ಹಿರಿಯ ನಟಿ ರೂಪಿಣಿರವರು ಮಾಡುತ್ತಿರುವ ಕೆಲಸಗಳನ್ನು ನೋಡಿದರೇ ನಿಜಕ್ಕೂ ಗ್ರೇಟ್ ಅನಿಸುತ್ತದೆ.

ಹಿರಿಯ ನಟಿ ರೂಪಿಣಿರವರು ಮಾಡುತ್ತಿರುವ ಕೆಲಸಗಳನ್ನು ನೋಡಿದರೇ ನಿಜಕ್ಕೂ ಗ್ರೇಟ್ ಅನಿಸುತ್ತದೆ.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಹಲವಾರು ಹಿರಿಯ ಕಲಾವಿದರು ಇದೀಗ ಚಿತ್ರರಂಗವನ್ನು ಬಿಟ್ಟು ತಮ್ಮ ಜೀವನವನ್ನು ವಿವಿಧ ಕ್ಷೇತ್ರಗಳಲ್ಲಿ ಆಯ್ಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಇಂದು ಅದೇ ರೀತಿ ಹಲವಾರು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದು ಇದೀಗ ಮತ್ತೆ ವಾಪಸ್ಸು ಬರುತ್ತಿರುವ ಕನ್ನಡ ಸೇರಿದಂತೆ ಪಂಚ ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಕನ್ನಡದ ಹಿರಿಯ ಕಲಾವಿದೆ ರೂಪಿಣಿ ರವರ ಕುರಿತು ನಿಮಗೆ ಇಂದು ನಾವು ಮಾಹಿತಿ ನೀಡುತ್ತೇವೆ. ಇವರು ಇಷ್ಟು ದಿವಸ ಎಲ್ಲಿದ್ದರೂ ಹಾಗೂ ಇವರು ಇಂದು ಕೂಡ ಯಾವ ರೀತಿ ನೂರಾರು ಮಕ್ಕಳಿಗೆ ಆಧಾರವಾಗಿದ್ದಾರೆ ಎಂಬುದರ ಕುರಿತು ನಾವು ಇಂದು ನಿಮಗೆ ಮಾಹಿತಿ ನೀಡುತ್ತೇವೆ.

ಸ್ನೇಹಿತರೇ ಸಾಮಾನ್ಯವಾಗಿ ರೂಪಿಣಿ ರವರು ಎಂದ ತಕ್ಷಣ ನಮ್ಮ ನಿಮ್ಮೆಲ್ಲರ ನೆಚ್ಚಿನ ವಿಷ್ಣುವರ್ಧನ್ ರವರ ಜೊತೆ ನಟಿಸಿ ದೇವಣ್ಣ ನಿನ್ನ ಮೇಲೆ ಮನಸಣ್ಣ, ಮಾಗೈತೆ ಈ ಹಣ್ಣು ನೋಡಣ್ಣ ಎಂಬ ಹಾಡಿನಲ್ಲಿ ಅದ್ಭುತ ನಟನೆ ಮಾಡಿ ಅಂದಿನ ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಮನೆಮಾತಾಗಿದ್ದ ನಟಿ ರೂಪಿಣಿ ನಮಗೆಲ್ಲರಿಗೂ ನೆನಪಾಗುತ್ತಾರೆ. ಇವರು ಅಂದಿನ ಕಾಲದಲ್ಲಿ ಟಾಪ್ ನಟರಾದ ಅಂಬರೀಷ್, ವಿಷ್ಣುವರ್ಧನ್ ಹಾಗೂ ರವಿಚಂದ್ರನ್ ರವರ ಜೊತೆ ಸೇರಿದಂತೆ ಇನ್ನಿತರ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಕೇವಲ ಕನ್ನಡ ಚಿತ್ರರಂಗದಲ್ಲಿ ಅಷ್ಟೇ ಅಲ್ಲದೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಕೂಡ ನಟಿಸಿದ್ದಾರೆ. ಕನ್ನಡದಲ್ಲಿ ಒಲವಿನ ಆಸರೆ, ಮತ್ತೆ ಹಾಡಿತು ಕೋಗಿಲೆ, ನೀನು ನಕ್ಕರೆ ಹಾಲು ಸಕ್ಕರೆ ಸೇರಿದಂತೆ ರವಿವರ್ಮ ಚಿತ್ರಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಸಪ್ತಪದಿ, ಮಲ್ಲಿಗೆ ಹೂವಿನಲ್ಲಿ ಎಂಬ ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಟಿಯಾಗಿ ಸ್ಥಾನ ಪಡೆದುಕೊಂಡರು. ಆದರೆ ಪೋಷಕರ ಒತ್ತಾಯದ ಮೇರೆಗೆ ಮದುವೆಯಾಗಿ ಚಿತ್ರರಂಗದಿಂದ ದೂರ ಉಳಿದು ಹಲವಾರು ವರ್ಷಗಳ ಕಾಲ ತಮ್ಮದೇ ಆದ ವೈಯಕ್ತಿಕ ಜೀವನದಲ್ಲಿ ನಿರತರಾದರು.

ಹೀಗೆ ಹಲವಾರು ವರ್ಷಗಳು ಕಳೆದ ನಂತರ ಪತಿಯ ಬೆಂಬಲ ಪಡೆದುಕೊಂಡು ಡಾಕ್ಟರ್ ಪದವಿಯನ್ನು ಪಡೆದುಕೊಂಡು ತದನಂತರ ತಮ್ಮದೇ ಆದ ಹೊಸದೊಂದು ಆಸ್ಪತ್ರೆ ಕಟ್ಟಿಕೊಳ್ಳುತ್ತಾರೆ. ಇದೇ ಸಮಯದಲ್ಲಿ ಇವರ ತಾಯಿಯು ಸಮಾಜ ಸೇವೆ ಮಾಡು ಎಂದು ಹೇಳಿದ ಕಾರಣ ತಾಯಿಯ ಆಸೆಯಂತೆ ಬಡ ಮಕ್ಕಳಿಗೆ ಸಹಾಯ ಹಸ್ತ ಚಾಚಲು ನಿರ್ಧಾರಮಾಡಿ ಸ್ಪರ್ಶ ಎಂಬ ಸಂಸ್ಥೆಯನ್ನು ಸ್ಥಾಪಿಸಿ ನೂರಾರು ಮಕ್ಕಳಿಗೆ ಸಹಾಯ ಹಸ್ತ ಚಾಚಲು ನಿರ್ಧಾರ ಮಾಡುತ್ತಾರೆ. ಮಕ್ಕಳ ಊಟದಿಂದ ಹಿಡಿದು ವಿದ್ಯಾಭ್ಯಾಸದ ವರೆಗೆ ಎಲ್ಲವನ್ನು ನೋಡಿಕೊಳ್ಳುವ ಈ ಸಂಸ್ಥೆಯೂ ಈಗಾಗಲೇ ಸಾವಿರಾರು ಮಕ್ಕಳಿಗೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಹಾಯ ಮಾಡಿದೆ. ಈಗಲೂ ಕೂಡ ಸ್ಪರ್ಶ ಸಂಸ್ಥೆಯು 550 ಮಕ್ಕಳಿಗೆ ಸಹಾಯ ಹಸ್ತ ಚಾಚಿದೆ. ಇವರೆಲ್ಲರಿಗೂ ಊಟದ ವ್ಯವಸ್ಥೆ ಸೇರಿದಂತೆ ಇನ್ನಿತರ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ, ವಿದ್ಯಾಭ್ಯಾಸವನ್ನು ಕೂಡ ಸಂಪೂರ್ಣವಾಗಿ ನೋಡಿಕೊಳ್ಳಲಾಗುತ್ತದೆ. ಇದೀಗ ಈ ಸಂಸ್ಥೆಯ ಜೊತೆ ಮತ್ತೆ ಚಿತ್ರರಂಗಕ್ಕೂ ಕೂಡ ವಾಪಸು ಬರಬೇಕು ಎಂಬ ಆಲೋಚನೆಯಲ್ಲಿ ತೊಡಗಿಕೊಂಡಿದ್ದಾರೆ. ಒಟ್ಟಿನಲ್ಲಿ ಅದೇನೇ ಆಗಲಿ ಈ ರೀತಿಯ ಉತ್ತಮ ಕಾರ್ಯಗಳನ್ನು ಮಾಡುತ್ತಿರುವ ರೂಪಿಣಿ ರವರಿಗೆ ನಮ್ಮ ತಂಡದ ಪರವಾಗಿ ಅನಂತ ಅನಂತ ವಂದನೆಗಳು.