ಒಣ ಕೊಬ್ಬರಿಯಿಂದ ಸಿಗುವ ಲಾಭಗಳನ್ನು ಕೇಳಿದರೆ ನಿಮ್ಮ ಅಡುಗೆಯಲ್ಲಿ ತಪ್ಪದೆ ಬಳಸುತ್ತೀರಿ ! ಲಾಭಗಳೇನು ಗೊತ್ತಾ?

ಸ್ನೇಹಿತರೇ, ಒಂದು ಚಿಕ್ಕ ಒಣ ಕೊಬ್ಬರಿ ಸೇವಿಸುವುದರಿಂದ ಯಾವೆಲ್ಲ ಲಾಭಗಳಿವೆ ಹಾಗೂ ಯಾವ ಯಾವ ಅನಾರೋಗ್ಯದಿಂದ ಮುಕ್ತಿ ಸಿಗುತ್ತದೆ ಎಂದು ತಿಳಿಯೋಣ ಬನ್ನಿ, ಸಾಮಾನ್ಯವಾಗಿ ಎಲ್ಲರಲ್ಲೂ ಕಂಡು ಬರುವ ಸಮಸ್ಯೆ ಎಂದರೆ ನಿಶ್ಯಕ್ತಿ, ಆಯಾಸ, ಮಂಡಿಗಳಲ್ಲಿ ನೋವು, ಸೊಂಟ ನೋವು ರಕ್ತಹೀನತೆ, ಅಜೀರ್ಣ, ಕೂದಲು ಉದುರುವುದು ಮತ್ತು ಕಡಿಮೆ ರೋಗನಿರೋಧಕ ಶಕ್ತಿ, ಮತ್ತು ಕಡಿಮೆ ಜ್ಞಾಪಕ ಶಕ್ತಿ. ಈ ರೀತಿ ತೊಂದರೆ ಅಲ್ಲವೇ, ಈ ಎಲ್ಲಾ ಸಮಸ್ಯೆಗಳಿಂದ ಪಾರಾಗಲು ಹಲವಾರು ಮಾತ್ರೆಗಳ ಮೊರೆಹೋಗುತ್ತಾರೆ, ಆದರೆ ಅವುಗಳಿಂದ ಯಾವುದೇ ಪ್ರಯೋಜನಗಳು ಆಗೋದು ಸ್ವಲ್ಪ ಕಷ್ಟವೇ ಸರಿ.

ಇದಕ್ಕಾಗಿ ನಿವು ನಿಮ್ಮ ಪ್ರತಿನಿತ್ಯದ ಆಹಾರದಲ್ಲಿ ಕೆಲವು ವಸ್ತುಗಳನ್ನು ಸೇರಿಸಿಕೊಳ್ಳಬೇಕು, ಇದರಲ್ಲಿ ಸಂಪೂರ್ಣವಾದ ಪೋಷಕಾಂಶಗಳಿದ್ದು ನಮ್ಮ ದೇಹದಲ್ಲಿನ ವಿಟಮಿನ್ ಗಳನ್ನು ಹೆಚ್ಚಿಸುತ್ತದೆ, ಇಂತಹ ಪರಿಪೂರ್ಣ ಆಹಾರ ಎಂದರೇ ಅದೇ ಒಣಕೊಬ್ಬರಿ. ಇದನ್ನು ಸೂಪರ್ ಫುಡ್ ಎಂದು ಕರೆದರೇ ತಪ್ಪಾಗುವುದಿಲ್ಲ, ಅಷ್ಟೊಂದು ಪೋಷಕಾಂಶಗಳನ್ನು ಹೊಂದಿದೆ ಈ ಒಣಕೊಬ್ಬರಿ, ತುಂಬಾ ಜನರಿಗೆ ಒಣಕೊಬ್ಬರಿ ಅಂದರೆ ತುಂಬಾ ಇಷ್ಟ ಮನೆಯಲ್ಲಿ ಹಿರಿಯರಿದ್ದರೆ ಅವರು ಕೂಡ ಮಕ್ಕಳಿಗೆ ಒಣ ಕೊಬ್ಬರಿ ತಿನ್ನುವಂತೆ ಹೇಳ್ತಾರೆ. ಒಣ ಕೊಬ್ಬರಿಯಲ್ಲಿ ಒಳ್ಳೆಯ ನಾರಿನಾಂಶ, ತಾಮ್ರದ ಅಂಶಗಳು, ಸಿಲ್ವರ್ ಎನ್ನುವ ಪೋಷಕಾಂಶಗಳು ಇವೆ.

ದಿನಕ್ಕೆ 20 ರಿಂದ 25 ಗ್ರಾಂನಷ್ಟು ಒಣಕೊಬ್ಬರಿಯನ್ನು ನೀವು ಪ್ರತಿದಿನ ಸೇವಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಿ, ಇದನ್ನು ಇದೇ ಸಮಯದಲ್ಲಿ ತಿನ್ನಬೇಕು ಅಥವಾ ಬರೀ ಹೊಟ್ಟೆಯಲ್ಲಿ ತಿನ್ನಬೇಕು ಅಂತ ಯಾವ ನಿಯಮವಿಲ್ಲ, ದಿನದಲ್ಲಿ ಯಾವಾಗ ಬೇಕಾದರೂ ನೀವು ಇದನ್ನು ಸೇವಿಸಬಹುದು. ಇನ್ನು ಒಣಕೊಬ್ಬರಿಯನ್ನು ದಿನನಿತ್ಯ ಸೇವಿಸುವುದರಿಂದ ನಮಗೆ ಸಿಗುವ ಲಾಭಗಳು ಹಾಗೂ ಯಾವ ಅನಾರೋಗ್ಯದ ಸಮಸ್ಯೆಗಳಿಂದ ಇದು ಸಂಜೀವಿನಿಯಾಗಿದೆ ಎಂಬುದನ್ನು ತಿಳಿಯೋಣ.

ಒಣಕೊಬ್ಬರಿ ಸೇವಿಸುವುದರಿಂದ ನಮ್ಮ ದೇಹದಲ್ಲಿನ ಮೂಳೆಗಳು ಗಟ್ಟಿಗೊಳ್ಳುತ್ತವೆ, ಇದು ನಮ್ಮ ಮೂಳೆಗಳ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಇದರಿಂದಾಗಿ ಆರ್ಥರೈಟಿಸ್ (ಮಂಡಿ ಮತ್ತು ಮೂ’ಳೆಗಳ ಸವೆಯುವಿಕೆ) ಅಂತಹ ತೊಂದರೆಗಳಿಂದ ಪಾರಾಗಬಹುದು. ಹಾಗೆಯೇ ಒಣಕೊಬ್ಬರಿ ಸೇವನೆಯಿಂದ ನಿಮ್ಮ ಮೆದುಳು ಚುರುಕಾಗುತ್ತದೆ, ಇದರಿಂದ ಮೆದುಳಿನ ಕ್ರಿಯೆ ಹೆಚ್ಚಾಗುತ್ತದೆ. ನಿಮಗೆ ಜ್ಞಾಪಕ ಶಕ್ತಿ ಚೆನ್ನಾಗಿರಬೇಕು ಹಾಗೂ ಚುರುಕಾಗಿರಬೇಕು ಎಂದರೇ ತಪ್ಪದೆ ನೀವು ಒಣಕೊಬ್ಬರಿಯನ್ನು ಸೇವಿಸಬೇಕು.

ಪೈ’ಲ್ಸ್ ಹಾಗೂ ಮೂಲವ್ಯಾ’ದಿ ಸಮಸ್ಯೆಗಳಿಗೂ ಕೂಡ ಒಣಕೊಬ್ಬರಿ ಸಂಜೀವಿನಿಯಾಗಿದೆ, ಒಣಕೊಬ್ಬರಿ ತುಂಬಾನೇ ತಂಪು ಇದನ್ನು ಮೂಲವ್ಯಾ’ದಿ ಇರುವವರು ಸೇವಿಸುವುದರಿಂದ ಮೂಲವ್ಯಾ’ಧಿ ಸಮಸ್ಯೆ ಸರಿ ಹೋಗುತ್ತದೆ. ಇನ್ನು ಒಣಕೊಬ್ಬರಿ ಯಲ್ಲಿ ಹೇರಳವಾದ ನಾರಿನ ಅಂಶ ಇರುವುದರಿಂದ ಮಲಬದ್ಧತೆ ಸಮಸ್ಯೆಯನ್ನು ಕೂಡ ಇದು ಸರಿಪಡಿಸುತ್ತದೆ. ಹಾಗೆಯೇ ರ’ಕ್ತ ಹೀನ’ತೆಯ ಸಮಸ್ಯೆಯನ್ನು ಕೂಡ ಇದು ಪರಿಹರಿಸುತ್ತದೆ. ಒಣ ಕೊಬ್ಬರಿಯಲ್ಲಿ ಹೆಚ್ಚಿನ ಕಬ್ಬಿಣಾಂಶ ಇರುವುದರಿಂದ ಶರೀರದಲ್ಲಿ ರ’ಕ್ತವನ್ನು ಹೆಚ್ಚು ಮಾಡಲು ಸಹಕಾರಿಯಾಗುತ್ತದೆ, ಒಣಕೊಬ್ಬರಿ ಸೇವನೆಯನ್ನು ತಪ್ಪದೆ ಪ್ರತಿದಿನ ಮಾಡಿ ಹಾಗೂ ನಿಮ್ಮೆಲ್ಲಾ ಸಮಸ್ಯೆಗಳಿಂದ ಮುಕ್ತಿ ಹೊಂದಿರೀ.

Post Author: Ravi Yadav