ಇದ್ದಕ್ಕಿದ್ದಂತೆ ಬಿರಾದರ್ ರವರಿಗೆ ಕರೆ ಮಾಡಿದ ಅಮಿತಾಬ್ ಬಚ್ಚನ್ ! ಯಾಕೆ ಗೊತ್ತಾ?? ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ಸಂಗತಿ

ಇದ್ದಕ್ಕಿದ್ದಂತೆ ಬಿರಾದರ್ ರವರಿಗೆ ಕರೆ ಮಾಡಿದ ಅಮಿತಾಬ್ ಬಚ್ಚನ್ ! ಯಾಕೆ ಗೊತ್ತಾ?? ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ಸಂಗತಿ

ನಮಸ್ಕಾರ ಸ್ನೇಹಿತರೇ, ನಾವು ಚಿಕ್ಕವರಿದ್ದಾಗ ನಮ್ಮನ್ನು ಮನರಂಜಿಸಿದ ಪಾತ್ರಗಳಿಗೆ ಜೀವತುಂಬಿದ ಪ್ರಮುಖ ಕಲಾವಿದರಲ್ಲಿ ವೈಜನಾಥ್ ಬಿರಾದಾರ್ ಅವರು ಕೂಡ ಒಬ್ಬರು. ಬಹುತೇಕ ಸಿನಿಮಾಗಳಲ್ಲಿ ಬಿಕ್ಷುಕ ಅಥವಾ ಕು’ಡುಕರ ಪಾತ್ರದಲ್ಲಿ ನಟಿಸುತ್ತಿದ್ದ ಬಿರಾದರ್ ಅವರು ಸ್ಕ್ರೀನಿನ ಮೇಲೆ ಕಾಣಿಸಿಕೊಂಡರೇ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಕೂಡ ಇವರ ನಟನೆ ನೋಡಿ ನಕ್ಕಿ ಬಿಡುತ್ತಾರೆ. ಬಹುತೇಕ ಸಿನಿಮಾಗಳಲ್ಲಿ ಹಾಸ್ಯ ಕಲಾವಿದರಾಗಿ ನಟನೆ ಮಾಡಿರುವ ವೈಜನಾಥ್ ಬಿರಾದಾರ್ ಅವರು ಇಲ್ಲಿಯವರೆಗೂ 350 ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿವಿಧ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡು ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.

ಇಷ್ಟೆಲ್ಲಾ ಸಾಧನೆಯನ್ನು ಮಾಡಿದರು ಕೂಡ ಬಿರಾದರ್ ಅವರು ಇಂದಿಗೂ ಕೂಡ ತಮ್ಮ ಸರಳ ವ್ಯಕ್ತಿತ್ವ ವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಇತ್ತೀಚೆಗೆ ಗಿರೀಶ್ ಕಾಸರವಳ್ಳಿ ರವರು ನಿರ್ದೇಶನ ಮಾಡಿರುವ ಕನಸೆಂಬ ಕುದುರೆಯೇರಿ ಎಂಬ ಸಿನಿಮಾದಲ್ಲಿನ ಅದ್ಭುತ ನಟನೆಗೆ ಸ್ಪೇನ್ ದೇಶದ ಮ್ಯಾಡ್ರಿಡ್ ನಗರದಲ್ಲಿ ನಡೆದ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಎಂಬ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ. ಈ ಸುದ್ದಿ ಕೆಲವು ದಿನಗಳ ಹಿಂದೆ ನಡೆದರೂ ಕೂಡ ಇಲ್ಲಿಯವರೆಗೂ ಯಾರು ಹೆಚ್ಚಾಗಿ ಇದರ ಕುರಿತು ಜನರಿಗೆ ತಲುಪಿಸುವ ಕೆಲಸ ಮಾಡಿಲ್ಲ. ಸ್ವತಹ ಈ ಸುದ್ದಿಯನ್ನು ತಿಳಿದ ಅಮಿತಾ ಬಚ್ಚನ್ ರವರು ಕೂಡಲೇ ಬಿರಾದರ್ ಅವರ ಫೋನಿನ ನಂಬರ್ ಕಲೆಹಾಕಿ ಕರೆಮಾಡಿ ಶುಭಾಶಯ ತಿಳಿಸಿ ಭಾರತೀಯನೊಬ್ಬನಿಗೆ ಗೌರವ ಸಿಕ್ಕಿರುವುದು ನಮಗೆ ಹೆಮ್ಮೆ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ಇವರು ಇದೀಗ ಮತ್ತೊಂದು ಚಿತ್ರದಲ್ಲಿ ನಟನೆ ಮಾಡುತ್ತಿದ್ದು ಬಿಗ್ ಬಾಸ್ ಖ್ಯಾತಿಯ ಪ್ರಥಮ್ ರವರ ಚಿತ್ರದಲ್ಲಿ ನಟನೆ ಮಾಡುತ್ತಿದ್ದಾರೆ. ಇತ್ತೀಚಗಷ್ಟೇ ಅವರ ಹುಟ್ಟುಹಬ್ಬ ಇದೆ ಎಂದು ತಿಳಿದ ತಕ್ಷಣ ನಟ ಪ್ರಥಮರು ಕೇಕ್ ತೆಗೆದುಕೊಂಡು ಹೋಗಿ ಹುಟ್ಟುಹಬ್ಬ ಆಚರಣೆ ಮಾಡಿದ್ದರು. ಇದರ ಕುರಿತು ಪ್ರತಿಕ್ರಿಯೆ ನೀಡಿದ ಬಿರಾದರ್ ಅವರ ನಾನು ನನ್ನ ಜೀವನದಲ್ಲಿ ಕೇಕ್ ಬಳಸಿಕೊಂಡು ನನ್ನ ಹುಟ್ಟುಹಬ್ಬದ ಆಚರಣೆ ಮಾಡಿಲ್ಲ ಎಂದು ಬಹಳ ಮುಕ್ತ ಮನಸ್ಸಿನಿಂದ ಹೇಳಿದರು. ಇಷ್ಟೆಲ್ಲ ಸರಳ ವ್ಯಕ್ತಿತ್ವವನ್ನು ಹೊಂದಿರುವ ಬಿರಾದರ್ ಅವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ನಟ ಎಂಬ ಪ್ರಶಸ್ತಿ ಸಿಕ್ಕಿರುವುದು ನಿಜಕ್ಕೂ ಕನ್ನಡ ಚಿತ್ರರಂಗಕ್ಕೆ ಹಾಗೂ ಇಡೀ ಭಾರತಕ್ಕೆ ಒಂದು ಹೆಮ್ಮೆಯ ಸಂಗತಿಯಾಗಿದೆ. ಅದೇ ಕಾರಣಕ್ಕಾಗಿ ಕೆಲವು ದಿನಗಳ ಹಿಂದೆ ನಡೆದರೂ ಕೂಡ ನಾವು ಪ್ರಕಟಣೆ ಮಾಡುತ್ತಿದ್ದೇವೆ.