ಮಧುಮೇಹಿಗಳಿಗೆ ಸೇರಿದಂತೆ ಕಿರಿಯರಿಂದ ಹಿರಿಯರವರೆಗೂ ಅತ್ಯಗತ್ಯವಾಗಿರುವ ಹುರುಳಿಯ ಲಾಭಗಳೇನು ಗೊತ್ತೇ?

ಮಧುಮೇಹಿಗಳಿಗೆ ಸೇರಿದಂತೆ ಕಿರಿಯರಿಂದ ಹಿರಿಯರವರೆಗೂ ಅತ್ಯಗತ್ಯವಾಗಿರುವ ಹುರುಳಿಯ ಲಾಭಗಳೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ, ನಾವು ದಿನನಿತ್ಯ ಬಳಸುವ ಕೆಲವೊಂದು ಆಹಾರಗಳ ಬಗ್ಗೆ ನಮಗೆ ಅದೆಷ್ಟೋ ಮಾಹಿತಿಗಳು ತಿಳಿದೇ ಇರುವುದಿಲ್ಲ. ಇಂದು ನಾವು ಅದೇ ರೀತಿ ಮತ್ತೊಂದು ನಿಮಗೆ ಚಿರಪರಿಚಿತವಾಗಿರುವ ಒಂದು ಧಾನ್ಯದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಖಂಡಿತ ಈ ಧಾನ್ಯದ ಲಾಭಗಳನ್ನು ತಿಳಿದರೇ ನೀವು ಬಳಸಲು ಆರಂಭಿಸುತ್ತೀರಿ. ನಾವು ಇಂದು ಹೇಳಲು ಹೊರಟಿರುವುದು ಭೂಮಿಯಲ್ಲಿಯೇ ಅತಿ ಹೆಚ್ಚು ಪ್ರೊಟೀನ್ ಹೊಂದಿರುವ ದ್ವಿದಳ ಧಾನ್ಯ ಹುರುಳಿಯ ಬಗ್ಗೆ. ಇವುಗಳಲ್ಲಿ ಅತಿ ಹೆಚ್ಚು ಪ್ರೊಟೀನ್ ಹೊಂದಿರುವ ಕಾರಣ ಯುರೋಪ್ ದೇಶಗಳಲ್ಲಿ ರೇಸ್ ಕುದುರೆಗಳಿಗೆ ಮತ್ತು ಹಸುಗಳಿಗೆ ಆಹಾರವನ್ನಾಗಿ ನೀಡುತ್ತಾರೆ.

ಇತ್ತೀಚಿನ ದಿನಗಳಲ್ಲಿ ಹುರುಳಿ ಬಹಳ ಕಡಿಮೆ ಪ್ರಚಾರ ಪಡೆದುಕೊಳ್ಳಲು ಕಾರಣವೇನೆಂದರೆ ಹುರುಳಿಯನ್ನು ಉಷ್ಣವಲಯದ ವ್ಯವಸಾಯದ ಭೂಮಿಗಳಲ್ಲಿ ಮಾತ್ರ ಬೆಳೆಯಲಾಗುತ್ತಿದೆ. ಹುರುಳಿಯು ಒಂದು ಅತ್ಯುತ್ತಮ ಉ’ತ್ಕರ್ಷ ಆಹಾರವಾಗಿದ್ದು, ಅತಿ ಹೆಚ್ಚು ಕಬ್ಬಿಣ, ಕ್ಯಾಲ್ಸಿಯಂ ಮತ್ತು ಪ್ರೊಟೀನ್ ಹೊಂದಿದೆ. ಇದು ಇತರ ಯಾವುದೇ ದ್ವಿದಳ ಧಾನ್ಯಗಳಿಗೆ ಹೋಲಿಕೆ ಮಾಡಿದರೂ ಕೂಡ ಅತಿ ಹೆಚ್ಚು ಕ್ಯಾಲ್ಸಿಯಂ ಹಾಗೂ ಅತಿ ಹೆಚ್ಚು ಪ್ರೊಟೀನ್ ಹೊಂದಿರುವ ಧಾನ್ಯವಾಗಿದೆ. ಇದರಲ್ಲಿ ಕಡಿಮೆ ಕೊಬ್ಬು ಹಾಗೂ ಹೆಚ್ಚು ಪ್ರಮಾಣದ ಪ್ರೋಟೀನ್ ಇದೆ, ಇನ್ನು ಅಷ್ಟೇ ಅಲ್ಲದೆ ಕಡಿಮೆ ಮೇದಸ್ಸು ಮತ್ತು ಸೋಡಿಯಂನಿಂದ ಕೂಡಿರುವ ಕಾರಣ ಮಧುಮೇಹ ಹೊಂದಿರುವ ಜನರಿಗೆ ಸೂಕ್ತ ಆಹಾರ ವೆನಿಸಿದೆ. ಇದು ಕೇವಲ ಆರಂಭ ಸ್ನೇಹಿತರೇ ಇನ್ನೂ ಸಾಕಷ್ಟು ಅವುಗಳನ್ನು ನಾವು ಇಂದು ಹುರುಳಿಯ ಬಗ್ಗೆ ತಿಳಿಸಿ ಕೊಡಲಿದ್ದೇವೆ.

ಸ್ನೇಹಿತರೇ ಕಚ್ಚಾ ಹುರುಳಿಯೂ ಪೊಲಿಫೆನೋಲ್ಸ್, ಫ್ಲ್ಯಾವೊನೊಯ್ಡ್ಸ್ ಹಾಗೂ ಪ್ರೋಟೀನ್ ಗಳಿಂದ ಸಮೃದ್ಧ ಆಗಿರುವ ಕಾರಣ ನಿಮ್ಮ ಶರೀರವನ್ನು ತರುಣರಂತೆ ಕಾಪಾಡಿಕೊಳ್ಳಲು ಶಕ್ತಿ ನೀಡುತ್ತದೆ, ಇದು ನಿಮ್ಮ ದೇಹದಲ್ಲಿರುವ ಇನ್ಸುಲಿನ್ ನಿ’ರೋಧಕ ಶಕ್ತಿಯನ್ನು ಕಡಿಮೆಗೊಳಿಸಿ ಊಟ ಆದ ನಂತರ ಹೆಚ್ಚಾಗುವ ಮಧುಮೇಹವನ್ನು ತಗ್ಗಿಸುವ ಸಾಮರ್ಥ್ಯವನ್ನು ಹೊಂದಿದೆ. ಅಷ್ಟೇ ಅಲ್ಲಾ ಸಾಮಾನ್ಯವಾಗಿ ಯಾವುದೇ ಅನಾರೋಗ್ಯದ ಹೆಸರು ತೆಗೆದುಕೊಂಡರೂ ಹುರುಳಿ ಪ್ರಯೋಜನಕ್ಕೆ ಬರುತ್ತದೆ, ಹೌದು ಅಸ್ತಮಾ, ಮೂತ್ರ ಸೋರಿಕೆ, ಮೂತ್ರಪಿಂಡದ ಕಲ್ಲುಗಳು, ಹೃದಯ ಸಂಬಂಧಿತ ಸ’ಮಸ್ಯೆಗಳನ್ನು ಹೊಂದಿರುವ ಜನರಿಗೆ ಹುರುಳಿಯನ್ನು ಶಿಫಾರಸು ಮಾಡಲಾಗುತ್ತದೆ. ಇನ್ನು ಕಣ್ಣಿನ ಸೋಂ’ಕು ಮತ್ತು ಮೂಲವ್ಯಾ’ಧಿಯನ್ನು ತಡೆಗಟ್ಟುವಲ್ಲಿ ಹುರುಳಿ ರಾಮಬಾಣವಾಗಿದೆ.

ಇನ್ನೂ ನಿಮ್ಮ ದೇಹಕ್ಕೆ ಅನಗತ್ಯವಾಗಿ ಶೇಖರಣೆಯಾಗಿರುವ ಕೊಬ್ಬನ್ನು ನಿಯಂತ್ರಣ ಮಾಡುವಲ್ಲಿ ಮತ್ತು ಸ್ತ್ರೀಯರ ಋತುಚಕ್ರದ ಸಮಯದಲ್ಲಿ ಹಲವಾರು ಸಮಸ್ಯೆಗಳನ್ನು ನಿಯಂತ್ರಿಸಲು ಹುರುಳಿ ಸೂಕ್ತ ಆಹಾರವಾಗಿದೆ. ಇನ್ನು ಚಳಿಗಾಲಕ್ಕೆ ಬಹಳ ಸೂಕ್ತವೆನಿಸುವ ಹುರುಳಿಯೂ ನಿಮ್ಮ ದೇಹದಲ್ಲಿ ಉಷ್ಣತೆಯನ್ನು ಕಾಪಾಡುತ್ತದೆ. ಇಷ್ಟೆಲ್ಲ ಲಾಭಗಳನ್ನು ಹೊಂದಿರುವ ಹುರುಳಿಯನ್ನು ಇತ್ತೀಚಿನ ದಿನಗಳಲ್ಲಿ ಜನರು ಕಡಿಮೆ ಬಳಸುತ್ತಿರುವುದು ವಿಪರ್ಯಾಸವೇ ಸರಿ. ಒಂದು ವೇಳೆ ನಿಮಗೆ ಇವುಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ ಎಂದಾದರೇ ಮೊಳಕೆ ಕಟ್ಟಿ ತದನಂತರ ಸೇವಿಸಬಹುದಾಗಿದೆ.