ಹೆಣ್ಣಿನ ಜೊತೆ ‘ಅ’ ಸಭ್ಯವಾಗಿ ನಟಿಸುವ ಮುನ್ನ ವಜ್ರಮುನಿ ಏನು ಮಾಡುತ್ತಿದ್ದರು ಎಂದು ತಿಳಿದರೇ ನಿಜಕ್ಕೂ ಗ್ರೇಟ್ ಅನಿಸುತ್ತದೆ !

ಹೆಣ್ಣಿನ ಜೊತೆ ‘ಅ’ ಸಭ್ಯವಾಗಿ ನಟಿಸುವ ಮುನ್ನ ವಜ್ರಮುನಿ ಏನು ಮಾಡುತ್ತಿದ್ದರು ಎಂದು ತಿಳಿದರೇ ನಿಜಕ್ಕೂ ಗ್ರೇಟ್ ಅನಿಸುತ್ತದೆ !

ನಮಸ್ಕಾರ ಸ್ನೇಹಿತರೇ, ಕನ್ನಡದಲ್ಲಿ ಹಲವಾರು ಹಿರಿಯ ವಿಲನ್ ಗಳು ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಹಿರಿಯ ವಿಲನ್ಗಳ ಕುರಿತು ನಾವು ಮಾತನಾಡುವುದಾದರೇ ಅಗ್ರ ಸಾಲಿನಲ್ಲಿ ಕಂಡುಬರುವ ಕೆಲವೇ ಕೆಲವು ಬೆರಳೆಣಿಕೆಯ ವ್ಯಕ್ತಿಗಳಲ್ಲಿ ಹಿರಿಯ ನಟ ವಜ್ರಮುನಿ ರವರು ಒಬ್ಬರಾಗಿದ್ದಾರೆ. ಇವರ ನಟನೆ ಯಾವ ರೀತಿ ಇತ್ತು ಎಂದರೇ ಅಂದಿನ ಕಾಲದಲ್ಲಿ ಸಿನಿಮಾ ನೋಡುತ್ತಿದ್ದ ಜನರು ಇವರು ನಟನೆ ಮಾಡುತ್ತಿಲ್ಲ ನಿಜವಾದ ಖಳನಾಯಕ ಎಂದು ಅಂದುಕೊಳ್ಳುತ್ತಿದ್ದರು. ಅಸಲಿಗೆ ಅಂದಿನ ಜನ ಇವರು ಪಾತ್ರಕ್ಕೆ ಜೀವ ತುಂಬಿದ್ದಾರೆ ಎಂಬುದನ್ನು ಮರೆತು ಹೋಗಿ ನಿಜ ಜೀವನದಲ್ಲೂ ವಿಲನ್ ಎಂದುಕೊಂಡು ಇವರನ್ನು ಇಷ್ಟಪಡುತ್ತಿರಲಿಲ್ಲ.

ಸರಿಸುಮಾರು ಉತ್ತಮ ವೃತ್ತಿ ಜೀವನದಲ್ಲಿ ಮುನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡುವ ಮೂಲಕ ತನ್ನದೇ ಆದ ಕೊಡುಗೆಯನ್ನು ಕನ್ನಡ ಚಿತ್ರರಂಗಕ್ಕೆ ನೀಡಿರುವ ವಜ್ರಮುನಿ ರವರು ಸಿನಿಮಾದಲ್ಲಿ ಮಾತ್ರ ಖಳನಾಯಕನಾಗಿದ್ದರು. ಇವರು ನಿಜ ಜೀವನದಲ್ಲಿ ಬಹಳ ಸದ್ಗುಣವನ್ನು ಹೊಂದಿದ್ದ ವ್ಯಕ್ತಿ ಎಂಬುದು ಅಂದಿನ ಕಾಲದಲ್ಲಿ ಯಾರಿಗೂ ತಿಳಿದಿರಲಿಲ್ಲ. ಅಷ್ಟೇ ಯಾಕೆ ಇವರು ಅಪ್ಪಿತಪ್ಪಿ ಹೊರಗಡೆ ಕಾಣಿಸಿಕೊಂಡರೇ ಜನರು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿ ಹಾಗೆ ಯಾಕೆ ಮಾಡಿದೆ ಹೀಗೆ ಯಾಕೆ ಮಾಡಿದೆ ಎಂದು ಪ್ರಶ್ನೆ ಮಾಡಿದ ಪ್ರಸಂಗಗಳು ನಡೆದಿವೆ. ಇವರ ಅದ್ಭುತ ನಟನೆಗೆ ನಿರ್ದೇಶಕರು ಮನಸೋತು ಇವರಿಗೆ ನೆಗೆಟಿವ್ ಪಾತ್ರಗಳನ್ನು ಮಾತ್ರ ನೀಡುತ್ತಿದ್ದರು. ತಮಗೆ ಕೊಟ್ಟ ಎಲ್ಲಾ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ.

ಇನ್ನು ಇವರು ಕೇವಲ ನಟನೆಗೆ ಮಾತ್ರ ತಮ್ಮ ಜೀವನವನ್ನು ಸೀಮಿತವಾಗಿ ಇರಿಸಿಕೊಂಡು ಇರಲಿಲ್ಲ ಬದಲಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದ ವಜ್ರಮುನಿರವರು, ಕೆಲವೊಂದು ಸಂಘಗಳಲ್ಲಿ ಅಧ್ಯಕ್ಷರಾಗಿ ಸರಿ ಸುಮಾರು 2000 ಸೈಟುಗಳನ್ನು ಯಶಸ್ವಿಯಾಗಿ ಹಂಚಿ ತದನಂತರ ಬಡಮಕ್ಕಳಿಗೆ ಶಾಲೆಯೊಂದನ್ನು ಕೂಡ ಕಟ್ಟಿಸಿಕೊಟ್ಟಿದ್ದರು. ಇನ್ನು ಇವರ ನಿಜ ಜೀವನದ ವ್ಯಕ್ತಿತ್ವದ ಬಗ್ಗೆ ಹೇಳುವುದಾದರೇ ಕೇವಲ ಸಿನಿಮಾದಲ್ಲಿ ಬಿಟ್ಟರೇ ನಿಜ ಜೀವನದಲ್ಲಿ ಇವರು ಅಪ್ಪಟ ಬಂಗಾರ. ನಿರ್ದೇಶಕರಿಂದ ಹಿಡಿದು ಚಿತ್ರರಂಗದಲ್ಲಿ ಕೆಲಸ ಮಾಡುವ ಎಲ್ಲರನ್ನೂ ಸಮಾನವಾಗಿ ಕಂಡು ಎಲ್ಲರ ಜೊತೆ ಸ್ನೇಹದಿಂದ ಜೀವನ ಸಾಗಿಸುತ್ತಿದ್ದರು.

ಹೀಗ್ಯಾಕೆ ನಾವು ವಜ್ರಮುನಿ ರವರ ಕುರಿತು ಮಾತನಾಡುತ್ತಿದ್ದೇವೆ ಎಂದರೇ ಇವರ ಒಂದು ಸದ್ಗುಣದ ಬಗ್ಗೆ ಖಂಡಿತಾ ನಾವು ನಿಮಗೆ ತಿಳಿಸಿ ಕೊಡಲೇಬೇಕು. ಆ ಗುಣವನ್ನು ನಾವು ಇಂದು ನಿಮಗೆ ತಿಳಿಸಿಕೊಡುತ್ತೇವೆ, ಆ ಗುಣವಾದರೂ ಏನು, ಇವರು ಚಿತ್ರದ ಹೊರಗಡೆ ಯಾವ ರೀತಿಯ ಮನುಜ ರಾಗಿದ್ದರು ಎಂಬುದರ ಕುರಿತು ಸಂಪೂರ್ಣ ಡೀಟೇಲ್ಸ್ ನೀಡುತ್ತೇವೆ. ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ವಜ್ರಮುನಿ ರವರು ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ ಎಂದರೇ ಅದು ಬಹುತೇಕ ಬಾರಿ ಕೇವಲ ಖಳನಾಯಕನ ಪಾತ್ರ ವಾಗಿರುತ್ತಿತ್ತು. ತಮಗೆ ನೀಡಿದ ಪಾತ್ರಕ್ಕೆ ಜೀವ ತುಂಬುತ್ತಿದ್ದ ವಜ್ರಮುನಿ ರವರು ಹಲವಾರು ಸಿನಿಮಾಗಳಲ್ಲಿ ಹೆಣ್ಣಿನ ಜೊತೆ ಬೇಡವಾದ ರೀತಿಯಲ್ಲಿ ವರ್ತಿಸುವ ಸೀನ್ಗಳಲ್ಲಿ ಕೂಡ ನಟಿಸಿದ್ದಾರೆ. ಅಂದರೇ ಹೀರೊಯಿನ್ ಗಳ ಜೊತೆ ‘ಅ’ ಸಭ್ಯವಾಗಿ ವರ್ತಿಸುವ ಸಿನಿಮಾ ಸೀನ್ಗಳಲ್ಲಿ ನಟಿಸಿದ್ದಾರೆ.

ಹೀಗೆ ಹಲವಾರು ಸಿನಿಮಾಗಳಲ್ಲಿ ಈ ರೀತಿಯ ಪಾತ್ರಕ್ಕೆ ಜೀವ ತುಂಬಿರುವ ವಜ್ರಮುನಿ ರವರು, ಒಂದು ವೇಳೆ ಈ ರೀತಿಯ ದೃಶ್ಯಗಳಲ್ಲಿ ನಟಿಸುವ ಪರಿಸ್ಥಿತಿ ಬಂದರೇ ತಾವು ನಟನೆ ಮಾಡುವ ಮುನ್ನವೇ ಹೀರೋಯಿನ್ ಅಥವಾ ಪಾತ್ರಧಾರಿಯ ಬಳಿ ತೆರಳಿ, ಕೈಮುಗಿದು ನೋಡಮ್ಮ ಇದು ನನ್ನ ವೃತ್ತಿ ಧರ್ಮ, ನನ್ನ ವೃತ್ತಿಯ ಭಾಗವಾಗಿ ನಾನು ಈ ಕೆಲಸ ಮಾಡುತ್ತಿದ್ದೇನೆ. ನನ್ನ ಪಾತ್ರಕ್ಕೆ ನ್ಯಾಯ ಒದಗಿಸುವ ಸಲುವಾಗಿ ಈ ದೃಶ್ಯದಲ್ಲಿ ನಾನು ನಟಿಸಲೇ ಬೇಕಾದ ಅನಿವಾರ್ಯತೆ ಇದೆ. ದಯವಿಟ್ಟು ಬೇಸರ ಮಾಡಿಕೊಳ್ಳಬೇಡ, ಏನಾದರೂ ಅಚಾತುರ್ಯವಾದರೇ ದಯವಿಟ್ಟು ನನ್ನನ್ನು ಕ್ಷಮಿಸು ಎಂದು ಹೇಳಿದ ನಂತರ ಈ ರೀತಿಯ ದೃಶ್ಯಗಳಲ್ಲಿ ವಜ್ರಮುನಿ ರವರು ನಟಿಸುತ್ತಿದ್ದರು. ಇವರ ಈ ವರ್ತನೆಯನ್ನು ನೋಡಿದರೇ ತಿಳಿಯುತ್ತದೆ ವಜ್ರಮುನಿ ರವರು ಯಾವ ರೀತಿಯ ಜಂಟಲ್ ಮ್ಯಾನ್ ಆಗಿದ್ದರು ಎಂದು. ಖಂಡಿತ ಈ ರೀತಿಯ ಪಾತ್ರದಾರಿ ಕನ್ನಡ ಚಿತ್ರರಂಗಕ್ಕೆ ಸಿಗುವುದು ಅಸಾಧ್ಯದ ಮಾತೇ ಸರಿ.