ಬಾಬ್ರಿ ಮಸೀದಿ ತೀರ್ಪು ಕುರಿತು ಪ್ರತಿಕ್ರಿಯೆ ನೀಡಿದ ನಟಿ ಪ್ರಣೀತಾ ! ಪರೋಕ್ಷವಾಗಿ ವಿಪಕ್ಷಗಳಿಗೆ ಟಾಂಗ್ ಕೊಟ್ಟರೇ ಪ್ರಣೀತಾ?

ಬಾಬ್ರಿ ಮಸೀದಿ ತೀರ್ಪು ಕುರಿತು ಪ್ರತಿಕ್ರಿಯೆ ನೀಡಿದ ನಟಿ ಪ್ರಣೀತಾ ! ಪರೋಕ್ಷವಾಗಿ ವಿಪಕ್ಷಗಳಿಗೆ ಟಾಂಗ್ ಕೊಟ್ಟರೇ ಪ್ರಣೀತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಕೆಲವೇ ಕೆಲವು ದಿನಗಳ ಹಿಂದೆ ರಾಮ ಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದ ಸಂದರ್ಭದಲ್ಲಿ ಕೇವಲ ಕೆಲವೇ ಕೆಲವು ಬೆರಳೆಣಿಕೆಯ ಚಿತ್ರರಂಗದ ತಾರೆಯರು ಬಿಟ್ಟರೆ ಮತ್ಯಾರೂ ಶುಭ ಕೋರುವ ಕೆಲಸ ಮಾಡಿರಲಿಲ್ಲ. ಆದರೆ ಅಂದು ನಟಿ ಪ್ರಣೀತಾ ಸುಭಾಷ್ ರವರು ರಾಮ ಮಂದಿರದ ಕುರಿತು ಬರೆದುಕೊಳ್ಳುವ ಮೂಲಕ ಯಾವುದೇ ವಾದವಿವಾದಗಳಿಗೆ ಕಿವಿಗೊಡದೇ ಹಿಂದುಗಳ ಹಲವಾರು ವರ್ಷಗಳ ಕನಸನ್ನು ನನಸು ಮಾಡುವುದರ ಕುರಿತು ಮಾತನಾಡಿದ್ದರು.

ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ನಿನ್ನೆ ಬಾಬ್ರಿ ಮಸೀದಿಯ ಕುರಿತು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಈ ತೀರ್ಪಿಗೆ ವಿಪಕ್ಷಗಳು ಖಾರವಾಗಿ ಪ್ರತಿಕ್ರಿಯಿಸಿದ್ದು, ಬಿಜೆಪಿ ಪಕ್ಷದ ವಿರುದ್ಧ ಟೀಕೆಗಳ ಬಾಣಗಳನ್ನು ಸುರಿಸಿದ್ದಾರೆ. ಇನ್ನು ಸಿದ್ದರಾಮಯ್ಯ ಸೇರಿದಂತೆ ಸಿದ್ದರಾಮಯ್ಯರವರ ಉತ್ತರ ಕೂಡ ಇದು ಒಂದು ಕಪ್ಪುಚುಕ್ಕೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೀಗ ಪರೋಕ್ಷವಾಗಿ ವಿಪಕ್ಷಗಳಿಗೆ ಸಾಂಗ್ ನೀಡಿರುವ ನಟಿ ಪ್ರಣೀತಾ ಸುಭಾಷ್ ರವರು ಟ್ವಿಟರ್ನಲ್ಲಿ, ಈ ರೀತಿ ಬರೆದು ಕೊಂಡಿದ್ದಾರೆ. ಕೆಳಗಡೆ ಟ್ವೀಟ್ ಇದೆ ನೋಡಿ.

ಇದೀಗ ನಟಿ ಪ್ರಣೀತಾ ಸುಭಾಷ್ ರವರ ಟ್ವೀಟ್ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.