ಬ್ರಾಹ್ಮಣರಶೈಲಿಯ ಈ ಸಾಂಬಾರ್ ಅನ್ನು ಒಮ್ಮೆ ಮಾಡಿ ನೋಡಿ, ಒಂದು ಪ್ಲೇಟ್ ಅನ್ನ ಜಾಸ್ತಿ ತಿಂತಿರಾ..! ಬ್ಯಾಚುಲರ್ಸ್ ನೀವು ಟ್ರೈ ಮಾಡಿ.

ಸ್ನೇಹಿತರೇ ಬ್ರಾಹ್ಮಣರ ಮನೆಯ ಸಾಂಬಾರಿನ ರುಚಿ ಹೇಗಿರುತ್ತದೆ ಎಂದು ನಿಮಗೆಲ್ಲರಿಗೂ ಗೊತ್ತೇ? ಆಗದ್ರೆ ರುಚಿಕರವಾದ ಬ್ರಾಹ್ಮಣ ಶೈಲಿಯ ಸಾಂಬಾರು ಮಾಡುವುದು ಹೇಗೆ ಎಂದು ತಿಳಿಯೋಣ ಬನ್ನಿ. ಮೊದಲಿಗೆ ಸಾಂಬಾರಿಗೆ ಬೇಕಾದ ತರಕಾರಿಯನ್ನು ತೆಗೆದುಕೊಳ್ಳೋಣ, ಕುಂಬಳಕಾಯಿಯನ್ನು ಚಿಕ್ಕ ಚಿಕ್ಕ ಕ’ಟ್ ಮಾಡಿಕೊಂಡು, ಅದನ್ನು ನೀರಿನಿಂದ ತೊಳೆದುಕೊಳ್ಳಬೇಕು.

ಪಾತ್ರೆಯಲ್ಲಿ ಇರುವ ಪೀಸ್ಗಳು ಮು’ಳುಗುವಷ್ಟು ನೀರನ್ನು ಹಾಕಿ ಬೇಯಿಸಿಕೊಳ್ಳಬೇಕು. ಅದಕ್ಕೆ ರುಚಿಗೆ ಬೇಕಾದಷ್ಟು ಉಪ್ಪು, ಸ್ವಲ್ಪ ಮೆಣಸಿನ ಪುಡಿ, ಚಿಟಿಕೆಯಷ್ಟು ಅರಿಶಿಣ ಪುಡಿ, ಒಂದು ಸಣ್ಣ ತುಂಡು ಬೆಲ್ಲ. ಇನ್ನೊಂದಷ್ಟು ಹುಣಸೆಹಣ್ಣನ್ನು ನೀರು ಹಾಕಿ ಕಿವಿಚಿಕೊಂಡು ಅದರಿಂದ ಬರುವ ಹುಳಿ ನೀರನ್ನು ಹಾಕಿ ಸ್ವಲ್ಪ ಹೊತ್ತು ಬೇಯಲು ಬಿಡಿ.

ಈಗ ಮಸಾಲೆ ಮಾಡುವುದು ಹೇಗೆ ಎಂಬುದನ್ನು ಹೇಳುವುದಾದರೇ, ಮಸಾಲೆ ಉರಿಯುವುದಕ್ಕೆ ಮೂರು ಚಮಚ ತೆಂಗಿನ ಎಣ್ಣೆ, ಕಾಲು ಚಮಚದಷ್ಟು ಮೆಂತ್ಯ, ಒಂದು ಚಮಚ ಉದ್ದಿನಬೇಳೆ, 2 ಚಮಚ ದನಿಯ, ಮುಕ್ಕಾಲು ಚಮಚದಷ್ಟು ಜೀರಿಗೆ, ಒಂದು ಸಣ್ಣ ಅಳತೆ ಯಷ್ಟು ಹಿಂಗು, ಹಾಗೆ ಒಗ್ಗರಣೆಗೆ ಕರಿಬೇವು, ನಾಲ್ಕು ಬ್ಯಾಡಗಿ ಮೆಣಸಿನಕಾಯಿಗಳನ್ನು ತೆಗೆದುಕೊಳ್ಳಬೇಕು.

ಒಂದು ಬಾಣಲಿಯಲ್ಲಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದ ಕೂಡಲೇ ಮೇಲೆ ತೆಗೆದುಕೊಂಡಿರುವ ಅಂತಹ ಎಲ್ಲ ಮಸಾಲೆಗಳನ್ನು ಒಟ್ಟಿಗೆ ಹಾಕಿ ಹುರಿದುಕೊಳ್ಳಬೇಕು. ಅದು ಕಂದು ಬಣ್ಣ ಬಂದ ನಂತರ ಅದಕ್ಕೆ ಕರಿಬೇವಿನ ಸೊಪ್ಪು ಹಾಕಿ ಅದನ್ನು ಒಲೆಯಿಂದ ಇಳಿಸಬೇಕು. ನಂತರ ಒಂದು ಕಪ್ಪಿನಷ್ಟು ಕಾಯಿತುರಿ ಮತ್ತು ಅದಕ್ಕೆ ಉರಿದಿತಟ್ಟಂತ ಮಸಾಲೆಯನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.

ಅಷ್ಟರಲ್ಲಿ ಕುಂಬಳಕಾಯಿ ಓಳುಗಳೆಲ್ಲ ಚೆನ್ನಾಗಿ ಬೆಂದಿರುತ್ತದೆ, ಅದಕ್ಕೆ ರುಬ್ಬಿದ ಮಸಾಲೆಯನ್ನು ಸೇರಿಸಬೇಕು. ನಂತರ ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ನಂತರ ಬೇರೆ ಬಾಣಲಿಯಲ್ಲಿ ಒಗ್ಗರಣೆಗೆ ಸ್ವಲ್ಪ ಎಣ್ಣೆ, ಎಣ್ಣೆ ಬಿಸಿಯಾದ ನಂತರ 1 ಚಮಚ ಸಾಸಿವೆ, 4 ಮೆಣಸಿನಕಾಯಿ, ಸಾಸಿವೆ ಸಿಡಿದ ನಂತರ ಕರಿಬೇವಿನಸೊಪ್ಪು ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು.ನಂತರ ಒಗ್ಗರಣೆಯನ್ನು ಸಾಂಬಾರಿಗೆ ಹಾಕಬೇಕು.

ತೊಗರಿ ಬೇಳೆ ಹಾಕದೇ ಮಾಡುವಂತಹ ಸಾಂಬಾರ್, ಇದನ್ನು ಬ್ರಾಹ್ಮಣ ಶೈಲಿಯಲ್ಲಿ ಕೊದೀಲು ಎಂದು ಕರೆಯುತ್ತಾರೆ. ಇದು ತುಂಬಾ ರುಚಿಕರವಾಗಿದ್ದು ಇದನ್ನು ಸವಿಯಲು ನಮ್ಮ ನಾಲಿಗೆ ಹಂಬಲಿಸುತ್ತಿರುತ್ತದೆ. ಮನೆಯಲ್ಲಿ ಬ್ರಾಹ್ಮಣ ಶೈಲಿಯ ಸಾಂಬಾರ್ ಅನ್ನು ಮಾಡಿ ಮತ್ತದರ ರುಚಿ ಮತ್ತು ಘಮವನ್ನು ಸವಿಯಿರಿ.

Post Author: Ravi Yadav