ಓಪನ್ ಚಾಲೆಂಜ್ ಹಾಕಿದ ಮುಫ್ತಿ ! ಖುಷಿಯಿಂದ ಪರೋಕ್ಷ ನಿವೃತ್ತಿ ಎಂದ ನೆಟ್ಟಿಗರು ! ನಡೆದಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ನೀರಿನ ಜಮ್ಮು-ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನವನ್ನು ರದ್ದುಮಾಡಿದ ಬಳಿಕ ಅಲ್ಲಿನ ಪ್ರಮುಖ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಮೆಹಬೂಬಾ ಮುಫ್ತಿ ರವರು ಇತ್ತೀಚಿಗೆ ಹಲವಾರು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೇವಲ 23 ದಿನಗಳ ಹಿಂದೆ ಜಮ್ಮು-ಕಾಶ್ಮೀರದ ಧ್ವಜ ಹಾರಾಡುವವರೆಗೂ ನಾನು ತ್ರಿವರ್ಣ ಧ್ವಜವನ್ನು ಹಾರಿಸುವುದಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಮೆಹಬೂಬಾ ಮಫ್ತಿ ರವರಿಗೆ ಅಲ್ಲಿನ ಸ್ಥಳೀಯರು ತಕ್ಕ ಉತ್ತರ ನೀಡಿದ್ದು ಮೆಹಬೂಬ ಮುಫ್ತಿ ರವರ ಪಕ್ಷದ ಕಚೇರಿಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಸರಿಯಾದ ಉತ್ತರವನ್ನು ನೀಡಿದ್ದರು.

ಇಷ್ಟೆಲ್ಲಾ ವಿದ್ಯಮಾನಗಳ ನಡುವೆ ಮತ್ತೊಮ್ಮೆ ಮಾತನಾಡಿರುವ ಮೆಹಬೂಬಾ ಮುಫ್ತಿ ರವರು ಯಾವುದೇ ಕಾರಣಕ್ಕೂ ವಿಶೇಷ ಸ್ಥಾನಮಾನವನ್ನು ಮತ್ತೆ ವಾಪಸ್ಸು ತರದೆ ಬಿಡುವುದಿಲ್ಲ, ಈ ನಿರ್ಧಾರವನ್ನು ಕೇಂದ್ರ ವಾಪಸು ತೆಗೆದುಕೊಳ್ಳಬೇಕು, ಈ ಕೂಡಲೇ ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಲೇಬೇಕು.

ಒಂದು ವೇಳೆ ಕೇಂದ್ರ ಸರ್ಕಾರ ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡದೆ ಇದ್ದಲ್ಲಿ ನಾನು ಅಲ್ಲಿಯವರೆಗೆ ಯಾವುದೇ ಕಾರಣಕ್ಕೂ ಚುನಾವಣೆಗೆ ನಿಂತು ಕೊಳ್ಳುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಬಿಜೆಪಿ ಪಕ್ಷವು ವಿಶ್ವದ ಯಾವುದೇ ಶಕ್ತಿಯಿಂದಲೂ ಕೂಡ ಜಮ್ಮು ಹಾಗೂ ಕಾಶ್ಮೀರ ದಲ್ಲಿ ವಿಶೇಷ ಸ್ಥಾನಮಾನವನ್ನು ಮರಳಿ ತರಲು ಸಾಧ್ಯವಾಗುವುದಿಲ್ಲ ಎಂದು ಉತ್ತರ ನೀಡಿದೆ, ಇದನ್ನು ಕಂಡ ನೆಟ್ಟಿಗರು ಮೆಹಬೂಬ ಮುಫ್ತಿ ರವರು ತಮ್ಮ ರಾಜಕೀಯ ಜೀವನಕ್ಕೆ ಪರೋಕ್ಷವಾಗಿ ನಿವೃತ್ತಿಯನ್ನು ಘೋಷಣೆ ಮಾಡಿದ್ದಾರೆ. ಕೊನೆಗೂ ಜಮ್ಮು ಹಾಗೂ ಕಾಶ್ಮೀರ ದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ರವರು ತಮ್ಮ ನಿವೃತ್ತಿ ಘೋಷಣೆ ಮಾಡಿರುವುದು ನಿಜಕ್ಕೂ ಸ್ವಾಗತಾರ್ಹ ಎಂದು ಟಾಂಗ್ ನೀಡಿದ್ದಾರೆ.

Post Author: Ravi Yadav