ಕೇವಲ ಹಣ್ಣುಗಳ ಸಿಪ್ಪೆಗಳಿಂದ ಹಲ್ಲುಗಳನ್ನು ಬಿಳುಪು ಮಾಡುವುದೇಗೆ ಗೊತ್ತೇ??

ಕೇವಲ ಹಣ್ಣುಗಳ ಸಿಪ್ಪೆಗಳಿಂದ ಹಲ್ಲುಗಳನ್ನು ಬಿಳುಪು ಮಾಡುವುದೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಬಿಳಿ ಹಲ್ಲುಗಳನ್ನು ಹೊಂದಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ ಅದಕ್ಕಾಗಿ ಪ್ರತಿ 6 ತಿಂಗಳಿಗೊಮ್ಮೆ ವೈದ್ಯರ ಬಳಿ ಸ್ವಚ್ಛಗೊಳಿಸುವುದು ಅಸಾಧ್ಯವಾದ ಮಾತು ! ಸಾವಿರಾರು ರೂಪಾಯಿ ಖರ್ಚು ಹಾಗೂ ಆರೋಗ್ಯಕ್ಕೆ ಇದು ಒಳ್ಳೆಯದಲ್ಲ. ಇನ್ನು ಮನೆಮದ್ದುಗಳ ಕುರಿತು ಗಮನ ಹರಿಸೋಣ ಎಂದರೇ ಹೇಗೆ ಮಾಡಬೇಕು ಎನ್ನುವುದನ್ನು ತಿಳಿದಿಕೊಳ್ಳೋಣ ಎಂದರೇ ಎಷ್ಟೋ ಮಾಹಿತಿಗಳು ಸಿಗುತ್ತವೆ. ಆದರೆ ಬಹಳ ಸುಲಭವಾದ ವಿಧಾನಗಳಿಂದ ವಿಶೇಷವಾದದನ್ನು ಏನು ಮಾಡದೇ ಮುತ್ತಿನಂತಹ ಹಲ್ಲುಗಳನ್ನು ಪಡೆಯುವುದು ಹೇಗೆ ಎನ್ನುವ ಮಾಹಿತಿ ಸಿಕ್ಕರೆ ಚಂದ ಅಲ್ಲವೇ? ಬನ್ನಿ ಆ ಕುರಿತು ನಿಮಗೆ ವಿವಿಧ ರೀತಿಯಲ್ಲಿ ಹೇಗೆ ಬಿಳಿಹಲ್ಲನ್ನು ಪಡೆಯಬಹುದು ಎಂಬುದರ ಕುರಿತು ಮಾಹಿತಿ ನೀಡುತ್ತೇವೆ.

ಸ್ನೇಹಿತರೇ ಮೊದಲನೆಯದಾಗಿ ನಿಮಗೆಲ್ಲರಿಗೂ ತಿಳಿದಿರುವಂತೆ ಬಾಳೆಹಣ್ಣು ಸಾಕಷ್ಟು ಪೋಷಕಾಂಶಗಳನ್ನು ದೇಹಕ್ಕೆ ಒದಗಿಸುತ್ತದೆ. ಆದರೆ ಬಾಳಿಹಣ್ಣಿನ ಸಿಪ್ಪೆಯಿಂದ ನೀವು ಹೊಳೆಯುವ ಹಲ್ಲುಗಳನ್ನು ಪಡೆಯಬಹುದಾಗಿದೆ. ಹೌದು ಸ್ನೇಹಿತರೇ, ನೀವು ಮಾಡಬೇಕಾಗಿರುವುದು ಏನೇಂದರೆ ನೀವು ಬಾಳಿ ಹಣ್ಣಿನ ಸಿಪ್ಪೆಯನ್ನು ತೆಗೆದುಕೊಂಡು, ಒಂದೆರಡು ನಿಮಿಷಗಳ ಕಾಲ ಹಲ್ಲುಗಳಿಗೆ ಉಜ್ಜಿ, ಹೀಗೆ ಮಾಡುವುದರಿಂದ ಬಾಳಿಹಣ್ಣಿನಲ್ಲಿರುವ ಪೊಟ್ಯಾಸಿಯಂ, ಮ್ಯಾಂಗನೀಸ್ ಮತ್ತು ಮೆಗ್ನಿಶಿಯಂ ಅಂಶಗಳು ನಿಮ್ಮ ಹಲ್ಲುಗಳಿಗೆ ದೊರೆಯುತ್ತದೆ. ಇದರಿಂದ ಕ್ರಮೇಣ ನಿಮ್ಮ ಹಲ್ಲುಗಳು ಬಿಳಿ ಹೊಳಪನ್ನು ಪಡೆಯುತ್ತವೆ.

ಇನ್ನು ಎರಡನೆಯದಾಗಿ, ಸ್ಟ್ರಾಬೆರಿ ಹಣ್ಣುಗಳನ್ನು ಬಳಸಿಕೊಂಡು ನೀವು ಬಿಳಿ ಹೊಳಪಿನ ಹಲ್ಲುಗಳನ್ನು ಪಡೆಯಬಹುದಾಗಿದೆ. ಹೌದು ಸ್ನೇಹಿತರೇ, ನೀವು ಒಂದೆರಡು ಸ್ಟ್ರಾಬೆರಿ ಹಣ್ಣುಗಳನ್ನು ನುಣ್ಣಗೆ ರುಬ್ಬಿ, ನಿಮ್ಮ ಹಲ್ಲುಗಳಿಗೆ ಹಚ್ಚಿರಿ. ಹೀಗೆ ಮಾಡಿ ಮೂರ್ನಾಲ್ಕು ನಿಮಿಷಗಳ ನಂತರ ನಿಮ್ಮ ಹಲ್ಲುಗಳನ್ನು ಸ್ವಚ್ಛ ನೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ಮಾಲಿಕ್ ಆಸಿಡ್ ಎಂಬ ಅಂಶ ನಿಮ್ಮ ಹಲ್ಲುಗಳಿಗೆ ದೊರೆಯುತ್ತದೆ. ಇದರಿಂದ ನಿಮ್ಮ ಹಲ್ಲುಗಳು ಹೊಳಪನ್ನು ಪಡೆದುಕೊಳ್ಳುತ್ತವೆ. ಇನ್ನು ಇಷ್ಟೇ ಅಲ್ಲದೇ, ಸೇಬು ಮತ್ತು ಕಿತ್ತಳೆ ಹಣ್ಣಿನ ಸಿಪ್ಪೆಗಳನ್ನು ಕೂಡ ಹಲ್ಲುಗಳಿಗೆ ಉಜ್ಜಿ ನೀವು ಬಿಳಿ ಹೊಳಪನ್ನು ಪಡೆಯಬಹುದಾಗಿದೆ. ಇನ್ನು ಹಸಿ ಕ್ಯಾರಟ್ ಸೇವನೆ ಮಾಡುವುದರಿಂದ ಕ್ರಮೇಣ ನಿಮ್ಮ ಹಲ್ಲುಗಳು ಬಿಳಿಯಾಗುತ್ತವೆ.