ಭಾರತದ ವಿರುದ್ಧ ರಷ್ಯಾವನ್ನು ಎತ್ತಿಕಟ್ಟಲು ಮುಂದಾದ ಚೀನಾ ! ತಕ್ಕ ಪ್ರತಿಕ್ರಿಯೆ ನೀಡಿದ ಪುಟಿನ್ ! ನಡೆಯುತ್ತಿರುವುದಾದರೂ ಏನು ಗೊತ್ತಾ??

ಭಾರತದ ವಿರುದ್ಧ ರಷ್ಯಾವನ್ನು ಎತ್ತಿಕಟ್ಟಲು ಮುಂದಾದ ಚೀನಾ ! ತಕ್ಕ ಪ್ರತಿಕ್ರಿಯೆ ನೀಡಿದ ಪುಟಿನ್ ! ನಡೆಯುತ್ತಿರುವುದಾದರೂ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ, ಜಪಾನ್, ಆಸ್ಟ್ರೇಲಿಯಾ ಹಾಗೂ ಅಮೆರಿಕಾ ದೇಶಗಳು ಸೇರಿಕೊಂಡು QUAD ಎಂಬ ಹೊಸ ಮೈತ್ರಿ ಮಾಡಿಕೊಂಡು ಚೀನಾ ದೇಶ, ದಕ್ಷಿಣ ಚೀನಾ ಸಮುದ್ರ ಹಾಗೂ ಭಾರತದ ಗಡಿಯಲ್ಲಿ ತೆಗೆಯುತ್ತಿರುವ ಕ್ಯಾತೆಗಳಿಗೆ ಪ್ರತ್ಯುತ್ತರ ನೀಡಲು ಸದಾ ಈ ನಾಲ್ಕು ದೇಶಗಳು ಸಿದ್ಧವಾಗಿರುತ್ತವೆ ಎಂಬುದನ್ನು ಸ್ಪಷ್ಟಪಡಿಸಿವೆ. ಈಗಾಗಲೇ ನಾಲ್ಕು ದೇಶಗಳು ಹಿಂದೂ ಮಹಾಸಾಗರ ಹಾಗೂ ದಕ್ಷಿಣ ಚೀನಾ ಸಮುದ್ರ ದಲ್ಲಿ ಹಲವಾರು ಬಾರಿ ನೌಕಾಭ್ಯಾಸ ಮಾಡಿ ಚೀನಾ ದೇಶಕ್ಕೆ ಸ್ಪಷ್ಟ ಸಂದೇಶ ರವಾನಿಸಿವೆ.

ಅಸಲಿಗೆ ಈ ನಾಲ್ಕು ದೇಶಗಳು ಒಂದಾಗಬೇಕು ಎಂದು ಚೀನಾ ದೇಶ ಕೂಡ ಆಲೋಚನೆ ಮಾಡುತ್ತಿತ್ತು. ಯಾಕೆಂದರೆ ಅಮೇರಿಕಾ ದೇಶ ಜಪಾನ್ ಆಸ್ಟ್ರೇಲಿಯಾ ಹಾಗೂ ಭಾರತ ದೇಶದ ಜೊತೆ ಸೇರಿಕೊಂಡರೇ ಅಮೆರಿಕಾ ದೇಶಕ್ಕೆ ಉತ್ತರ ನೀಡುವ ಸಲುವಾಗಿ ರಷ್ಯಾ ದೇಶ ಭಾರತ ಜೊತೆ ಸ್ನೇಹ ಸಂಬಂಧವನ್ನು ಕಳಚಿಕೊಂಡು ಚೀನಾ ದೇಶದ ಜೊತೆ ಮಿಲಿಟರಿ ಸೇರಿದಂತೆ ಇನ್ನಿತರ ವಿವಿಧ ರಂಗಗಳಲ್ಲಿ ಉತ್ತಮ ಬಾಂಧವ್ಯ ಗಳಿಸಲು ಮುಂದಾಗುತ್ತದೆ. ಇದರಿಂದ ಒಂದು ವೇಳೆ ಅಮೆರಿಕ ಸೇರಿದಂತೆ ಇನ್ನುಳಿದ ಬಲಾಢ್ಯ ದೇಶಗಳು ಚೀನಾ ದೇಶದ ವಿರುದ್ಧ ನಿಂತರೇ ರಷ್ಯಾ ದೇಶ ಬೆಂಬಲ ನೀಡಲಿದೆ ಎಂದು ಚೀನಾ ಲೆಕ್ಕಾಚಾರ ಹಾಕಿ ಕೊಂಡಿತ್ತು.

ಆದರೆ ಸ್ನೇಹಿತರೇ ರಷ್ಯಾ ದೇಶ ಮೊದಲಿನಿಂದಲೂ ಭಾರತದ ಪರವಾಗಿ ನಿಲ್ಲುತ್ತೇವೆ ಎಂಬುದನ್ನು ಸ್ಪಷ್ಟಪಡಿಸಿತ್ತು, ಇಷ್ಟಾದರೂ ಕೂಡ ಚೀನಾ ದೇಶ ಅಧಿಕೃತವಾಗಿ QUAD ಸಂಯೋಜನೆ ರಚನೆಯಾದ ಮೇಲೆ ಖಂಡಿತ ರಷ್ಯಾ ದೇಶಕ್ಕೆ ಭಾರತ ಅಮೇರಿಕಾ ದೇಶದ ಜೊತೆ ಸ್ನೇಹ ಸಂಬಂಧವನ್ನು ಹೆಚ್ಚು ಬೆಳೆಸುತ್ತಿದೆ ಎಂಬುದು ಅರಿವಾಗಿ ನಮ್ಮ ಜೊತೆಗೆ ರಷ್ಯಾ ಬರುತ್ತದೆ ಎಂದು ಕೊಂಡಿತ್ತು. ಆದರೆ ಭಾರತದ ಸ್ನೇಹ ಸಂಬಂಧವನ್ನು ಕಳೆದುಕೊಳ್ಳಲು ಪುಟಿನ್ ರವರು ಕೂಡ ಸಿದ್ಧವಾಗಿಲ್ಲ.

ಚೀನಾ ದೇಶ ಈ ಮಾತುಕತೆಗಳನ್ನು ಆರಂಭಿಸಿದ ಕೂಡಲೇ ಪುಟಿನ್ ಮರುಮಾತನಾಡದೇ ತಿರಸ್ಕರಿಸಿ ಚೀನಾ ದೇಶದ ಜೊತೆ ಯಾವುದೇ ಮೈತ್ರಿಕೂಟದ ಅಗತ್ಯವಿಲ್ಲ, ಎಂದು ರಷ್ಯಾ ದೇಶ ಸ್ಪಷ್ಟಪಡಿಸಿದೆ. ಚೀನಾ ದೇಶ QUAD ಅನ್ನು ತೋರಿಸಿ ಭಾರತದ ಜೊತೆ ಸ್ನೇಹ ಸಂಬಂಧವನ್ನು ಮರೆತು ನಮ್ಮ ಜೊತೆ ಬನ್ನಿ ಎಂಬ ಪ್ರಸ್ತಾಪವನ್ನು ಇಡಲು ರಾಜ ತಾಂತ್ರಿಕತೆಯನ್ನು ಆರಂಭಿಸಿದಾಗ, ರಷ್ಯಾ ದೇಶ ಮಾತುಕತೆ ಆರಂಭವಾದ ಕೂಡಲೇ ಚೀನಾ ದೇಶದ ಜೊತೆ ಯಾವುದೇ ಸ್ನೇಹ ಸಂಬಂಧ ನಮಗೆ ಅಗತ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಿ ಚೀನಾ ದೇಶವನ್ನು ಮತ್ತಷ್ಟು ದೂರ ತಳ್ಳಿದೆ. ಇನ್ನು ಪ್ರಸ್ತಾವನೆಗೆ ಮುನ್ನವೇ ಚೀನಾ ದೇಶದ ಮನವಿಯನ್ನು ತಿರಸ್ಕಿರುವ ಕಾರಣ ಬಾರಿ ಮುಜುಗರವನ್ನು ಅನುಭವಿಸಿದೆ.