ಶುರುವಾಯಿತು ಚೀನಾ, ಪಾಕ್ ಗೆ ನ’ಡುಕ’ ! ಐತಿಹಾಸಿಕ ಯಶಸ್ಸು, ವಿಶೇಷ ಅಸ್ತ್ರದಿಂದ ವಾಯುಪಡೆಗೆ ಆನೆಬಲ ! ಏನು ಗೊತ್ತಾ??

ಶುರುವಾಯಿತು ಚೀನಾ, ಪಾಕ್ ಗೆ ನ’ಡುಕ’ ! ಐತಿಹಾಸಿಕ ಯಶಸ್ಸು, ವಿಶೇಷ ಅಸ್ತ್ರದಿಂದ ವಾಯುಪಡೆಗೆ ಆನೆಬಲ ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಯಾವುದೇ ದೇಶಗಳು ತಮ್ಮ ಗಡಿಯನ್ನು ರಕ್ಷಿಸಬೇಕು ಎಂದರೇ, ತಮ್ಮ ಗಡಿಯ ಉದ್ದಕ್ಕೂ ಇತರ ದೇಶಗಳ ವಿಮಾನಗಳು ಸೇರಿದಂತೆ ಯಾವುದಾದರೂ ಮಿಸೈಲ್ಗಳು ಬಂದರೇ ಕಂಡು ಹಿಡಿಯುವಂತಹ ರೇಡಾರ್ ಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ. 365 ದಿನಗಳ ಕಾಲವು ತಮ್ಮ ಗಡಿಯನ್ನು ಇತರ ದೇಶಗಳ ವಿಮಾನಗಳು ಪ್ರವೇಶಿಸದಂತೆ ಕಣ್ಗಾವಲು ಕಾದಿರುತ್ತವೆ. ಭಾರತ ದೇಶ ಈಗಾಗಲೇ ಸ್ವದೇಶಿ ನಿರ್ಮಿತ ಹಾಗೂ ವಿದೇಶದಿಂದ ಹಲವಾರು ವಿವಿಧ ರೀತಿಯ ರೇಡಾರ್ ಗಳನ್ನು ಆಮದು ಮಾಡಿಕೊಂಡು ತನ್ನ ಗಡಿಯನ್ನು ರಕ್ಷಿಸುತ್ತಿದೆ.

ಆದರೆ ಒಂದು ವೇಳೆ ಭಾರತ ಮತ್ತೊಂದು ದೇಶದ ವಿರುದ್ಧ ಗರ್ಜಿಸಬೇಕು ಎಂದುಕೊಂಡರೇ ಇತರ ದೇಶಗಳ ರೇಡಾರ್ ಗಳು ಭಾರತದ ವಿಮಾನಗಳನ್ನು ಟ್ರ್ಯಾಕ್ ಮಾಡುತ್ತಿರುತ್ತವೆ. ಕಳೆದ ಬಾರಿ ಬಾಲಕೋಟ್ ಏರ್ ಸ್ಟ್ರೈಕ್ ಸಂದರ್ಭದಲ್ಲಿ ಪಾಕ್ ವಿಮಾನಗಳು ಭಾರತದ ವಿಮಾನಗಳನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದವು. ಆದರೆ ಭಾರತೀಯ ವಿಮಾನಗಳ ಘರ್ಜನೆಯ ಮುಂದೆ ಗರ್ಜಿಸಲು ಸಾಧ್ಯವಾಗದೆ ವಾಪಸ್ ಹೋಗಿದ್ದವು. ತದನಂತರ ಭಾರತದ ಗಡಿಯನ್ನು ಪ್ರವೇಶಿಸಲು ಪ್ರಯತ್ನ ಪಟ್ಟಾಗ ಪಾಕ್ ವಿಮಾನಗಳನ್ನು ಅಟ್ಟಿಸಿಕೊಂಡು ಹೋಗಿ ಉಡೀಸ್ ಮಾಡಲಾಗಿತ್ತು. ಅದೇ ಸಂದರ್ಭದಲ್ಲಿಯೇ ಅಭಿನಂದನ್ ರವರು ಅಮೇರಿಕಾದ ಅತ್ಯಾಧುನಿಕ ವಿಮಾನ ವಾದ ಎಫ್-16 ಅನ್ನು ಉಡೀಸ್ ಮಾಡಿ, ಇಡೀ ವಿಶ್ವಕ್ಕೆ ಅತ್ಯಾಧುನಿಕ ವಿಮಾನಗಳನ್ನು ಅಥವಾ ಇನ್ಯಾವುದೇ ದೇಶವೇ ಆಗಿರಲಿ ಭಾರತವನ್ನು ಕೆಣಕಿದರೇ ಯಾವ ರೀತಿಯ ಉತ್ತರ ದೊರೆಯುತ್ತದೆ ಎಂಬುದನ್ನು ವಿಶ್ವಕ್ಕೆ ಸಾರಿ ಹೇಳಿದ್ದರು.

ಹೀಗೆ ಪಾಕ್ ವಿಮಾನಗಳು ಭಾರತದ ಗಡಿ ಪ್ರವೇಶಿಸಲು ಪ್ರಯತ್ನ ಪಟ್ಟಾಗ ಭಾರತೀಯರು ಬಹಳ ಸುಲಭವಾಗಿ ಯುದ್ಧ ವಿಮಾನಗಳನ್ನು ಗುರುತಿಸಿದ್ದವು. ಅದೇ ಕಾರಣಕ್ಕಾಗಿ ತಕ್ಷಣವೇ ನಮ್ಮ ವಾಯುಪಡೆ ಎಚ್ಚೆತ್ತುಕೊಂಡು ತಕ್ಕ ಉತ್ತರ ನೀಡಿತ್ತು. ಈ ವಿಷಯ ನಮಗೆಲ್ಲರಿಗೂ ತಿಳಿದಿದೆ ಮತ್ತೆ ಯಾಕೆ ಇವರು ಹೇಳುತ್ತಿದ್ದಾರೆ ಎಂದುಕೊಳ್ಳಬೇಡಿ, ಈ ರೀತಿಯ ಪರಿಸ್ಥಿತಿಗಳಲ್ಲಿ ಮಹತ್ವದ ಪಾತ್ರವಿರುವ ರೇಡಾರ್ ಗಳ ವಿಚಾರದಲ್ಲಿ ಇಂದು ಭಾರತದ ಐತಿಹಾಸಿಕ ಹೆಜ್ಜೆ ಇಟ್ಟಿದೆ. ಇಡೀ ವಿಶ್ವವೇ ಇಂದು ಮತ್ತೊಮ್ಮೆ ಸ್ವದೇಶಿ ಭಾರತ ಎಂಬ ಕೂಗನ್ನು ಮತ್ತೊಮ್ಮೆ ಕೇಳಿಸಿಕೊಳ್ಳುತ್ತಿದೆ. ಬನ್ನಿ ನಾವು ಇಂದು ಈ ಐತಿಹಾಸಿಕ ಕ್ಷಿಪಣಿಯ ಕುರಿತು ಸಂಪೂರ್ಣ ಮಾಹಿತಿ ನೀಡುತ್ತೇವೆ.

ಸ್ನೇಹಿತರೇ ಮೇಲಿನ ಎಲ್ಲಾ ಸಂದರ್ಭದಲ್ಲಿಯೂ ಭಾರಿ ಮಹತ್ವವನ್ನು ನಿರ್ವಹಿಸುವ ರೇಡಾರ್ ಗಳನ್ನು ಉಡೀಸ್ ಮಾಡಿದರೇ ಭಾರತೀಯ ವಾಯುಪಡೆ ಕ್ಷಣ ಮಾತ್ರದಲ್ಲಿ ಇತರ ದೇಶಗಳ ಗಡಿಯನ್ನು ದಾಟಿ ತನ್ನ ಕೆಲಸವನ್ನು ಮುಗಿಸಬಹುದು. ಆದರೆ ರೇಡಾರ್ ಗಳು ಎಲ್ಲಿರುತ್ತವೆ ಎಂಬುದನ್ನು ಕಂಡು ಹಿಡಿಯುವುದು ಸುಲಭದ ಕೆಲಸವಲ್ಲ, ಅದೇ ಕಾರಣಕ್ಕಾಗಿ ರೆಡಾರ್ ಗಳಿಂದ ಹೊರಬರುವ ವಿಕಿರಣಗಳನ್ನು ಗುರುತಿಸಿ ರೇಡಾರ್ ಗಳು ಇರುವ ಖಚಿತ ಸ್ಥಳವನ್ನು ಪತ್ತೆ ಮಾಡಿ ಕ್ಷಣಮಾತ್ರ ಗಳಲ್ಲಿ ವಿಕಿರಣಗಳ ಆಧಾರದ ಮೇಲೆ ಇತರ ದೇಶಗಳ ರೇಡಾರ್ ಗಳನ್ನು ಉಡಿಸ್ ಮಾಡುವ ಕ್ಷಿಪಣಿಯನ್ನು ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಂದರೆ ಡಿಆರ್ಡಿಒ ಪರೀಕ್ಷೆ ಮಾಡಿದೆ.

ಮೊದಲನೇ ಹಂತವಾಗಿ ಈ ಕ್ಷಿಪಣಿಯನ್ನು ಭಾರತೀಯ ವಾಯುಪಡೆಯ ಪ್ರಮುಖ ಯುದ್ಧ ವಿಮಾನವಾಗಿರುವ ಸುಖೋಯ್ 30 ವಿಮಾನ ಕ್ಕೆ ಹಳವಡಿಸಲಾಗಿತ್ತು. ಈ ಕ್ಷಿಪಣಿಯನ್ನು ರುದ್ರಂ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಈ ಕ್ಷಿಪಣಿಯಲ್ಲಿ ಭಾರತೀಯ ಜಿಪಿಎಸ್ ನ್ಯಾವಿಗೇಶನ್ ಟೆಕ್ನಾಲಜಿಯನ್ನು ಬಳಸಲಾಗಿತ್ತು, ವಿಕಿರಣಗಳ ಆಧಾರದ ಮೇರೆಗೆ ತನ್ನ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ವಿವಿಧ ರೀತಿಯ ವಿಕಿರಣಗಳು ಇದ್ದರೂ ಕೂಡ ಸರಿಯಾಗಿ ರೇಡಾರ್ಗಳನ್ನು ಗುರುತಿಸುವಲ್ಲಿ ಈ ಕ್ಷಿಪಣಿ ಯಶಸ್ವಿಯಾಗಿರುವುದು ಭಾರತೀಯ ಮಿಲಿಟರಿ ಉತ್ಪಾದನಾ ಕ್ಷೇತ್ರದಲ್ಲಿ ಮಹತ್ವದ ತಿರುವು ಎಂದು ಹೇಳಲಾಗುತ್ತಿದೆ. ಐತಿಹಾಸಿಕ ಹೆಜ್ಜೆ ಇನ್ನು ಯಶಸ್ವಿಯಾಗಿ ಇಟ್ಟಿರುವ ಡಿಆರ್ಡಿಒ ಸಂಸ್ಥೆ ಹಾಗೂ ಭಾರತೀಯ ಸೇನೆಗೆ ಮತ್ತಷ್ಟು ಶುಭವಾಗಲಿ ಎಂದು ಹಾರೈಸುತ್ತೇವೆ.