ಜಸ್ಟ್ ಒಂದು ತಿಂಗಳು ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತುಪ್ಪ ಸೇವಿಸುವುದರಿಂದ ಸಿಗುವ ಲಾಭಗಳೇನು ಗೊತ್ತಾ?

ಜಸ್ಟ್ ಒಂದು ತಿಂಗಳು ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತುಪ್ಪ ಸೇವಿಸುವುದರಿಂದ ಸಿಗುವ ಲಾಭಗಳೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಆಯುರ್ವೇದದ ಶಾಸ್ತ್ರದ ಪ್ರಕಾರ ಯಾವುದೇ ಚಿಕಿತ್ಸೆಯನ್ನು ಬೆಳಗಿನ ಹೊಟ್ಟೆಯಲ್ಲಿ ತೆಗೆದುಕೊಂಡರೇ ಹೆಚ್ಚು ಪ್ರಭಾವವನ್ನು ಬೀರಿ ನಮ್ಮ ದೇಹಕ್ಕೆ ಹೆಚ್ಚಿನ ಲಾಭವನ್ನು ನೀಡುತ್ತದೆ ಎಂದು ತಿಳಿದುಬರುತ್ತದೆ. ಯಾಕೆಂದರೆ ನಮ್ಮ ಹೊಟ್ಟೆ ಖಾಲಿ ಆಗಿರುವ ಸಂದರ್ಭದಲ್ಲಿ ನಾವು ಏನನ್ನಾದರೂ ಸೇವಿಸಿದರೇ ನಮ್ಮ ದೇಹವು ಬಹಳ ಸುಲಭವಾಗಿ ಅದರಲ್ಲಿರುವ ಅಂಶಗಳನ್ನು ಹೀರಿಕೊಂಡು ನಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲ ಪೋಷಕಾಂಶಗಳನ್ನು ಬಹಳ ಸುಲಭವಾಗಿ ನೀಡುತ್ತದೆ ಎಂದು ವೈದ್ಯಶಾಸ್ತ್ರ ದಿಂದ ಕೂಡ ತಿಳಿದುಬಂದಿದೆ.

ಅದೇ ಕಾರಣಕ್ಕಾಗಿ ಹಲವಾರು ಮನೆಮದ್ದುಗಳನ್ನು ಆಯುರ್ವೇದ ಪದ್ಧತಿಯಲ್ಲಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವಂತೆ ತಿಳಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಆಧುನಿಕ ಜಗತ್ತಿನಲ್ಲಿ ಜನರು ನಿರತವಾಗಿರುವ ಸಂದರ್ಭದಲ್ಲಿ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಬಹಳ ಸುಲಭವಾಗಿ ಮುಂಜಾನೆ ವಿವಿಧ ರೀತಿಯ ಆಹಾರಗಳನ್ನು ಸೇವಿಸುವುದರಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಇಂದು ಅದೇ ನಿಟ್ಟಿನಲ್ಲಿ ನಾವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎದ್ದ ಕೆಲವೇ ಕೆಲವು ನಿಮಿಷಗಳ ಬಳಿಕ ನೀವು ಒಂದು ಚಮಚ ತುಪ್ಪ ತಿಂದರೇ ನಿಮಗೆ ಯಾವ ಲಾಭಗಳು ಸಿಗುತ್ತದೆ ಎಂಬುದನ್ನು ತಿಳಿಸಿ ಕೊಡುತ್ತೇವೆ. ತುಪ್ಪ ಬಹಳ ಹೆಚ್ಚಿನ ಪ್ರಮಾಣದ ಕೊಬ್ಬು ಹೊಂದಿದೆ ಎಂಬ ಮಾತು ಇದೆಯಾದರೂ ಅದರಲ್ಲಿ ಹೆಚ್ಚು ಪ್ರೊಟೀನ್ ಕೂಡ ಇರುವುದರಿಂದ ನಿಮ್ಮ ದೇಹಕ್ಕೆ ಕೊಬ್ಬು ಮತ್ತು ಪ್ರೋಟೀನ್ ಎರಡು ಸಿಗುತ್ತದೆ ಹಾಗೂ ಎರಡು ಅಂಶಗಳು ಕೂಡ ದೇಹಕ್ಕೆ ಅತ್ಯಗತ್ಯ ಎಂಬುದನ್ನು ಮರೆಯಬೇಡಿ.

ಇನ್ನು ಸ್ನೇಹಿತರೇ ನಾವು ತುಪ್ಪ ಸೇವನೆ ಸೇವನೆ ಮಾಡುವುದರಿಂದ ಯಾವ ಲಾಭಗಳು ಉಂಟಾಗುತ್ತವೆ ಎಂಬುದರ ಕುರಿತು ಗಮನಹರಿಸುವುದಾದರೇ ನಿಮ್ಮ ಜೀರ್ಣಕ್ರಿಯೆ ಬಹಳ ಸರಾಗವಾಗಿ ಆಗುತ್ತದೆ, ಅಷ್ಟೇ ಅಲ್ಲದೆ ನಿಮ್ಮ ದೇಹದ ಎಲ್ಲಾ ಜೀವಕೋಶಗಳಿಗೂ ಅಗತ್ಯವಿರುವ ಶಕ್ತಿ ಸಿಗುವುದರಿಂದ ಕೋಶಗಳಿಗೆ ಪೋಷಣೆ ಸಿಗುತ್ತದೆ, ಇನ್ನು ಅಷ್ಟೇ ಅಲ್ಲದೆ ಕೆಲವು ಕೋಶಗಳು ವಿವಿಧ ಕಾರಣಗಳಿಂದ ತಮ್ಮ ಕೆಲಸವನ್ನು ನಿಲ್ಲಿಸಿದ್ದರೇ ಅವುಗಳಿಗೆ ಶಕ್ತಿ ತುಂಬುವ ಕೆಲಸವನ್ನು ತುಪ್ಪ ಮಾಡುತ್ತದೆ. ಇನ್ನು ಅಷ್ಟೇ ಅಲ್ಲದೆ ನೀವು ಒಂದು ಲೋಟ ಬಿಸಿನೀರಿಗೆ ತುಪ್ಪವನ್ನು ಹಾಕಿ ಸೇವನೆ ಮಾಡುವುದರಿಂದ ನಿಮ್ಮ ಚರ್ಮದಲ್ಲಿರುವ ಕೋಶಗಳು ಕೂಡ ಪುನರುಜ್ಜೀವನಗೊಂಡು ತ್ವಚೆ ಹೊಳೆಯುತ್ತದೆ ಹಾಗೂ ವಯಸ್ಸಾದ ರೀತಿ ಕಾಣುವುದಿಲ್ಲ. ನೆ’ರಿಗೆ ಮಾಯವಾಗುತ್ತದೆ.

ಇನ್ನು ಅಷ್ಟೇ ಅಲ್ಲದೆ ಪ್ರಮುಖವಾಗಿ ತುಪ್ಪ ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿರುವ ಗಂಟುಗಳಲ್ಲಿ ನೀವು ಲ್ಯುಬ್ರಿಕೆಂಟ್ ಎಂಬ ಅಂಶ ಶೇಖರಣೆಯಾಗುತ್ತದೆ, ಇದು ದೇಹಕ್ಕೆ ಬಹಳ ಆರೋಗ್ಯಕರವಾದ ಪ್ರಯೋಜನಗಳನ್ನು ನೀಡುತ್ತದೆ ಮತ್ತು ನಿಮ್ಮ ಮೂ’ಳೆಗಳು ಸರಿಯಾದ ರೀತಿಯಲ್ಲಿ ಅತ್ಯಗತ್ಯವಾಗಿರುವ ಎಲ್ಲಾ ಪೋಷಕಾಂಶಗಳನ್ನು ಹೀರಿಕೊಳ್ಳುವಂತೆ ನೋಡಿಕೊಳ್ಳುತ್ತದೆ. ಅಷ್ಟೇ ಅಲ್ಲದೆ ನಿಮ್ಮ ಗಂಟಿನ ಮೂ’ಳೆಗಳು ಬಹಳ ಆರೋಗ್ಯಕರವಾಗಿರುವಂತೆ ತುಪ್ಪ ನೋಡಿಕೊಳ್ಳುತ್ತದೆ.

ಇನ್ನು ಅಷ್ಟೇ ಅಲ್ಲದೆ ಹಲವಾರು ವರ್ಷಗಳಿಂದ ತುಪ್ಪ ತಿಂದರೆ ದಪ್ಪ ಆಗುತ್ತಾರೆ ಎಂಬ ಮಾತಿದೆ. ಆದರೆ ಸ್ನೇಹಿತರೇ ನೀವು ಬೆಳಗಿನ ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿರುವ ಅನಗತ್ಯ ಕೊಬ್ಬು ಗಣನೀಯವಾಗಿ ಇಳಿಕೆಯಾಗುತ್ತದೆ ಯಾಕೆಂದರೆ ಇದರಲ್ಲಿ ಒಮೆಗಾ 3 ಕೊಬ್ಬಿನ ಆಮ್ಲ ಅಧಿಕವಾಗಿದೆ. ಇನ್ನು ಅಷ್ಟೇ ಅಲ್ಲದೆ ನಿಮ್ಮ ಮೆದುಳಿನಲ್ಲಿರುವ ಕೋಶಗಳ ಆರೋಗ್ಯ ಕಾಪಾಡಿಕೊಳ್ಳಲು ಅಗತ್ಯವಿರುವ ಕೊಬ್ಬನ್ನು ತುಪ್ಪ ಒದಗಿಸುತ್ತದೆ. ಇದರಿಂದ ನಿಮ್ಮ ಮೆದುಳಿನ ಕೋಶಗಳು ಸರಿಯಾಗಿ ಕೆಲಸ ಮಾಡಿ ಬಹಳ ಚಟುವಟಿಕೆಯಿಂದ ಕೂಡಿರುವಂತೆ ನೋಡಿಕೊಳ್ಳುತ್ತದೆ. ಇನ್ನು ಇಷ್ಟೇ ಅಲ್ಲದೆ ನಿಮ್ಮ ಪ್ರೇಕ್ಷಕಗಳ ರಚನೆಗೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ತುಪ್ಪ ನೀಡುವುದರಿಂದ ನಿಮ್ಮ ನ’ರಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತವೆ ಹಾಗೂ ನಿಮ್ಮ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಇಷ್ಟೆಲ್ಲ ಲಾಭಗಳನ್ನು ಹೊಂದಿರುವ ತುಪ್ಪವನ್ನು ನೀವು ಮೇಲಿನ ಎಲ್ಲಾ ರೀತಿಯ ಆರೋಗ್ಯ ಗಳನ್ನು ಕಾಪಾಡಿಕೊಳ್ಳಲು ಬಳಸಬಹುದಾಗಿದೆ.