದೆ ಬೀದಿ ಬೀದಿ ಅಲೆಯುತ್ತಿರುವಾಗ ಹಸಿವು ಏನು ಎಂದು ತಿಳಿಯದ ಆತನಿಗೆ ಹಸಿವಾದಾಗ ಬೇರೆ ವಿಧಿ ಇಲ್ಲದೆ ಎಲ್ಲರ ಬಳಿ ಆಹಾರ ನೀಡುವಂತೆ ಬೇಡುತ್ತಾನೆ. ಆದರೆ ಯಾರು ಆಹಾರ ನೀಡದ ಕಾರಣ ಒಂದು ಹಣ್ಣಿನ ಅಂಗಡಿಯಲ್ಲಿ ಕ’ಳ್ಳತನ ಮಾಡಲು ಹೋಗಿ ಸಿಕ್ಕಿ ಬೀಳುತ್ತಾನೆ. ಮಾಲೀಕರು ಹಿಡಿದುಕೊಳ್ಳಲು ಬಂದಾಗ ತಪ್ಪಿಸಿಕೊಂಡು ಕಾಡಿನ ಒಳಗಡೆ ಹೋಗಿಬಿಡುತ್ತಾನೆ.

ಹೀಗೆ ಕಾಡಿನ ಒಳಗಡೆ ಹೋದ ಬಳಿಕ ಆತನಿಗೆ ತಾನು ಒಂದು ಮೃಗಗಳ ಲೋಕಕ್ಕೆ ಬಂದಿದ್ದೇನೆ ಎಂಬುದು ಅರ್ಥವಾಗಲು ಹೆಚ್ಚು ಸಮಯ ಕೆಲವೇ ಕೆಲವು ಅಂತರದಲ್ಲಿ ಹುಲಿಯ ಶಬ್ದ ಕೇಳುತ್ತಿರುತ್ತದೆ, ಅದೇ ಸಂದರ್ಭದಲ್ಲಿ ಮೃಗಗಳ ಕಾಡಿನಲ್ಲಿ ಒಂದು ನಾಯಿ ಕುಂಟುತ್ತಾ ಕುಂಟುತ್ತಾ ಬರುತ್ತಿರುತ್ತದೆ. ಇದನ್ನು ಕಂಡ ಬಾಲಕ ಆಶ್ಚರ್ಯ ಚಕಿತನಾಗಿ ನಾಯಿಗೆ ಓಡಲು ಕೂಡ ಸಾಧ್ಯವಾಗುವುದಿಲ್ಲ, ಆದರೂ ಕೂಡ ಹೇಗೆ ಈ ಕಾಡಿನಲ್ಲಿ ಬದುಕಿದೆ ಎಂದು ಯೋಚಿಸುತ್ತಿರುತ್ತಾನೆ. ಕೂಡಲೇ ಹುಲಿ ಗರ್ಜನೆ ಮಾಡುತ್ತಾ ಇತನಿರುವ ಕಡೆಗೆ ಬಂದಾಗ ಹುಲಿಯಿಂದ ರಕ್ಷಿಸಿಕೊಳ್ಳಲು ಮರವನ್ನು ಹತ್ತಿ ಕುಳಿತುಕೊಳ್ಳುತ್ತಾನೆ ಹಾಗೂ ಕೆಳಗಿರುವ ನಾಯಿಯನ್ನು ಹುಲಿಯ ಬಾಯಿಯಿಂದ ರಕ್ಷಿಸು ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ. ಹುಲಿ ನಾಯಿ ಇರುವ ಬಳಿಗೆ ಬಂದು ಒಂದಿಷ್ಟು ಮಾಂ’ಸವನ್ನು ಎಸೆದು ಹೋಗುತ್ತದೆ.

ಇದನ್ನು ಕಂಡು ಬಾಲಕ ಆಶ್ಚರ್ಯ ಚಕಿತರಾದರು ದೇವರು ನನ್ನ ಬೇಡಿಕೆಯನ್ನು ಕೇಳಿಸಿಕೊಂಡಿದ್ದಾನೆ. ಅದೇ ಕಾರಣಕ್ಕಾಗಿ ನಾಯಿಯನ್ನು ರಕ್ಷಿಸಿದ್ದಾನೆ, ಅಷ್ಟೇ ಅಲ್ಲದೆ ಆಹಾರವನ್ನು ಕೂಡ ನೀಡಿದ್ದಾನೆ ಎಂದುಕೊಳ್ಳುತ್ತಾನೆ. ಹೀಗೆ ನಡೆದ ಬಳಿಕ ದೇವರು ಹೇಗಿದ್ದರೂ ನನ್ನ ಬೇಡಿಕೆಯನ್ನು ಈಡೇರಿಸುತ್ತಾನೆ ಎಂದುಕೊಂಡು ನನಗೂ ಆಹಾರ ನೀಡಿ ನನಗೂ ಸಹಾಯ ಮಾಡಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ಪ್ರಾರ್ಥನೆ ಮಾಡಿಕೊಳ್ಳುತ್ತಾ ಮಾಡಿಕೊಳ್ಳುತ್ತಾ ಇಡೀ ರಾತ್ರಿಯನ್ನು ಮರದ ಮೇಲೆ ಕಳೆಯುತ್ತಾನೆ. ಆದರೆ ಎಷ್ಟೇ ಬೇಡಿದರೂ ಕೂಡ ದೇವರು ಈತನ ಸಹಾಯಕ್ಕೆ ಬರುವುದಿಲ್ಲ ಎಂಬುದು ಅರಿವಾದ ಬಳಿಕ ಜೋರಾಗಿ ಮಾತನಾಡಲು ಆರಂಭಿಸುತ್ತಾನೆ.

ಹೀಗೆ ದೇವರಿಗೆ ಪ್ರಶ್ನೆಗಳನ್ನು ಕೇಳುತ್ತಾ ಜೋರಾಗಿ ಮಾತನಾಡುತ್ತಿದ್ದ ಬಾಲಕನ ಮಾತುಗಳನ್ನು ಅಲ್ಲಿ ಧ್ಯಾನದಲ್ಲಿ ಕುಳಿತಿದ್ದ ಋಷಿಮುನಿಯೊಬ್ಬರು ಕೇಳಿಸಿಕೊಂಡು ಆ ಹುಡುಗನನ್ನು ತಮ್ಮ ಆಶ್ರಮಕ್ಕೆ ಕರೆದುಕೊಂಡು ಹೋಗಿ ತಿನ್ನಲು ಹಣ್ಣು ನೀಡುತ್ತಾರೆ. ಬಾಲಕನ ಕುರಿತು ವಿಚಾರಿಸಿದಾಗ ಬಾಲಕನು ಋಷಿಮುನಿಗಳಿಗೆ ದೇವರು ನನಗೆ ಸಹಾಯ ಮಾಡಲಿಲ್ಲ, ನಾಯಿಗೆ ಮಾತ್ರ ಸಹಾಯ ಮಾಡಿದ ನಾನು ಏನು ಮಾಡಿದ್ದೇನೆ ಎಂದು ಪ್ರಶ್ನೆ ಮಾಡುತ್ತಾನೆ. ಇದಕ್ಕೆ ಉತ್ತರಿಸಿದ ಋಷಿಮುನಿಗಳು ದೇವರು ನಿನಗೆ ಕಷ್ಟ ಕೊಟ್ಟು ನೋಡುವುದು ಯಾಕೆ ಎಂದರೆ ನೀನು ನಿನ್ನ ಜೀವನದಲ್ಲಿ ದೊಡ್ಡ ವ್ಯಕ್ತಿಯಾಗಬೇಕು. ಅದನ್ನು ಬಿಟ್ಟು ನೀನು ಮತ್ತೊಬ್ಬರಿಂದ ಬೇಡಿ ನಿನ್ನ ಜೀವನವನ್ನು ಸಾಗಿಸಬಾರದು, ನಾಯಿ ಅಸಹಾಯಕನಾಗಿತ್ತು. ಆದಕಾರಣ ಹುಲಿಯ ಕೈಯಿಂದ ನಾಯಿಗೆ ಆಹಾರ ನೀಡುವಂತೆ ಭಗವಂತ ಮಾಡಿದನು. ನೀನು ಜೀವನದಲ್ಲಿ ನಾಯಿ ಆಗಬಾರದು ಬದಲಾಗಿ ಹುಲಿ ಆಗಬೇಕು. ಅಂದರೆ ನಿನ್ನ ಆಹಾರವನ್ನು ನೀನು ದುಡಿದು ಸಹಾಯಕರಾಗಿರುವ ಜನರಿಗೆ ದಾನ ಮಾಡಬೇಕು. ಕಷ್ಟ ಎಂದ ತಕ್ಷಣ ದೇವರು ಸಹಾಯ ಮಾಡಿದರೆ ನೀನು ಕೂತು ತಿನ್ನುತ್ತಿದ್ದೆ, ಅದೇ ನೀನು ದುಡಿದು ಬರುವ ಪ್ರತಿಫಲ ದಲ್ಲಿ ದೇವರನ್ನು ಕಂಡರೇ ಖಂಡಿತ ನಿನ್ನ ಜೊತೆಯಲ್ಲಿ ದೇವರು ಇರುತ್ತಾನೆ. ನಿನ್ನನ್ನು ಹುಲಿ ಮಾಡಬೇಕು ಎಂದು ಜೀವನದಲ್ಲಿ ಕಷ್ಟ ನೀಡುತ್ತಿದ್ದಾನೆ, ನೀನು ನಾಯಿಯಾಗುವುದು ದೇವರಿಗೆ ಇಷ್ಟವಿಲ್ಲ ಎಂದು ಉತ್ತರ ನೀಡುತ್ತಾರೆ.