ವಿಧುರ ನೀತಿ: 5 ವಿಷಯಗಳನ್ನು ಹೊಂದಿರುವವರು ಸದಾ ಸಂತೋಷವಾಗಿರುತ್ತಾರೆ ! ಯಾವ್ಯಾವು ಗೊತ್ತಾ??

ವಿಧುರ ನೀತಿ: 5 ವಿಷಯಗಳನ್ನು ಹೊಂದಿರುವವರು ಸದಾ ಸಂತೋಷವಾಗಿರುತ್ತಾರೆ ! ಯಾವ್ಯಾವು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಮಹಾ ಭಾರತದಲ್ಲಿ ಪಾಂಡವರು ಹಾಗೂ ಕೌರವರ ಚಿಕ್ಕಪ್ಪ ವಿಧುರ ರವರು ಬಹಳ ಒಳ್ಳೆಯ ವಿಚಾರಗಳನ್ನು ಅರಿತುಕೊಂಡಿದ್ದರು ಎಂದು ನಮಗೆ ಪುರಾಣ ಗ್ರಂಥಗಳು ತಿಳಿಸುತ್ತವೆ. ಸಾಕ್ಷಾತ್ ಭಗವಾನ್ ಶ್ರೀಕೃಷ್ಣನು ಕೂಡ ಇವರ ಸದಾಚಾರವನ್ನು ಮೆಚ್ಚಿಕೊಂಡಿದ್ದರು. ಹೀಗೆ ತಮ್ಮ ಜೀವನದ ಉದ್ದಕ್ಕೂ ಸದಾಚಾರ ಗಳಲ್ಲಿ ತೊಡಗಿಕೊಂಡಿದ್ದ ವಿಧುರರು ಪುರಾಣಗಳಿಂದ ಹಿಡಿದು ಆಧುನಿಕ ಜೀವನದ ಗಳವರೆಗೂ ತಮ್ಮ ಲೆಕ್ಕಾಚಾರಗಳನ್ನು ಹಾಕಿ ಒಂದು ಪುಸ್ತಕವನ್ನು ಬರೆದಿದ್ದಾರೆ. ಅದನ್ನು ಎಲ್ಲರೂ ವಿಧುರ ನೀತಿ ಎಂದು ಕರೆಯುತ್ತಾರೆ. ಈ ಪುಸ್ತಕದಲ್ಲಿ ಸರಿ ಹಾಗೂ ತಪ್ಪುಗಳ ಬಗ್ಗೆ ಮಾತನಾಡಿರುವ ವಿಧುರ ರವರು ಮನುಷ್ಯನು 5 ವಿಷಯಗಳನ್ನು ಹೊಂದಿದ್ದರೇ ಆತನು ಬಹಳ ಸಂತೋಷದಿಂದ ಇರುತ್ತಾನೆ, ಆದ ಕಾರಣದಿಂದ ತಮ್ಮ ಜೀವನದಲ್ಲಿ 5 ವಿಷಯಗಳ ಕುರಿತು ಗಮನ ಹರಿಸಬೇಕಾಗಿದೆ ಎಂದು ಹೇಳುತ್ತಾರೆ. ಬನ್ನಿ ಇಂದು ನಾವು ಈ 5 ವಿಷಯಗಳ ಬಗ್ಗೆ ಮಾಹಿತಿ ನೀಡುತ್ತೇವೆ. ಈ ಪುಸ್ತಕವು ನೈತಿಕ ಮೌಲ್ಯಗಳನ್ನು ಬೋಧಿಸುತ್ತದೆ, ಮತ್ತು ಜೀವನದಲ್ಲಿ ಸದ್ಗುಣಗಳ ಮಹತ್ವವನ್ನು ಕೂಡ ತೋರಿಸುತ್ತದೆ.

ಮೊದಲನೆಯದಾಗಿ ಪುರಾಣಗಳಿಂದ ಹಿಡಿದು ಆಧುನಿಕ ಜಗತ್ತಿನ ವರೆಗೂ ಕೂಡ ಆರ್ಥಿಕತೆಗಳು ಅತ್ಯಂತ ವೇಗವಾಗಿ ಬೆಳೆಯುತ್ತಿವೆ. ದಿನೇ ದಿನೇ ಸ್ಪರ್ಧೆ ಹೆಚ್ಚಾಗುತ್ತಿದೆ, ಆದ ಕಾರಣ ವಿಧುರ ನೀತಿಯಲ್ಲಿ ಒಂದು ವೇಳೆ ಒಬ್ಬ ಮನುಷ್ಯ ಉತ್ತಮ ಜೀವನವನ್ನು ಹೊಂದಬೇಕಾದರೇ ಆತ ಯಾವುದಾದರೂ ಒಂದು ಆದಾಯದ ಮೂಲದ ಮೇಲೆ ಅವಲಂಬಿತವಾಗಿರಬಾರದು, ಬದಲಾಗಿ ಒಂದು ಆದಾಯ ಆರಂಭವಾದ ತಕ್ಷಣವೇ ಮತ್ತೊಂದು ಆದಾಯದ ಕುರಿತು ಗಮನ ಹರಿಸಿ ವಿವಿಧ ಮೂಲಗಳಿಂದ ಹಣ ಗಳಿಸುವುದನ್ನು ನೋಡಬೇಕು ಎಂದು ತಿಳಿಸಿದ್ದಾರೆ. ಹೀಗೆ ವಿವಿಧ ಮೂಲಗಳಿಂದ ಆದಾಯ ಇರುವವನು ಸಂತೋಷವಾಗಿರುತ್ತಾರೆ ಎಂಬುದು ವಿಧುರರ ಲೆಕ್ಕಾಚಾರ.

ಇನ್ನು ಎರಡನೆಯದಾಗಿ ಮನುಷ್ಯ ಎಷ್ಟೇ ಹಣ ಗಳಿಸಿದ್ದರೂ ಕೂಡ ಆತನ ಆರೋಗ್ಯ ಬಹಳ ಮುಖ್ಯವಾಗುತ್ತದೆ, ಅದರಲ್ಲಿಯೂ ಮಾನಸಿಕ ಸೀಮಿತ ಕಾಪಾಡಿಕೊಳ್ಳುವುದು ಬಹಳ ಉತ್ತಮ. ಉತ್ತಮ ಆರೋಗ್ಯ ಮತ್ತು ಉತ್ತಮ ಮನಸ್ಥಿತಿ ಇದ್ದರೆ ಕ್ರಮೇಣ ಅವರ ಜೀವನದಲ್ಲಿ ಸಂತೋಷಗಳು ಹೆಚ್ಚಾಗುತ್ತವೆ, ಇದರಿಂದ ಕೆಲಸ ಮಾಡಿ ಹಣ ಗಳಿಸಲು ಕೂಡ ಆಸಕ್ತಿ ಹೆಚ್ಚಾಗುತ್ತದೆ. ಹಣಗಳಿಸುವಾಗ ಆರೋಗ್ಯದ ಕುರಿತು ಕೂಡ ಗಮನಹರಿಸಬೇಕು ಎಂದು ವಿಧುರ ನೀತಿ ಹೇಳುತ್ತದೆ.

ಇನ್ನು ಮೂರನೆಯದಾಗಿ ಮೃದುವಾಗಿ ಮಾತನಾಡುವ ಮನುಷ್ಯರು ಸದಾ ಸಂತೋಷವಾಗಿರುತ್ತಾರೆ, ಇತರರೊಂದಿಗೆ ಬಹಳ ಮಾಧುರ್ಯದಿಂದ ಮಾತನಾಡಬೇಕು ಆಗ ಇತರರು ಹೃದಯವನ್ನು ಗೆಲ್ಲುವುದರಲ್ಲಿ ಮನುಜರು ಯಶಸ್ವಿಯಾಗುತ್ತಾರೆ. ಮತ್ತೊಂದು ಕಡೆ ಯಾವಾಗಲೂ ಇತರರನ್ನು ಟೀ’ಕಿಸುವವರಿಗೆ ಜೀವನದಲ್ಲಿ ಶಾಂತಿ ಸಿಗುವುದಿಲ್ಲ, ಆದಕಾರಣ ಮೃದುವಾಗಿ ಮಾತನಾಡುತ್ತಾ ಇತರರ ಹೃದಯವನ್ನು ಗೆದ್ದು ಜೀವನ ನಡೆಸಿದರೇ ಸಂತೋಷದಿಂದ ಇರಬಹುದು ಎಂದು ವಿಧುರ ನೀತಿ ಹೇಳುತ್ತದೆ.

ಇನ್ನು ಜೀವನದಲ್ಲಿ ಸ’ವಾಲುಗಳು ಬರುವುದು ಸರ್ವೇಸಾಮಾನ್ಯ, ಸ’ವಾಲುಗಳು ಇಲ್ಲದ ಒಂದು ಜೀವನ ಜೀವನವೇ? ಆದರೆ ಆ ಸ’ವಾಲುಗಳನ್ನು ನಿರ್ವಹಣೆ ಮಾಡಲು ಜ್ಞಾನ ನಿಮಗೆ ಅಗತ್ಯವಿರುತ್ತದೆ. ಜ್ಞಾನವನ್ನು ಹೊಂದಿರುವ ಯಾವುದೇ ವ್ಯಕ್ತಿಯು ತನ್ನ ಜೀವನದ ಎಲ್ಲಾ ಸ’ವಾಲುಗಳನ್ನು ಸುಲಭವಾಗಿ ನಿವಾರಿಸಿ ತನ್ನ ಜೀವನದಲ್ಲಿ ಸಂತೋಷವನ್ನು ಕಾಣುತ್ತಾನೆ. ಆದ್ದರಿಂದ ಜ್ಞಾನ ಸಂಪಾದಿಸುವ ಕಡೆಗೆ ಕೂಡ ನೀವು ಗಮನಹರಿಸಬೇಕು ಎಂದು ವಿಧುರ ನೀತಿ ಹೇಳುತ್ತದೆ.

ಇನ್ನು ಕೊನೆಯದಾಗಿ ಕುಟುಂಬ, ಅದರಲ್ಲಿಯೂ ಮಕ್ಕಳು. ಒಬ್ಬ ಮನುಜ ಸಂತೋಷವಾಗಿರಬೇಕು ಎಂದರೆ ಆತನ ಮಕ್ಕಳು ಒಳ್ಳೆವರಾಗಿರಬೇಕು. ಮಕ್ಕಳು ಜೀವನದಲ್ಲಿ ಬೆಳೆದು ಪೋಷಕರಿಗೆ ವಿಧೇಯರಾಗಿ ಇದ್ದರೆ ಪೋಷಕರು ಸಂತೋಷದಿಂದ ವಿಶ್ರಾಂತಿ ಪಡೆದುಕೊಂಡು ತಮ್ಮ ಜೀವನವನ್ನು ಕಳೆಯುತ್ತಾರೆ. ಆದ ಕಾರಣ ಒಬ್ಬ ಮನುಷ್ಯ ಸಂತೋಷವಾಗಿರಬೇಕು ಎಂದರೆ ಆತನ ಮಕ್ಕಳು ಒಳ್ಳೆಯವರ ಆಗಿರಬೇಕು. ಇನ್ನು ಪೋಷಕರು ಕೂಡ ಮಕ್ಕಳನ್ನು ಸರಿಯಾದ ಕ್ರಮದಲ್ಲಿ ಬೆಳೆಸಿದರೆ ಮಾತ್ರ ಹೀಗಾಗಲು ಸಾಧ್ಯ. ನೀವು ಹಣದ ಹಿಂದೆ ಹೋಗಿ, ಮಕ್ಕಳ ಕುರಿತು ಗಮನ ಹರಿಸದೆ ಹೋದರೇ ಎಷ್ಟು ಕೋಟಿ ದುಡಿದರೂ ಕೊನೆಯ ಗಳಿಗೆಗಳಲ್ಲಿ ಸಂತೋಷ ಇರುವುದಿಲ್ಲ.