ಮೀನ ರಾಶಿಯಲ್ಲಿ ವಕ್ರೀಯಾಗುವ ಕುಜ ಗ್ರಹ ! ಮುಂದಿನ 48 ದಿನಗಳ ರಾಶಿ ಫಲಾಫಲಗಳು

ಮೀನ ರಾಶಿಯಲ್ಲಿ ವಕ್ರೀಯಾಗುವ ಕುಜ ಗ್ರಹ ! ಮುಂದಿನ 48 ದಿನಗಳ ರಾಶಿ ಫಲಾಫಲಗಳು

ನಮಸ್ಕಾರ ಸ್ನೇಹಿತರೇ, ಎಷ್ಟು ದಿವಸ ಮೇಷ ರಾಶಿಯಲ್ಲಿ ವಕ್ರಿಯಾಗಿ ಸಂಚರಣೆ ಮಾಡುತ್ತಿದ್ದ ಕುಜಗ್ರಹ ಕಳೆದ ಅಕ್ಟೋಬರ್ 4 ನೇ ತಾರೀಖಿನಿಂದ ಮೀನ ರಾಶಿಯಲ್ಲಿ ತನ್ನ ಸಂಚಾರವನ್ನು ಆರಂಭ ಮಾಡಿದ್ದಾರೆ, ಈ ಗ್ರಹಗಳ ಸ್ಥಾನಪಲ್ಲಟ ಎಲ್ಲ ರಾಶಿಗಳ ಮೇಲೂ ಪರಿಣಾಮ ಬೀರಲಿದೆ. ಇನ್ನು ಕುಜ ಗ್ರಹವು ನಿಮಗೆಲ್ಲರಿಗೂ ತಿಳಿದಿರುವಂತೆ ಯಾವುದೇ ಒಬ್ಬ ವ್ಯಕ್ತಿಯ ಧೈರ್ಯ ಮತ್ತು ಶೌರ್ಯಕ್ಕೆ ಸಂಬಂಧಿಸಿರುವ ಕಾರಣ ಮೀನ ರಾಶಿಯಲ್ಲಿ ನಡೆಯುವ ಈ ಸ್ಥಾನಪಲ್ಲಟ ಯಾವ ರೀತಿಯಲ್ಲಿ ಇತರ ರಾಶಿಗಳು ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ಮೇಷ ರಾಶಿ: ಮೇಷ ರಾಶಿಯಲ್ಲಿ ಮುಂದಿನ ನಲವತ್ತೆಂಟು ದಿನಗಳ ಕಾಲ ಕುಜ ಗ್ರಹ 12ನೇ ಮನೆಯಲ್ಲಿರುತ್ತಾನೆ. ಈ ಮನೆಯನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಿದೇಶಿ ಪ್ರಯಾಣ ಹಾಗೂ ಹೆಚ್ಚಿನ ಹಣ ಖರ್ಚಾಗುವ ಮನೆಗೆ ಎಂದು ಪರಿಗಣಿಸಲಾಗಿದೆ. ಮುಂದಿನ 48 ದಿನಗಳಲ್ಲಿ ನಿಮ್ಮ ಆರೋಗ್ಯದಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು. ನಿಮ್ಮ ಖರ್ಚು ವೆಚ್ಚಗಳು ಹೆಚ್ಚಾಗುವ ಸಂದರ್ಭ ಇದ್ದು ಚಿಂತೆ ಮಾಡುವುದರಿಂದ ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳ ಬಹುದು. ಇನ್ನು ಕೌಟುಂಬಿಕವಾಗಿ ಸಮಯ ಕೊಂಚ ವ್ಯತಿರಿಕ್ತವಾಗಿದ್ದು ನಿಮ್ಮ ಸಹೋದರ ಅಥವಾ ಸಹೋದರಿಯ ಜೊತೆ ಹಾಗೂ ನಿಮ್ಮ ಸಂಗಾತಿಯ ಜೊತೆ ಕೆಲವೊಂದು ಭಿನ್ನಾಭಿಪ್ರಾಯಗಳು ಕೇಳಿ ಬರುವ ಸಾಧ್ಯತೆಗಳು ಇರುತ್ತವೆ. ಅಷ್ಟೇ ಅಲ್ಲದೆ ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಕೆಲವೊಂದು ಸವಾಲುಗಳು ಎದುರಾಗುತ್ತವೆ. ಈ ಎಲ್ಲಾ ಮೇಲಿನ ಸವಾಲುಗಳನ್ನು ಎದುರಿಸಲು ಬಹಳ ಸುಲಭವಾದ ಉಪಾಯವೆಂದರೆ ತಾಳ್ಮೆ. ನೀವು ನಿಮ್ಮ ತಾಳ್ಮೆ ಎನ್ನು ಉಳಿಸಿಕೊಂಡಿದ್ದಲ್ಲಿ ಮೇಲಿನ ಯಾವುದೇ ಘಟನೆಗಳು ನಡೆಯದಂತೆ ತಡೆಯಬಹುದು. ಇನ್ನು ಈ ಸಮಯದಲ್ಲಿ ಎಲ್ಲಾ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಹನುಮಾನ್ ಚಾಲೀಸಾ ಪಠಣ ಮಾಡುವುದು ಬಹಳ ಒಳ್ಳೆಯದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತಿದೆ.

ವೃಷಭ ರಾಶಿ: ಸ್ನೇಹಿತರೇ ವೃಷಭ ರಾಶಿಯ ಹನ್ನೊಂದನೇ ಮನೆಯಲ್ಲಿ ಕುಜನು ಇರುತ್ತಾನೆ. ಹನ್ನೊಂದನೇ ಮನೆಯೆಂದರೆ ಅದೃಷ್ಟದ ಮನೆಯೆಂದು ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕರೆಯಲಾಗುತ್ತದೆ. ದಿನೇ ದಿನೇ ನಿಮ್ಮ ಖರ್ಚುಗಳು ಕಡಿಮೆಯಾಗಿ ನೀವು ಮಾಡುವ ವ್ಯವಹಾರಗಳಲ್ಲಿ ದಿನೇ ದಿನೇ ಲಾಭಗಳು ಹೆಚ್ಚಾಗುತ್ತವೆ. ಕೌಟುಂಬಿಕವಾಗಿ ಹಾಗೂ ಇನ್ಯಾವುದೇ ಇನ್ನಿತರ ಸಂಬಂಧಗಳಲ್ಲಿ ಬಾಂಧವ್ಯ ಮನೆಮಾಡಿರುತ್ತದೆ. ನಿಮ್ಮ ಮನೆಯಲ್ಲಿ ಶಾಂತಿ ನೆಲೆಸುತ್ತದೆ, ಇದರಿಂದ ನಿಮ್ಮ ಹೊರಗಿನ ಪರಿಸರ ಕೂಡ ಉತ್ತಮವಾಗಿರಲಿದೆ, ಇದರಿಂದ ನೀವು ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಸಂಪೂರ್ಣ ಏಕಾಗ್ರತೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ಆದರೆ ಈ ಸಮಯದಲ್ಲಿ ನೀವು ನಿಮ್ಮ ಅಗತ್ಯತೆಗಿಂತ ಹೆಚ್ಚಿನ ಕೆಲಸಗಳನ್ನು ಮಾಡಲು ಒಪ್ಪಿಕೊಳ್ಳಬಾರದು. ನಿಮ್ಮ ಗುರಿಯ ಕಡೆ ಮಾತ್ರ ಗಮನ ನೀಡುವುದು ಬಹಳ ಒಳ್ಳೆಯದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಮಿಥುನ ರಾಶಿ: ಸ್ನೇಹಿತರೇ ಬಹುಶಃ ನಿಮಗೆ ತಿಳಿದಿರಬಹುದು ಹತ್ತನೇ ಸ್ಥಾನ ಎಂದರೆ ಅದು ಉದ್ಯೋಗ ಕ್ಷೇತ್ರದ ಸ್ಥಾನ ಎಂದರ್ಥ. ನಿಮ್ಮ ರಾಶಿ ಜನರಿಗೆ ಕುಜ ಹತ್ತನೇ ಸ್ಥಾನದಲ್ಲಿರುತ್ತಾನೆ. ಆದ್ದರಿಂದ ಈ ಸಮಯದಲ್ಲಿ ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸುಗಳು ಕಾಣುತ್ತವೆ, ಅಷ್ಟೇ ಅಲ್ಲದೆ ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಬಹಳ ಭದ್ರವಾಗಿರುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಏಕಾಗ್ರತೆ ಹೆಚ್ಚಾಗುವುದರಿಂದ ಎಲ್ಲಾ ಕೆಲಸಗಳನ್ನು ನೀವು ಬಹಳ ಸುಲಭವಾಗಿ ಮಾಡಿ ಮುಗಿಸುತ್ತೀರಾ, ಆದರೆ ನಿಮ್ಮ ಸುತ್ತಮುತ್ತಲಿನ ಜನರು ನಿಮ್ಮ ಕೆಲಸದಲ್ಲಿ ತಪ್ಪುಗಳನ್ನು ಕಂಡುಹಿಡಿಯಲು ಕಾದು ಕುಳಿತಿರುತ್ತಾರೆ. ಇದರಿಂದ ನಿಮಗೆ ಕೊಂಚ ಮನಸ್ಸಿನಲ್ಲಿ ಏರುಪೇರಾದರೂ ತಾಳ್ಮೆಯಿಂದ ನಿಮ್ಮ ಕೆಲಸದ ಕಡೆ ಗಮನ ಕೊಟ್ಟರೆ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸುವಿರಿ. ಸುಖಾಸುಮ್ಮನೆ ವಾದ-ವಿವಾದಗಳು ಬೇಡ. ನಿಮ್ಮನ್ನು ಹಾಗೂ ನಿಮ್ಮ ಸಾಮರ್ಥ್ಯವನ್ನು ನಿರೂಪಿಸಿ ಕೊಳ್ಳಲು ಅವಧಿ ಬಹಳ ಉತ್ತಮವಾಗಿದೆ. ವೃತ್ತಿ ಜೀವನದ ವಿಷಯದಲ್ಲಿ ನಿಮ್ಮ ಸಂಗಾತಿ ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ, ಇನ್ನು ಮಂಗಳವಾರ ನೀವು ಉಪವಾಸ ಮಾಡಿದರೆ ಈ ಸಮಯದಲ್ಲಿ ಇನ್ನೂ ಹೆಚ್ಚಿನ ಫಲಿತಾಂಶವನ್ನು ಕಾಣಬಹುದಾಗಿದೆ.

ಕರ್ಕಾಟಕ ರಾಶಿ: ಸ್ನೇಹಿತರೇ ನಿಮ್ಮ ರಾಶಿಯಲ್ಲಿ ಕುಜ 9ನೇ ಮನೆಯಲ್ಲಿ ಇರುತ್ತಾನೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 9ನೇ ಮನೆಯನ್ನು ಅದೃಷ್ಟ ಮತ್ತು ಶಿಕ್ಷಣದ ಮನೆಯೆಂದು ಮಾಡಲಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ನಿಮಗೆ ಅದೃಷ್ಟ ಒಲಿದುಬರಲಿದೆ, ಇನ್ನು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳು ದೊರೆಯಲಿವೆ. ಅಷ್ಟೇ ಅಲ್ಲದೆ ನೀವು ಯಾವುದಾದರೂ ಹೊಸ ಕೌಶಲ್ಯವನ್ನು ಕಲಿತುಕೊಳ್ಳಲು ಪ್ರಯತ್ನ ಪಡುತ್ತಿದ್ದರೆ ಈ ಸಮಯ ಬಹಳ ಉತ್ತಮವಾಗಿದೆ. ಇನ್ನು ಈ ಅವಧಿಯಲ್ಲಿ ನಿಮಗೆ ತಾಳ್ಮೆಯ ಬಹು ಮುಖ್ಯವಾಗಿರುತ್ತದೆ, ಅಹಂ ಬಿಟ್ಟು ನಿಮ್ಮ ಕೆಲಸದ ಕುರಿತು ಗಮನ ಹರಿಸಿದರೆ ಉತ್ತಮ. ಇನ್ನು ಪ್ರಯಾಣದ ಕುರಿತು ಗಮನಹರಿಸುವುದಾದರೆ ನೀವು ಈ ಸಮಯದಲ್ಲಿ ಅನಗತ್ಯ ಪ್ರಯಾಣವನ್ನೂ ತಪ್ಪಿಸಿ, ಇಲ್ಲದಿದ್ದರೆ ಆರ್ಥಿಕ ಸ್ಥಿತಿ ಕೊಂಚ ಬಿಗಡಾಯಿಸಬಹುದು. ನಿಮ್ಮ ಸಂಗಾತಿಯೊಂದಿಗೆ ಹೆಚ್ಚಿನ ಕಾಲ ಕಳೆಯಲು ಪ್ರಯತ್ನಿಸಿ, ಇನ್ನು ಆರೋಗ್ಯದ ಕುರಿತು ಗಮನಹರಿಸುವುದಾದರೆ ಈ ಸಮಯದಲ್ಲಿ ನಿಮಗೆ ಯಾವುದೇ ಆರೋಗ್ಯದ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ.

ಸಿಂಹ ರಾಶಿ: ಸ್ನೇಹಿತರೇ ನಿಮ್ಮ ರಾಶಿಯವರಲ್ಲಿ 8ನೇ ಮನೆಯಲ್ಲಿ ಕುಜನು ಇರುತ್ತಾರೆ. ಇದರಿಂದ ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಹಲವಾರು ಸವಾಲುಗಳು ಕಂಡುಬರುತ್ತವೆ. ಆದರೆ ನಿಮ್ಮ ಆತ್ಮವಿಶ್ವಾಸವನ್ನು ಕಡಿಮೆ ಮಾಡಿಕೊಳ್ಳಬೇಡಿ, ಇನ್ನು ಈ ಸಮಯದಲ್ಲಿ ನೀವು ಲಾಭದ ಕುರಿತು ಆಲೋಚನೆ ಮಾಡುವ ಬದಲು ಯಾವ ಕಾರಣಕ್ಕೆ ಉದ್ಯೋಗ ಕ್ಷೇತ್ರದಲ್ಲಿ ಈ ರೀತಿಯ ಸವಾಲುಗಳು ಕಂಡುಬರುತ್ತಿವೆ ಎಂಬುದರ ಕುರಿತು ಗಮನ ಹರಿಸಿ ಆತ್ಮಾವಲೋಕನ ಮಾಡಿಕೊಳ್ಳುವುದು ಬಹಳ ಒಳ್ಳೆಯದಾಗಿದೆ. ಇನ್ನೂ ನಿಮ್ಮ ಆರೋಗ್ಯ ಮತ್ತು ನಿಮ್ಮ ಪೋಷಕರ ಆರೋಗ್ಯದ ವಿಚಾರದಲ್ಲಿ ಬಹಳ ಜಾಗರೂಕರಾಗಿರಿ. ಸಾಧ್ಯವಾದಷ್ಟು ಸಮಯವನ್ನು ನಿಮ್ಮ ಸಂಗಾತಿಯ ಜೊತೆ ಕಳೆಯಿರಿ, ಇನ್ನು ನಿಮ್ಮ ಆರೋಗ್ಯವನ್ನು ವೃದ್ಧಿ ಮಾಡಿಕೊಳ್ಳಲು ವ್ಯಾಯಾಮ, ಯೋಗ ಮತ್ತು ಧ್ಯಾನದ ಮೊರೆ ಹೋಗುವುದನ್ನು ಮರೆಯಬೇಡಿ. ಈ ಮೇಲಿನ ಎಲ್ಲಾ ಸವಾಲುಗಳನ್ನು ಬಹಳ ಸುಲಭವಾಗಿ ಪರಿಹರಿಸಲು ಮಂಗಳವಾರ ಹನುಮಂತನಿಗೆ ಸಿಂಧೂರವನ್ನು ಅರ್ಪಿಸುವುದನ್ನು ಮರೆಯಬೇಡಿ.

ಕನ್ಯಾ ರಾಶಿ: ಸ್ನೇಹಿತರೇ ಕನ್ಯಾ ರಾಶಿಯವರಿಗೆ ಕುಜನು ಏಳನೇ ಮನೆಯಲ್ಲಿ ಇರುತ್ತಾನೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಮನೆಯನ್ನು ಪ್ರವಾಸ ಮತ್ತು ಸಂಗಾತಿಯ ವಿಚಾರಗಳಿಗಾಗಿ ಪರಿಗಣಿಸಲಾಗುತ್ತದೆ. ಆದ್ದರಿಂದ ಈ ಸಂದರ್ಭದಲ್ಲಿ ನಿಮ್ಮ ಸಂಗಾತಿಗೆ ನೀಡಬೇಕಾದ ಗೌರವವನ್ನು ನೀಡಿ, ಯಾವುದೇ ವಾದ ವಿವಾದಗಳನ್ನು ತಪ್ಪಿಸಿ. ಉದ್ಯೋಗ ಕ್ಷೇತ್ರದಲ್ಲಿ ನೀವು ಉತ್ತಮ ಫಲಿತಾಂಶ ಪಡೆಯಲು ಸರಿಯಾದ ದಿಕ್ಕಿನಲ್ಲಿ ಗಮನ ಹರಿಸಿದರೆ ಮಾತ್ರ ಸಾಧ್ಯವಾಗುತ್ತದೆ. ಇನ್ನು ಆರ್ಥಿಕ ವಿಚಾರದ ಕುರಿತು ಗಮನಹರಿಸುವುದಾದರೆ ನೀವು ಈ ಸಮಯದಲ್ಲಿ ಕೇವಲ ಅಗತ್ಯತೆ ಇರುವ ಸಂದರ್ಭಗಳಲ್ಲಿ ಮಾತ್ರ ಖರ್ಚು ಮಾಡಬೇಕು. ಇನ್ನು ಸಂಗಾತಿಯ ವಿಚಾರದಲ್ಲಿ ಈ ಸಮಯದಲ್ಲಿ ಬಹಳ ಜಾಗರೂಕರಾಗಿ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವ ಪ್ರಯತ್ನ ಮಾಡಿ. ಈ ಮೇಲಿನ ಎಲ್ಲಾ ಅಂಶಗಳಿಗೆ ಪರಿಹಾರವೆಂದರೆ ಮಂಗಳವಾರ ತಾಮ್ರವನ್ನು ದಾನ ಮಾಡಿ.

ತುಲಾ ರಾಶಿ: ಈ ಸಂದರ್ಭದಲ್ಲಿ ನಿಮ್ಮ ರಾಶಿಯವರಿಗೆ ಕುಜನು ಆರನೇ ಮನೆಯಲ್ಲಿ ಇರುತ್ತಾರೆ. ಇದರಿಂದ ನೀವು ಮಾಡುವ ಎಲ್ಲಾ ಕೆಲಸಗಳಲ್ಲಿ ನಿಮ್ಮ ಸ್ಪರ್ಧಾತ್ಮಕ ಶಕ್ತಿಗೆ ಹೆಚ್ಚಾಗಿರುತ್ತದೆ. ಇನ್ನು ನಿಮ್ಮ ಉದ್ಯೋಗ ಕ್ಷೇತ್ರಗಳಲ್ಲಿ ಕಂಡು ಬರುವ ಎಲ್ಲಾ ಸವಾಲುಗಳನ್ನು ಬಹಳ ಸುಲಭವಾಗಿ ಎದುರಿಸುವ ಶಕ್ತಿ ನಿಮ್ಮಲ್ಲಿದೆ. ಕೆಲವೊಮ್ಮೆ ನೀವು ನಿರೀಕ್ಷೆ ಮಾಡಿದ ಫಲಗಳು ನಿಮಗೆ ಸಿಗದೇ ಇದ್ದರೂ ಕೂಡ ನಿರಾಸೆಗೊಳ್ಳಬೇಡಿ, ಯಾಕೆಂದರೆ ಆ ಸಮಯದಲ್ಲಿ ನೀವು ನಿಮ್ಮ ಶಕ್ತಿಯನ್ನು ಸರಿಯಾದ ಕ್ರಮದಲ್ಲಿ ಬಳಸುವುದಿಲ್ಲ. ಇನ್ನು ನೀವು ಈ ಸಮಯದಲ್ಲಿ ಯಾವುದಾದರೂ ಹಳೆಯ ಸಾಲಗಳನ್ನು ತೀರಿಸಬೇಕು ಎಂದುಕೊಂಡಿದ್ದರೆ ಅದು ಉತ್ತಮ ಆಲೋಚನೆಯಾಗಿದೆ. ಇನ್ನು ಈ ನಲವತ್ತೆಂಟು ದಿನಗಳ ಕಾಲ ನಿಮ್ಮ ಸಂಗಾತಿಯ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿವಹಿಸಿ, ಇನ್ನು ಈ ಸಂದರ್ಭದಲ್ಲಿ ನೀವು ದೀರ್ಘಕಾಲದ ಆರೋಗ್ಯದ ಸಮಸ್ಯೆಯಿಂದ ಹೊರ ಬರುವ ಸಾಧ್ಯತೆಗಳಿವೆ. ಇನ್ನು ಹೆಚ್ಚಿನ ಉತ್ತಮ ಫಲಿತಾಂಶಗಳನ್ನು ಪಡೆಯಲು ಮಂಗಳವಾರ ನರಸಿಂಹ ದೇವರನ್ನು ಪೂಜಿಸಿ.

ವೃಶ್ಚಿಕ ರಾಶಿ: ಸ್ನೇಹಿತರೇ, ಈ ಸಮಯದಲ್ಲಿ ನಿಮ್ಮ ಉದ್ಯೋಗ ಕ್ಷೇತ್ರಗಳಲ್ಲಿ ಬರುವ ಅವಕಾಶಗಳನ್ನು ಒಂದು ಆಟದಂತೆ ಪರಿಗಣಿಸಿ. ಇನ್ನು ನಿಮಗೆ ಅಗತ್ಯತೆ ಇದೆ ಎನಿಸಿದರೆ ನಿಮ್ಮ ಪ್ರಯತ್ನವನ್ನು ಪಡೆದು ಕೊಳ್ಳುವವರೆಗೆ ನಿಲ್ಲಿಸಲೇಬೇಡಿ. ಇನ್ನು ಆರ್ಥಿಕ ವಿಚಾರದ ಕುರಿತು ಗಮನಹರಿಸುವುದಾದರೆ ಈ ಸಮಯದಲ್ಲಿ ಒಂದೇ ಕಡೆ ನಿಮ್ಮ ಬಳಿ ಇರುವ ಸಂಪೂರ್ಣ ಹಣವನ್ನು ಹೂಡಿಕೆ ಮಾಡುವುದನ್ನು ತಪ್ಪಿಸಿ. ಈ ಸಮಯದಲ್ಲಿ ನಿಮ್ಮ ಮಕ್ಕಳ ಕುರಿತು ಕೊಂಚ ಚಿಂತೆ ಹೆಚ್ಚಾಗಬಹುದು ಆದರೆ ಯಾವುದೇ ಹೆಚ್ಚಿನ ಚಿಂತೆ ಅಗತ್ಯವಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.

ಧನು ರಾಶಿ: ಸ್ನೇಹಿತರೇ ಕುಜ ನಿಮ್ಮ ರಾಶಿಯವರಿಗೆ ನಾಲ್ಕನೇ ಮನೆಯಲ್ಲಿ ಇರುವ ಕಾರಣ ಈ ಸಮಯದಲ್ಲಿ ನಿಮ್ಮ ಮಾನಸಿಕ ಒತ್ತಡ ಕೊಂಚ ಹೆಚ್ಚಾಗಬಹುದು. ಚಿಂತೆಗಳು ಹೆಚ್ಚಾಗಬಹುದು. ಆದರೆ ಸ್ನೇಹಿತರೇ ಜೀವನದಲ್ಲಿ ಸವಾಲುಗಳು ಇದ್ದೇ ಇರುತ್ತವೆ. ಆದ್ದರಿಂದ ನೀವು ಚಿಂತೆ ಮಾಡುತ್ತ ಕುಳಿತರೇ ಅದರಿಂದ ನಿಮಗೆ ನಷ್ಟವೇ ಆಗುತ್ತದೆ. ತಾಳ್ಮೆಯಿಂದ ನಿಮ್ಮ ಪ್ರಯತ್ನ ಮಾಡಿರಿ, ಸರಿ ಯಾವುದು ತಪ್ಪು ಯಾವುದು ಎಂಬುದರ ಅರಿವು ನಿಮಗಿರುತ್ತದೆ. ಇನ್ನು ಈ ಸಂದರ್ಭದಲ್ಲಿ ಈಗಾಗಲೇ ಬಿಪಿ ಅಥವಾ ಶುಗರ್ ಸಮಸ್ಯೆ ಇರುವವರು ಆರೋಗ್ಯದ ಕುರಿತು ಹೆಚ್ಚಿನ ಗಮನಹರಿಸಬೇಕು, ಇನ್ನು ನೀವು ಯಾವುದಾದರೂ ಒಂದು ಮನೆಯ ರಿಪೇರಿ ಕೆಲಸವನ್ನು ಮಾಡಿಸಬೇಕು ಎಂದುಕೊಂಡಿದ್ದರೆ ನಿಮ್ಮ ಅಂದಾಜಿಗಿಂತ ಹೆಚ್ಚಿನ ಹಣ ಖರ್ಚಾಗಬಹುದು. ಈ ಮೇಲಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಲು ಹನುಮಾನ್ ಚಾಲೀಸಾ ಪಠಣ ಮಾಡಿ.

ಮಕರ ರಾಶಿ: ಸ್ನೇಹಿತರೇ ಕುಜನ ಸ್ಥಾನಪಲ್ಲಟ ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಹಾಗೂ ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಕಾಣುವಂತೆ ಮಾಡುತ್ತದೆ. ಆದರೆ ಸ್ನೇಹಿತರಿಗೆ ಯಾವುದೇ ಪ್ರಗತಿ ಸುಖಾಸುಮ್ಮನೆ ಬರುವುದಿಲ್ಲ. ಮೊದಲನೆಯದಾಗಿ ನೀವು ಪ್ರಯತ್ನವನ್ನು ಪಡಬೇಕು ಹಾಗೂ ಆ ಹಾದಿಯಲ್ಲಿ ಕಂಡು ಬರುವ ಎಲ್ಲಾ ಸವಾಲುಗಳನ್ನು ಎದುರಿಸಲು ಸಿದ್ಧವಾಗಿರಬೇಕು. ಕುಜನ ಸ್ಥಾನದ ಕುರಿತು ಮಾತನಾಡುವುದಾದರೆ ನಿಮಗೆ ಅನುಕೂಲವಾದ ಸ್ಥಾನದಲ್ಲಿಯೇ ಕುಜನು ಇದ್ದಾನೆ. ಆದ್ದರಿಂದ ಈ ಸಮಯದಲ್ಲಿ ನೀವು ಯಾವುದೇ ಕೆಲಸ ಮಾಡಿದರೂ ಯಶಸ್ಸನ್ನು ಪಡೆಯುತ್ತೀರಿ, ಹೆಚ್ಚಿನ ಪ್ರಯತ್ನಗಳು ಅಗತ್ಯವಿಲ್ಲ ವಾದರೂ ಪ್ರಯತ್ನ ಮಾಡಿದರೆ ಖಂಡಿತ ಯಶಸ್ಸು ಸಿಗುತ್ತದೆ.

ಕುಂಭ ರಾಶಿ: ಸ್ನೇಹಿತರೇ ಕುಂಭರಾಶಿಯವರಿಗೆ ಕುಜನ ಸ್ಥಾನದಿಂದ ತಿಳಿದು ಬರುವುದೇನೆಂದರೆ ಈ ಸಮಯದಲ್ಲಿ ಕೌಟುಂಬಿಕವಾಗಿ ಹಲವಾರು ಭಿನ್ನಾಭಿಪ್ರಾಯಗಳು ಮೂಡಿಬರುತ್ತವೆ. ಆದ್ದರಿಂದ ಈ ಸಮಯದಲ್ಲಿ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ, ಇನ್ನು ಆರ್ಥಿಕ ಸ್ಥಿತಿಯ ಕುರಿತು ಗಮನಹರಿಸುವುದಾದರೆ ನೀವು ಹಣವನ್ನು ಖರ್ಚು ಮಾಡುವ ಮುನ್ನ ಬಹಳ ಯೋಚಿಸಿ ಖರ್ಚು ಮಾಡಿ ಅನಗತ್ಯವಾಗಿ ಸುಖಾಸುಮ್ಮನೆ ಖರ್ಚು ಮಾಡುವುದನ್ನು ತಪ್ಪಿಸಿ. ಇನ್ನೂ ಆರೋಗ್ಯದ ಕುರಿತು ಗಮನಹರಿಸುವುದಾದರೆ ಈ ಸಮಯದಲ್ಲಿ ನಿಮಗೆ ಹೊಟ್ಟೆಗೆ ಸಂಬಂಧಿಸಿದ ಕೆಲವೊಂದು ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ ಆಹಾರದ ಕುರಿತು ಗಮನ ಹರಿಸುವುದನ್ನು ಮರೆಯಬೇಡಿ. ಮೇಲಿನ ಎಲ್ಲಾ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಮಂಗಳ ಸ್ತೋತ್ರವನ್ನು ಪಠಿಸಿ.

ಮೀನ ರಾಶಿ: ನಿಮ್ಮ ಮೊದಲನೇ ಮನೆಯ ಸ್ಥಾನದಲ್ಲಿ ಕುಜನು ಇರುವ ಕಾರಣ ನಿಮ್ಮ ವ್ಯಕ್ತಿತ್ವ ಸಂಪೂರ್ಣ ಬದಲಾದಂತೆ ಕಾಣಿಸಬಹುದು. ಯಾಕೆಂದರೆ ಕುಜನ ಸ್ಥಾನಮಾನ ನಿಮ್ಮ ವ್ಯಕ್ತಿತ್ವದ ಮೇಲೆ ನೇರ ಪರಿಣಾಮ ಬೀರುತ್ತದೆ. ನೀವು ನಿಮ್ಮ ಉದ್ಯೋಗ ಕ್ಷೇತ್ರಗಳಲ್ಲಿ ಹಾಗೂ ಇನ್ನಿತರ ಯಾವುದೇ ಕೆಲಸಗಳಲ್ಲಿ ಸಂಪೂರ್ಣ ಶಕ್ತಿ ಹಾಕಿ ಪ್ರಯತ್ನ ಪಟ್ಟರೂ ಕೂಡ ಫಲಿತಾಂಶಗಳನ್ನು ಕಾಣದಿರಬಹುದು. ಆದ್ದರಿಂದ ಕೆಲವೊಂದು ಕೆಲಸಗಳು ವಿಳಂಬವಾಗುತ್ತದೆ. ಇನ್ನು ಈ ಸಮಯದಲ್ಲಿ ನೀವು ಮನೆಯ ಹೊರಗಿನ ಕೆಲಸಗಳ ಫಲಿತಾಂಶಗಳ ಅಸಮಾಧಾನವನ್ನು ನಿಮ್ಮ ಪ್ರೀತಿಪಾತ್ರರ ಮೇಲೆ ತೋರುವ ಸಾಧ್ಯತೆ ಇದೆ. ಇದರಿಂದ ಕೌಟುಂಬಿಕವಾಗಿ ಕೆಲವೊಂದು ಭಿನ್ನಾಭಿಪ್ರಾಯಗಳು ಕಂಡುಬರುತ್ತವೆ. ಆದ್ದರಿಂದ ಈ ಸಮಯದಲ್ಲಿ ನೀವು ಬಹಳ ತಾಳ್ಮೆಯಿಂದ ಇರಬೇಕು, ಆರೋಗ್ಯದ ಕುರಿತು ಗಮನಹರಿಸುವುದಾದರೆ ನೀವು ಈ ಸಮಯದಲ್ಲಿ ಹೆಚ್ಚಿನ ನೀರು ಕುಡಿಯಬೇಕು. ಇನ್ನು ಈ ಸಮಯದಲ್ಲಿ ಕಂಡುಬರುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಚಂದನವನ್ನು ನಿಮ್ಮ ಹಣೆಗೆ ಹಚ್ಚಿಕೊಳ್ಳಿ.