ಈ ಒಂದು ಅದ್ಭುತ ಕಾಳಿನಿಂದ ನಿಮಗೆ 11 ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ ! ಹೇಗೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಭಾರತೀಯ ಪಾಕಪದ್ಧತಿಯಲ್ಲಿ ಬಳಸುವ ಹಲವಾರು ವಿವಿಧ ರೀತಿಯ ಮಸಾಲಾ ಪದಾರ್ಥಗಳು ಹಾಗೂ ಇನ್ನಿತರ ಸಾಮಾನ್ಯ ಪದಾರ್ಥಗಳು ಕೂಡ ನಮ್ಮ ದೇಹಕ್ಕೆ ಅದ್ಭುತವಾದ ಪ್ರಯೋಜನವನ್ನು ನೀಡುತ್ತದೆ ಎಂದು ಮೊದಲಿಗೆ ಆಯುರ್ವೇದ ಪದ್ಧತಿಯಲ್ಲಿ ತಿಳಿಸಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ವೈದ್ಯಶಾಸ್ತ್ರವು ಕೂಡ ಆಯುರ್ವೇದ ಪದ್ಧತಿಯನ್ನು ಒಪ್ಪಿಕೊಳ್ಳುತ್ತಿವೆ. ಹೀಗೆ ನಾವು ಪ್ರತಿನಿತ್ಯ ಬಳಸುವ ಹಲವಾರು ವಿವಿಧ ಪದಾರ್ಥಗಳಲ್ಲಿ ಅಡಗಿರುವ ಲಾಭಗಳನ್ನು ತಿಳಿದುಕೊಂಡು ನಾವು ಸಂದರ್ಭಕ್ಕೆ ತಕ್ಕಂತೆ ಕೊಂಚ ಹೆಚ್ಚು ಬಳಸುವುದರಿಂದ ನಮ್ಮ ದೇಹಕ್ಕೆ ಹಲವಾರು ಆರೋಗ್ಯದ ಲಾಭಗಳು ಸಿಗುತ್ತವೆ. ಇಂದು ನಾವು ಅದೇ ರೀತಿ ನೀವು ದಿನನಿತ್ಯ ಅಡುಗೆಯಲ್ಲಿ ಬಳಸುವ ಓಂಕಾಳು ಅಥವಾ ಅಜವಾಯಿನ್ ಎಂದು ಕರೆಯಲ್ಪಡುವ ಎಂಬ ಪದಾರ್ಥದ ಲಾಭಗಳನ್ನು ತಿಳಿಸಿಕೊಡುತ್ತೇವೆ.

ಸ್ನೇಹಿತರೇ ನೀವು ಓಂ ಕಾಳು ಅನ್ನು ಸಾಮಾನ್ಯವಾಗಿ ಪ್ರತಿ ನಿತ್ಯದ ಅಡುಗೆಯಲ್ಲಿ ಬಳಸುತ್ತೀರಾ, ಇದನ್ನು ಅಡುಗೆಯ ರುಚಿ ಹೆಚ್ಚಿಸಲು ಹಾಗೂ ಗಮಗಮಿಸುವ ವಾಸನೆ ನೀಡಲು ಬಳಸಲಾಗುತ್ತದೆ. ಆದರೆ ಕೇವಲ ರುಚಿ ಮತ್ತು ವಾಸನೆ ಅಷ್ಟೇ ಅಲ್ಲದೆ ಹಲವಾರು ಔಷಧೀಯ ಗುಣಗಳನ್ನು ಓಂಕಾಳು ತನ್ನಲ್ಲಿ ಇಟ್ಟುಕೊಂಡಿದೆ. ಆರೋಗ್ಯದ ಲಾಭಗಳ ಕುರಿತು ಗಮನಹರಿಸುವುದಾದರೇ ಓಂಕಾಳು ಇತ್ತೀಚಿನ ಆಧುನಿಕ ಜೀವನದ ಪ್ರಮುಖ ಆರೋಗ್ಯ ಸಮಸ್ಯೆ ಆಗಿರುವ ಅಜೀರ್ಣತೆ ಏನು ಬಹಳ ಸುಲಭವಾಗಿ ನಿವಾರಿಸುವಂತಹ ಶಕ್ತಿಯನ್ನು ಹೊಂದಿದೆ. ಒಂದು ವೇಳೆ ನೀವು ಅಜೀರ್ಣತೆಗೆ ಸಮಸ್ಯೆಯನ್ನು ಹೊಂದಿದ್ದರೇ ಕೇವಲ ಅರ್ಥ ಟೀ ಚಮಚ ಓಂಕಾಳು ಸೇವನೆ ಮಾಡಿ, ಅಥವಾ ಒಂದು ಲೋಟ ನೀರಿನಲ್ಲಿ ಓಂಕಾಳು ಹಾಕಿಕೊಂಡು ನೀರು ಕುಡಿಯುವುದರಿಂದ ನಿಮಗೆ ಅಜೀರ್ಣತೆಯ ಸಮಸ್ಯೆ ನಿವಾರಣೆಯಾಗುತ್ತದೆ. ಇನ್ನು ಅಷ್ಟೇ ಅಲ್ಲದೇ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಶೀತ, ನೆಗಡಿ, ಕೆಮ್ಮು ನಂತಹ ಆರೋಗ್ಯ ಸಮಸ್ಯೆಗಳಿಗೆ ಓಂಕಾಳು ಬಹಳ ಉತ್ತಮ ಆರೋಗ್ಯಕರ ಮನೆಮದ್ದು ಆಗಿದೆ. ಒಂದು ವೇಳೆ ನೀವು ಶೀತ ನೆಗಡಿ ಕೆಮ್ಮು ಹೊಂದಿದ್ದರೇ ಕೇವಲ 1 ಟೀಚಮಚ ಓಂಕಾಳು ತೆಗೆದುಕೊಂಡು ಪುಡಿಮಾಡಿ, ತದನಂತರ ಒಂದು ಸ್ವಚ್ಛವಾದ ಬಟ್ಟೆಯಲ್ಲಿ ಈ ಪುಡಿಯನ್ನು ಹಾಕಿ ವಾಸನೆ ತೆಗೆದುಕೊಳ್ಳುವುದರಿಂದ ನಿಮಗೆ ಮೇಲಿನ ಎಲ್ಲಾ ಶೀತ ಲಕ್ಷಣಗಳು ಕಡಿಮೆಯಾಗುತ್ತವೆ.

ಅಷ್ಟೇ ಅಲ್ಲಾ ಸ್ನೇಹಿತರೇ ಕೆಲವರು ಸಾಮಾನ್ಯ ಕಫದಿಂದ ಹಾಗೂ ಕೆಮ್ಮಿನ ಸಮಸ್ಯೆಯಿಂದ ಬಳಲುತ್ತಿದ್ದರೇ, ಒಂದು ಚಮಚ ಜೇನು ತುಪ್ಪದೊಂದಿಗೆ ಒಂದು ಚಮಚ ಓಂಕಾಳು ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ ಸೇವನೆ ಮಾಡುವುದರಿಂದ ಕಫ ಹಾಗೂ ಕೆಮ್ಮಿನ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಆಯುರ್ವೇದ ಶಾಸ್ತ್ರ ತಿಳಿಸುತ್ತದೆ. ಇನ್ನು ನೀವು ಒಂದು ವೇಳೆ ಜ್ವರ ಹೊಂದಿದ್ದರೂ ಕೂಡ ಓಂಕಾಳು ಬಳಸಿಕೊಂಡು ಜ್ವರವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ, ನೀವು ಮಾಡಬೇಕಾಗಿರುವುದು ಇಷ್ಟೇ 1 ಚಮಚ ಓಂಕಾಳು, ಧನಿಯಾ ಹಾಗೂ ಒಂದು ಚಮಚ ಜೀರಿಗೆಯನ್ನು ತೆಗೆದುಕೊಂಡು ಸಣ್ಣ ಉರಿಯಲ್ಲಿ ಹುರಿಯಿರಿ, ಈ ಮಿಶ್ರಣವನ್ನು ಪುಡಿಮಾಡಿಕೊಂಡು ನೀವು ಕಷಾಯ ತಯಾರು ಮಾಡಿ ಕುಡಿಯುವುದರಿಂದ ನಿಮ್ಮ ಜ್ವರ ಕಡಿಮೆಯಾಗುತ್ತದೆ. ಇನ್ನು ಅಷ್ಟೇ ಅಲ್ಲದೆ ನಿಮಗೆ ಹುಳಿತೇಗು ಸಮಸ್ಯೆ ಇದ್ದರೇ ನೀವು ಒಂದು ಚಮಚ ಓಂಕಾಳು ತೆಗೆದುಕೊಂಡು ಬಿಸಿ ನೀರಿನೊಂದಿಗೆ ಬೆರೆಸಿ ಕುಡಿಯುವುದರಿಂದ ನಿಮಗೆ ಉಳಿತೇಗು ಸಮಸ್ಯೆ ಬಹಳ ವೇಗವಾಗಿ ಕಡಿಮೆಯಾಗುತ್ತದೆ.

ಇಷ್ಟೇ ಅಲ್ಲದೆ ಒಂದು ವೇಳೆ ನಿಮಗೆ ಗಂಟಲು ನೋವು ಇದ್ದರೇ ನೀವು ಅರ್ಧಚಮಚ ಓಂಕಾಳು ತೆಗೆದುಕೊಂಡು ನಿಮ್ಮ ಬಾಯಿಯಲ್ಲಿ ಅಗೆಯುತ್ತಾ, ಅದರ ರಸವನ್ನು ನುಂಗುವುದರಿಂದ ನಿಮ್ಮ ಗಂಟಲು ನೋವು ಬೇಗನೆ ಕಡಿಮೆಯಾಗುತ್ತದೆ. ಇನ್ನು ಇಷ್ಟೇ ಅಲ್ಲದೆ ಬಿಸಿ ನೀರಿನಲ್ಲಿ ಓಂ ಕಾಳನ್ನು ಬೆರೆಸಿ ಕುಡಿಯುವುದರಿಂದ ನಿಮಗೆ ತಲೆನೋವು ಹಾಗೂ ಎದೆ ಉರಿ ಕಡಿಮೆಯಾಗುತ್ತದೆ. ಹೀಗೆ ಹೇಳುತ್ತಾ ಹೋದರೆ ಇನ್ನೂ ಹತ್ತು ಹಲವಾರು ಲಾಭಗಳನ್ನು ಓಂಕಾಳು ಹೊಂದಿದೆ, ನಾವು ಸಾಮಾನ್ಯವಾಗಿ ಅಡುಗೆಮನೆಯಲ್ಲಿ ಬಳಸುವ ಈ ಕಾಳಿನಿಂದ ಇಷ್ಟೆಲ್ಲಾ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದರೇ ಕೆಲವು ಕ್ಷಣಗಳ ಕಾಲ ಆಶ್ಚರ್ಯವಾಗುತ್ತದೆ.

Post Author: Ravi Yadav