ದುರ್ಯೋದನ ಯುದ್ಧ ಆಯ್ಕೆ ಮಾಡಿಕೊಳ್ಳಲು ಕರ್ಣ ಕಾರಣ ಎನ್ನುವುದಕ್ಕೆ ಕಾರಣವಾದರೂ ಏನು ಗೊತ್ತಾ?

ದುರ್ಯೋದನ ಯುದ್ಧ ಆಯ್ಕೆ ಮಾಡಿಕೊಳ್ಳಲು ಕರ್ಣ ಕಾರಣ ಎನ್ನುವುದಕ್ಕೆ ಕಾರಣವಾದರೂ ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಮಹಾಭಾರತ ಯುದ್ಧ ನಡೆಯಲು ಯಾರಾದರೂ ಕಾರಣವನ್ನು ಹೇಳಿ ಎಂದ ತಕ್ಷಣ ಬಹುತೇಕರಿಗೆ ನೆನಪಾಗುವುದು ಕೃಷ್ಣನು ಧರ್ಮ ಸ್ಥಾಪನೆ ಮಾಡಲು ಹಾಗೂ ಅಧರ್ಮವನ್ನು ಕೊನೆಗೊಳಿಸಿ ಪಾಂಡವರಿಗೆ ತಮ್ಮ ರಾಜ್ಯವನ್ನು ವಾಪಸ್ಸು ನೀಡಲು ಆಯ್ಕೆ ಮಾಡಿಕೊಂಡಿದ್ದಾರೆ ಎಂದು. ಇನ್ನು ಕೆಲವರು ಪಾಂಡವರು ತಮ್ಮ ರಾಜ್ಯವನ್ನು ವಾಪಸ್ಸು ಪಡೆದುಕೊಳ್ಳಲು, ಶಾಂತಿ ಮಾತು ಕಥೆ ವಿಫಲವಾದ ಕಾರಣ ಹಾಗೂ ಕೌರವರು ಪಾಂಡವರನ್ನು ಅಂತ್ಯಗೊಳಿಸಲು ಯುದ್ಧವನ್ನು ಆಯ್ಕೆ ಮಾಡಿಕೊಂಡರು ಎನ್ನುತ್ತಾರೆ. ಇನ್ನು ಇಷ್ಟೇ ಅಲ್ಲಾ, ಇನ್ನು ಹಲವಾರು ವಿವಿಧ ಕಾರಣಗಳು ಕೇಳಿಬರುತ್ತವೆ.

ಆದರೆ ಸ್ನೇಹಿತರೇ ಕೆಲವೇ ಕೆಲವು ಜನರ ಬಾಯಲ್ಲಿ ಮಹಾಭಾರತ ಯುದ್ಧಕ್ಕೆ ಕಾರಣ ಕರ್ಣ ಎಂಬ ಮಾತು ಕೇಳಿಬರುತ್ತದೆ. ಪಾಂಡವರ ಹಾಗೂ ಕೌರವರ ನಡುವಿನ ವೈಮನಸ್ಸಿಗೆ ವಿವಿಧ ಕಾರಣಗಳಿದ್ದರೂ ಕೂಡ ಕೃಷ್ಣನು ಪಾಂಡವರ ಪರವಾಗಿ ಯುದ್ಧ ಸಂಧಾನ ಮಾಡಲು ಹೋಗಿ ಕೇವಲ 5 ಹಳ್ಳಿಗಳನ್ನು ಪಾಂಡವರಿಗೆ ಬಿಟ್ಟುಕೊಟ್ಟು ಯುದ್ಧದ ಬದಲು ಶಾಂತಿಯನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ ಎಂದು ಹೇಳುತ್ತಾನೆ. ಆದರೆ ದುರ್ಯೋಧನನು ಯಾವುದೇ ಕಾರಣಕ್ಕೂ ಒಂದು ಸೂಜಿಯಷ್ಟು ಜಾಗವನ್ನು ಕೂಡ ಬಿಟ್ಟುಕೊಡುವುದಿಲ್ಲ ನಾವು ಯುದ್ಧಕ್ಕೆ ಸಿದ್ದ ಎಂದು ಹೇಳಿ ಯುದ್ಧಕ್ಕೆ ನಾಂದಿ ಹಾಡುತ್ತಾರೆ. ಆದರೆ ಸ್ನೇಹಿತರೇ ದುರ್ಯೋದನ ಈ ರೀತಿ ಪಾಂಡವರ ಜೊತೆ ಯುದ್ಧ ಮಾಡಲು ಮುಂದಾಗುವುದಕ್ಕೆ ಕರ್ಣನೇ ಕಾರಣ ಎಂಬ ಬಲವಾದ ಮಾತುಗಳು ಕೇಳಿಬರುತ್ತವೆ. ಹೌದು, ದುರ್ಯೋಧನನು ಯುದ್ಧ ಆಯ್ಕೆ ಮಾಡುವ ಕಾರಣದ ಹಿಂದೆ ಇದ್ದದ್ದು ಮತ್ಯಾರು ಅಲ್ಲ ಅವನು ಕರ್ಣ. ಅದು ಹೇಗೆ ಎಂದುಕೊಂಡಿರಾ ಬನ್ನಿ ಸಂಪೂರ್ಣ ವಿವರಗಳ ಸಮೇತ ತಿಳಿಸುತ್ತೇವೆ.

ಸ್ನೇಹಿತರೇ ದುರ್ಯೋಧನನ್ನು ಯುದ್ಧವನ್ನು ಆಯ್ಕೆ ಮಾಡುವ ಮುನ್ನ ಎಲ್ಲವನ್ನೂ ಲೆಕ್ಕಾಚಾರ ಹಾಕಿಕೊಂಡೆ ಆಯ್ಕೆ ಮಾಡಿದ್ದರು. ಅಂದರೆ ದುರ್ಯೋಧನ ರವರ ಪ್ರಕಾರ ಮಹಾಭಾರತ ಯುದ್ಧದಲ್ಲಿ 4 ಪಾಂಡವರನ್ನು ಹೇಗೋ ಮಾಡಿ ಸೋಲಿಸ ಬಹುದಾಗಿತ್ತು, ಆದರೆ ಮಹಾನ್ ಬಲಶಾಲಿಯಾದ ಅರ್ಜುನನನ್ನು ಸೋಲಿಸುವುದು ಯಾವುದೇ ಕೌರವರ ಕೈಯಲ್ಲಿ ಸಾಧ್ಯವಿರಲಿಲ್ಲ. ಆದರೆ ಮೊದಲಿನಿಂದಲೂ ಕರ್ಣ ಹಾಗೂ ಅರ್ಜುನರ ನಡುವೆ ನಡೆದ ಎಲ್ಲಾ ಘಟನೆಗಳು ಆಧಾರದ ಮೇರೆಗೆ ಅರ್ಜುನನನ್ನು ಸೋಲಿಸುವ ಶಕ್ತಿಯನ್ನು ಹೊಂದಿದ ಏಕೈಕ ವ್ಯಕ್ತಿಯೆಂದರೆ ಅದು ಕರ್ಣ. ಇನ್ನು ಕರ್ಣನು ಕೂಡ ತನ್ನನ್ನು ಕೌರವರು ಕೈ ಹಿಡಿದಿದ್ದಾರೆ ಹಾಗೂ ಅರ್ಜುನನನ್ನು ಸೋಲಿಸುವ ಮೂಲಕ ನಾನು ಮಹಾನ್ ಬಲಶಾಲಿ ಎಂಬುದನ್ನು ಸಾಬೀತು ಪಡಿಸಬೇಕು ಎಂಬ ಕಾರಣದಿಂದ ಬಹುಶಹ ಕೌರವರ ಪರ ಯುದ್ಧದಲ್ಲಿ ಪಾಲ್ಗೊಳ್ಳಲು ಆಯ್ಕೆ ಮಾಡುತ್ತಾರೆ ಎಂಬುವ ಆಲೋಚನೆ ದುರ್ಯೋಧನ ತಲೆಯಲ್ಲಿತ್ತು.

ಅದೇ ಕಾರಣಕ್ಕಾಗಿ ಕರ್ಣನು ನಮ್ಮ ಪರವಾಗಿದ್ದರೇ ಅರ್ಜುನನನ್ನು ಸೋಲಿಸುತ್ತಾನೆ, ನಾವು ಉಳಿದ ಪಾಂಡವರನ್ನು ಸೋಲಿಸಿ ಪಾಂಡವರನ್ನು ಅಂತ್ಯಗೊಳಿಸಬಹುದು ಎಂಬ ಲೆಕ್ಕಾಚಾರ ಗಳೊಂದಿಗೆ ದುರ್ಯೋಧನ ಯುದ್ಧವನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಸಾಕ್ಷಾತ್ ಶ್ರೀಕೃಷ್ಣನೇ ಶಾಂತಿ ಮಾತುಕತೆಗೆ ತೆರಳಿದರೂ ಕೂಡ ದುರ್ಯೋಧನನ್ನು ಯುದ್ಧ ಆಯ್ಕೆ ಮಾಡಿಕೊಂಡು ತಮ್ಮ ಅಂತ್ಯಕ್ಕೆ ತಾವೇ ನಾಂದಿ ಹಾಡಿಕೊಳ್ಳುತ್ತಾನೆ. ಇನ್ನು ಇವರ ಎಲ್ಲಾ ಲೆಕ್ಕಾಚಾರಗಳು ಯುದ್ಧದಲ್ಲಿ ಉಲ್ಟಾ ಆಗಿ ಅರ್ಜುನನ್ನು ಬಿಡಿ ಯಾವುದೇ ಪಾಂಡವರನ್ನು ಕೂಡ ಅಂತ್ಯಗೊಳಿಸಲು ಕೌರವರ ಕೈಯಲ್ಲಿ ಸಾಧ್ಯವಾಗುವುದಿಲ್ಲ.