ಬೆಳಗಿನ ತಿಂಡಿಗೆ ಮಾಡಿ ತುಂಬಾ ಸುಲಭವಾದ ಸಾಫ್ಟ್ ಪರೋಟ, ಜಸ್ಟ್ ಕೆಲವೇ ಕೆಲವು ನಿಮಿಷಗಳಲ್ಲಿ ಹೀಗೆ ಮಾಡಿ

ಬೆಳಗಿನ ತಿಂಡಿಗೆ ಮಾಡಿ ತುಂಬಾ ಸುಲಭವಾದ ಸಾಫ್ಟ್ ಪರೋಟ, ಜಸ್ಟ್ ಕೆಲವೇ ಕೆಲವು ನಿಮಿಷಗಳಲ್ಲಿ ಹೀಗೆ ಮಾಡಿ

ನಮಸ್ಕಾರ ಸ್ನೇಹಿತರೇ, ಪರೋಟ ಎಂದರೆ ಎಲ್ಲರಿಗೂ ಸಾಮಾನ್ಯವಾಗಿ ತುಂಬಾ ಇಷ್ಟವಾಗುತ್ತದೆ. ಹೀಗಾಗಿ ಬೆಳಗ್ಗೆ ಮನೆಯಲ್ಲಿ ತಿಂಡಿ ಏನು ಮಾಡುವುದು ಎಂದು ಯೋಚಿಸುತ್ತಿದ್ದಾರೆ ನೀವು ಕೂಡ ಸಾಫ್ಟ್ ಪರೋಟ ಟ್ರೈ ಮಾಡಬಹುದು. ಬನ್ನಿ ಈ ಕುರಿತು ನಿಮಗೆ ಸಂಪೂರ್ಣ ವಿಧಾನವನ್ನು ಹೇಳಿಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ ಲಗತ್ತಿಸಲಾಗಿರುವ ಯೌಟ್ಯೂಬ್ ವಿಡಿಯೋ ಕೂಡ ನೋಡಬಹುದಾಗಿದೆ.

ಮೊದಲಿಗೆ ಒಂದು ಬೌಲ್ನಲ್ಲಿ ಮೈದಾಹಿಟ್ಟನ್ನು ತೆಗೆದುಕೊಳ್ಳಿ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಒಂದು ಚಮಚದಷ್ಟು ಸಕ್ಕರೆ ಪುಡಿಯನ್ನು ಹಾಕಿ ನಂತರ ಸ್ವಲ್ಪ ಸ್ವಲ್ಪ ನೀರನ್ನು ಹಾಕಿ ಅದನ್ನು ಅಂಟಂಟು ಬರುವ ರೀತಿಯಲ್ಲಿ ಹಿಟ್ಟನ್ನು ಕಲಸಬೇಕು. ಚಪಾತಿ ಮಾಡುವಾಗ ಸಾಮಾನ್ಯವಾಗಿ ನಾವೆಲ್ಲರೂ ನೀರನ್ನು ಜಾಸ್ತಿ ಹಾಕುವುದಿಲ್ಲ ಆದರೆ ಪರೋಟ ನಮಗೆ ಅಂಟು ರೀತಿಯಲ್ಲಿ ಬರಬೇಕೆಂದರೆ ನೀರನ್ನು ಜಾಸ್ತಿ ಹಾಕಬೇಕು.

ನಂತರ ಅದಕ್ಕೆ ಒಂದು ಟೇಬಲ್ ಸ್ಪೂನ್ನಷ್ಟು ಎಣ್ಣೆ ಹಾಕಿ ಚೆನ್ನಾಗಿ ಅದನ್ನು ಮಿಕ್ಸ್ ಮಾಡಬೇಕು. ಎಷ್ಟು ಚೆನ್ನಾಗಿ ಹಿಟ್ಟನ್ನು ಮಿದ್ದುತ್ತೀವೂ ಪರೋಟ ಅಷ್ಟು ಚೆನ್ನಾಗಿ ಬರುತ್ತದೆ. ಇದನ್ನು ಮಾಡಿದ ನಂತರ ಅದನ್ನು ಒಂದು ಬೌಲ್ನಲ್ಲಿ ಇಟ್ಟು ಅದರ ಮೇಲೆ ಒಂದು ಸ್ಪೂನ್ ಎಣ್ಣೆ ಹಾಕಿ 1 ಗಂಟೆ ಎಣ್ಣೆ ಹೀರಿಕೊಳ್ಳಲು ಬಿಡಬೇಕು. ಹೀಗೆ ಬಿಡುವುದರಿಂದ ಹಿಟ್ಟು ತುಂಬಾ ಸಾಫ್ಟ್ ಆಗಿ ಬರುತ್ತದೆ.

ನಂತರ ಅದನ್ನು ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿಕೊಳ್ಳಿ ಒಂದು ಉಂಡೆಯನ್ನು ತೆಗೆದುಕೊಂಡು ಚಪಾತಿ ಲಾಟುವ ಲಾಟಿನಿಂದ ಅದನ್ನು ಒತ್ತಬಹುದು ಇಲ್ಲವೇ ಅದರ ಮೇಲೆ ಜಾಸ್ತಿ ಎಣ್ಣೆಯನ್ನು ಹಾಕಿ ಕೈಯಿನಿಂದಲೂ ಸಹ ತಟ್ಟಬಹುದು. ಅದು ಎಷ್ಟು ತೆಳುವಾಗುತ್ತದೂ ಅಷ್ಟು ತೆಳುವಾಗಿ ತಟ್ಟುತ ಹೋಗಬೇಕು. ಮದ್ಯಮದ್ಯದಲ್ಲಿ ಹಿಟ್ಟು ತೂತ್ ಆದರೂ ಪರವಾಗಿಲ್ಲ ಅದು ಎಷ್ಟು ತೆಳುವಾಗಲು ಸಾಧ್ಯವೋ ಅಷ್ಟು ತೆಳುವಾಗಿ ದೊಡ್ಡದಾಗಿ ಅದನ್ನು ಒತ್ತಿರಿ.

ನಂತರ ಪಿಜ್ಜಾ ಕಟ್ಟರ್ ಇಲ್ಲವೇ ಚಾ’ಕುವಿನಿಂದ ಅದರ ಮೇಲೆ ಗೆರೆಗಳನ್ನು ಏಳೆಯಬೇಕು. ಎಷ್ಟು ತೆಳುವಾಗುತ್ತಾ ಅಷ್ಟು ತೆಳುವಾಗಿ ಅದನ್ನು ಕಟ್ ಮಾಡಿ ಮತ್ತು ಅದನ್ನು ಒಂದು ಕೈನಿಂದ ಎಳೆದು ಒಂದೇ ತುದಿಯಿಂದ ಅದನ್ನು ರೌಂಡ್ ರೌಂಡ್ ಹಾಗೆ ಸುತ್ತಿ ಕೊನೆಯಲ್ಲಿ ಬರುವ ತುದಿಯನ್ನು ಕೆಳಭಾಗಕ್ಕೆ ಅಂಟಿಸಬೇಕು. ಅದೇ ರೀತಿಯಲ್ಲಿ ಉಂಡೆಗಳನ್ನು ಮಾಡಿಕೊಳ್ಳಬೇಕು ಹೀಗೆ ಮಾಡಿದರೆ ಪರೋಟ ಲೇಯರ್ ಆಗಿ ಚೆನ್ನಾಗಿ ಬರುತ್ತದೆ.

ಹೀಗೆ ಮಾಡಿದ ಒಂದು ಉಂಡೆಯನ್ನು ತೆಗೆದುಕೊಂಡು ಲಟ್ಟಣಿಗೆಯಿಂದ ಅಥವಾ ಕೈಯಿಂದಲೇ ಮೃದುವಾಗಿ ಒತ್ತಬೇಕು. ಅದು ಸ್ವಲ್ಪ ತೆಳುವಾಗಿ ಬಂದನಂತರ ಬಿಸಿಯಾದ ಕಾವಲಿನ ಮೇಲೆ ಹಾಕಿ, ಅದನ್ನು ಬೇಯಿಸಬೇಕು. ಅದು ಸ್ವಲ್ಪ ದಪ್ಪ ಇರುವುದರಿಂದ ಕೆಂಪಗೆ ಹಾಗುವ ಹಾಗೆ ಎಣ್ಣೆ ಅಥವಾ ತುಪ್ಪವನ್ನು ಹಾಕಿ ಫ್ರೈ ಮಾಡಬೇಕು. ನಂತರ ಅದು ಬಿಸಿಬಿಸಿ ಇರುವಾಗ ಅದನ್ನು ಎರಡು ಕಡೆಯಿಂದ ಮಧ್ಯಕ್ಕೆ ಪ್ರೆಸ್ ಮಾಡಬೇಕು ಹಾಗ ಲೇಯರ್ ಚೆನ್ನಾಗಿ ಬರುತ್ತದೆ‌. ಈ ಸ್ಮೂತ್ ಆದ ಪರೋಟ ಚಿಕನ್, ಮಟನ್, ಮೀನಿನ ಸಾರು, ಚೆನ್ನಮಸಾಲ, ಆಲೂರು ಗೊಜ್ಜು ಯಾವುದೇ ಒಂದು ಸಾರಿನೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ ಹೀಗಾಗಿ ಒಮ್ಮೆ ಇದನ್ನು ಟ್ರೈ ಮಾಡಿ.