ಕೃಷ್ಣನ ಕೊನೆ ಪರೀಕ್ಷೆಯಲ್ಲಿ ಕರ್ಣನು ಗೆದ್ದು ಶ್ರೀ ಕೃಷ್ಣನನ್ನೇ ಆಶ್ಚರ್ಯ ಪಡಿಸಿದ್ದು ಹೇಗೆ ಗೊತ್ತಾ?? ಸಾಕ್ಷಾತ್ ಶ್ರೀಕೃಷ್ಣನೇ ಮನಸೋತಿದ್ದು ಯಾಕೆ ಗೊತ್ತಾ??

ಕೃಷ್ಣನ ಕೊನೆ ಪರೀಕ್ಷೆಯಲ್ಲಿ ಕರ್ಣನು ಗೆದ್ದು ಶ್ರೀ ಕೃಷ್ಣನನ್ನೇ ಆಶ್ಚರ್ಯ ಪಡಿಸಿದ್ದು ಹೇಗೆ ಗೊತ್ತಾ?? ಸಾಕ್ಷಾತ್ ಶ್ರೀಕೃಷ್ಣನೇ ಮನಸೋತಿದ್ದು ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಕರ್ಣನು ಬಾಲ್ಯದಿಂದಲೂ ಹಲವಾರು ಸವಾಲುಗಳನ್ನು ಹಾಗೂ ಕಷ್ಟಗಳನ್ನು ಎದುರಿಸುತ್ತಿದ್ದರೂ ಕೂಡ ದಾನ ವೀರ ಶೂರ ಕರ್ಣ ಎಂಬ ಹೆಸರು ಪಡೆದು ಕೊಂಡಿದ್ದನು. ಇಂದಿಗೂ ಕೂಡ ನೀವು ಯಾರಿಗಾದರೂ ಏನನ್ನಾದರೂ ದಾನ ಮಾಡಿದರೇ, ನಿಮ್ಮನ್ನು ಕರ್ಣನಿಗೆ ಹೋಲಿಸುತ್ತಾರೆ.

ಹೀಗೆ ತನ್ನ ಜೀವನದ ಉದ್ದಕ್ಕೂ ಯಾರು ಏನು ಕೇಳಿದರೂ ಕೂಡ ಇಲ್ಲ ಎನ್ನದೇ ದಾನ ಮಾಡಿದ ಕರ್ಣ ಸೂರ್ಯ ದೇವನು ನಿನ್ನ ಕವಚವನ್ನು ದಾನ ಮಾಡಬೇಡ ಎಂದಿದ್ದರೂ ಕೂಡ ಇಂದ್ರ ದೇವ ಬ್ರಾಹ್ಮಣನ ವೇಷದಲ್ಲಿ ತೆರಳಿ ಸೂರ್ಯ ದೇವ ನೀಡಿದ್ದ ಕವಚವನ್ನು ಕೇಳಿದಾಗಲೂ ಕೂಡ ಕರ್ಣನು ಮರು ಆಲೋಚನೆ ಮಾಡದೇ ಕವಚವನ್ನು ದಾನ ಮಾಡಿದ್ದನು. ಕರ್ಣನ ದಾನಕ್ಕೆ ಮನಸೋತು ಇಂದ್ರನು ಕೂಡ ವಿಶೇಷ ಅಸ್ತ್ರವೊಂದನ್ನು ನೀಡಿದ್ದನು. ಈ ಕವಚ ಇದ್ದಿದ್ದರೇ ಅರ್ಜುನನಿಗೆ ಕರ್ಣನನ್ನು ಅಂತ್ಯಗೊಳಿಸಲು ಸಾಧ್ಯವಿರಲಿಲ್ಲ ಎಂಬುದು ಮಹಾ ಭಾರತದಿಂದ ತಿಳಿದು ಬಂದಿದೆ.

ಇನ್ನು ಇಷ್ಟೆಲ್ಲ ದಾನಗಳನ್ನು ಮಾಡಿದ್ದರೂ ತಾನು ಅರ್ಜುನನ ಮುಂದೆ ಸೋತು ಕುರುಕ್ಷೇತ್ರದಲ್ಲಿ ತನ್ನ ಕೊನೆಯ ಕ್ಷಣಗಳನ್ನು ಎಣಿಸುತ್ತಾ ಯುದ್ಧ ಭೂಮಿಯಲ್ಲಿ ಮಲಗಿರುವ ಸಂದರ್ಭದಲ್ಲಿ, ಭಗವಾನ ಶ್ರೀ ಕೃಷ್ಣನು ಕರ್ಣನನ್ನು ಮತ್ತೊಮ್ಮೆ ಪರೀಕ್ಷಿಸಲು ಮುಂದಾಗಿ ಬ್ರಾಹ್ಮಣನ ರೂಪವನ್ನು ತಾಳುತ್ತಾರೆ. ಬ್ರಾಹ್ಮಣನ ರೂಪತಾಳಿದ ಶ್ರೀ ಕೃಷ್ಣನ ಪರೀಕ್ಷೆಯಲ್ಲಿ ಕರ್ಣನು ಗೆದ್ದ ಕಾರಣ, ಸಾಕ್ಷಾತ್ ಶ್ರೀ ಕೃಷ್ಣನು ಕರ್ಣನ ದಾನದ ಕಾರ್ಯಕ್ಕೆ ಮನಸೋತು ಮೂರು ಭರವಸೆಗಳನ್ನು ಬೇಡಿಕೊಳ್ಳುವಂತೆ ವರ ನೀಡುತ್ತಾರೆ. ಸಾಕ್ಷಾತ್ ಶ್ರೀ ಕೃಷ್ಣನು ಹಾಗೂ ಕರ್ಣನ ನಡುವೆ ನಡೆದ ಈ ಆಸಕ್ತಿದಾಯಕ ಹಾಗೂ ಉತ್ತಮ ಜೀವನ ಪಾಠವನ್ನು ಹೊಂದಿರುವ ಘಟನೆಯ ಬಗ್ಗೆ ನಾವು ಸಂಪೂರ್ಣ ವಿವರಣೆ ನೀಡುತ್ತೇವೆ.

ಸ್ನೇಹಿತರೇ, ಭಗವಾನ್ ಶ್ರೀಕೃಷ್ಣನು ಬ್ರಾಹ್ಮಣ ರೂಪವನ್ನು ತಾಳಿ, ಕೊನೆಯ ಕ್ಷಣಗಳನ್ನು ಎಣಿಸುತ್ತಿದ್ದ ಕರ್ಣನ ಮುಂದೆ ತೆರಳಿ ನಿಮ್ಮ ಖ್ಯಾತಿಯ ಬಗ್ಗೆ ನಾನು ಸಾಕಷ್ಟು ಕೇಳಿದ್ದೇನೆ, ಹಲವಾರು ವರ್ಷಗಳಿಂದಲೂ ಜನರು ನಿಮ್ಮ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ನಿಮ್ಮ ಬಳಿ ಒಂದು ಉಡುಗೊರೆ ಕೇಳಲು ಬಂದಿದ್ದೇನೆ ಎಂದು ಕರ್ಣನಿಗೆ ಹೇಳುತ್ತಾರೆ, ಕರ್ಣನಿಗೆ ಬ್ರಾಹ್ಮಣ ಮತ್ತ್ಯಾರು ಅಲ್ಲ ಶ್ರೀಕೃಷ್ಣ ಎಂದು ತಿಳಿಯದೇ ಇದ್ದರೂ ಕೂಡ ಖಂಡಿತವಾಗಿ ನೀವು ಕೇಳಿದ್ದನ್ನು ನಾನು ನೀಡುತ್ತೇನೆ ಎಂದು ಕರ್ಣ ಉತ್ತರಿಸುತ್ತಾನೆ. ಕರ್ಣನನ್ನು ಪರೀಕ್ಷೆ ಮಾಡಲು ಬಂದಿದ್ದ ಶ್ರೀ ಕೃಷ್ಣನು ನನಗೆ ಸ್ವಲ್ಪ ಪ್ರಮಾಣದ ಚಿನ್ನ ಅಗತ್ಯವಿದೇ ನೀಡಲು ಸಾಧ್ಯವೇ ಎಂದು ಪ್ರಶ್ನಿಸುತ್ತಾರೆ.

ಆದರೆ ಆ ಸಮಯದಲ್ಲಿ ಕರ್ಣನ ಬಳಿ ಯಾವುದೇ ಆಭರಣಗಳು ಇರುವುದಿಲ್ಲ. ಆದರೂ ಕೂಡ ತನ್ನ ಬಾಯಿಯಲ್ಲಿ ಹಲ್ಲುಗಳಲಿದ್ದ ಚಿನ್ನವನ್ನು ತೋರಿಸಿ ಇದನ್ನು ನಾನು ನಿಮಗೆ ಕೊಡುತ್ತೇನೆ ಎಂದು ಹಲ್ಲುಗಳನ್ನು ಅರ್ಪಿಸಲು ಮುಂದಾಗುತ್ತಾರೆ. ಇದನ್ನು ಕಂಡ ಬ್ರಾಹ್ಮಣ ರೂಪದಲ್ಲಿದ್ದ ಶ್ರೀ ಕೃಷ್ಣನು, ನಾನು ನಿಮ್ಮ ಹಲ್ಲು ಗಳಲ್ಲಿರುವ ಚಿನ್ನವನ್ನು ಮುರಿದು ತೆಗೆದುಕೊಳ್ಳುತ್ತೇನೆ ಎಂದು ನೀವು ನಿರೀಕ್ಷೆ ಮಾಡುತ್ತೀರಾ? ಈ ರೀತಿಯ ಕಾರ್ಯ ನನ್ನಿಂದ ಸಾಧ್ಯವಿಲ್ಲ ಎನ್ನುತ್ತಾರೆ. ಅದಕ್ಕೆ ಕರ್ಣನು ನಾನೇ ತೆಗೆದುಕೊಳ್ಳುತ್ತೇನೆ ಎಂದು ಕಲ್ಲನ್ನು ಬಳಸಿಕೊಂಡು ಹಲ್ಲುಗಳನ್ನು ತೆಗೆದು ಕೊಟ್ಟನು.

ಸುಮ್ಮನಾಗದ ಶ್ರೀ ಕೃಷ್ಣ ಮತ್ತಷ್ಟು ಪರೀಕ್ಷೆ ಮಾಡಲು ನಿರ್ಧಾರ ಮಾಡಿ, ಹಲ್ಲಿನ ಮೇಲೆ ರ’ಕ್ತದ ಕಣಗಳು ಇವೆ ಇವುಗಳನ್ನು ನಾನು ಹೇಗೆ ಸ್ವೀಕರಿಸಲು ಸಾಧ್ಯ ಎಂದು ಪ್ರಶ್ನಿಸುತ್ತಾರೆ. ನಾನು ಹೊರಡುತ್ತೇನೆ ಎಂದು ಪರೀಕ್ಷೆಗೆ ಮುಂದಾಗುತ್ತಾರೆ. ಇದನ್ನು ಕಂಡ ಕರ್ಣನು, ಸ್ವಾಮಿ ದಯವಿಟ್ಟು ನಿಲ್ಲಿ ನೀವು ಹೊರಡಬೇಡಿ ನನಗೆ ಕೊಂಚ ಸಮಯ ನೀಡಿ ಎಂದು ಮನವಿ ಮಾಡಿ ತನ್ನ ಕೊನೆಗಳಿಗೆಯಲ್ಲಿ ಚಲಿಸಲು ಸಾಧ್ಯವಾಗದೇ ಇದ್ದರೂ ಕೂಡ ಒಂದು ಬಾಣವನ್ನು ತೆಗೆದುಕೊಂಡು ಆಕಾಶದತ್ತ ಗುರಿಮಾಡಿ ಮಳೆ ಬರುವಂತೆ ಮಾಡಿ ಹಲ್ಲುಗಳನ್ನು ಸ್ವಚ್ಛ ಮಾಡಿ ಬ್ರಾಹ್ಮಣರಿಗೆ ನೀಡಲು ಮುಂದಾಗುತ್ತಾನೆ.

ಕರ್ಣನ ತ್ಯಾಗದ ಮನೋಭಾವಕ್ಕೆ ಮನಸೋತ ಶ್ರೀಕೃಷ್ಣನು ತನ್ನ ಅಸಲಿ ರೂಪವನ್ನು ತೋರಿಸಿ, ನಿನ್ನ ತ್ಯಾಗದ ಮನೋಭಾವಕ್ಕೆ ನಾನು ಮನಸೋತಿದ್ದೇನೆ. ನಿನಗೆ ಬೇಕಾದ ಮೂರು ಭರವಸೆಗಳನ್ನು ಕೇಳಿಕೋ ಎಂದು ಹೇಳುತ್ತಾರೆ. ಈ ಸಮಯದಲ್ಲಿಯೂ ಕೂಡ ಕರ್ಣನು ಕೇಳಿದ ವರಗಳು ಖಂಡಿತ ನಮಗೆಲ್ಲರಿಗೂ ಮಾದರಿಯಾಗಿವೆ. ಅಷ್ಟಕ್ಕೂ ಆ ಮೂರು ಭರವಸೆಗಳು ಏನು ಎನ್ನುತ್ತೀರಾ? ಬನ್ನಿ ತಿಳಿಸಿಕೊಡುತ್ತೇವೆ.

ಕರ್ಣನು ಮೊದಲನೆಯದಾಗಿ ಜಾ’ತಿ ಮತ್ತು ಧ’ರ್ಮದ ಆಧಾರದ ಮೇರೆಗೆ ಭೂಮಿಯ ಮೇಲೆ ನಡೆಯುತ್ತಿರುವ ವ್ಯತ್ಯಾಸವನ್ನು ಕೊನೆಗೊಳಿಸಬೇಕು ಎಂದನು. ಯಾಕೆಂದರೆ ಕರ್ಣನ ಜೀವನದಲ್ಲಿ, ನಿಮಗೆಲ್ಲರಿಗೂ ತಿಳಿದಿರುವಂತೆ ಅವಿವಾಹಿತ ಸ್ಥಿತಿಯಲ್ಲಿರುವಾಗ ಸೂರ್ಯದೇವ ನಿಂದ ವರಪಡೆದು ಜನಿಸಿದ ಮಗುವನ್ನು ಕುಂತಿ ನೀರಿನಲ್ಲಿ ತೇಲಿ ಬಿಟ್ಟ ಬಳಿಕ ತಾನು ಯಾವ ಜಾತಿಗೆ ಸೇರಿದ್ದೇನೆ ಎಂಬುದನ್ನು ತಿಳಿಯದೇ ವಿದ್ಯೆ ಪಡೆಯಲು ಕರ್ಣನು ಎಷ್ಟು ಕಷ್ಟಪಟ್ಟನು ಎಂದು, ಇದೇ ಕಾರಣಕ್ಕಾಗಿ ಆತ ಜೀವನದಲ್ಲಿ ಹಲವಾರು ಸವಾಲುಗಳನ್ನು ಎದುರಿಸಿದ್ದಾನೆ.

ಇನ್ನು ಎರಡನೆಯದಾಗಿ, ಶ್ರೀ ಕೃಷ್ಣನು ಅವತರಿಸುವ ಮುಂದಿನ ಜನ್ಮಗಳಲ್ಲಿ ಕೃಷ್ಣ ಜನ್ಮತಾಳಿದ ರಾಜ್ಯದಲ್ಲಿಯೇ ಕರ್ಣನು ಜನ್ಮ ತಾಳಬೇಕು, ಕೃಷ್ಣನ ರಾಜ್ಯವೇ ಕರ್ಣನಿಗೆ ವಾಸಸ್ಥಾನ ವಾಗಬೇಕು ಎಂಬ ವರವನ್ನು ಕೇಳುತ್ತಾನೆ. ಇನ್ನು ಮೂರನೆಯದಾಗಿ ಕರ್ಣನ ಅಂತ್ಯ ಸಂ’ಸ್ಕಾರ ಪಾಪವೇ ಇಲ್ಲದ ಜಾಗದಲ್ಲಿ ಆಗಬೇಕು ಎಂದು ಇದನ್ನು ಕೇಳಿದ ಶ್ರೀ ಕೃಷ್ಣನ ಓ ಕರ್ಣ ಎಂತ ಇಕ್ಕಟ್ಟಿಗೆ ಸಿಲುಕಿಸಿದೆ, ಪಾಪವೇ ಇಲ್ಲದಂತಹ ಜಾಗ ಭೂಮಿಯ ಮೇಲೆ ಇಲ್ಲ ಎಂದು ಆಲೋಚಿಸಿ ಕೊನೆಗೆ ತನ್ನ ಅಂಗೈಯಲ್ಲಿ ಕರ್ಣನ ಅಂತ್ಯ ಸಂಸ್ಕಾರ ಮಾಡುತ್ತಾರೆ ಎಂಬುದನ್ನು ಪೌರಾಣಿಕ ಕಥೆಗಳು ತಿಳಿಸುತ್ತವೆ.