ಸಂಜೆಯ ಸಮಯ ಈ ಕೆಲಸಗಳನ್ನು ಮಾಡಿದರೇ ಕಷ್ಟಗಳು ಹುಡುಕಿಕೊಂಡು ಬರಲಿವೆ ! ಮಾಡುತ್ತಿದ್ದರೇ ಈ ಕೂಡಲೇ ನಿಲ್ಲಿಸಿ.

ಸಂಜೆಯ ಸಮಯ ಈ ಕೆಲಸಗಳನ್ನು ಮಾಡಿದರೇ ಕಷ್ಟಗಳು ಹುಡುಕಿಕೊಂಡು ಬರಲಿವೆ ! ಮಾಡುತ್ತಿದ್ದರೇ ಈ ಕೂಡಲೇ ನಿಲ್ಲಿಸಿ.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಹಿಂದೂ ಪುರಾಣಗಳ ಪ್ರಕಾರ ನಮ್ಮ ಮನೆಯಲ್ಲಿ ಅಷ್ಟಲಕ್ಷ್ಮಿಗಳು ನೆಲೆಸಿದ್ದರೇ ನಮಗೆ ಅದೃಷ್ಟ ಒಲಿದು ಬರುತ್ತದೆ. ಯಾವುದೇ ಕಾರಣಕ್ಕೂ ಯಾವುದೇ ವಿಚಾರಗಳಲ್ಲಿ ಕಷ್ಟವೇ ಕಾಣಿಸುವುದಿಲ್ಲ. ಆದರೆ ನಮ್ಮ ಮನೆಯಲ್ಲಿ ಅಷ್ಟಲಕ್ಷ್ಮಿ ಗಳು ನೆಲೆಸಬೇಕಾದರೆ, ನಮ್ಮಲ್ಲಿನ ಪ್ರತಿಯೊಂದು ಆಚಾರ-ವಿಚಾರಗಳು ಸರಿ ಇರಬೇಕು ಎಂದು ಕೂಡ ಪುರಾಣಗಳು ಹೇಳುತ್ತವೆ. ನಿತ್ಯವೂ ವಾದ-ವಿವಾದಗಳ ಜೊತೆ ಬಳಸಬಾರದ ಪದಗಳನ್ನು ಬಳಸುತ್ತಾ, ಶಾಂತಿ ಇಲ್ಲದ ಮನೆಯಲ್ಲಿ ಆಚಾರ-ವಿಚಾರಗಳನ್ನು ಪಾಲಿಸದೇ ಇದ್ದಲ್ಲಿ ಯಾವುದೇ ಕಾರಣಕ್ಕೂ ಎಷ್ಟೇ ಸಂಪತ್ತಿದ್ದರೂ ಕೂಡ ಅಷ್ಟಲಕ್ಷ್ಮಿಗಳು ನಮ್ಮ ಮನೆಯನ್ನು ಬಿಟ್ಟು ತೆರಳಿ ನಮ್ಮ ಜೀವನ ಕ್ರಮೇಣ ಕೆಳಗಿಳಿಯುತ್ತದೆ ಎಂಬ ನಂಬಿಕೆ ಹಿಂದೂ ಧರ್ಮಗ್ರಂಥಗಳಲ್ಲಿ ಇದೆ.

ಅದರಲ್ಲಿಯೂ ಕೆಲವೊಂದು ಕೆಲಸಗಳನ್ನು ನಾವು ಸೂರ್ಯಾಸ್ತದ ಸಮಯದಲ್ಲಿ ಅಥವಾ ಸಾಯಂಕಾಲದ ಸಮಯದಲ್ಲಿ ಮಾಡಬಾರದು ಎಂದು ಪುರಾಣಗಳು ಹೇಳುತ್ತವೆ. ಹೀಗೆ ಮಾಡುವುದರಿಂದ ನಮ್ಮ ಜೀವನದ ಕೊನೆಯವರೆಗೂ ನಾವು ಎಂದಿಗೂ ಬಡತನದಿಂದ ಹಾಗೂ ದುಃ’ಖದಿಂದ ದೂರವಾಗಲು ಸಾಧ್ಯವೇ ಇಲ್ಲ ಎಂದು ಪುರಾಣಗಳು ಹೇಳುತ್ತವೆ. ಹಾಗಿದ್ದರೆ ಯಾವ ಕೆಲಸಗಳನ್ನು ನಾವು ಸಂಜೆಯ ಸಮಯದಲ್ಲಿ ಮಾಡಬಾರದು ಎಂಬುದನ್ನು ತಿಳಿದುಕೊಳ್ಳೋಣ. ಮೊದಲನೆಯದಾಗಿ ಸ್ನೇಹಿತರೇ ಮುಸ್ಸಂಜೆಯ ಸಮಯದಲ್ಲಿ ನಿಮ್ಮ ಮನೆ ವಾದ-ವಿವಾದಗಳಿಂದ ಕೂಡಿರಬಾರದು, ಅಂದರೆ ಏನು ಬಳಸಬಾರದ ಪದಗಳನ್ನು ಬಳಸಿಕೊಂಡು ಏರುಧ್ವನಿಯಲ್ಲಿ ಮಾತನಾಡುತ್ತಾ ಮುಸ್ಸಂಜೆಯನ್ನು ನೀವು ಕಳೆದಲ್ಲಿ, ನಿಮ್ಮ ಮನೆಯಲ್ಲಿ ಅಷ್ಟಲಕ್ಷ್ಮಿ ಗಳು ಯಾವುದೇ ಕಾರಣಕ್ಕೂ ನೆನೆಸುವುದಿಲ್ಲ. ಯಾಕೆಂದರೆ ಮುಸ್ಸಂಜೆಯ ಸಮಯದಲ್ಲಿ ಹಿಂದೂ ಧರ್ಮ ಗ್ರಂಥಗಳ ಪ್ರಕಾರ ಧಾರ್ಮಿಕ ಆಚರಣೆಗಳು ಅಂದರೇ ಪೂಜಾಕಾರ್ಯಗಳು ನೆರವೇರಬೇಕು.

ಇನ್ನು ಅಷ್ಟೇ ಅಲ್ಲ ಸಂಜೆಯ ಸಮಯದಲ್ಲಿ ನೀವು ಯಾವುದೇ ಕಾರಣಕ್ಕೂ ಮನೆಯನ್ನು ಸ್ವಚ್ಛಗೊಳಿಸುವುದಾಗಲಿ ಅಥವಾ ಕಸವನ್ನು ಗುಡಿಸುವ ಕೆಲಸ ಮಾಡಬಾರದು. ಸಂಜೆಯ ಮೊದಲು ನಿಮ್ಮ ಮನೆಯನ್ನು ಸ್ವಚ್ಛವಾಗಿರಿಸಿ. ಹೀಗೆ ನೀವು ಸಂಜೆಯ ಹೊತ್ತಿನಲ್ಲಿ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಲಕ್ಷ್ಮೀದೇವಿ ನಿಲ್ಲಿಸುವುದಿಲ್ಲ ಎಂದು ಹಿಂದೂ ಗ್ರಂಥಗಳು ಹೇಳುತ್ತವೆ. ಯಾಕೆಂದರೆ ಮುಸ್ಸಂಜೆಯ ಸಮಯ ಲಕ್ಷ್ಮಿ ದೇವಿಗೆ ಪೂಜೆ ಮಾಡುವುದಕ್ಕೆ ಸೂಕ್ತವಾಗಿದೆ, ಆ ಸಮಯವನ್ನು ನೀವು ಮನೆಯ ಸ್ವಚ್ಛತೆಗೆ ಬಳಸಿದ್ದಲ್ಲಿ ಧನಾತ್ಮಕ ಶಕ್ತಿ ಅಂತ್ಯವಾಗುತ್ತದೆ ಎಂದು ಪುರಾಣಗಳು ಹೇಳುತ್ತವೆ.

ಇನ್ನು ನೀವು ಹಿಂದೂ ಧರ್ಮ ಪುರಾಣಗಳ ಪ್ರಕಾರ ಸಂಜೆಯ ಸಮಯ ತಾಯಿ ಲಕ್ಷ್ಮಿದೇವಿಯು ಧರೆಗಿಳಿದು ಮನೆಗೆ ಬರುತ್ತಾಳೆ ಎಂಬ ನಂಬಿಕೆ ಇರುವುದರಿಂದ ಈ ಸಮಯದಲ್ಲಿ ಕೆಲವೊಂದು ಚಟುವಟಿಕೆಗಳು ಮಾಡಬಾರದಾಗಿದೆ, ಇದರಿಂದ ನಿಮ್ಮ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಕಾಣಿಸುತ್ತವೆ. ಪ್ರಮುಖವಾಗಿ ನೀವು ಸಂಜೆಯ ಸಮಯದಲ್ಲಿ ಮಲಗಬಾರದು, ಯಾಕೆಂದರೆ ನೀವು ನಿದ್ರೆ ಮಾಡುತ್ತಿರುವ ಸಂದರ್ಭದಲ್ಲಿ ನಿಮ್ಮ ಮನಸ್ಸು ಮತ್ತು ನಿಮ್ಮ ನೆನಪಿನ ಶಕ್ತಿ ಬಹಳ ಕಡಿಮೆ ಇರುತ್ತದೆ, ಇದರಿಂದ ಸ್ಥೂ’ಲಕಾಯದಿಂದ ಆರೋಗ್ಯ ಸಮಸ್ಯೆ ಉಂಟಾಗಬಹುದು. ಇನ್ನು ಪ್ರಮುಖವಾಗಿ ನೀವು ಸಂಜೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ನಿಮ್ಮ ಮನೆಯ ಮುಂದೆ ಇರುವ ತುಳಸಿ ಗಿಡ ದಲ್ಲಿ ಎಲೆಗಳನ್ನು ಕೀಳಬೇಡಿ. ಕೇವಲ ತುಳಸಿ ಅಷ್ಟೇ ಅಲ್ಲ ದೂರ್ವೆ ಮತ್ತು ಇನ್ನಿತರ ಸಸ್ಯಗಳ ಎಲೆಗಳನ್ನು ಯಾವುದೇ ಕಾರಣಕ್ಕೂ ಕೀಳಬಾರದು. ಸಂಜೆ ಸಮಯದಲ್ಲಿ ಈ ರೀತಿ ಮಾಡುವುದರಿಂದ ನಿಮ್ಮ ಮನೆಗೆ ಬಡತನ ಹುಡುಕಿಕೊಂಡು ಬರಲಿದೆ, ಇನ್ನು ವೈಜ್ಞಾನಿಕ ಕಾರಣವನ್ನು ತಿಳಿಸುವುದಾದರೂ ಸಂಜೆಯ ಸಮಯದಲ್ಲಿ ಎಲೆಗಳನ್ನು ಕಿತ್ತರೇ ಗಿಡವು ನಿರ್ಜೀವ ಗೊಳ್ಳುತ್ತದೆ ಎಂಬ ಅಂಶವನ್ನು ವಿಜ್ಞಾನಶಾಸ್ತ್ರ ಕೂಡ ಹೇಳುತ್ತದೆ.