ಕೇವಲ ಒಂದು ನಿಂಬೆ ರಸದ ಮೂಲಕ ಸಂತನು ತನ್ನ ಶಿಷ್ಯನಿಗೆ ಜೀವನ ಪಾಠ ನೀಡಿದ್ದು ಹೇಗೆ ಗೊತ್ತಾ?

ಕೇವಲ ಒಂದು ನಿಂಬೆ ರಸದ ಮೂಲಕ ಸಂತನು ತನ್ನ ಶಿಷ್ಯನಿಗೆ ಜೀವನ ಪಾಠ ನೀಡಿದ್ದು ಹೇಗೆ ಗೊತ್ತಾ?

ನಮಸ್ಕಾರ ಸ್ನೇಹಿತರೇ ಎಲ್ಲರ ಜೀವನದಲ್ಲಿಯೂ ಕಹಿ ಘಟನೆಗಳು ನಡೆಯುತ್ತವೆ. ಅಸಲಿಗೆ ಕಹಿ ಘಟನೆಗಳು ಇಲ್ಲದೆ ಎಲ್ಲವೂ ನಾವು ಅಂದುಕೊಂಡಂತೆ ಆದರೆ ನಾವು ಮನುಜರು ಆಗಿರುವುದಿಲ್ಲ, ಬದಲಾಗಿ ದೇವರಾಗುತ್ತೇವೆ. ಹೀಗಿರುವಾಗ ಪ್ರತಿಯೊಬ್ಬರ ಜೀವನದಲ್ಲಿಯೂ ಕಹಿ ಘಟನೆಗಳು ನಡೆದಿರುತ್ತವೆ. ಇಂದು ನಾವು ಆ ಕಹಿ ಘಟನೆಗಳು ನಿಮ್ಮ ಜೀವನದಲ್ಲಿ ನಡೆದಾಗ ಯಾವ ರೀತಿ ಪರಿಸ್ಥಿತಿಯನ್ನು ನಿಭಾಯಿಸಬೇಕು ಎಂಬುದಕ್ಕೆ ಒಬ್ಬ ಗುರು, ಶಿಷ್ಯನಿಗೆ ಉದಾಹರಣೆಯ ಮೂಲಕ ಉತ್ತರ ನೀಡಿದ ಅದ್ಭುತ ಜಾನಪದ ಕಥೆಯೊಂದನ್ನು ತಿಳಿದುಕೊಳ್ಳೋಣ.

ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಸಂತರು ಕೆಲವು ಶಿಷ್ಯರೊಂದಿಗೆ ಹಿಂದಿನ ಕಾಲದಲ್ಲಿ ಆಶ್ರಮದಲ್ಲಿ ವಾಸಿಸುತ್ತಿದ್ದರು. ಹಲವಾರು ದಿನಗಳು ಕಳೆದ ಬಳಿಕ ಶಿಷ್ಯರು ಆಶ್ರಮದಿಂದ ತಮ್ಮ ಮನೆಗೆ ತೆರಳಿ ಮತ್ತೆ ಕೆಲವು ದಿನಗಳ ನಂತರ ವಾಪಸಾಗುತ್ತಿದ್ದರು, ಹೀಗೆ ಒಮ್ಮೆ ಒಬ್ಬ ಶಿಷ್ಯ ತನ್ನ ಮನೆಗೆ ಹಿಂತಿರುಗಿ ವಾಪಸಾದ ಬಳಿಕ ಆತನನ್ನು ಗಮನಿಸಿದ ಶಿಕ್ಷಕರು ಈತನು ಸಾಮಾನ್ಯ ರೀತಿಯಂತೆ ವರ್ತಿಸುತ್ತಿಲ್ಲ ಎಂಬುದನ್ನು ಅರಿತರು. ಅವನು ಆಶ್ರಮದ ಜೀವನಕ್ಕೆ ಮತ್ತೊಮ್ಮೆ ಸರಿ ಹೊಂದಲು ಕೆಲವು ಸಮಯ ನೀಡಲು ನಿರ್ಧಾರ ಮಾಡಿ ಕೆಲವು ದಿನಗಳ ಕಾಲ ಆತನನ್ನು ಏನು ಪ್ರಶ್ನೆ ಮಾಡಲು ಹೋಗುವುದಿಲ್ಲ.

ಆದರೆ ದಿನಗಳು ಕಳೆದಂತೆ ಆತ ಇನ್ನು ಖಿನ್ನತೆಗೆ ಒಳಗಾಗಿತ್ತಿದ್ದನು, ಇದನ್ನು ಕಂಡ ಸಂತರು ಆತನಿಗೆ ಜೀವನದ ಪಾಠವನ್ನು ತಿಳಿಸಿ ಕೊಡಬೇಕು ಎಂದು ನಿರ್ಧಾರ ಮಾಡಿ, ಆತ ಅಧ್ಯಯನದ ನಂತರ ‌ಆಶ್ರಮದ ಕೆಲಸದಲ್ಲಿ ನಿರಾಸಕ್ತಿಯಿಂದ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆತನನ್ನು ಕರೆಸಿದರು. ನೀನು ಯಾವ ಕಾರಣಕ್ಕಾಗಿ ಈ ರೀತಿ ಅತೃಪ್ತಿ ಗೊಂಡಿದ್ದೀಯಾ ಎಂದು ಶಿಷ್ಯನನ್ನು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಶಿಷ್ಯ, ತನ್ನ ಮನೆಯಲ್ಲಿ ಹಲವಾರು ಸಂಕಷ್ಟಗಳು ಎದುರಾಗಿದೆ, ಇದೀಗ ಪರಿಸ್ಥಿತಿ ಕೊಂಚ ಸಾಮಾನ್ಯವಾಗುತ್ತಿದೆ. ಆದರೂ ಕೂಡ ನಾನು ಹಳೆಯ ವಿಷಯಗಳನ್ನು ನೆನಪಿಸಿಕೊಂಡಾಗ ನನಗೆ ಇನ್ನೂ ದುಃಖವಾಗುತ್ತಿದೆ ಎಂದು ಉತ್ತರ ನೀಡಿದನು.

ಸಂತರು ಉತ್ತರ ಕೇಳಿದ ಕೂಡಲೇ ಸುಮ್ಮನಾಗಿ, ಹೇಗೂ ಬಂದಿದ್ದೀಯಾ ನಿಂಬೆಹಣ್ಣಿನ ರಸ ಕುಡಿದು ಹೋಗು ಎಂದು ಶಿಷ್ಯನನ್ನು ಕೂರಿಸಿ ಸಂತರು ಸ್ವಲ್ಪ ನೀರಿಗೆ ಹೆಚ್ಚು ಉಪ್ಪು ಹಾಗೂ ಹೆಚ್ಚು ನಿಂಬೆಹಣ್ಣಿನ ರಸವನ್ನು ಮಿಶ್ರಣ ಮಾಡಿ ಶಿಷ್ಯನಿಗೆ ನೀಡುತ್ತಾರೆ. ಶಿಷ್ಯನಿಗೆ ಉಪ್ಪು ಮಿಶ್ರಣವಾಗಿದದ್ದು ತಿಳಿಯದ ಕಾರಣ ಕುಡಿಯುತ್ತಾನೆ. ಆದರೆ ಕೂಡಲೇ ಉಪ್ಪು ಹೆಚ್ಚಾಗಿದೆ ಎಂಬುದನ್ನು ಅರಿತು ಸಂತರಿಗೆ ಗುರುಗಳೇ ಇದರಲ್ಲಿ ಉಪ್ಪು ಹೆಚ್ಚಾಗಿದೆ ಎಂದು ಹೇಳುತ್ತಾನೆ.

ಶಿಷ್ಯನ ಉತ್ತರ ಕಂಡ ಸಂತರು ಓ ಹಾಗಿದ್ದರೇ ಒಂದು ಕೆಲಸ ಮಾಡು ನೀನು ಅದನ್ನು ಚೆಲ್ಲಿ ಬಿಡು ನಾನು ನಿನಗೆ ಮತ್ತೊಮ್ಮೆ ನಿಂಬೆ ರಸವನ್ನು ತಯಾರಿಸಿ ಕೊಡುತ್ತೇನೆ ಎಂದು ಹೇಳುತ್ತಾರೆ. ಸಂತರ ಉತ್ತರದಿಂದ ಶಿಷ್ಯ ಬೇಡ ಗುರುಗಳೇ, ನೀವು ಸಕ್ಕರೆಯನ್ನು ತೆಗೆದುಕೊಂಡು ಬನ್ನಿ ಉಪ್ಪು ಹೆಚ್ಚಾಗಿದ್ದರೂ ಕೂಡ ಸ್ವಲ್ಪ ಹೆಚ್ಚು ಸಕ್ಕರೆ ಹಾಕಿದರೇ ನಿಂಬೆರಸ ಸಾಮಾನ್ಯ ರುಚಿಗೆ ಬರುತ್ತದೆ ಎಂದು ಉತ್ತರ ನೀಡುತ್ತಾನೆ. ಇದೇ ಉತ್ತರಕ್ಕಾಗಿ ಕಾಯುತ್ತಿದ್ದ ಸಂತರು, ನೋಡು ನಾನು ನಿನ್ನಿಂದ ಇದೇ ಉತ್ತರವನ್ನು ನಿರೀಕ್ಷೆ ಮಾಡುತ್ತಿದ್ದೆ, ನಿಂಬೇ ರಸದಲ್ಲಿ ಹೆಚ್ಚು ಉಪ್ಪು ನಮ್ಮ ಜೀವನದಲ್ಲಿ ಇರುವ ದುಃಖಗಳು ಇದ್ದಂತೆ.

ನಮ್ಮ ಜೀವನದಲ್ಲಿ ನಮಗೆ ಇಷ್ಟವಿಲ್ಲದ ಘಟನೆಗಳು ನಡೆದಾಗ ನಾವು ಅವುಗಳನ್ನು ಬದಲಾಯಿಸಲು ಸಾಧ್ಯವಿಲ್ಲ, ಅಂದರೆ ಈಗಾಗಲೇ ನಿಂಬೆ ರಸದೊಂದಿಗೆ ಮಿಶ್ರಣವಾಗಿರುವ ಉಪ್ಪು ಹೊರ ತೆಗೆಯಲು ಸಾಧ್ಯವಿಲ್ಲ, ಆದರೆ ಉಪ್ಪಿನ ಲವನಾಂಶವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ, ಆದರೆ ನೀನು ಅದಕ್ಕೆ ಸಕ್ಕರೆಯನ್ನು ಸೇರಿಸಿ ನಿಂಬೆರಸವನ್ನು ಕುಡಿಯಬಹುದು. ಅದೇ ರೀತಿ ನಿಮ್ಮ ಜೀವನದಲ್ಲಿ ಕೂಡ ಈಗಾಗಲೇ ನಡೆದು ಹೋಗಿರುವ ನಕಾರಾತ್ಮಕ ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಂಡು ನಾವು ವರ್ತಮಾನ ಹಾಗೂ ಭವಿಷ್ಯವನ್ನು ಹಾಳು ಮಾಡಬಾರದು. ನಾವು ಸಕಾರಾತ್ಮಕ ವಿಷಯಗಳನ್ನು ಯೋಚಿಸಿದರೇ ಕ್ರಮೇಣ ನಮ್ಮ ಸಂಕಟಗಳು ಕಡಿಮೆಯಾಗುತ್ತವೆ, ಕೇವಲ ಸಕಾರಾತ್ಮಕ ಮತ್ತು ಒಳ್ಳೆಯ ಸಂಗತಿಗಳಿಂದ ಮಾತ್ರ ನಾವು ಈಗಾಗಲೇ ನಡೆದಿರುವ ನಕಾರಾತ್ಮಕ ಸಂಗತಿಗಳ ಪರಿಣಾಮವನ್ನು ಕಡಿಮೆ ಮಾಡಬಹುದು ಎಂದು ಉತ್ತರ ನೀಡಿದರು.