ಶಾಲೆ ಬಿಟ್ಟು, ಸಿನೆಮಾಗೆ ಬಂದು, ನಟಿಸಿ ಮತ್ತೆ ದೂರವಾಗಿ ನಟಿ ಮಾನ್ಯ ಸಾಧಿಸಿದನ್ನು ಕಂಡರೇ ನಿಜಕ್ಕೂ ಗ್ರೇಟ್ ಅನಿಸುತ್ತದೆ.

ನಮಸ್ಕಾರ ಸ್ನೇಹಿತರೇ, ಹಲವಾರು ಜನ ತಮ್ಮ ಜೀವನದಲ್ಲಿ ತಮ್ಮ ದಾರಿಯನ್ನು ಹಲವಾರು ಬಾರಿ ಬದಲಾಯಿಸಿರುತ್ತಾರೆ‌. ಆದರೆ ಕೆಲವರು ಬದಲಾಯಿಸಿದ ದಾರಿಯಲ್ಲಿ ಸೋತು ಮತ್ತೆ ತಮ್ಮ ಮೂಲ ಹಾದಿಯಲ್ಲಿ ನಡೆದರೇ ಇನ್ನು ಕೆಲವರು ಯಶಸ್ಸು ಪಡೆದುಕೊಂಡರೂ ಕೂಡ ನನ್ನ ಹಾದಿ ಇದಲ್ಲ ಎಂದು ತಮ್ಮ ಮೂಲ ದಾರಿಗೆ ಮರಳಿ ವಾಪಸಾಗುತ್ತಾರೆ. ಇನ್ನು ಕೆಲವರು ಯಾವುದೇ ದಾರಿಗಳಲ್ಲಿ ಹಾಗಿರಲಿ ಅ’ಡೆತಡೆಗಳು ಬಂದ ತಕ್ಷಣ ಸುಮ್ಮನಾಗಿ ಸೋಲನ್ನು ಒಪ್ಪಿಕೊಂಡುಬಿಡುತ್ತಾರೆ. ಆದರೆ ಸ್ನೇಹಿತರೇ ನಾವು ಇಂದು ಹೇಳುವ ಕಥೆಯನ್ನು ಕೇಳಿದರೇ ಖಂಡಿತ ನಿಮಗೆ ಒಂದು ಸ್ಪೂರ್ತಿದಾಯಕ ಭಾವನೆ ನಿಮ್ಮ ಮನದಲ್ಲಿ ಮೂಡುವುದು ಖಚಿತ. ನಾವು ಇಂದು ಹೇಳಲು ಹೊರಟಿರುವ ಕಥೆ ಮತ್ತೆ ಯಾರದ್ದೂ ಅಲ್ಲ ಬದಲಾಗಿ ದರ್ಶನ್ ಮುರುಳಿ ಸೇರಿದಂತೆ ವಿವಿಧ ನಟರ ಜೊತೆ 41 ಸಿನಿಮಾಗಳಲ್ಲಿ ನಟಿಸಿ ಇದೀಗ ಸಿನಿಮಾ ಚಿತ್ರರಂಗದಿಂದ ದೂರ ಹೊಳೆದಿರುವ ನಟಿ ಮಾನ್ಯ ನಾಯ್ಡು ರವರ ಕಥೆ.

ಹೌದು ಸ್ನೇಹಿತರೇ, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕಥೆಯನ್ನು ಬರೆದುಕೊಂಡಿರುವ ಮಾನ್ಯ ರವರು ಅವರ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ, ನಾನು ಎಲ್ಲರಿಗೂ ಸ್ಪೂರ್ತಿ ನೀಡುವ ಸಲುವಾಗಿ ನನ್ನ ಕಥೆಯನ್ನು ಪೋಸ್ಟ್ನಲ್ಲಿ ಬರೆದು ಹಾಕುತ್ತಿದ್ದೇನೆ, ನಾನು ಸಾಧನೆ ಮಾಡಿದ್ದೇನೆ ಎಂದರೇ ನೀವು ಕೂಡ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಮಾತುಗಳಿಂದ ಆರಂಭಿಸಿರುವ ಮಾನ್ಯರ ರವರು, ನಾನು ಪ್ರೌಢಾವಸ್ಥೆಗೆ ಬರುವ ಮುನ್ನವೇ ನನ್ನ ತಂದೆ ಇಹಲೋಕ ತ್ಯಜಿಸಿದ್ದರು, ಇಂತಹ ಸಂದರ್ಭದಲ್ಲಿ ನಾನು ಕುಟುಂಬಕ್ಕಾಗಿ ನನ್ನ ಶಾಲೆಯನ್ನು ಬಿಡಬೇಕಾದ ಪರಿಸ್ಥಿತಿ ಎದುರಾಯಿತು, ನಾನು ಮೊದಲಿನಿಂದಲೂ ಓದುವುದನ್ನು ಬಹಳ ಇಷ್ಟ ಪಡುತ್ತಿದ್ದೆ, ಆದರೆ ಬೇರೆ ದಾರಿ ಇರಲಿಲ್ಲ. ನನಗೆ ಕೂಡ ಹಸಿವು ಏನು ಎನ್ನುವುದರ ಬಗ್ಗೆ ತಿಳಿದಿದೆ. ಹೀಗೆ ನಾನು ವಿದ್ಯಾಭ್ಯಾಸ ನಿಲ್ಲಿಸಿದ ನಂತರ ನಾನು ಸಿನಿಮಾ ರಂಗಕ್ಕೆ ಬಂದೆ ಅಲ್ಲಿ 41 ಸಿನಿಮಾಗಳಲ್ಲಿ ನಟನೆ ಮಾಡಿದ ಬಳಿಕ, ನಾನು ದುಡಿದ ಹಣವನ್ನು ನನ್ನ ತಾಯಿಗೆ ನೀಡಿ ನಾನು ಮತ್ತೆ ಓದಲು ಆರಂಭಿಸಿದೆ. ನಾನು ಏನನ್ನಾದರೂ ಸಾಧನೆ ಮಾಡಬೇಕು ಎಂಬ ಹಠದಿಂದ SAT ಪರೀಕ್ಷೆಯನ್ನು ಬರೆದೆ ಎಂದು ಹೇಳಿಕೊಂಡಿದ್ದಾರೆ.

ಇನ್ನು ಇವರು ವಿದೇಶಕ್ಕೆ ತೆರಳಿದ ಬಳಿಕ ಅಲ್ಲಿ ವಿದ್ಯಾರ್ಥಿ ವೇತನಕ್ಕಾಗಿ ಇವರು ಉತ್ತಮ ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿತ್ತು ಅದೇ ಕಾರಣಕ್ಕಾಗಿ ಬಹಳ ಕಷ್ಟಪಟ್ಟು ಓದಿ ಕೊನೆಗೂ ವಿದ್ಯಾರ್ಥಿ ವೇತನ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ, ಹೀಗೆ ವಿದ್ಯಾರ್ಥಿ ವೇತನಕ್ಕಾಗಿ ಓದುವ ಸಂದರ್ಭದಲ್ಲಿ ಹಲವಾರು ಬಾರಿ ಬಹಳ ಕ’ಷ್ಟವೆನಿಸುತ್ತದೆ ಎಂದು ಕಾಲೇಜು ತೊರೆಯುವ ಆಲೋಚನೆ ಕೂಡ ಮಾಡಿದ್ದರಂತೆ. ಆದರೆ ದೇವರ ಮೇಲೆ ನಂಬಿಕೆ ಇಟ್ಟು,‌ ಬಹಳ ಕ’ಷ್ಟದಿಂದ ಬಹಳ ಪರಿಶ್ರಮದಿಂದ ಓದಿ ಗುರಿ ತಲುಪಿದ್ದೇನೆ ಎಂದು ಹೇಳಿದ್ದಾರೆ. ಇನ್ನು ಶಿಕ್ಷಣದ ಮಹತ್ವದ ಕುರಿತು ಮಾತನಾಡಿರುವ ಮಾನ್ಯ ರವರು ಯಾರು ಕೂಡ ನಿಮ್ಮಲ್ಲಿರುವ ವಿದ್ಯೆಯನ್ನು ಕ’ದಿಯಲು ಸಾಧ್ಯವಿಲ್ಲ, ಆದಕಾರಣ ನಿಮ್ಮ ಜ್ಞಾನವನ್ನು ದಿನೇದಿನೇ ಹೆಚ್ಚಿಸಿಕೊಳ್ಳುತ್ತಾ ಹೋಗಿ, ನೀವು ಹೀಗೆ ನಿಮ್ಮ ಜ್ಞಾನ ಹೆಚ್ಚಿಸಿಕೊಳ್ಳುತ್ತಾ ಹೋದರೆ ಕೊನೆಯದಾಗಿ ಈ ಜಗತ್ತಿನಲ್ಲಿ ನೀವು ಬಹಳ ಚಿಕ್ಕವರು ಎಂಬ ಅರಿವು ನಿಮಗಾಗುತ್ತದೆ. ಎಲ್ಲರೂ ತಮ್ಮದೇ ಆದ ವಿಶೇಷತೆಯನ್ನು ಹೊಂದಿರುವ ವ್ಯಕ್ತಿಗಳು, ಆದಕಾರಣ ಎಲ್ಲರೂ ಶ್ರ’ಮಿಸಿ ಎಂಬ ಸಂದೇಶವನ್ನು ಸಾರಿದ್ದಾರೆ.

Post Author: Ravi Yadav