ಬಿಗ್ ನ್ಯೂಸ್: ಲೇಟಾಗಿ ಬಂದರೂ ಲೇಟೆಸ್ಟ್ ಸಾಕ್ಷಿಯ ಜೊತೆ ಸಿಬಿಐ ಎಂಟ್ರಿ ! ಬಾಲಿವುಡ್ನಲ್ಲಿ ತಲ್ಲಣ ! ನಡೆಯುತ್ತಿರುವುದಾದರೂ ಏನು ಗೊತ್ತಾ?

ಬಿಗ್ ನ್ಯೂಸ್: ಲೇಟಾಗಿ ಬಂದರೂ ಲೇಟೆಸ್ಟ್ ಸಾಕ್ಷಿಯ ಜೊತೆ ಸಿಬಿಐ ಎಂಟ್ರಿ ! ಬಾಲಿವುಡ್ನಲ್ಲಿ ತಲ್ಲಣ ! ನಡೆಯುತ್ತಿರುವುದಾದರೂ ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಸುಶಾಂತ್ ಸಿಂಗ್ ರಜಪೂತ್ ರವರ ಘಟನೆಯನ್ನು ಮತ್ತೊಂದು ಕೋನದಲ್ಲಿ ತನಿಖೆ ನಡೆಸುತ್ತಿರುವ ಎನ್ಸಿಬಿ ಸಂಸ್ಥೆಯು ಹಲವಾರು ದಿನಗಳಿಂದ ವಿವಿಧ ರೀತಿಯಲ್ಲಿ ಹಲವಾರು ಜನರನ್ನು ವಿಚಾರಣೆಗೆ ಒಳಪಡಿಸುವ ಮೂಲಕ ತನ್ನ ಹಾದಿಯನ್ನು ಸ್ಪಷ್ಟಪಡಿಸಿತ್ತು. ಬಹಳ ವೇಗವಾಗಿ ಎನ್ಸಿಬಿ ಸಂಸ್ಥೆಯು ತನಿಖೆ ನಡೆಸುತ್ತಿರುವುದನ್ನು ಕಂಡ ಸುಶಾಂತ್ ಸಿಂಗ್ ರಜಪೂತ್ ರವರ ಅಭಿಮಾನಿಗಳು ಕೇವಲ ಎನ್ಸಿಬಿ ಸಂಸ್ಥೆ ಮಾತ್ರ ಕೆಲಸ ಮಾಡುತ್ತಿದೆ, ಸಿಬಿಐ ಸಂಸ್ಥೆಯ ನಿದ್ದೆ ಮಾಡುತ್ತಿದೆ, ಇಲ್ಲಿಯವರೆಗೂ ಈ ಪ್ರಕರಣದಲ್ಲಿ ಯಾವುದೇ ಮಾಹಿತಿಯನ್ನು ಸಿಬಿಐ ಸಂಸ್ಥೆ ಹೊರಹಾಕಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ಇನ್ನು ಕೆಲವು ಸ್ನೇಹಿತರು ಹಾಗೂ ಅಭಿಮಾನಿಗಳು ಸುಶಾಂತ್ ಸಿಂಗ್ ರಜಪೂತ್ ರವರ ಘಟನೆಯ ಕುರಿತು ಸಿಬಿಐ ಸಂಸ್ಥೆ ಮಾಹಿತಿಯನ್ನು ಹೊರ ಹಾಕಬೇಕು ಎಂದು ಹೇಳಿ ಉಪವಾಸವನ್ನು ಕೂಡ ಮಾಡಿ ಸಿಬಿಐ ಸಂಸ್ಥೆಗೆ ಮಾಹಿತಿ ಬಿಡುಗಡೆ ಮಾಡಿ ಎಂಬ ಒತ್ತಾಯ ಮಾಡುತ್ತಿದ್ದರು. ಇದೇ ಸಮಯದಲ್ಲಿ ಇದೀಗ ಸಿಬಿಐ ಕೊಂಚ ತಡವಾಗಿ ಬಂದರೂ ಮಹತ್ವದ ಮಾಹಿತಿಯೊಂದಿಗೆ ಹೊರ ಬರುವ ಸಾಧ್ಯತೆ ಇದೆ ಎಂಬ ಮಾಹಿತಿ ಅಧಿಕೃತ ಮೂಲಗಳಿಂದ ತಿಳಿದುಬಂದಿದೆ. ಇದನ್ನು ಕಂಡ ಸುಶಾಂತ್ ಸಿಂಗ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದು ಲೇಟಾಗಿ ಬಂದರೂ ಸಿಬಿಐ ಸಂಸ್ಥೆಯು ಲೇಟೆಸ್ಟ್ ಆಗಿ ಮಾಹಿತಿ ಹೊರ ಹಾಕಲು ಸಿದ್ಧತೆ ನಡೆಸಿರುವುದು ಸ್ವಾಗತಾರ್ಹ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಹೌದು ಸ್ನೇಹಿತರೇ ಇದೀಗ ಬಂದಿರುವ ಮಾಹಿತಿಯ ಪ್ರಕಾರ ದೇಶದ ಪ್ರತಿಷ್ಠಿತ ಸಂಸ್ಥೆಗಳು ಹಾಗೂ ರಿಪಬ್ಲಿಕ್ ಮಾಧ್ಯಮ ವರದಿ ಮಾಡಿರುವಂತೆ ಸಿಬಿಐ ಸಂಸ್ಥೆಯು ಸುಶಾಂತ್ ಸಿಂಗ್ ರಜಪೂತ್ ರವರ ಪ್ರಕರಣದಲ್ಲಿ ಮಹತ್ವದ ಹೆಜ್ಜೆ ಇಡಲು ಸಿದ್ಧತೆ ನಡೆಸಿದ್ದು, ಐಪಿಸಿ ಸೆಕ್ಷನ್ 302(ಕೊ’ಲೆ) ರನ್ನು ಸೇರಿಸಲು ಮುಂದಾಗಿದೆ ಅದಕ್ಕಾಗಿ ತನ್ನದೇ ಆದ ಸಿದ್ಧತೆಗಳನ್ನು ನಡೆಸುತ್ತಿದೆ. ಅಷ್ಟೇ ಅಲ್ಲದೇ ಉನ್ನತ ಮೂಲಗಳ ಪ್ರಕಾರ ಸುಶಾಂತ್ ಸಿಂಗ್ ರಜಪೂತ್ ರವರ ಘಟನೆ ನಡೆದ ದಿನ (ಜೂನ್ 14) ಸುಶಾಂತ್ ಸಿಂಗ್ ರಜಪೂತ್ ರವರ ಮನೆಯಲ್ಲಿ ಇದ್ದ ಸ್ನೇಹಿತ ಪಿಥಾನಿ ರವರು ಜೂನ್ 13 ರಂದು ನಿವಾಸಕ್ಕೆ ಹೊರಗಿನವರು ಬಂದಿದ್ದಾರೆ ಎಂದು ಹೇಳಿಕೆ ನೀಡಿರುವ ಕಾರಣ ಈಗಾಗಲೇ ಪಿಥಾನಿ ಅವರನ್ನು ಸಿಬಿಐ ಸಂಸ್ಥೆಯು ತನ್ನ ಸಂಪರ್ಕದಲ್ಲಿ ಇಟ್ಟುಕೊಂಡಿದ್ದು ಸಾಕ್ಷಿಯಾಗಿ ಬಳಸಿಕೊಳ್ಳಲು ಸಿಬಿಐ ಸಂಸ್ಥೆ ಸಿದ್ಧತೆ ನಡೆಸಿದೆ ಎಂಬ ಮಹತ್ವದ ಮಾಹಿತಿ ಹೊರಬಿದ್ದಿದೆ.

ಆ ಹೊರಗಿನವರು ಯಾರು ಎಂಬುದರ ಕುರಿತು ಸಿಬಿಐ ಸಂಸ್ಥೆಯು ಇಲ್ಲಿಯವರೆಗೂ ಅಧಿಕೃತ ಮಾಹಿತಿ ಹೊರಡಿಸಿಲ್ಲವಾದರೂ ಪಿಥಾನಿ ಅವರು ಇದೀಗ ಪ್ರಕರಣದಲ್ಲಿ ಮಹತ್ವದ ಸಾಕ್ಷಿ ನೀಡಲು ಸಿದ್ಧರಿರುವುದಾಗಿ ತಿಳಿದುಬಂದಿದೆ. ಅಷ್ಟೇ ಅಲ್ಲದೇ, ಏಮ್ಸ್ ಆಸ್ಪತ್ರೆಯ ವೈದ್ಯರು ತಮ್ಮ ವರದಿಯನ್ನು ಸಲ್ಲಿಸಿದ ಬಳಿಕ ಸಿಬಿಐ ಸಂಸ್ಥೆಯು ಐಪಿಸಿ ಸೆಕ್ಷನ್ 302 ರನ್ನು ಸೇರಿಸಲು ನಿರ್ಧಾರ ಮಾಡಿದೆ ಎನ್ನಲಾಗುತ್ತಿದ್ದು, ಇದೇ ಮಾಹಿತಿಯ ಆಧಾರದ ಮೇರೆಗೆ ಎರಡನೇ ಹಂತದ ತನಿಖೆ ಶೀಘ್ರವೇ ಪ್ರಾರಂಭವಾಗಲಿದೆ ಎಂಬುದು ತಿಳಿದುಬಂದಿದೆ. ಸಿಬಿಐ ಸಂಸ್ಥೆಯ ಈ ಹೆಜ್ಜೆಯಿಂದ ಸುಶಾಂತ್ ಸಿಂಗ್ ಅಭಿಮಾನಿಗಳು ಫುಲ್ ಖುಷಿ ಆಗಿದ್ದು ಎಂದಿನಂತೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಂತೋಷವನ್ನು ಹೊರಹಾಕಿದ್ದಾರೆ.