ಸೊಳ್ಳೆಗಳು ಬರದಂತೆ ನೈಸರ್ಗಿಕವಾಗಿ ತಡೆಯಲು ಈ ಗಿಡಗಳನ್ನು ನೆಡಿ ! ಆರೋಗ್ಯ ಕಾಪಾಡಿಕೊಳ್ಳಿ !

ಸೊಳ್ಳೆಗಳು ಬರದಂತೆ ನೈಸರ್ಗಿಕವಾಗಿ ತಡೆಯಲು ಈ ಗಿಡಗಳನ್ನು ನೆಡಿ ! ಆರೋಗ್ಯ ಕಾಪಾಡಿಕೊಳ್ಳಿ !

ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ಎಲ್ಲಾ ಕಾಲದಲ್ಲೂ ಸೊಳ್ಳೆಗಳು ಕಂಡುಬರುತ್ತದೆ. ಅದರಲ್ಲಿಯೂ ಹೆಚ್ಚಾಗಿ ಚಳಿಗಾಲದಲ್ಲಿ ಮತ್ತು ಮಳೆಗಾಲದಲ್ಲಿ ಕಂಡುಬರುತ್ತದೆ. ಸೊಳ್ಳೆಗಳಿಂದ ಮಲೇರಿಯಾ, ಡೆಂಗ್ಯೂ, ಚಿಕನಗುನ್ಯಾ ಇನ್ನೂ ಮುಂತಾದ ಅನಾರೋಗ್ಯ ಸಮಸ್ಯೆಗಳು ಬರುತ್ತವೆ. ಆದ್ದರಿಂದ, ಸೊಳ್ಳೆಗಳು ಮನೆಯ ಒಳಗೆ ಬರದಂತೆ ನೋಡಿಕೊಳ್ಳಬೇಕು.

ಸೊಳ್ಳೆಗಳನ್ನು ಅಂತ್ಯಗೊಳ್ಸುವ ಸಲುವಾಗಿ ಮಾರುಕಟ್ಟೆಯಲ್ಲಿ ಹಲವಾರು ರೀತಿಯ ದ್ರವಮೂಲದ ಔಷಧಿಗಳು ದೊರೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಸ್ಪ್ರೇ ಗಳು ಮತ್ತು ರಾಸಾಯನಿಕ ಹೊಂದಿರುವ ಪೇಪರ್ ಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಇವುಗಳನ್ನು ಬಳಸುವುದರಿಂದ ಆರೋಗ್ಯದ ಮೇಲೆ ಹಲವಾರು ರೀತಿಯ ಪ್ರಭಾವಗಳು ನಿಧಾನವಾಗಿ ಬೀರುತ್ತವೆ. ಇವುಗಳೆಲ್ಲವನ್ನು ಬಳಸುವ ಬದಲು ಸುರಕ್ಷಿತವಾಗಿರಬೇಕು ಎಂದರೇ ಸೊಳ್ಳೆ ಪರದೆಯನ್ನು ಬಳಸುವುದು ಬಹಳ ಸುಲಭ ವಿಧಾನ. ಆದರೆ ಒಂದು ವೇಳೆ ನೀವು ಸೊಳ್ಳೆಯೇ ಬರದಂತೆ ತಡೆಯಲು ಬಯಸಿದರೇ ನೈಸರ್ಗಿಕವಾಗಿ ಕೆಲವೊಂದು ಗಿಡಗಳನ್ನು ಬೆಳೆಸಬಹುದಾಗಿದೆ. ಇದರಿಂದ ನಿಮಗೆ ಗಿಡಗಳು ಬೆಳೆದಂತೆ ಆಗುತ್ತದೆ,ಅಷ್ಟೇ ಅಲ್ಲದೇ ಸೊಳ್ಳೆಗಳು ದೂರವಿರುತ್ತವೆ.

ಮೊದಲನೆಯದಾಗಿ, ಚೆಂಡು ಹೂವಿನ ಸಸ್ಯ. ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಸಸ್ಯವು ಇದಾಗಿದೆ. ಚೆಂಡು ಹೂವಿನ ಗಿಡವನ್ನು ಸುಲಭವಾಗಿ ಬೆಳೆಯಬಹುದು. ಚೆಂಡು ಹೂವನ್ನು ಪೂಜೆಗಳಿಗೆ ಮತ್ತು ಸಮಾರಂಭದ ಅಲಂಕಾರಕ್ಕಾಗಿ ಬಳಸುತ್ತಾರೆ. ಈ ಗಿಡಗಳನ್ನು ಮನೆಯ ಪ್ರಮುಖ ಬಾಗಿಲಿನಲ್ಲಿ ಬೆಳೆಸುವುದರಿಂದ ಸೊಳ್ಳೆಗಳು ಬರದಂತೆ ಮತ್ತು ಅನೇಕ ರೀತಿಯ ಕೀಟಗಳನ್ನು ಸಹ ಒಳಗೆ ಬರದಂತೆ ತಡೆಯುತ್ತದೆ.

ಇನ್ನೂ ತುಳಸಿ. ತುಳಸಿ ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿ ನೋಡಬಹುದಾದ ಸಸ್ಯ ಇದಾಗಿದೆ. ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಅದರದೇ ಆದ ಒಂದು ವಿಶೇಷ ಸ್ಥಾನವಿದೆ. ತುಳಸಿ ಗಿಡವನ್ನು ಪ್ರತಿದಿನವೂ ಮನೆಗಳಲ್ಲಿ ಪೂಜಿಸುತ್ತಾರೆ ಮತ್ತು
ಪ್ರಮುಖವಾಗಿ ಕೆಲ ದೇವರಿಗೆ ತುಳಸಿಯನ್ನು ಅರ್ಪಿಸುತ್ತಾರೆ. ಸೊಳ್ಳೆಯನ್ನು ನಿವಾರಿಸುವ ಸಸ್ಯಗಳ ಪಟ್ಟಿಯಲ್ಲಿ ತುಳಸಿ ಗಿಡವು ಪ್ರಥಮ ಸ್ಥಾನವನ್ನು ಹೊಂದಿದೆ. ಈ ಸಸ್ಯದಲ್ಲಿ ಬರುವ ವಾಸನೆಯಿಂದ ಸೊಳ್ಳೆಗಳು ಬರುವುದಿಲ್ಲ. ಅಷ್ಟೇ ಅಲ್ಲದೇ ತುಳಸಿ ಗಿಡವು ಅನೇಕ ರೀತಿಯ ಔಷಧಿ ಗುಣವನ್ನು ಹೊಂದಿದೆ. ಈ ಗಿಡವನ್ನು ಬೆಳೆಯಲು ಹೆಚ್ಚು ನೀರು ಮತ್ತು ಸೂರ್ಯನ ಬೆಳಕು ಅವಶ್ಯಕತೆಯಿದೆ.

ಮತ್ತೊಂದು ಸಸ್ಯ ನಿಂಬೆಹುಲ್ಲು. ನಿಂಬೆ ಹುಲ್ಲಿನಲ್ಲಿ ಬಿಡುವ ಹೂವುಗಳಲ್ಲಿ ಇರುವ ಸಿಟ್ರೊನೆಲ್ಲಾ ಎಂಬ ಅಂಶವು ಕೀಟಗಳನ್ನು ಹಿಮ್ಮೆಟ್ಟಿಸುವ ನೈಸರ್ಗಿಕ ಶಕ್ತಿಯನ್ನು ಹೊಂದಿದೆ. ನಿಂಬೆ ಹುಲ್ಲನ್ನು ಸಿಂಬೊಪೊಗನ್ ಸಿಟ್ರೇಟ್ ಎಂದು ಸಹ ಕರೆಯುತ್ತಾರೆ. ನಮ್ಮ ದೇಶದಲ್ಲಿ ಈ ಸಸ್ಯವನ್ನು ಉರಿಯೂತದ ಔಷಧಿಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ ಮತ್ತು ಸುಗಂಧ ದ್ರವ್ಯಗಳ ಉತ್ಪದನೆಯಲ್ಲಿ ಬಳಸಲಾಗುತ್ತದೆ.

ಇನ್ನೊಂದು ರೋಸ್ಮರಿ ಸಸ್ಯ. ಇದು ಒಂದು ಆರೊಮ್ಯಾಟಿಕ್ ಸಸ್ಯವಾಗಿದೆ. ಈ ಸಸ್ಯದಲ್ಲಿ ಬರುವ ಸುವಾಸನೆಯಿಂದ ಸೊಳ್ಳೆಗಳು ನಿಮ್ಮ ಮನೆಯ ಬಳಿಯು ಸಹ ಸುಳಿಯುವುದಿಲ್ಲ. ರೋಸ್ಮರಿ ಸಸ್ಯವು ನೋಡಲು ಸುಂದರವಾಗಿದ್ದು, ಮನೆಯ ಅಲಂಕಾರಕ್ಕಾಗಿಯೂ ಸಹ ಇತ್ತೀಚಿನ ದಿನಗಳಲ್ಲಿ ಬಳಸುತ್ತಿದ್ದಾರೆ. ಈ ಗಿಡವು ಬೆಚ್ಚಗಿನ ಮತ್ತು ಶುಷ್ಕ ತಾಪಮಾನದಲ್ಲಿ ಬೆಳೆಯುತ್ತದೆ. ಇದನ್ನು ತೋಟಗಳಲ್ಲಿ ಬೆಳೆಯುವುದರಿಂದ ತೋಟಗಳಲ್ಲಿ ಸೊಳ್ಳೆ ಮಾತ್ರವಲ್ಲದೆ ಅನೇಕ ಕೀಟಗಳನ್ನು ಸಹ ಬರದಂತೆ ತಡೆಯುತ್ತದೆ.

ಇನ್ನು ಕೊನೆಯದಾಗಿ ಬೆಳ್ಳುಳ್ಳಿ. ಬೆಳ್ಳುಳ್ಳಿ ಸಸ್ಯವನ್ನು ಬೆಳೆಸುವುದರಿಂದ ಸೊಳ್ಳೆಗಳು ಬರುವುದಿಲ್ಲ. ಒಂದು ವೇಳೆ ಬೆಳ್ಳುಳ್ಳಿ ಸಸ್ಯವನ್ನು ನೆಡಲು ಸಾಧ್ಯವಾಗದೆ ಇದ್ದರೆ, ಬೆಳ್ಳುಳ್ಳಿಯನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ಮನೆಯ ಸುತ್ತ ಇಡಬಹುದು ಅಥವಾ ಮನೆಯ ಒಳಗು ಸಹ ಇಡಬಹುದು. ನೈಸರ್ಗಿಕವಾಗಿ ತಯಾರಿಸುವ ಸ್ಪ್ರೇಗಳಿಗೆ ಆರೊಮ್ಯಾಟಿಕ್ ಎಣ್ಣೆಯೊಂದಿಗೆ ಬೆಳ್ಳುಳ್ಳಿಯನ್ನು ಸಹ ಬೆರೆಸಬಹುದು.