ಬೆಳ್ಳಿ ಕಾಲುಂಗುರ ದಲ್ಲಿರುವ ಆರೋಗ್ಯದ ರಹಸ್ಯವೇನು ಗೊತ್ತೇ? ವಿಜ್ಞಾನಿಗಳಿಗೂ ಸವಾಲಾಗಿರುವ ನಮ್ಮ ಪೂರ್ವಜರ ಜ್ಞಾನ

ಬೆಳ್ಳಿ ಕಾಲುಂಗುರ ದಲ್ಲಿರುವ ಆರೋಗ್ಯದ ರಹಸ್ಯವೇನು ಗೊತ್ತೇ? ವಿಜ್ಞಾನಿಗಳಿಗೂ ಸವಾಲಾಗಿರುವ ನಮ್ಮ ಪೂರ್ವಜರ ಜ್ಞಾನ

ನಮಸ್ಕಾರ ಸ್ನೇಹಿತರೇ, ನಮ್ಮ ಪೂರ್ವಜರು ತಿಳಿದುಕೊಂಡಿರುವ ಹಲವಾರು ವಿಷಯಗಳು ಹಾಗೂ ಅವರು ಆಚರಿಸಿಕೊಂಡು ಬಂದಿರುವ ಹಲವಾರು ಆಚರಣೆಗಳ ಹಿಂದೆ ಅಡಗಿ ಕುಳಿತಿರುವ ವೈಜ್ಞಾನಿಕ ಕಾರಣಗಳನ್ನು ನೋಡಿದರೇ ಇಂದಿಗೂ ಕೂಡ ಆಧುನಿಕ ವಿಜ್ಞಾನಿಗಳು ಅದೇಗೇ ಹಿಂದೂ ಧರ್ಮದಲ್ಲಿ ಹಿರಿಯರು ಈ ಎಲ್ಲಾ ವೈಜ್ಞಾನಿಕ ಕಾರಣಗಳನ್ನು ಅರಿತುಕೊಂಡಿದ್ದರು ಎಂದು ಒಂದು ಕ್ಷಣ ಆಶ್ಚರ್ಯಪಡುತ್ತಾರೆ. ನಾವು ಹಲವಾರು ವರ್ಷಗಳಿಂದ ಅದೇ ರೀತಿ ಆಚರಿಸಿಕೊಂಡು ಬಂದಿರುವ ಕಾಲುಂಗುರ ತೊಡುವ ಪದ್ಧತಿಯಲ್ಲಿರುವ ವೈಜ್ಞಾನಿಕ ಕಾರಣಗಳನ್ನು ತಿಳಿದುಕೊಂಡರೇ ನೀವು ಒಂದು ಕ್ಷಣ ಆಶ್ಚರ್ಯ ಪಡುತ್ತೀರಿ. ಬನ್ನಿ ಹಾಗಿದ್ದರೆ ವೈಜ್ಞಾನಿಕ ಕಾರಣಗಳು ಸಮೇತ ಇಂದು ಬೆಳ್ಳಿ ಕಾಲುಂಗುರ ವನ್ನು ಮಹಿಳೆಯರು ಯಾಕೆ ಧರಿಸಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಹಿಂದೂ ಧರ್ಮದ ಪ್ರಕಾರ ಬೆಳ್ಳಿಯ ಕಾಲುಂಗುರ ಒಂದು ಮಕ್ಕಳಿಗೆ ವೈವಾಹಿಕ ಜೀವನದ ಸಂಕೇತವಾಗಿ ಪರಿಗಣಿಸಲಾಗುತ್ತದೆ. ಮುತ್ತೈದೆಗೆ ಇರುವ ಐದು ಮುತ್ತುಗಳಲ್ಲಿ ಕಾಲುಂಗುರ ಸ್ಥಾನ ಪಡೆದುಕೊಂಡಿದ್ದು, ಕಾಲುಂಗುರವನ್ನು ವೈವಾಹಿಕ ಮಹಿಳೆಯರು ಸೌಭಾಗ್ಯ ಎಂದು ಪರಿಗಣಿಸುತ್ತಾರೆ ಹಾಗೂ ಇದನ್ನು ದೇವರ ಸಮಾನ ದಲ್ಲಿ ಕಂಡು ಪೂಜಿಸುತ್ತಾರೆ. ನಮ್ಮ ಪೂರ್ವಜರು ಬೆಳ್ಳಿಯ ಕಾಲುಂಗುರ ತೊಡುವ ಆಚರಣೆಯನ್ನು ಹಿಂದಿನ ಕಾಲದಿಂದಲೂ ಮಾಡಿಕೊಂಡು ಬರುತ್ತಿದ್ದಾರೆ, ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರು ಚಿನ್ನದ ಕಾಲುಂಗುರ ತೊಡುವ ಮೂಲಕ ಆಚರಣೆಯನ್ನು ಮರೆತಂತೆ ಕಾಣುತ್ತಿದೆ.

ಇನ್ನು ಅಸಲಿಗೆ ತಮ್ಮ ಪಾದದ ಎರಡನೇ ಬೆರಳಿಗೆ ವಿವಾಹಿತ ಮಹಿಳೆಯರು ಯಾಕೆ ಕಾಲುಂಗುರವನ್ನು ತೊಡುತ್ತಾರೆ ಎಂಬುದರ ಕುರಿತು ಗಮನಹರಿಸುವುದಾದರೇ ಇದರಿಂದ ಕೆಲವೊಂದು ಶೃಂಗಾರದ ಪರಿಣಾಮಗಳು ಸಿಗುತ್ತವೆ. ಇನ್ನು ಅಷ್ಟೇ ಅಲ್ಲದೆ ಆಯುರ್ವೇದ ಪದ್ಧತಿಯ ಪ್ರಕಾರ ಮಹಿಳೆಯರ ಪಾದದಲ್ಲಿನ ಎರಡನೇ ಬೆರಳಿನ ನರವು ನೇರವಾಗಿ ಗರ್ಭಕೋಶಕ್ಕೆ ಸಂಪರ್ಕ ಹೊಂದಿರುತ್ತದೆ, ಹೀಗೆ ಬೆಳ್ಳಿ ಕಾಲುಂಗುರ ವನ್ನು ತೊಡುವುದರಿಂದ ಬೆರಳುಗಳು ಮತ್ತು ಮಹಿಳೆಯರ ಗರ್ಭಕೋಶದ ಆರೋಗ್ಯದ ಮೇಲೆ ನೇರ ಪರಿಣಾಮವನ್ನು ಬೀರಿ ಉತ್ತಮ ಸ್ಥಿತಿಯಲ್ಲಿ ಇರುವಂತೆ ಮಾಡುತ್ತವೆ. ಹೀಗೆ ಮಾಡುವುದರಿಂದ ಮಹಿಳೆಯರಿಗೆ ಸಾಮಾನ್ಯವಾಗಿ ಗರ್ಭಕೋಶ ಸಂಬಂಧಿತ ಸಮಸ್ಯೆಗಳು ಕಾಣಿಸುವುದಿಲ್ಲ, ಅಷ್ಟೇ ಅಲ್ಲದೇ ವಿವಾಹಿತ ಮಹಿಳೆಯರಿಗೆ ಋತುಚಕ್ರವು ಯಾವುದೇ ಸಮಸ್ಯೆ ಇಲ್ಲದೆ ಸರಾಗವಾಗಲಿದೆ ಎಂದು ವೈದ್ಯಶಾಸ್ತ್ರ ಹೇಳುತ್ತದೆ.

ಇನ್ನು ಹೇಳುವುದಾದರೆ ಬೆಳ್ಳಿ ಕಾಲುಂಗುರವನ್ನು ವಿವಾಹಿತ ಮಹಿಳೆಯರು ಧರಿಸುವುದರಿಂದ ವಿಶ್ವದಲ್ಲಿನ ಧನಾತ್ಮಕ ಶಕ್ತಿ ಮಹಿಳೆಯರಿಗೆ ಸಿಗುತ್ತದೆ, ಹೀಗೆ ಧನಾತ್ಮಕ ಶಕ್ತಿ ನಿಮ್ಮ ಪಾದದಿಂದ ಮೇಲ್ಮುಖವಾಗಿ ಹರಿಯುವ ಕಾರಣ ನಿಮ್ಮ ದೇಹದಲ್ಲಿನ ಎಲ್ಲಾ ಋಣಾತ್ಮಕ ಅಂಶಗಳು ನಿಮ್ಮ ಕಾಲ್ಬೆರಳುಗಳ ಮೂಲಕ ಭೂಮಿಯನ್ನು ತಲುಪಲಿವೆ ಎಂದು ಆಯುರ್ವೇದ ತಿಳಿಸುತ್ತದೆ, ಇನ್ನು ಪ್ರಮುಖವಾಗಿ ಗರ್ಭಕೋಶದ ಮೂಲಕ ಮಹಿಳೆಯರ ಪಾದದ ಬೆರಳಿನ ನರವು ನೇರವಾಗಿ ಹೃದಯಕ್ಕೆ ಸಂಪರ್ಕವನ್ನು ಹೊಂದಿರುವ ಕಾರಣ ನಿಮ್ಮ ಹೃದಯದಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿ ಋಣಾತ್ಮಕ ಅಂಶವನ್ನು ಹೊರಗೆ ಹಾಕಲು ಬೆಳ್ಳಿ ಕಾಲುಂಗುರವು ಸಹಾಯ ಮಾಡುತ್ತದೆ ಎಂದು ವೈದ್ಯಶಾಸ್ತ್ರ ಹೇಳುತ್ತದೆ. ಇಷ್ಟೆಲ್ಲ ಲಾಭಗಳನ್ನು ತಿಳಿದುಕೊಂಡು ನಮ್ಮ ಪೂರ್ವಜರು ಬೆಳ್ಳಿ ಕಾಲುಂಗುರ ಧರಿಸುವುದನ್ನು ಒಂದು ಆಚರಣೆಯನ್ನಾಗಿ ಮಾಡಿಕೊಂಡು ಬಂದಿರುವುದು ನಿಜಕ್ಕೂ ಆಶ್ಚರ್ಯದ ಸಂಗತಿಯೇ ಸರಿ.